ಗದಗದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಫರ್ವೇಜ್ ಧಾರವಾಡ ಅವರು 40 ದಿನಗಳ ಬಳಿಕ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

ಗದಗ (ಅ.24): ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಗದಗ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಫರ್ವೇಜ್ ಧಾರವಾಡ ನಾಪತ್ತೆಯಾಗಿ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿದ್ದ ಫರ್ವೇಜ್ ಧಾರವಾಡ ಅವರನ್ನ ಗದಗ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದಾರೆ.. ಅಕ್ಟೋಬರ್13 ನೇ ತಾರೀಕು ಕಚೇರಿ ಕೆಲಸ ಅಂತಾ ಹೇಳಿ ಗದಗ ನಿಂದ ಬೆಂಗಳೂರಿಗೆ ಹೋಗಿದ್ದ ಫರ್ವೇಜ್, ಅಲ್ಲಿಂದ ನಾಪತ್ತೆಯಾಗಿದ್ರು.

ಕೆಆರ್ ಐಡಿಎಲ್ ಬೆಳಗಾವಿ ವಿಭಾಗದ ಎಂಡಿಗೆ ಬರೆದಿರೋ ಪತ್ರ ಬಹಿರಂಗವಾಗಿ ನಾಪತ್ತೆ ಕೇಸ್ ಭಾರಿ ಚರ್ಚೆಗೆ ಕಾರಣವಾಗಿತ್ತು. ಪತ್ರದಲ್ಲಿ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಸಾಧ್ಯವಾಗ್ತಿಲ್ಲ. ತೀವ್ರ ಒತ್ತಡಕ್ಕೊಳಗಾಗಿ ಮನೆ ಬಿಟ್ಟು ಹೋಗ್ತಿದ್ದೇನೆ. ಜೀವ ಅಂತ್ಯ ಗೊಳಿಸಿಕೊಳ್ಳುತ್ತಿದ್ದೇನೆ ಅಂತೆಲ್ಲ ಬರೆದಿದ್ದ ಫರ್ವೇಜ್, ಕೆಆರ್ ಐಡಿಎಲ್ ಗೆ ಹೊಸ ಎಇಇ ನಿಯೋಜನೆ ಮಾಡಿಕೊಳ್ಳಿ ಅಂತಾನೂ ಬರೆದುಕೊಂಡಿದ್ರು.

ಅನುದಾನದ ಕೊರತೆ ವಿಚಾರ ರಾಜಕೀಯವಾಗಿಯೂ ಭಾರೀ ಚರ್ಚೆಗೆ ಕಾರಣವಾಗಿತ್ತು. ವಿರೋಧ ಪಕ್ಷದ ನಾಯಕರು, 'ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಆಗದಂತ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿದೆ ಅಂತಾ ಸರ್ಕಾರದ ವಿರುದ್ಧ ಮುಗಿಬಿದಿದ್ರು. ಇತ್ತ ಅಧಿಕಾರಿ ನಾಪತ್ತೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಡಿಕೆಶಿ, ಅಧಿಕಾರಿ ಸರಿಯಾಗಿ ಕೆಲಸ ಮಾಡ್ತಿರಲಿಲ್ಲ. ಫರ್ವೇಜ್ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪಗಳಿವೆ ಅಂತಾ ಹೇಳಿಕೆ ನೀಡಿದ್ರು. ಪ್ರಕರಣ ರಾಜಕೀಯ ಚರ್ಚೆ ಪಡೆದುಕೊಳ್ಳುತ್ತಿದ್ದಂತೆ ಆ್ಯಕ್ಟಿವ್ ಆಗಿದ್ದ ಗದಗ ಪೊಲೀಸರು, ಐವರು ಅಧಿಕಾರಿಗಳ ಮುಂದಾಳತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸಿದ್ರು.

ಸಿಮ್, ಎಟಿಎಂ ಕಾರ್ಡ್ ಬಳಸದೇ ಸುತ್ತಾಟ

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಗದಗ ಪೊಲೀಸರು ಪ್ರಕರಣವನ್ನ ಮೊಬೈಲ್ ಜಾಡು ಹಿಡಿದು ತನಿಖೆ ನಡೆಸಿದ್ರು. ಕೊನೆಯದಾಗಿ ಬೆಂಗಳೂರಿನಲ್ಲೇ ಬಂದ್ ಆಗಿದ್ದ ಮೊಬೈಲ್ ಮತ್ತೆ ಆನ್ ಆಗಿರಲಿಲ್ಲ‌. ಎಟಿಎಂ ಬಳಸದ ಕಾರಣವೂ ಲೊಕೇಷನ್ ಹುಡುಕೋದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಮೊಬೈಲ್ ಬಳಸದಿದ್ತೂ ಫರ್ವೇಜ್ ಆಗಾಗ್ ಮೇಲೆ ಚೆಕ್ ಮಾಡ್ತಿದ್ರಂತೆ. ಇದೇ ಮಾಹಿತಿ ಮೇರೆಗೆ ಗೂಗಲ್ ಅಕೌಂಟ್ ಟ್ರೇಸ್ ಮಾಡಿ ಲೊಕೇಷನ್ ಪತ್ತೆ ಹಚ್ಚೋದಕ್ಕೆ ಗದಗ ಸೈಬರ್ ಪೊಲೀಸರು ಮುಂದಾಗಿದ್ರು. ಫಲವಾಗಿ ಫರ್ವೇಜ್ ಭೋಪಾಲ್ ನಲ್ಲಿ ಇರೋದು ಪತ್ತೆಯಾಗುತ್ತೆ. ಫರ್ವೇಜ್ ರೈಲು ನಿಲ್ದಾಣದಲ್ಲಿ ಓಡಾಡಿರೋದನ್ನ ಪತ್ತೆ ಹಚ್ಚಲು ಸಿಸಿಟಿವಿ ಚೆಕ್ ಮಾಡಲಾಗಿತ್ತು‌. ಫರ್ವೇಜ್ ಭೋಪಾಲ್ ನಿಂದ ಉಜ್ಜಯಿನಿಗೆ ಹೋಗಿರುವ ಬಗ್ಗೆ ಸಿಸಿಟಿವಿ ಸುಳಿವು ಸಿಕ್ಕಿತ್ತು. ಅಲ್ಲಿಂದ ಪೊಲೀಸ್ ತಂಡ ಉಜ್ಜಯಿನಿಗೆ ಹೋಗಿದ್ರು. ಆದ್ರೂ ಫರ್ವೇಜ್ ಸುಳಿವು ಸಿಕ್ಕಿರಲಿಲ್ಲ.

