11:12 PM (IST) Mar 24

Karnataka News Live 24 March 2026 'ಹಳ್ಳಿ ಹೈದ ಪ್ಯಾಟೆಗೆ ಬಂದ' ಖ್ಯಾತಿಯ ಬಾವತೀಶ್ ಇನ್ನಿಲ್ಲ; ನಿಂತಿದ್ದ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ವಾಹನ!

'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ಖ್ಯಾತಿಯ ಸ್ಪರ್ಧಿ ಬಾವತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಚಲಾಯಿಸುತ್ತಿದ್ದ ಮೊಫೆಡ್, ರಸ್ತೆ ಬದಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

Read Full Story
10:56 PM (IST) Mar 24

Karnataka News Live 24 March 2026 ರೋಹಿಣಿ ನಿಲೇಕಣಿ ನೆರವಿನಿಂದ ಬನ್ನೇರುಘಟ್ಟದಲ್ಲಿ ತಲೆಎತ್ತಲಿದೆ 5 ಕೋಟಿ ರೂ. ವೆಚ್ಚದ ವೀಕ್ಷಣಾ ಗೋಪುರ!

ಬೆಂಗಳೂರು ಮೂಲದ 'ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್' ಸಂಸ್ಥೆಯು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವೀಕ್ಷಣಾ ಗೋಪುರ ನಿರ್ಮಾಣಕ್ಕಾಗಿ 5 ಕೋಟಿ ರೂ. ನೆರವು ನೀಡಿದೆ. ಈ 25 ಮೀಟರ್ ಎತ್ತರದ ಗೋಪುರವು ಪ್ರವಾಸಿಗರಿಗೆ ಉದ್ಯಾನವನದ ದಟ್ಟ ಅರಣ್ಯ ಮತ್ತು ಬೆಂಗಳೂರಿನ ಸ್ಕೈಲೈನ್‌ನ ದೃಶ್ಯಗಳನ್ನು ಒದಗಿಸಲಿದೆ.

Read Full Story
10:29 PM (IST) Mar 24

Karnataka News Live 24 March 2026 2 ವಾರ ಡೈಪರ್ ಚೇಂಜ್ ಮಾಡದೇ 4 ತಿಂಗಳ ಮಗು ಸಾವಿಗೆ ಕಾರಣರಾದ ಪಾಪಿ ಪೋಷಕರು

Sterling Koehn diaper case: ತಮ್ಮ ಕರುಳಕುಡಿಗಳೆಂದರೆ ಪೋಷಕರಿಗೆ ತುಸು ಜಾಸ್ತಿಯೇ ಪ್ರೀತಿ ಮಕ್ಕಳ ರಕ್ಷಣೆಗಾಗಿ ಪೋಷಕರು ಏನು ಬೇಕಾದರು ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಾಡಿದ ಅತಿಯಾದ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ. ಹಾಗಾದರೆ ಪೋಷಕರು ಮಾಡಿದ್ದೇನು?

Read Full Story
10:06 PM (IST) Mar 24

Karnataka News Live 24 March 2026 ಜೆರೋಧಾದ ನಿಖಿಲ್ ಕಾಮತ್‌ ಮದುವೆ ಆಗೋಲ್ವಂತೆ! ಕಾರಣ ಕೇಳಿ

ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್‌ (nikhil kamath) ಸದ್ಯ ರಿಷಿ ಸುನಕ್-‌ ಅಕ್ಷತಾ ಮೂರ್ತಿ ಸಂದರ್ಶನದಿಂದ ಸುದ್ದಿಯಲ್ಲಿದ್ದಾರೆ. ಈ ನಿಖಿಲ್‌ ಕಾಮತ್‌ಗೆ ಮದುವೆ ಆಗುವ ಯೋಚನೆ ಇಲ್ಲವಂತೆ. ಇದಕ್ಕೆ ಅವರು ನೀಡಿದ ಕಾರಣ ವಿಶಿಷ್ಟವಾಗಿದೆ. 

