ಬೆಂಗಳೂರು, ಬಂಡಿಪುರ, ಮೈಸೂರು, ಹಳೇಬೀಡು, ಹಂಪಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಐಷಾರಾಮಿ ಗೋಲ್ಡನ್ ಚಾರಿಯೆಟ್ ರೈಲಿಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ರೈಲಿನಲ್ಲಿ ಜಿಮ್, ಬಾರ್, ಸ್ಪಾ, ಬೆಡ್ ರೂಂ ಸೇರಿದಂತೆ ಹಲವು ವ್ಯವಸ್ಥೆಗಳಿವೆ.

ಬೆಂಗಳೂರು (ಅ.24) ಬೆಂಗಳೂರಿನಿಂದ ಹೊರಟು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಾದ ಬಂಡಿಪುರ, ಮೈಸೂರು, ಚಿಕ್ಕಮಗಳೂರು, ಹಂಪಿ ಸೇರಿದಂತೆ ಐತಿಹಾಸಿಕ ತಾಣಗಳಿಗೆ ಭೇಟಿ ಜೊತೆ ಮೋಜು ಮಸ್ತಿಯ ಗೋಲ್ಡನ್ ಚಾರಿಯೆಟ್ ರೈಲಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಈ ರೈಲಿನಲ್ಲಿ ಜಿಮ್, ಬಾರ್, ಬೆಡ್ ರೂಂ, ರೆಸ್ಟೋರೆಂಟ್ ಸೇರಿದಂತೆ ಹಲವು ವ್ಯವಸ್ಥೆಗಳಿವೆ. ಐದು ರಾತ್ರಿ 6 ಹಗಲು ದಿನಗಳ ಪ್ರವಾಸದ ಈ ರೈಲು ಐಷಾರಾಮಿ ಪ್ರಯಾಣದ ಜೊತೆಗೆ ಪ್ರಮುಖ ತಾಣಗಳ ಸಂದರ್ಶನ ನಡೆಸಲಿದೆ.

ಪ್ರವಾಸಿ ತಾಣಗಳ ವಿವರ

ಇದು ವಿಶೇಷ ಗೋಲ್ಡನ್ ಚಾರಿಯೆಟ್ ರೈಲು. ಪ್ರವಾಸದ ಅನುಭವ ಪಡೆಯಲು ಈ ರೈಲು ಅತ್ಯುತ್ತಮ. ಬೆಂಗಳೂರಿನಿಂದ ಹೊರಟು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಹಾಗೂ ಗೋವಾಗೆ ಈ ರೈಲು ಭೇಟಿ ನೀಡಲಿದೆ. ವಿಶೇಷ ಅಂದರೆ ಪ್ರತಿ ಪ್ರವಾಸಿ ತಾಣಗಳಲ್ಲಿ ಅಲ್ಲಿನ ಪ್ರಮುಖ ತಾಣಗಳ ಸಂದರ್ಶನಕ್ಕೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಹೀಗಾಗಿ ಒಟ್ಟು ಐದು ರಾತ್ರಿ ಹಾಗೂ 6 ಹಗಲು ದಿನಗಳ ಪ್ರವಾಸ ಇದಾಗಿದೆ.

