Sterling Koehn diaper case: ತಮ್ಮ ಕರುಳಕುಡಿಗಳೆಂದರೆ ಪೋಷಕರಿಗೆ ತುಸು ಜಾಸ್ತಿಯೇ ಪ್ರೀತಿ ಮಕ್ಕಳ ರಕ್ಷಣೆಗಾಗಿ ಪೋಷಕರು ಏನು ಬೇಕಾದರು ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಾಡಿದ ಅತಿಯಾದ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ. ಹಾಗಾದರೆ ಪೋಷಕರು ಮಾಡಿದ್ದೇನು?

ಪುಟ್ಟ ಕಂದನ ಮೇಲೆ ಇಷ್ಟೊಂದು ನಿರ್ಲಕ್ಷ್ಯ:

ಈ ಪ್ರಪಂಚದಲ್ಲಿ ಎಂತೆಂಥಾ ಕೆಟ್ಟ ಜನಗಳಿರುತ್ತಾರೆ ಎಂದೂ ಊಹಿಸುವುದಕ್ಕೂ ಸಾಧ್ಯವಿಲ್ಲದಂತಹ ಘಟನೆಗಳು ಕೆಲವೊಮ್ಮೆ ನಡೆಯುತ್ತವೆ. ಇವರು ಮನುಷ್ಯರೋ ಅಥವಾ ರಾಕ್ಷಸರೋ ಎಂಬ ಅನುಮಾನಗಳು ಮೂಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಪೋಷಕರು ಕಲ್ಪನೆಗೂ ಮೀರಿದ ಆಸಡ್ಡೆ ತೋರಿ ಮಗುವಿನ ಜೀವ ಬಲಿ ಪಡೆದಿದ್ದಾರೆ. ಅಂದಹಾಗೆ ಇದು ಕೆಲವು ವರ್ಷಗಳ ಹಿಂದೆ ನಡೆದಿರುವ ಘಟನೆ ಆದರೂ ಪೋಷಕರ ಊಹಿಸಲಾಗದ ನಿರ್ಲಕ್ಷ್ಯ, ಅಸಡ್ಡೆ ಹಾಗೂ ಕ್ರೌರ್ಯದಿಂದಾಗಿ ಇದು ಈಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಪಂಚದಲ್ಲಿ ಇಂತಹ ಪೋಷಕರು ಇರುತ್ತಾರಾ ಎಂಬ ಪ್ರಶ್ನೆಯನ್ನು ಮೂಡಿಸುತ್ತಿದೆ.

Add Asianetnews Kannada as a Preferred SourcegooglePreferred

ತಮ್ಮ ಕರುಳಕುಡಿಗಳೆಂದರೆ ಪೋಷಕರಿಗೆ ತುಸು ಜಾಸ್ತಿಯೇ ಪ್ರೀತಿ ಮಕ್ಕಳ ರಕ್ಷಣೆಗಾಗಿ ಪೋಷಕರು ಏನು ಬೇಕಾದರು ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಾಡಿದ ಅತಿಯಾದ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ. ಹಾಗಾದರೆ ಪೋಷಕರು ಮಾಡಿದ್ದೇನು?

ಎರಡು ವಾರವಾದರೂ ಮಗುವಿನ ಡೈಪರ್ ಚೇಂಜ್ ಮಾಡದ ಪೋಷಕರು

ಮಕ್ಕಳ ಡೈಪರ್‌ ಅನ್ನು ಆಗಾಗ ಚೇಂಜ್ ಮಾಡುತ್ತಿರಬೇಕು ಇಲ್ಲದೇ ಹೋದರೆ ನವಜಾತ ಶಿಶುಗಳ ದೇಹದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳು ಉಂಟಾಗುತ್ತವೆ. ಕನಿಷ್ಠ ಪಕ್ಷ ಆರು ಗಂಟೆಗೊಮ್ಮೆಯಾದರೂ ಇವುಗಳನ್ನು ಬದಲಾಯಿಸುತ್ತಿರಬೇಕು. ಆದರೆ ಇಲ್ಲಿ ಈ ಪಾಪಿ ಪೋಷಕರು ಎರಡು ವಾರ ಕಳೆದು ಆ ಮಗುವಿನ ಡೈಪರ್ ಚೇಂಜ್ ಮಾಡಿಲ್ಲ, ಹೊಸದಾದ ಡೈಪರ್ ಹಾಕಿಲ್ಲ, ಪರಿಣಾಮ ಡೈಪರ್‌ನಲ್ಲಿ ಹುಳುಗಳು ಆಗಿ ಅದು ಮಗುವಿನ ದೇಹಕ್ಕೆ ವ್ಯಾಪಿಸಿ ಮಗು ಸಾವನ್ನಪ್ಪಿತ್ತು. ಪುಟ್ಟ ಮಕ್ಕಳೆಂದ ಮೇಲೆ ಮೂತ್ರ ಮಲವಿಸರ್ಜನೆ ಎಲ್ಲವನ್ನು ಡೈಪರ್‌ನಲ್ಲೇ ಮಾಡುತ್ತವೆ ಹೀಗಿರುವಾಗ ನೀವೇ ಊಹಿಸಿಕೊಳ್ಳಿ ಈ ದಂಪತಿಗಳು ಅದೆಂಥಾ ತಲೆಕೆಟ್ಟವರಿರಬೇಕು ಎಂಬುದನ್ನು.