Read Full Story
09:48 PM (IST) Mar 24

Karnataka News Live 24 March 2026 Niharika Konidela - ಎರಡನೇ ಮದುವೆ ಬಗ್ಗೆ ಮೆಗಾ ಡಾಟರ್ ಸ್ಪಷ್ಟನೆ - ಟ್ರೋಲಿಗರಿಗೆ ಕೊಟ್ರೂ ಖಡಕ್ ಉತ್ತರ

ಮೆಗಾ ಡಾಟರ್ ನಿಹಾರಿಕಾ ಕೊನಿಡೇಲಾ ಅವರ ಮದುವೆ, ವಿವಾದ, ವಿಚ್ಛೇದನ ಎಲ್ಲವೂ ಮುಗಿದುಹೋಗಿದೆ. ಡಿವೋರ್ಸ್ ನಂತರ ನಿಹಾರಿಕಾ ಅವರ ಎರಡನೇ ಮದುವೆ ಬಗ್ಗೆ ನಾನಾ ಬಗೆಯ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರದಲ್ಲಿ ಟ್ರೋಲ್ ಮಾಡುವವರಿಗೆ ನಿಹಾರಿಕಾ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

Read Full Story
09:34 PM (IST) Mar 24

Karnataka News Live 24 March 2026 ಅದಾನಿ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ 850 ಕೋಟಿ ಹಣ ಬಾಕಿ!

ಕಲಬುರಗಿ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಅದಾನಿ ಸಮೂಹದ ಎಸಿಸಿ ಕಂಪನಿಯು ಸರ್ಕಾರಕ್ಕೆ ₹850 ಕೋಟಿ ರಾಜಧನ ಮತ್ತು ದಂಡವನ್ನು ಬಾಕಿ ಉಳಿಸಿಕೊಂಡಿದೆ. ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದರೂ, ಬಾಕಿ ವಸೂಲಿಗಾಗಿ ಕ್ರಿಮಿನಲ್ ಮೊಕದ್ದಮೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

Read Full Story
08:44 PM (IST) Mar 24

Karnataka News Live 24 March 2026 ರಾಜ್ಯದ ಜನತೆಗೆ ಅಲರ್ಟ್ - ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ!

ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
Read Full Story
08:02 PM (IST) Mar 24

Karnataka News Live 24 March 2026 ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ - ಬೆಂಗಳೂರಲ್ಲಿ ದಾಖಲಾಯ್ತು ಎಫ್‌ಐಆರ್‌

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವು ವ್ಯವಸ್ಥಿತ ಕೊಲೆ ಎಂದು ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.

Read Full Story
07:40 PM (IST) Mar 24

Karnataka News Live 24 March 2026 ಮಕ್ಕಳಿಗೆ ಮೊಬೈಲ್‌ ಬಳಕೆ ನಿಷೇಧ ಚರ್ಚಿಸಿ ಮಾರ್ಗಸೂಚಿ - ಸಚಿವ ಮಧು ಬಂಗಾರಪ್ಪ

ಮೊಬೈಲ್‌ ಬಳಕೆ ನಿಯಂತ್ರಿಸುವ ಸಂಬಂಧ ಪೋಷಕರು, ತಜ್ಞರ ಜೊತೆ ಚರ್ಚಿಸುವುದರೊಂದಿಗೆ ಮುಂದಿನ ಅಧಿವೇಶನದಲ್ಲೂ ಚರ್ಚಿಸಿದ ನಂತರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Read Full Story
07:31 PM (IST) Mar 24

Karnataka News Live 24 March 2026 ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮಕ್ಕೆ 3 ತಿಂಗಳ ಗಡುವು - ಸಚಿವ ಕೆ.ಜೆ.ಜಾರ್ಜ್‌

ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದಿರುವುದನ್ನು 1.50 ಲಕ್ಷ ರು. ಪಾವತಿಸಿ ಸಕ್ರಮ ಮಾಡಿಕೊಳ್ಳಲು ಮೂರು ತಿಂಗಳ ಸಮಯಾವಕಾಶ ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

Read Full Story
07:20 PM (IST) Mar 24

Karnataka News Live 24 March 2026 ಏನೇ ಹರಸಾಹಸ ಮಾಡಿದ್ರೂ ಬಿಜೆಪಿ ಗೆಲುವು ತಡೆಯಲಾಗಲ್ಲ - ಬಿ.ವೈ.ವಿಜಯೇಂದ್ರ ವಿಶ್ವಾಸ

