11:43 PM (IST) Jun 16

Karnataka News Live 16 June 2025 ಇರಾನ್‌ ಸುಪ್ರೀಂ ಲೀಡರ್‌ ಅಯತೊಲ್ಲಾ ಖಮೇನಿ ಹತ್ಯೆ ಮಾಡುವ ಸುಳಿವು ನೀಡಿದ ಇಸ್ರೇಲ್‌ ಪ್ರಧಾನಿ

ಇಸ್ರೇಲ್ ಪ್ರಧಾನಿ ನೆತನ್ಯಾಹು ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ ಯೋಜನೆ ಬಗ್ಗೆ ಸುಳಿವು ನೀಡಿದ್ದಾರೆ. ಈ ಕ್ರಮ ಯುದ್ಧ ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಟ್ರಂಪ್ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
Read Full Story
11:16 PM (IST) Jun 16

Karnataka News Live 16 June 2025 ಈ ಯುದ್ಧವನ್ನ ಇರಾನ್‌ ಗೆಲ್ಲೋದಿಲ್ಲ, ತಡವಾಗುವ ಮುನ್ನ ಮಾತುಕತೆ ನಡೆಸಿ ಎಂದ ಟ್ರಂಪ್‌!

ಕೆನಡಾದಲ್ಲಿ ನಡೆಯಲಿರು G7 ಶೃಂಗಸಭೆಗೂ ಮುನ್ನ, ಡೊನಾಲ್ಡ್ ಟ್ರಂಪ್ ಇಸ್ರೇಲ್-ಇರಾನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸುವ ಹೇಳಿಕೆಯನ್ನು ಬೆಂಬಲಿಸಲು ನಿರಾಕರಿಸಿದರು, ಇಸ್ರೇಲ್‌ನ ಕ್ರಮಗಳನ್ನು ಬಲವಾಗಿ ಬೆಂಬಲಿಸಿದರು ಮತ್ತು ರಷ್ಯಾ ಮೈತ್ರಿಕೂಟಕ್ಕೆ ಮರಳಬೇಕೆಂದು ಕರೆ ನೀಡಿದರು.

Read Full Story
10:31 PM (IST) Jun 16

Karnataka News Live 16 June 2025 ಇಂದಿನಿಂದ ಮಿಂಚಿನ ವೇಗದಲ್ಲಿ ನಡೆಯಲಿದೆ ಯುಪಿಐ ವಹಿವಾಟು , ಜಸ್ಟ್‌ 15 ಸೆಕೆಂಡ್‌ನಲ್ಲಿಯೇ ಟ್ರಾನ್ಸ್‌ಫರ್‌ ಆಗಲಿದೆ ಹಣ!

UPI ಪಾವತಿಗಳು ಈಗ 50% ವೇಗವಾಗಿವೆ, ಕೇವಲ 15 ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತವೆ. NPCI ಕಳೆದ ತಿಂಗಳು ನಿಯಮಗಳನ್ನು ಬದಲಾಯಿಸಿದ್ದು, ಜೂನ್ 16 ರಿಂದ ಜಾರಿಗೆ ಬಂದಿದೆ. ವಹಿವಾಟು ವೈಫಲ್ಯ ಮತ್ತು ಬಳಕೆದಾರರ ಅಸಮಾಧಾನ ಕಡಿಮೆ ಮಾಡುವುದು ಇದರ ಉದ್ದೇಶ.
Read Full Story
09:45 PM (IST) Jun 16

Karnataka News Live 16 June 2025 ಇಸ್ರೇಲ್-ಇರಾನ್ ಸಂಘರ್ಷ - ಟಿವಿ ಸ್ಟುಡಿಯೋದಲ್ಲಿ ಬಾಂಬ್ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇಸ್ರೇಲ್ ಇರಾನ್‌ನ ರಾಷ್ಟ್ರೀಯ ಟಿವಿ ಚಾನೆಲ್‌ನ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಲೈವ್ ಕಾರ್ಯಕ್ರಮ ನಡೆಸುತ್ತಿದ್ದ ನಿರೂಪಕಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. 

Read Full Story
09:27 PM (IST) Jun 16

Karnataka News Live 16 June 2025 ಟೆರರಿಸ್ಟ್‌ ಫಂಡಿಂಗ್‌ ಇಲ್ಲದೆ, ಪಹಲ್ಗಾಮ್‌ ದಾಳಿಯಂಥ ಕೃತ್ಯ ಆಗಲು ಸಾಧ್ಯವೇ ಇಲ್ಲ ಎಂದ FATF

ಪಹಲ್ಗಾಮ್ ದಾಳಿಯನ್ನು FATF ಖಂಡಿಸಿದ್ದು, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಲಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಮತ್ತೆ 'ಬೂದು ಪಟ್ಟಿ'ಗೆ ಸೇರಿಸಬಹುದೆಂಬ ಚರ್ಚೆಗಳು ಆರಂಭವಾಗಿವೆ. 

