11:41 PM (IST) Dec 24

Karnataka News Live 24 December 2025ಬೆಂಗಳೂರು - ಬೈಕ್ ಗೆ ಗುದ್ದಿ ಎರಡು ಕಿಮೀ ರಸ್ತೆ ಮೇಲೆ ಬೈಕ್ ಎಳೆದೊಯ್ದ ಕಾರು ಚಾಲಕ!

ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ, ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಬೈಕ್‌ಗೆ ಡಿಕ್ಕಿ ಹೊಡೆದು, ಸುಮಾರು 2 ಕಿಲೋಮೀಟರ್‌ ಕಾರಿನಡಿಯಲ್ಲಿ ಸಿಲುಕಿದ್ದ ಬೈಕನ್ನು ಎಳೆದೊಯ್ದಿದ್ದಾನೆ. ಸ್ಥಳೀಯರು ಕಾರನ್ನು ಅಡ್ಡಗಟ್ಟಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರು!

Read Full Story
11:00 PM (IST) Dec 24

Karnataka News Live 24 December 2025ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ರೈತ ಭೀಮು ಕೆಂಬಾವಿ ಅವರಿಗೆ ಸೇರಿದ ಐದು ಎಕರೆ ಕಬ್ಬಿನ ಬೆಳೆ ಹಾಗೂ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಟ್ರೈಲರ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
Read Full Story
09:11 PM (IST) Dec 24

Karnataka News Live 24 December 2025ಲಂಡನ್ ಬೀದಿಗಳಲ್ಲಿ ಗುಟ್ಕಾ ಕಲೆ; 'ಬಾಯಲ್ಲಿ ಕೇಸರಿ' ಹೇಳಿದ ಭಾರತೀಯರ ವಿಡಿಯೋ ವೈರಲ್ ಮಾಡಿ ಅವಮಾನಿಸಿದ ಪತ್ರಕರ್ತೆ!

ಲಂಡನ್‌ನ ವೆಂಬ್ಲಿಯ ಬೀದಿಗಳಲ್ಲಿ ಗುಟ್ಕಾ ಜಗಿದು ಉಗುಳಿದ ಕಲೆಗಳ ವಿಡಿಯೋ ವೈರಲ್ ಆಗಿದೆ. ಈ ಅಶುಚಿಯಿಂದ ಬೇಸತ್ತ ಸ್ಥಳೀಯ ಆಡಳಿತವು ಗುಟ್ಕಾ ನಿಷೇಧಕ್ಕೆ ಮುಂದಾಗಿದ್ದು, ಈ ಘಟನೆಯಿಂದ ಭಾರತೀಯರು ತೀವ್ರ ಮುಜುಗರ ವ್ಯಕ್ತಪಡಿಸುತ್ತಿದ್ದಾರೆ.

Read Full Story
08:45 PM (IST) Dec 24

Karnataka News Live 24 December 2025ಕರಾವಳಿ ಉತ್ಸವ - ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ವಿಶೇಷ ಚೇತನ ಮಕ್ಕಳು, ಸತೀಶ್ ಸೈಲ್ ಪುತ್ರಿಯ ಈ ಮಹತ್ಕಾರ್ಯಕ್ಕೆ ಜೈ ಎಂದ ಜನತೆ

ಉತ್ತರಕನ್ನಡದ ಕಾರವಾರದಲ್ಲಿ ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಉತ್ಸವದ ಅಂಗವಾಗಿ, ಶಾಸಕ ಸತೀಶ್ ಸೈಲ್ ಅವರ ಪುತ್ರಿಯ ಪ್ರಾಯೋಜಕತ್ವದಲ್ಲಿ ವಿಶೇಷ ಚೇತನ ಮಕ್ಕಳು ಮತ್ತು ಪೌರಕಾರ್ಮಿಕ ಮಹಿಳೆಯರಿಗೆ ಉಚಿತ ಹೆಲಿಕಾಪ್ಟರ್ ಜಾಲಿ ರೈಡ್ ಆಯೋಜಿಸಲಾಗಿತ್ತು.
Read Full Story
08:44 PM (IST) Dec 24

Karnataka News Live 24 December 2025ಸಚಿವ ಜಮೀರ್ ಆಪ್ತ ಸರ್ಫರಾಜ್ ಖಾನ್ ಮೇಲೆ ಲೋಕಾಯುಕ್ತ ದಾಳಿ - ಬಯಲಾಯ್ತು ಕೋಟಿ ಕೋಟಿ ಸಾಮ್ರಾಜ್ಯ!

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮೇಲೆ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ, ಐಷಾರಾಮಿ ರೆಸಾರ್ಟ್‌ಗಳು ಪತ್ತೆಯಾಗಿವೆ.

