ಮಧ್ಯಪ್ರದೇಶದ ಇಂದೋರ್ನ ರಾಜಾ ರಘುವಂಶಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರವಾಸಿಗನೊಬ್ಬ ಅನಿರೀಕ್ಷಿತವಾಗಿ ವಿಡಿಯೋ ಮಾಡಿದ್ದು, ಅದರಲ್ಲಿ ಈ ದಂಪತಿ ಕಾಣಿಸಿಕೊಂಡಿದ್ದಾರೆ. ಇದು ದಂಪತಿಯ ಕೊನೆಯ ಕ್ಷಣ ಇರಬಹುದು ಎಂದು ಊಹಿಸಲಾಗಿದೆ.
ಮಧ್ಯಪ್ರದೇಶದ ಇಂದೋರ್ನ ರಾಜಾ ರಘುವಂಶಿ ಮ*ರ್ಡರ್ ಕೇಸ್ ದೇಶಾದ್ಯಂತ ಹಲ್ಚಲ್ ಸೃಷ್ಟಿಸುತ್ತಿದೆ. ಮದುವೆಯೆಂದರೆ ಪುರುಷರ ನಡುಗುವ ಸ್ಥಿತಿಗೆ ಬಂದು ತಲುಪಿದೆ ಈ ಕೇಸ್. ಮೊದಲೇ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದ ಸೋನಂ ಹನಿಮೂನ್ಗೆ ಗಂಡನನ್ನು ಕರೆದುಕೊಂಡು ಹೋಗಿ ಮುಗಿಸಿರುವುದು ಇದಾಗಲೇ ತಿಳಿದುಬಂದಿದೆ. ಆಕೆಯ ಪ್ರಿಯಕರ ರಾಜ್ ಎಂಬಾತ ಈ ಕೇಸ್ನ ಪ್ರಮುಖ ರೂವಾರಿಯಾಗಿದ್ದಾನೆ. ಇದೀಗ ಬಂದಿರುವ ವರದಿಯ ಪ್ರಕಾರ, ರಾಜ್ನ ಮೂವರು ಮಿತ್ರರು ಹಣಕ್ಕಾಗಿ ಈ ಕೊ*ಲೆ ಮಾಡಿರಲಿಲ್ಲ, ಬದಲಿಗೆ ಆತನಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಕೊ*ಲೆ ಮಾಡಲು ಒಪ್ಪಿಕೊಂಡಿರುವುದು ತಿಳಿದಿದೆ. ಆದರೆ ಖತರ್ನಾಕ್ ಹಂತಕಿ ಸೋನಂ, ರಾಜ್ಗೂ ಕೈಕೊಟ್ಟು ಮತ್ತೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದು, ಆತನಿಗಾಗಿ ಬಂಗಲೆಯನ್ನೂ ಖರೀದಿರಿಸಿರುವುದು ತಿಳಿದಿದೆ.
ಅದರ ನಡುವೆಯೇ, ಇದೀಗ ದೇವ್ಸಿಂಗ್ ಎನ್ನುವವರು ಕೊ*ಲೆ ನಡೆದ ಸ್ಥಳದಲ್ಲಿ ಪ್ರವಾಸಕ್ಕೆಂದು ಹೋಗಿದ್ದರು. ಆದರೆ, ಅವರು ಅಲ್ಲಿ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಈ ದಂಪತಿಯ ದೃಶ್ಯ ಸೆರೆಯಾಗಿದೆ. ಇದರಲ್ಲಿ ಸೋನಂ ಕೋಲನ್ನು ಹಿಡಿದು ಮುಂದೆ ಹೋಗುತ್ತಿದ್ದರೆ, ತನ್ನ ಸಾವು ಸಮೀಪಿಸುತ್ತಿದೆ, ಕೊ*ಲೆಗಾತಿ ಇಲ್ಲಿಯೇ ಇದ್ದಾಳೆ ಎನ್ನುವುದನ್ನೂ ಅರಿಯದ ರಾಜಾ ಅವರು ಆಕೆಯ ಹಿಂದೆ ಹೋಗುತ್ತಿರುವುದನ್ನು ನೋಡಬಹುದು. ಕೊ*ಲೆಯಾದ ಸ್ಥಳದಲ್ಲಿ ಇದೇ ಬಿಳಿಯ ಬಣ್ಣದ ಡ್ರೆಸ್ ಸಿಕ್ಕಿರುವ ಕಾರಣದಿಂದ ಬಹುಶಃ ಇದು ಅವರಿಬ್ಬರ ಕೊನೆಯ ವಿಡಿಯೋ ಎಂದು ಊಹಿಸಲಾಗುತ್ತಿದೆ. ಇದರಲ್ಲಿ ಸೋನಂಳನ್ನು ನೋಡಿದರೆ ಏನೋ ಪ್ಲ್ಯಾನ್ ಮಾಡುತ್ತಲೇ ಸಾಗುತ್ತಿರುವಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವಿಡಿಯೋದಲ್ಲಿ ಪೊಲೀಸರಿಗೆ ಏನಾದರೂ ಸಹಾಯ ಆಗಬಹುದು