ಇಡೀ ರೈಲಿನಲ್ಲಿ 75 ಪ್ರಯಾಣಿಕರು ಮಾತ್ರ ಪ್ರಯಾಣ, ಐಷಾರಾಮಿ ವ್ಯವಸ್ಥೆ

ಇದು ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲು. ಹೀಗಾಗಿ ಈ ರೈಲಿನಲ್ಲಿ ಕೇವಲ 75 ಪ್ರಯಾಣಿಕರಿಗೆ ಮಾತ್ರ ಪ್ರಯಾಣ ಮಾಡಲು ಸಾಧ್ಯ. ಕಾರಣ ರೈಲಿನಲ್ಲಿ ಪ್ರಯಾಣಿಕರಿಗೆ ಐಷಾರಾಮಿ ವ್ಯವಸ್ಥೆ ಒದಗಿಸಲಾಗುತ್ತದೆ. ರೈಲಿನಲ್ಲಿ ಜಿಮ್, ಬಾರ್, ಸ್ಪಾ, ಬೆಡ್ ರೂಂ, ಮೂರು ರೆಸ್ಟೋರೆಂಟ್ ವ್ಯವಸ್ಥೆ ಇದೆ. ಹೀಗಾಗಿ ಪ್ರಯಾಣಿಕರು ಒಟ್ಟು 6 ದಿನಗಳ ಕಾರ ತಮ್ಮ ದೈನಂದಿಕ ವ್ಯಾಯಾಮ, ಅಭ್ಯಾಸ, ಆಹಾರ, ಪ್ರಯಾಣದ ಆಯಾಸ ನೀಗಿಸಲು ಸ್ಪಾ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಿದೆ.

ರೈಲಿಗೊಳಗೆ 13 ಡಬಲ್ ಬೆಡ್ ಕ್ಯಾಬಿನ್‌, 26 ಟ್ವಿನ್ ಬೆಡ್ ಕ್ಯಾಬಿನ್‌ ಹಾಗೂ ವಿಶೇಷ ಚೇತನರಿಗಾಗಿ ಒಂದು ವಿಶೇಷ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. ಸೀಟುಗಳ ಹೊಸ ಪೀಠೋಪಕರಣಗಳು, ಮರದ ಮೇಲ್ಮೈಗಳಿಗೆ ಪಾಲಿಶ್, ಉನ್ನತ ದರ್ಜೆಯ ಹಾಸಿಗೆ, ಹೊದಿಕೆ ಹಾಗೂ ಆಧುನಿಕ ಶೈಲಿಯ ಬಾತ್‌ರೂಮ್ ಸೌಲಭ್ಯಗಳು ಈ ರೈಲಿನಲ್ಲಿದೆ. ಈ ಮೂಲಕ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡಲಿದೆ.

ಸುರಕ್ಷತಾ ಕ್ರಮಗಳು

ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾ, ಸುಧಾರಿತ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ವೃತ್ತಿಪರ ಆತಿಥ್ಯ ಒದಗಿಸಲಾಗುತ್ತದೆ. ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ.ಪ್ರಯಾಣಕರ ಯಾವುದೇ ಚಿಂತೆ ಇಲ್ಲದೆ 6 ದಿನಗಳ ಕಾಲ ಕರ್ನಾಟಕ ಬಹುತೇಕ ಹಾಗೂ ಪ್ರಮುಖ ಪ್ರವಾಸಿ ತಾಣ, ಕೊನೆಗೆ ಗೋವಾ ಮಸ್ತಿಯನ್ನು ಅನುಭವಿಸಬಹುದು.

ಟಿಕೆಟ್ ಬೆಲೆ ಎಷ್ಟು?

ಒಟ್ಟು 6 ದಿನಗಳ ಕಾಲ ಪ್ರಮುಖ ಪ್ರವಾಸಿ ತಾಣಗಳ ಸಂದರ್ಶನ, ಊಟ ಸೇರಿದಂತೆ ಎಲ್ಲಾ ವ್ಯವಸ್ತೆಗಳನ್ನು ಒಂದೇ ಪ್ಯಾಕೇಜ್‌ನಲ್ಲಿ ನೀಡಲಿದೆ. 6 ದಿನಗಳ ಒಟ್ಟು ಪ್ರವಾಸದ ಟಿಕೆಟ್ ಬೆಲೆ 3.5 ಲಕ್ಷ ರೂಪಾಯಿಯಿಂದ 4.4 ಲಕ್ಷ ರೂಪಾಯಿ. ಇದು ಪ್ರತಿ ಪ್ರಯಾಣಿಕರ ಟಿಕೆಟ್ ಬೆಲೆಯಾಗಿದೆ.

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗೋಲ್ಡನ್ ಚಾರಿಯೆಟ್ ರೈಲಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಸಚಿವೆ ಕೆಜೆ ಜಾರ್ಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.