Read Full Story
08:15 PM (IST) Dec 24

Karnataka News Live 24 December 2025ವಿಜಯ್‌ ಹಜಾರೆ ಟ್ರೋಫಿ ದಾಖಲೆ, ಜಾರ್ಖಂಡ್‌ ವಿರುದ್ಧ 413 ರನ್‌ ಬೆನ್ನಟ್ಟಿ ಗೆದ್ದ ಕರ್ನಾಟಕ!

ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ, ಇಶಾನ್ ಕಿಶನ್ ಅವರ ಶತಕದ ನೆರವಿನಿಂದ ಜಾರ್ಖಂಡ್ 412 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ, ದೇವದತ್ ಪಡಿಕ್ಕಲ್ ಅವರ ಅಬ್ಬರದ 147 ರನ್‌ಗಳ ನೆರವಿನಿಂದ ಕರ್ನಾಟಕ ತಂಡವು ಐತಿಹಾಸಿಕವಾಗಿ ಈ ಗುರಿಯನ್ನು ಬೆನ್ನಟ್ಟಿ, 5 ವಿಕೆಟ್‌ಗಳ ಜಯ ಸಾಧಿಸಿತು.

Read Full Story
08:13 PM (IST) Dec 24

Karnataka News Live 24 December 2025ಹನುಮನ ಜನ್ಮಸ್ಥಳ ಅಂಜನಾದ್ರಿಗೆ ರಿಷಬ್ ಶೆಟ್ಟಿ ಭೇಟಿ; 575 ಮೆಟ್ಟಿಲೇರಿ ಮಾರುತಿಯ ದರ್ಶನ ಪಡೆದ ದಂಪತಿ!

ಕಾಂತಾರ ಯಶಸ್ಸಿನ ಬಳಿಕ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡಿರುವ ರಿಷಬ್ ಶೆಟ್ಟಿ ಪತ್ನಿಯೊಂದಿಗೆ ರಾಜ್ಯದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ದರ್ಶನ ಪಡೆದರು.

Read Full Story
07:35 PM (IST) Dec 24

Karnataka News Live 24 December 2025ದಶಕಗಳ ಬಳಿಕ ಗೆಳೆಯ ದರ್ಶನ್ ಫೋಟೋ ಶೇರ್ ಮಾಡಿ, ವಿಶ್ ಮಾಡಿದ ಕಿಚ್ಚ ಸುದೀಪ್!

ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ತಾರಕಕ್ಕೇರಿರುವ ನಡುವೆಯೇ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್, ‘ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ’ ಎಂದು ಉತ್ತರಿಸಿದ್ದಾರೆ.

Read Full Story
07:30 PM (IST) Dec 24

Karnataka News Live 24 December 2025ಭಟ್ಕಳ ಸಿಪಿಐ, ಹೆಡ್ ಕಾನ್ಸ್ಟೆಬಲ್ ಅಮಾನತು - Drink and Drive, ಹಣ ವಸೂಲಿ ಪ್ರಕರಣಕ್ಕೆ ಎಸ್‌ಪಿ ಕಠಿಣ ಕ್ರಮ!

ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಮತ್ತು ಹೆಡ್ ಕಾನ್ಸ್ಟೆಬಲ್ ಅಶೋಕ ನಾಯ್ಕ್ ಅವರನ್ನು ಅಮಾನತುಗೊಳಿಸಲಾಗಿದೆ. ಡ್ರಿಂಕ್ ಆ್ಯಂಡ್ ಡ್ರೈವ್, ಹಣ ವಸೂಲಿ, ಮತ್ತು ದೂರುದಾರರಿಗೆ ಬೆದರಿಕೆ ಹಾಕಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಉತ್ತರಕನ್ನಡ ಎಸ್‌ಪಿ ಈ ಕ್ರಮ ಕೈಗೊಂಡಿದ್ದಾರೆ.
Read Full Story
07:10 PM (IST) Dec 24

Karnataka News Live 24 December 2025ಮಂಡ್ಯದಲ್ಲಿ ಸೆಮಿಕಂಡಕ್ಟರ್ ಕಂಪನಿಗೆ 100 ಎಕರೆ ಜಾಗ; ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ ಪತ್ರ

ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್ ಸೆಮಿಕಂಡಕ್ಟರ್ ಕಂಪನಿಗೆ ಮಂಡ್ಯದಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಈ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

Read Full Story
05:58 PM (IST) Dec 24

Karnataka News Live 24 December 2025ಮದ್ಯ ನಿಷೇಧಿಸದಿದ್ದರೆ ಸಿಎಂ ಸಿದ್ದರಾಮಯ್ಯ ನನ್ನ ಪಾಲಿಗೆ ರಾಕ್ಷಸ - ಶಾಸಕ ಶರಣು ಸಲಗರ್!