ಉಜ್ಜನಿಯ ದರ್ಗಾ, ಹರಿಯಾಣಾದ ಪಾಣಿಪತ್ ದರ್ಗಾಗಳಿಗೆ ಭೇಟಿ ನೀಡಿದ್ದ ಫರ್ವೇಜ್ ಅಲ್ಲಲ್ಲಿ ಹೋಟೆಲ್ ಗಳಲ್ಲೂ ವಾಸ್ತವ್ಯ ಹೂಡಿದ್ನಂತೆ. ಹೋಟೆಲ್ ಗಳಲ್ಲಿನ ಫ್ರೀ ವೈ-ಫೈ ಬಳಸಿ ಮೇಲ್ ಚೆಕ್ ಮಾಡಿ ಮತ್ತೆ ಮುಂದೆ ಪ್ರಯಾಣ ಬೆಳೆಸೋದನ್ನ ಫರ್ವೇಜ್ ರೂಢಿ ಮಾಡಿಕೊಂಡಿದ್ದ. ಪಾಣಿಪತ್ ನಿಂದ ಉತ್ತರಾಖಂಡ ಕೂರ್ತಿಗೆ ಹೋಗಿ ಅಲ್ಲಿಂದ ಮುಂಬೈ ಬಂದು ದರ್ಗಾ ದರ್ಶನ ಮಾಡಿದ್ದ. ಅಲ್ಲಿಂದ ಮತ್ತೆ ಬೇರೆಡೆ ಹೋಗ್ಬೇಕು ಎನ್ನುವಷ್ಟರಲ್ಲಿ‌ ಗದಗ ಪೊಲೀಸರು ಫರ್ವೇಜ್ ನನ್ನ ವಶಕ್ಕೆ ಪಡೆದಿದ್ದಾರೆ.

ಸುಧೀರ್ಘ ವಿಚಾರಣೆ ಬಳಿಕ ಕುಟುಂಬಸ್ಥರಿಗೆ ಫರ್ವೇಜ್ ಹಸ್ತಾಂತರ

ಬೆಳಗಿನ ಜಾವ ಗದಗ ನಗರಕ್ಕೆ ಫರ್ವೇಜ್ ನನ್ನ ಕರೆತಂದಿದ್ದ ಫಲೀಸರು, ಅಜ್ಞಾತ ಸ್ಥಳದಲ್ಲಿ ಸುಧೀರ್ಘ ವಿಚಾರಣೆ ನಡೆಸಿದ್ರು. ನಂತ್ರ ಮಾವ ಜಾಫರ್ ಸಮ್ಮುಖದಲ್ಲಿ ಫರ್ವೇಜ್ ಅವರನ್ನ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಆದ್ರೆ ಅಲ್ಲಿಂದಲೇ ತಂದೆ ಜಾಫರಸಾಬ್ ಅವರಿಗೆ ವೀಡಿಯೋ ಕಾಲ್ ಮಾಡಿದ್ದ ಫರ್ವೇಜ್, ಹಾವೇರಿಯಲ್ಲಿರೋ ಹೆಂಡತಿಯ ಮನೆಗೆ ಹೋಗಿ ಬರೋದಾಗಿ ಹೇಳಿಹೋಗಿದ್ದಾ‌ರೆ.‌ ಈ ಬಗ್ಗೆ ಮಾತನಾಡಿದ ಫರ್ವೇಜ್ ತಂದೆ ಜಾಫರ್, ವೀಡಿಯೋ ಕಾಲ್ ನಲ್ಲಿ ನೋಡಿ ಭಾವುಕನಾಗಿದ್ದೆ. ಅವನಿಗೂ ಮಾತನಾಡಲು ಆಗ್ಲಿಲ್ಲ. ಪೊಲೀಸರ,ಸರ್ಕಾರದ ಸಹಕಾರದಿಂದ ಮನ ಮನೆಗೆ ಬಂದಿದ್ದಾನೆ ಅಂತಾ ಹೇಳಿಕೆ ನೀಡಿದ್ದಾರೆ. 40 ದಿನಗಳ ನಂತರ ಜಾಫರ್ ವಾಪಸ್ ಆಗಿದ್ದಾರೆ. ಫರ್ವೇಜ್ ಅವರೇ ಬರೆದ ಪತ್ರದಲ್ಲಿನ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಫರ್ವೇಜ್ ಮಾಧ್ಯಮದ ಎದುರು ಬಂದಾಗಲೇ ಎಲ್ಲ ಪ್ರಶ್ನೆಗೆ ಉತ್ತರ ಸಿಗಲಿದೆ.