Read Full Story
09:24 PM (IST) Jun 16

Karnataka News Live 16 June 2025 Honeymoon Mur*der - ಪ್ರವಾಸಿಗನ ಕ್ಯಾಮೆರಾದಲ್ಲಿ ಅನಿರೀಕ್ಷಿತವಾಗಿ ಕೊನೆಯ ಕ್ಷಣದ ವಿಡಿಯೋ ಸೆರೆ!

ಮಧ್ಯಪ್ರದೇಶದ ಇಂದೋರ್​ನ ರಾಜಾ ರಘುವಂಶಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಪ್ರವಾಸಿಗನೊಬ್ಬ ಅನಿರೀಕ್ಷಿತವಾಗಿ ವಿಡಿಯೋ ಮಾಡಿದ್ದು, ಅದರಲ್ಲಿ ಈ ದಂಪತಿ ಕಾಣಿಸಿಕೊಂಡಿದ್ದಾರೆ. ಇದು ದಂಪತಿಯ ಕೊನೆಯ ಕ್ಷಣ ಇರಬಹುದು ಎಂದು ಊಹಿಸಲಾಗಿದೆ.

Read Full Story
09:01 PM (IST) Jun 16

Karnataka News Live 16 June 2025 ಬೆಂಗಳೂರಿನ ಹೊಸ ಹೆಜ್ಜೆ ಹಳದಿ ಮೆಟ್ರೋ ಶೀಘ್ರವೇ ಸಂಚಾರ ಮುಕ್ತ, ನಿಲ್ದಾಣದ ವಿಶೇಷಗಳಿವು!

ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಜೂನ್ 2025ರಲ್ಲಿ ಭಾಗಶಃ ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ ಕೆಲವು ನಿಲ್ದಾಣಗಳಲ್ಲಿ ಸೀಮಿತ ಸೇವೆ ಲಭ್ಯವಿರುತ್ತದೆ. ಪೂರ್ಣ ಪ್ರಮಾಣದ ಸೇವೆ ಆಗಸ್ಟ್ ಅಥವಾ ಸೆಪ್ಟೆಂಬರ್ 2025ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
Read Full Story
08:47 PM (IST) Jun 16

Karnataka News Live 16 June 2025 ಹಣಕ್ಕಾಗಿ ಹೊಸ ಮಾರ್ಗ ಹಿಡಿದ ಮೆಟಾ, ಎರಡೇ ತಿಂಗಳಲ್ಲಿ ವಾಟ್ಸಾಪ್‌ನಲ್ಲೂ ಬರಲಿದೆ ಜಾಹೀರಾತು!

ಯೂಸರ್‌ಗಳ ವೈಯಕ್ತಿಕ ಸಂದೇಶಗಳು, ಕರೆಗಳು ಮತ್ತು ಸ್ಟೇಟಸ್‌ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟ್ ಆಗಿರುತ್ತವೆ ಮತ್ತು ಆದ್ದರಿಂದ ಜಾಹೀರಾತುಗಳನ್ನು ತೋರಿಸಲು ಬಳಸಲಾಗುವುದಿಲ್ಲ ಎಂದು WhatsApp ಹೇಳಿದೆ.

Read Full Story
08:16 PM (IST) Jun 16

Karnataka News Live 16 June 2025 'ನಮ್ದು ನಾವು ಉಳಿಸಿಕೊಂಡ್ರೆ ಸಾಕಾಗಿದೆ..' ಸಚಿವ ಸಂಪುಟ ಬದಲಾವಣೆ ಕುರಿತು ಜಾರಕಿಹೊಳಿ ಮಹತ್ವದ ಹೇಳಿಕೆ!

ಸಚಿವ ಸಂಪುಟ ಬದಲಾವಣೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಸ್ಥಾನ ಉಳಿಸಿಕೊಂಡರೆ ಸಾಕು ಎಂದು ಹೇಳಿದ ಅವರು, ರಾಜಕೀಯದಲ್ಲಿ ಬದಲಾವಣೆ ಸಹಜ ಎಂದಿದ್ದಾರೆ. ಡಿಕೆ ಶಿವಕುಮಾರ ಸಿಎಂ ಆಗುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
Read Full Story
07:46 PM (IST) Jun 16

Karnataka News Live 16 June 2025 ಶಬರಿಮಲೆ ಯಾತ್ರೆ ವೇಳೆ ಹೃದಯಾಘಾತಕ್ಕೆ ಬಲಿಯಾದ ಅಯ್ಯಪ್ಪಸ್ವಾಮಿ ಭಕ್ತ!