ಬಿಜೆಪಿ ಶಾಸಕ ಶರಣು ಸಲಗರ್, ರಾಜ್ಯದ ಅಬಕಾರಿ ನೀತಿಯನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯರನ್ನು 'ರಾಕ್ಷಸ' ಎಂದು ಕರೆದಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗಾಗಿ ಮದ್ಯ ಮಾರಾಟ ಹೆಚ್ಚಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಹಳ್ಳಿಗಳು 'ವಿಧವಾ ಗ್ರಾಮ'ಗಳಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ. 

Read Full Story
05:25 PM (IST) Dec 24

Karnataka News Live 24 December 2025ಬಳ್ಳಾರಿ - ಮನೆಯಿಂದ 10 ಕಿಲೋಮೀಟರ್‌ ದೂರ ಇರುವಾಗ ಅಪಘಾತ, ಒಂದೇ ಕುಟುಂಬದ ಮೂವರ ಸಾವು!

ತಮಿಳುನಾಡಿನ ದೇವಸ್ಥಾನ ದರ್ಶನ ಮುಗಿಸಿ ವಾಪಾಸಾಗುತ್ತಿದ್ದ ಬಳ್ಳಾರಿಯ ಒಂದೇ ಕುಟುಂಬದ ಕಾರು, ಸಿರುಗುಪ್ಪ ಬಳಿ ಕಿರುಸೇತುವೆಗೆ ಢಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Read Full Story
05:25 PM (IST) Dec 24

Karnataka News Live 24 December 2025ದರ್ಶನ್ ಬಳಿಕ ಅಭಿಮಾನಿಗಳ ಅಶ್ಲೀಲ ಕಾಮೆಂಟ್‌ಗೆ ವಿಜಯಲಕ್ಷ್ಮಿ ಕೆಂಡಾಮಂಡಲ; 150 ಫೊಟೋ ಸಮೇತ ದೂರು!

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್, ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story
05:08 PM (IST) Dec 24

Karnataka News Live 24 December 2025ಮಹಾರಾಷ್ಟ್ರ ಸಂಸದ ಲೋಕಸಭಾ ಸ್ಪೀಕರ್‌ಗೆ ದೂರು - ಬೆಳಗಾವಿ ಡಿಸಿ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್!

ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿ ಪರವಾಗಿ ನಿಂತಿದ್ದು, ಕಾನೂನು ಹೋರಾಟದ ಬಗ್ಗೆ ಸ್ಪಷ್ಟನೆ. ಜೊತೆಗೆ, 275 ಕೋಟಿ ರೂ. ವೆಚ್ಚದ ಬೆಳಗಾವಿ ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕ ಬಗ್ಗೆ ಮಹತ್ವದದ ಮಾಹಿತಿ ನೀಡಿದ್ದಾರೆ.

Read Full Story
04:43 PM (IST) Dec 24

Karnataka News Live 24 December 2025ದೊಡ್ಮನೆಯಲ್ಲಿ ಭರ್ಜರಿ ಲಾಟರಿ ಹೊಡೆದ ರಕ್ಷಿತಾ ಶೆಟ್ಟಿ - ಬಹುದೊಡ್ಡ ಕನಸು ನನಸು ಮಾಡಿದ Bigg Boss!

ತಮ್ಮ ಮೀನಿನ ಅಡುಗೆಗಳಿಂದಲೇ ಪ್ರಸಿದ್ಧರಾದ ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿ, ತಮ್ಮ ಬಹುದೊಡ್ಡ ಆಸೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಬಿಗ್‌ಬಾಸ್, ರಕ್ಷಿತಾ ಅವರ ಈ ಕನಸನ್ನು ನನಸು ಮಾಡಿದೆ. ಏನದು ಕನಸು? ರಕ್ಷಿತಾ ಶೆಟ್ಟಿಗೆ ಲಾಟರಿ ಹೊಡೆದದ್ದೇಕೆ?

Read Full Story
04:39 PM (IST) Dec 24

Karnataka News Live 24 December 2025ಸಕಾಲಕ್ಕೆ ಬಾರದ ಆ್ಯಂಬುಲೆನ್ಸ್ ಚಾಲಕ; ಚಿಕಿತ್ಸೆ ಸಿಗದೆ ವೃದ್ಧ ಸಾವು, ಆಕ್ರೋಶಗೊಂಡ ಕುಟುಂಬಸ್ಥರಿಂದ ಕಲ್ಲೆಸೆತ!