ಇಂದಿನ ವಾತಾವರಣ ಗಮನಿಸಿದರೆ ಬಾಗಲಕೋಟೆಯಲ್ಲಿ ಬಿಜೆಪಿ ಅರಳುವುದು ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Read Full Story
07:08 PM (IST) Mar 24

Karnataka News Live 24 March 2026 ಬೆಂಗಳೂರಿನ BEML ನಲ್ಲಿ ಉನ್ನತ ಹುದ್ದೆ - 3 ಲಕ್ಷದವರೆಗೂ ವೇತನ, ಯಾರಿಗುಂಟು? ಯಾರಿಗಿಲ್ಲ?

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಬೆಂಗಳೂರಿನಲ್ಲಿ 13 ಎಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಪದವಿ, ಡಿಪ್ಲೊಮಾ, ಮತ್ತು ಎಂ.ಟೆಕ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ₹3,00,000 ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ.
Read Full Story
07:06 PM (IST) Mar 24

Karnataka News Live 24 March 2026 ಪ್ರವಾಸೋದ್ಯಮಕ್ಕೆ ಬಲ ತುಂಬಿದ ಉತ್ತರ ಕರ್ನಾಟಕ, ಕರಾವಳಿ - ಸಚಿವ ಎಚ್.ಕೆ.ಪಾಟೀಲ

ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿ ಕೊಂಡಿದ್ದು, ಆಕರ್ಷಣಿಯ ಪ್ರವಾಸಿ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.

Read Full Story
06:44 PM (IST) Mar 24

Karnataka News Live 24 March 2026 Fertility - ಬಿಗಿಯಾದ ಜೀನ್ಸ್ ಹಾಕಿದ್ರೆ ಮಕ್ಕಳಾಗಲ್ವಾ? ಇದು ಬರೀ ಸುಳ್ಳಾ? ಸಂಶೋಧನೆ ಏನು ಹೇಳುತ್ತೆ?

ಬಿಗಿಯಾದ ಜೀನ್ಸ್ ಧರಿಸಿದರೆ ಮಕ್ಕಳಾಗುವುದಿಲ್ಲವೇ? ಈ ಬಗ್ಗೆ ಹಲವರಲ್ಲಿ ಅನುಮಾನಗಳಿವೆ. ಪುರುಷರು ಮತ್ತು ಮಹಿಳೆಯರ ಫಲವತ್ತತೆಯ ಮೇಲೆ ಬಿಗಿ ಉಡುಪುಗಳು ಹೇಗೆ ಪರಿಣಾಮ ಬೀರುತ್ತವೆ? ಇಲ್ಲಿದೆ ಮಾಹಿತಿ.

Read Full Story
06:29 PM (IST) Mar 24

Karnataka News Live 24 March 2026 ಇಂದು ವಿಶ್ವ ಕ್ಷಯರೋಗ ದಿನ - ಇಲ್ಲಿದೆ ರೋಗದ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ

ಡಾ| ರಾಬರ್ಟ್ ಕ್ಷಯ ರೋಗಕ್ಕೆ ಕಾರಣವಾದ ರೋಗಾಣು ಮೈಕೊ ಬ್ಯಾಕ್ಟಿರಿಯಾ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವನ್ನು ಕಂಡು ಹಿಡಿದರು. ಈ ದಿನದ ನೆನಪಿಗಾಗಿ ಪ್ರತಿ ವರ್ಷ 24 ರಂದು ವಿಶ್ವ ಕ್ಷಯರೋಗ ದಿನ ಎಂದು ಆಚರಿಸಲಾಗುತ್ತಿದೆ.

Read Full Story
06:26 PM (IST) Mar 24

Karnataka News Live 24 March 2026 ಬೆಂಗಳೂರು ಮೆಟ್ರೋ ಫೇಸ್‌-3 ಕಾಮಗಾರಿಗೆ 6100 ಕೋಟಿ ಸಾಲ ನೀಡಿದ ಜಪಾನ್‌!

ಬೆಂಗಳೂರಿನ 'ನಮ್ಮ ಮೆಟ್ರೋ' ಹಂತ-3 ಯೋಜನೆಗೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಸುಮಾರು 6,100 ಕೋಟಿ ರೂಪಾಯಿ ಸಾಲ ನೀಡಲು ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ. ಇದು 30 ವರ್ಷಗಳ ಅವಧಿಯ ಸಾಲವಾಗಿದೆ.