ಶಬರಿಮಲೆ ಯಾತ್ರೆಯ ವೇಳೆ ಯುವಕ ಪ್ರಜ್ವಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಘಟನೆ ಕುಟುಂಬ ಮತ್ತು ಸ್ನೇಹಿತರಿಗೆ ಆಘಾತ ತಂದಿದೆ. ಯಾತ್ರಾ ಸ್ಥಳದಲ್ಲಿ ಸಾವನ್ನಪ್ಪಿದ ಭಕ್ತನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
07:45 PM (IST) Jun 16

Karnataka News Live 16 June 2025 ಈ ರೀತಿ ಹಣದ ವ್ಯವಹಾರ ಮಾಡಿದ್ರೆ ನಿಮಗೂ ಬರತ್ತೆ Income Tax ನೋಟಿಸ್​! ತಪ್ಪಿಸಿಕೊಳ್ಳೋದು ಹೇಗೆ?

ಆದಾಯ ತೆರಿಗೆ ಇಲಾಖೆಯಿಂದ ಐದು ರೀತಿಯ ಹಣದ ವ್ಯವಹಾರಗಳಿಗೆ ನೋಟಿಸ್​ ಬರಬಹುದು. ಹಾಗೆಂದು ನಿಮ್ಮ ಮೇಲೆ ಸಂದೇಹ ಎಂದಲ್ಲ. ಅದಕ್ಕಾಗಿ ನೀವು ಮಾಡಬೇಕಿರುವುದು ಏನು? ಇಲ್ಲಿದೆ ಡಿಟೇಲ್ಸ್​

Read Full Story
07:40 PM (IST) Jun 16

Karnataka News Live 16 June 2025 ಅಂಡಮಾನ್‌ ಸಮುದ್ರದಲ್ಲಿ ಭಾರೀ ತೈಲದ ನಿಕ್ಷೇಪ, ದೇಶದ ಆರ್ಥಿಕ ಸ್ಥಿತಿಯನ್ನೇ ಬದಲಿಸುವ ಜಾಕ್‌ಪಾಟ್‌ನ ಅಂಚಿನಲ್ಲಿ ಭಾರತ!

ಭಾರತವು ಅಂಡಮಾನ್ ಸಮುದ್ರದಲ್ಲಿ ಪ್ರಮುಖ ತೈಲ ಅನ್ವೇಷಣೆಯ ಅಂಚಿನಲ್ಲಿದೆ. ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದ್ದು, ಭಾರತದ ಪಾಲಿಗೆ ಈ ತೈಲ ನಿಕ್ಷೇಪ ಗಯಾನ ದೇಶಕ್ಕೆ ಮಾಡಿದ ಅದ್ಭುತವನ್ನು ಮಾಡಬಹುದು ಎಂದಿದ್ದಾರೆ.

Read Full Story
07:27 PM (IST) Jun 16

Karnataka News Live 16 June 2025 ಪೆಟ್ರೋಲ್ ಬಂಕ್ ಹುಡುಗನ ಎದೆಗೆ ಗನ್ ಪಾಯಿಂಟ್ ಇಟ್ಟ ಯುವತಿ! ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ವಾ?

ಉತ್ತರ ಪ್ರದೇಶದ ಸಿಎನ್‌ಜಿ ಕೇಂದ್ರದಲ್ಲಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಮಹಿಳೆಯೊಬ್ಬರು ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
07:22 PM (IST) Jun 16

Karnataka News Live 16 June 2025 ಬಾಲಕಿ ಮೃತಪಟ್ಟ ಆಸ್ಪತ್ರೆಯ ಹಾಸಿಗೆಯಲ್ಲಿ ಈಗಲೂ ವಿಚಿತ್ರ ಶಬ್ದ! ವೈದ್ಯಲೋಕಕ್ಕೇ ಸವಾಲು...

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇದೆಯೋ ಇಲ್ಲವೋ ಎನ್ನುವ ವಾದ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯಲೋಕಕ್ಕೇ ಸವಾಲು ಎನ್ನಿಸುವ ಘಟನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಏನದು?

Read Full Story
06:51 PM (IST) Jun 16

Karnataka News Live 16 June 2025 ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆ ಸ್ಥಗಿತ! ಯಾವ ಏರಿಯಾಗೂ ಒಂದು ಹನಿ ನೀರು ಬರೋದಿಲ್ಲ!