ಅಮೆರಿಕಾದ ಅಲ್ಬಾಮಾದ ಚಿಕ್ಕಸಾ ಎಂಬ ಪ್ರದೇಶದಲ್ಲಿ ಘಟನೆ

ಅಂದಹಾಗೆ ಈ ಘಟನೆ ನಡೆದಿರುವುದು 2017ರಲ್ಲಿ ಅಮೆರಿಕಾದ ಅಲ್ಬಾಮಾದ ಚಿಕ್ಕಸಾ ಎಂಬ ಪ್ರದೇಶದಲ್ಲಿ. 2017ರ ಆಗಸ್ಟ್ 29ರಂದು ಜಕಾರಿ ಪಾಲ್ ಕೋಹೆನ್ ಎಂಬ ವ್ಯಕ್ತಿ 911 ಗೆ ಕರೆ ಮಾಡಿ ತನ್ನ 4 ತಿಂಗಳ ಮಗು ಸ್ಟರ್ಲಿಂಗ್ ಕೋಹೆನ್ ಉಸಿರಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾನೆ. ಈತ ನೀಡಿದ ಮಾಹಿತಿಯಿಂದ ಪರಿಶೀಲನೆಗಾಗಿ ಅವರಿದ್ದ ಮನೆಗೆ ಬಂದ ಅರೆವೈದ್ಯಕೀಯ ಸಿಬ್ಬಂದಿಗೆ ಆಘಾತ ಕಾದಿತ್ತು. ಏಕೆಂದರೆ ಮಗುವಿದ್ದ ಕೋಣೆಯನ್ನು ಗಾಳಿ ಬೆಳಕು ಇಲ್ಲದಂತೆ ಬಿಗಿಯಾಗಿ ಮುಚ್ಚಲಾಗಿತ್ತು. ಬಾಗಿಲು ತೆಗೆಯುತ್ತಿದ್ದಂತೆ ಮಲಮೂತ್ರದ ವಾಸನೆ ಮೂಗಿಗೆ ಬಲವಾಗಿ ಬಡಿಯುತ್ತಿತ್ತು. ಮಗು ಸ್ಟರ್ಲಿಂಗ್ ಬದುಕುಳಿದಿಲ್ಲ ಎಂಬುದು ತಕ್ಷಣವೇ ಅರಿವಿಗೆ ಬಂದಿತ್ತು. ಮಗುವಿದ್ದ ತೊಟ್ಟಿಲಿನಿಂದ ಎತ್ತಿದಾಗ ಮಗುವಿನ ದೇಹದಿಂದ ಹುಳಗಳು ಉದುರುತ್ತಿದ್ದವು ಜೊತೆಗೆ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತಿತ್ತು.