Read Full Story
06:04 PM (IST) Mar 24

Karnataka News Live 24 March 2026 Jasmine Storage - ಮಲ್ಲಿಗೆ ಹೂವು ಹೆಚ್ಚು ದಿನ ಫ್ರೆಶ್ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ!

ಮಲ್ಲಿಗೆ ಹೂವುಗಳು ತಮ್ಮ ಬಣ್ಣ, ಸುವಾಸನೆ ಮತ್ತು ಸೌಂದರ್ಯದಿಂದ ಯಾರನ್ನಾದರೂ ಸುಲಭವಾಗಿ ಸೆಳೆಯುತ್ತವೆ. ಹಬ್ಬ, ಪೂಜೆಗಳಿಗಷ್ಟೇ ಅಲ್ಲ, ಸಾಮಾನ್ಯ ದಿನಗಳಲ್ಲೂ ಮಹಿಳೆಯರು ಮಲ್ಲಿಗೆಯನ್ನು ಇಷ್ಟಪಟ್ಟು ಮುಡಿಯುತ್ತಾರೆ.

Read Full Story
06:00 PM (IST) Mar 24

Karnataka News Live 24 March 2026 ಅನಿತಾ,ಗಾಯತ್ರಿ, ಸುಧಾ, ಹೇಮಾ, ಉಮಾ... ರಾಮಾಂಜಿ ಪ್ರೇಮದಲ್ಲಿ ಸಿಕ್ಕಿವರೆಲ್ಲರೂ ಹೋಮ!

ಸೆಕ್ಯುರಿಟಿ ಏಜೆನ್ಸಿ ಹೆಸರಲ್ಲಿ, ರಾಮಾಂಜಿ ಎಂಬಾತ ಅಸಹಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ. ದೈಹಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿ, ಲಕ್ಷಾಂತರ ರೂಪಾಯಿ ಹಣ ಮತ್ತು ಒಡವೆ ಪಡೆದು ಪರಾರಿಯಾಗುತ್ತಿದ್ದ ಈತನನ್ನು ಸಂತ್ರಸ್ತೆಯೊಬ್ಬಳ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
Read Full Story
05:48 PM (IST) Mar 24

Karnataka News Live 24 March 2026 ಮಂಗಳೂರಿಗರ ನಿದ್ದೆಗೆಡಿಸಿದ ರಸ್ತೆ ಮೇಲಿನ ವಿಚಿತ್ರ ಆಕೃತಿ - ದೆವ್ವದ ರಹಸ್ಯ ಭೇದಿಸಿದ ಸ್ಥಳೀಯರು

ಮಂಗಳೂರಿನ ಮಂಜಲ್ಪಾದೆ ರಸ್ತೆಯಲ್ಲಿ ಮಧ್ಯರಾತ್ರಿ ಕಂಡ ಬಿಳಿ ಬಟ್ಟೆಯ ನಿಗೂಢ ಆಕೃತಿಯೊಂದು ಯುವಕನನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಗೆ ಭಯಾನಕ ಆಡಿಯೋವೊಂದು ಸೇರಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು, ಆದರೆ ಇದರ ಹಿಂದಿನ ಸತ್ಯಾಸತ್ಯತೆ ಬಯಲಾದಾಗ ಎಲ್ಲರೂ ಅಚ್ಚರಿಗೊಂಡರು.
Read Full Story
05:45 PM (IST) Mar 24

Karnataka News Live 24 March 2026 Vijay Deverakonda - ಮದುವೆನೇ ಬೇಡ ಅಂದಿದ್ದ ಹೀರೋ - ರಶ್ಮಿಕಾ ಬಗ್ಗೆ ವಿಜಯ್ ಮಾವ ಯಶ್ ಹೇಳಿದ್ದೇನು?

ವಿಜಯ್ ದೇವರಕೊಂಡ ಅವರ ಮಾವ ಯಶ್ ರಂಗಿನೇನಿ ಅವರು ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ವಿಜಯ್-ರಶ್ಮಿಕಾ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Read Full Story