ಜೂನ್ 19 ರಿಂದ 20 ರವರೆಗೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿ ಹಾಗೂ ವಿದ್ಯುತ್ ನಿರ್ವಹಣೆ ಕಾರಣದಿಂದಾಗಿ ಈ ಸ್ಥಗಿತ ಅನಿವಾರ್ಯವಾಗಿದೆ. ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಕೊಳ್ಳುವಂತೆ BWSSB ಮನವಿ ಮಾಡಿದೆ.
Read Full Story
06:50 PM (IST) Jun 16

Karnataka News Live 16 June 2025 ಅರ್ಧ ಶತಮಾನದ ಬಳಿಕ ಹುಟ್ಟಿದ ಹೆಣ್ಣುಮಗುವಿಗೆ ವೈಭವದ ಸ್ವಾಗತ; ವಿಡಿಯೋ ನೋಡಿ ನೀವೂ ಕಣ್ತುಂಬಿಕೊಳ್ಳಿ!

ಅರ್ಧ ಶತಮಾನದ ನಂತರ ಕುಟುಂಬವೊಂದಕ್ಕೆ ಹೆಣ್ಣು ಮಗುವಿನ ಜನನ. ದೆಹಲಿಯಲ್ಲಿ ನಡೆದ ಈ ಸಂಭ್ರಮದಲ್ಲಿ ನೂರಾರು ಕಾರುಗಳ ಮೆರವಣಿಗೆ, ದೀಪಾಲಂಕಾರ, ಹೂವಿನ ಅಲಂಕಾರ, ಪಟಾಕಿಗಳೊಂದಿಗೆ ಅದ್ದೂರಿಯಾಗಿ ಮಗುವನ್ನು ಸ್ವಾಗತಿಸಲಾಯಿತು. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story
06:48 PM (IST) Jun 16

Karnataka News Live 16 June 2025 ಇಂಗ್ಲೀಷ್ ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಗೆ ಸೇರಿದರೆ ₹1000 ಬಹುಮಾನ!

ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರದ ಸರ್ಕಾರಿ ಶಾಲೆಯೊಂದು ಇಂಗ್ಲಿಷ್ ಮಾಧ್ಯಮದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ₹1000 ನೀಡುತ್ತಿದೆ. ಶಿಕ್ಷಕ ಶ್ರೀಧರ್ ಅವರ ಈ ಉಪಕ್ರಮದಿಂದಾಗಿ ದಾಖಲಾತಿ ಹೆಚ್ಚಿದೆ.

Read Full Story
06:40 PM (IST) Jun 16

Karnataka News Live 16 June 2025 ನೈಟ್‌ ಶಿಫ್ಟ್‌ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅಸ್ತಮಾ ಅಪಾಯ ಹೆಚ್ಚು ಎಂದ ವರದಿ!

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರು ಹಗಲಿನ ವೇಳೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗಿಂತ ಆಸ್ತಮಾದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಪುರುಷರಲ್ಲಿ ಮಾತ್ರ ಈ ಸಂಬಂಧ ಕಂಡುಬಂದಿಲ್ಲ.

Read Full Story
06:29 PM (IST) Jun 16

Karnataka News Live 16 June 2025 ಕೇರಳದಲ್ಲಿ ವಿಪರೀತ ಮಳೆಗೆ 3 ಸಾವು, ಇಡುಕ್ಕಿಯ ಪೊನ್ಮುಡಿ ಅಣೆಕಟ್ಟು ಓಪನ್

ಇಡುಕ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪೊನ್ಮುಡಿ ಅಣೆಕಟ್ಟನ್ನು ತೆರೆಯಲಾಗಿದೆ. ಪನ್ನಿಯಾರ್ ನದಿ ಪಕ್ಕದಲ್ಲಿ ವಾಸಿಸುವವರು ಜಾಗರೂಕರಾಗಿರಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ.
Read Full Story
06:08 PM (IST) Jun 16

Karnataka News Live 16 June 2025 ಬೆಂಗಳೂರು ರ‍್ಯಾಪಿಡೋ ಚಾಲಕನಿಂದ ಯುವತಿಗೆ ಹಲ್ಲೆ ಕೇಸ್‌ಗೆ ಭರ್ಜರಿ ಟ್ವಿಸ್ಟ್; ಸಿಸಿಟಿವಿ ದೃಶ್ಯದಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರಿನ ಜಯನಗರದಲ್ಲಿ ರ‍್ಯಾಪಿಡೋ ಚಾಲಕನೊಬ್ಬ ಯುವತಿಗೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ರ‍್ಯಾಪಿಡೋ ಚಾಲಕನ ಹಲ್ಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಹೊಸ ತಿರುವು ನೀಡಿವೆ.

Read Full Story