ಮಗುವನ್ನು ಮುಚ್ಚಿದ ಕೋಣೆಯಲ್ಲಿ ಎರಡು ವಾರಗಳ ಕಾಲ ಒಬ್ಬಂಟಿಯಾಗಿ ಬಿಡಲಾಗಿತ್ತು

ಮಗುವಿನ 21 ವರ್ಷದ ತಾಯಿ ಚೆಯೆನ್ನೆ ಹ್ಯಾರಿಸ್ ಬೆಳಗ್ಗೆ 9 ಗಂಟೆಯ ಸುಮಾರಿಗೆ ತಾನು ಮಗುವಿಗೆ ಹಾಲುಣಿಸಿದ್ದೇನೆ ಎಂದು ಹೇಳಿಕೊಂಡಿದ್ದಳು. ಬೆಳಗ್ಗೆ 11 ಗಂಟೆಗೆ ಮಗುವನ್ನು ಪರಿಶೀಲಿಸಿದಾಗ, ಅವನು ಉಸಿರಾಡುತ್ತಿರಲಿಲ್ಲ ಎಂದು ತಂದೆ ಜಕಾರಿ ಪಾಲ್ ಕೋಹೆನ್ ಹೇಳಿದ್ದನು. ಮಗುವಿದ್ದ ಕೋಣೆಯನ್ನು ಪರೀಕ್ಷಿಸಿದ ವೈದ್ಯರು ಮೃತ ಮಗು ಸ್ಟರ್ಲಿಂಗ್ ನನ್ನು ಆ ಮುಚ್ಚಿದ ಕೋಣೆಯಲ್ಲಿ ಎರಡು ವಾರಗಳ ಕಾಲ ಒಬ್ಬಂಟಿಯಾಗಿ ಬಿಡಲಾಗಿತ್ತು ಎಂಬುದನ್ನು ತನಿಖೆಯಿಂದ ಕಂಡುಕೊಂಡರು. ಆ ಮಗುವಿನ ಡೈಪರ್ ಅನ್ನು ಎರಡು ವಾರಗಳಲ್ಲಿ ಒಮ್ಮೆಯೂ ಬದಲಿಸಿರಲಿಲ್ಲ, ಆ ಮಗುವಿಗೆ ನೀರಾಗಲಿ ಆಹಾರವನ್ನಾಗಲಿ ನೀಡಿರಲಿಲ್ಲ, ಪರಿಣಾಮ ಡೈಪರ್‌ನಲ್ಲಿ ನೊಣಗಳು ಮೊಟ್ಟೆಗಳನ್ನು ಇಟ್ಟು ಮಗುವಿನ ದೇಹದ ಮೇಲೆ ಲಾರ್ವಾಗಳು ಬೆಳೆಯಲು ಪ್ರಾರಂಭಿಸಿದ್ದವು ಎಂದು ತನಿಖೆಯಿಂದ ತಿಳಿದು ಬಂದಿತ್ತು.

ಇದನ್ನೂ ಓದಿ: ದಂತವೈದ್ಯನ ಎಡವಟ್ಟಿಗೆ ಮಹಿಳೆ ಬಲಿ: ಹಲ್ಲು ಕೀಳಿಸಲು ಹೋಗಿ ಪ್ರಾಣನೇ ಹೋಯ್ತು

ಮಗುವಿಗೆ ನಿರಂತರ ಬೇಧಿ ಇದ್ದುದರಿಂದ ಮತ್ತು ಅದು ತನ್ನ ಸ್ವಂತ ಮಗುವಾದರೂ ಸಹ, ಆ ವಾಸನೆಯನ್ನು ಸಹಿಸಲಾಗದ ಕಾರಣ ತಾನು ಡೈಪರ್ ಬದಲಾಯಿಸಲಿಲ್ಲ ಎಂದು ಮಗುವಿನ ತಂದೆ ನಂತರ ಒಪ್ಪಿಕೊಂಡಿದ್ದರೆ. ಇತ್ತ ಆ ಮಗುವನ್ನು ಹೆತ್ತೆ ತಾಯಿ ತಾನು ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಿದಿದ್ದಾಗಿ ಹಾಗೂ ಹಾಸಿಗೆಯಿಂದ ಎದ್ದೇಳಲು ಕಷ್ಟಪಡುತ್ತಿದ್ದಿದ್ದಾಗಿ ಹೇಳಿದ್ದಳು. ಆದರೆ ನ್ಯಾಯಾಲಯವೂ ಇವರ ಈ ಹೇಳಿಕೆಗಳು ಸುಳ್ಳು ಎಂಬುದನ್ನು ಎಂದು ಸಾಬೀತುಪಡಿಸಿದರು. ಅಲ್ಲದೇ ಅವರು ಮಾಡಿದ ಈ ಹೇಯ ನಿರ್ಲಕ್ಷ್ಯಕ್ಕಾಗಿ 2019ರಲ್ಲಿ ಅವರಿಗೆ ಎಂದಿಗೂ ಪೆರೋಲ್ ಸಿಗದ ಜೀವಾವಧಿ ಶಿಕ್ಷೆ ಘೋಷಿಸಲಾಯ್ತು. ನೋಡಿದ್ರಲ್ಲ ಪ್ರಪಂಚದಲ್ಲಿ ಎಂತೆಂಥಾ ಕೆಟ್ಟ ಜನಗಳಿರುತ್ತಾರೆ ಅಂತ.

ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಅಸ್ವಸ್ಥಗೊಂಡ ಮಗು: ಮುಂದಿನ ನಿಲ್ದಾಣದಲ್ಲಿ ಸಿದ್ದರಾಗಿ ನಿಂತ ವೈದ್ಯರು: ರೈಲ್ವೆಗೆ ಥ್ಯಾಂಕ್ಸ್ ಹೇಳಿದ ಅಮ್ಮ