ದಾವಣಗೆರೆಯ ಸಾಸ್ವೆಹಳ್ಳಿಯಲ್ಲಿ, ಆ್ಯಂಬುಲೆನ್ಸ್ ಚಾಲಕ ಸಕಾಲಕ್ಕೆ ಬಾರದ ಕಾರಣ ಅಸ್ವಸ್ಥ ವೃದ್ಧರೊಬ್ಬರು ಆಸ್ಪತ್ರೆ ಮುಂದೆಯೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ಆ್ಯಂಬುಲೆನ್ಸ್ ಮೇಲೆ ಕಲ್ಲೆಸೆದು ಪ್ರತಿಭಟಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
Read Full Story
04:35 PM (IST) Dec 24

Karnataka News Live 24 December 2025ಅಪ್ಪನೇ ಅಮ್ನನನ್ನು ಕೊಂದಿದ್ದಾರೆ; ಡಿವೋರ್ಸ್ ನೋಟಿಸ್ ನೀಡಿದ್ದಕ್ಕೆ ಪತ್ನಿಯನ್ನೇ ಮರ್ಡರ್ ಮಾಡಿದ ಪತಿರಾಯ!

ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಪತ್ನಿ ಭುವನೇಶ್ವರಿಯನ್ನು ಪತಿ ಬಾಲ ಮುರುಗನ್ ಗುಂಡಿಕ್ಕಿ ಕೊಂದಿದ್ದಾನೆ. ಈ ಪ್ರಕರಣದಲ್ಲಿ, ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಅಕ್ರಮವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಮಾಗಡಿ ರಸ್ತೆ ಪೊಲೀಸರು ಅದರ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
Read Full Story
03:42 PM (IST) Dec 24

Karnataka News Live 24 December 2025Amruthadhaare - ಭೂಮಿಕಾ ಸತ್ಯ ಬಾಯ್ಬಿಟ್ಟ ಹೊತ್ತಲ್ಲೇ ಅನಾಹುತ - ಜೈದೇವನ ಕೈಗೆ ಸಿಕ್ಕೇಬಿಟ್ಟಿತು ಆ ಫೋಟೋ!

ಅಜ್ಜಿ ಮತ್ತು ಭಾಗ್ಯಮ್ಮನ ಯೋಜನೆಯಿಂದ ಗೌತಮ್ ಮತ್ತು ಭೂಮಿಕಾ ಒಂದಾಗುವ ಕಾಲ ಬಂದಿದೆ. ಭೂಮಿಕಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರೆ, ಇತ್ತ ಜೈದೇವನಿಗೆ ಆಕಾಶ್ ಗೌತಮ್ ಮಗ ಎಂಬ ಸತ್ಯ ಫೋಟೋ ಮೂಲಕ ತಿಳಿದುಬಂದಿದೆ. ಅತ್ತ ಅಜ್ಜಿಯ ಆಸ್ತಿ ಕಬಳಿಸುವ ಜೈದೇವನ ಸಂಚು ಕೂಡ ವಿಫಲವಾಗಿದೆ.
Read Full Story
03:29 PM (IST) Dec 24

Karnataka News Live 24 December 2025ಹೊಸ ವರ್ಷದ ರಾತ್ರಿ ಬೆಂಗಳೂರಲ್ಲಿ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ! ಎಲ್ಲಿಂದ? ಎಲ್ಲಿಗೆ?

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವದವರೆಗೆ ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಂದ ನಗರದ ಪ್ರಮುಖ ಭಾಗಗಳಿಗೆ ಸುಮಾರು 70 ವಿಶೇಷ ಬಸ್‌ಗಳು ಸಂಚರಿಸಲಿದೆ.

Read Full Story
02:46 PM (IST) Dec 24

Karnataka News Live 24 December 2025Bigg Boss ಮನೆಗೆ 'ಗಿಲ್ಲಿ ಅತ್ತೆ' ಆಗಮನ! ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ- ಗಿಲ್ಲಿಗೆ ಬುದ್ಧಿ ಮಾತು

ಬಿಗ್​ಬಾಸ್​ ಮನೆಯಲ್ಲಿ ಕುಟುಂಬಸ್ಥರ ಆಗಮನದ ವಾರದಲ್ಲಿ, ಅಶ್ವಿನಿ ಗೌಡ ಅವರ ತಾಯಿ ಆಗಮಿಸಿದ್ದಾರೆ. ಮಗಳನ್ನು ಕಂಡು ಭಾವುಕರಾದ ತಾಯಿ, ಗಿಲ್ಲಿ ನಟನ ಜೊತೆ ಮನಸ್ತಾಪ ಬೇಡವೆಂದು ಕಿವಿಮಾತು ಹೇಳಿದರು. ಆಗ ಗಿಲ್ಲಿ ನಟ, ಅಶ್ವಿನಿ ತಾಯಿಯನ್ನು 'ಅತ್ತೆ' ಎಂದು ಕರೆದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದರು.
Read Full Story