ಎನ್ನುವ ಕಾರಣದಿಂದ ಇದನ್ನು ಶೇರ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಇನ್ನು ಈ ಕೊ*ಲೆ ಕೇಸ್ಗೆ ಬರುವುದಾದರೆ, ಸುಪಾರಿ ಹಂತಕರ ಜೊತೆಗೂಡಿ ಪತಿಯನ್ನು ಮುಗಿಸಿದ ಬಳಿಕ, ಸೋನಂ ಇದೇ ಬಂಗಲೆಯಲ್ಲಿ ಬಚ್ಚಿಟ್ಟುಕೊಂಡಿದ್ದಳು ಎನ್ನುವುದು ಪೊಲೀಸರ ಶಂಕೆ. ಇನ್ನು ಈ ಕೇಸ್ ಕುರಿತು ಹೇಳುವುದಾದರೆ, ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಅವರು ಮೇಘಾಲಯಕ್ಕೆ ಹನಿಮೂನ್ಗೆ ಹೋದ ಸಂದರ್ಭದಲ್ಲಿ ಇಬ್ಬರೂ ನಿಗೂಢರಾಗಿ ಕಾಣೆಯಾಗಿದ್ದರು. ಮೇ 23 ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದಲ್ಲಿ ರಜೆಗೆ ಹೋಗಿದ್ದ ಜೋಡಿ ಸಂಪರ್ಕಕ್ಕೆ ಸಿಗದಾಗ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಸಂದರ್ಭದಲ್ಲಿ ಡ್ರೋನ್ ಬಳಸಲಾಗಿತ್ತು. ಅಲ್ಲಿ ತಿರುಗಾಡಲು ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸಿಕ್ಕಿತ್ತು. ತೀವ್ರ ಹುಡುಕಾಟದ ಬಳಿಕ, ಪತಿಯ ಶವ ಕಣಿವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಬಾಂಗ್ಲಾದೇಶದ ಗಡಿಯಾಗಿದ್ದ ಹಿನ್ನೆಲೆಯಲ್ಲಿ, ಬಾಂಗ್ಲಾಕ್ಕೆ ಸೋನಮ್ಳನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆಮೇಲೆ ತನಿಖೆಯ ಬಳಿಕ ಪ್ರಿಯಕರನ ಜೊತೆಗೂಡಿ ಸೋನಂ ಗಂಡನನ್ನು ಮುಗಿಸಿರುವುದು ತಿಳಿದಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ.
ಇದರ ತನಿಖೆಯ ವೇಳೆ ಗಂಡನನ್ನು ಮುಗಿಸಿದ ಬಳಿಕ ಯಾವುದೇ ರೀತಿಯ ಸಂದೇಹ ಬರಬಾರದು ಎನ್ನುವ ಕಾರಣಕ್ಕೆ ಅತ್ತೆಗೆ ಕರೆ ಮಾಡಿದ್ದಳು ಹಂತಕಿ. ರಾಜಾಇನ್ನೂ ಮಲಗಿದ್ದಾರೆ ಎಂದಿದ್ದಳು. ಅವರು ಎದ್ದಾಗ ಕರೆ ಮಾಡಿಸುತ್ತೇನೆ ಎಂದಿದ್ದ ಆಕೆ. ಅಂದು ತನಗೆ ಉಪವಾಸ ಆಗಿದ್ದ ಬಗ್ಗೆ ತಿಳಿಸಿದ್ದಳು. ಆಗ ಅತ್ತೆ, ಹೌದು ನನಗೂ ಇವತ್ತು ತಿಂಡಿ ರೆಡಿ ಮಾಡುವ ಸಮಯದಲ್ಲಿ ನೀನು ಉಪವಾಸ ಇರುವುದು ನೆನಪಾಯ್ತು. ಬೆಟ್ಟ ಗುಡ್ಡ ಎಲ್ಲಾ ಹತ್ತಲು ಹೋಗುತ್ತಿ. ಹಸಿವೆಯಿಂದ ಹೋಗಬೇಡ, ಏನಾದರೂ ತಿಂದುಕೊಂಡು ಹೋಗು ಎಂದು ಅತ್ತೆ ಸೊಸೆಯ ಬಗ್ಗೆ ಕಾಳಜಿ ತೋರಿದ್ದರು. ಆಗ ಸೋನಂ... ಇಲ್ಲ ಇಲ್ಲ ಬೆಟ್ಟ ಗುಡ್ಡ ಹತ್ತಬೇಕು ಎನ್ನುವ ಕಾರಣಕ್ಕೆ ನನ್ನ ಉಪವಾಸವನ್ನು ಮುರಿಯುವುದಿಲ್ಲ ಎಂದಳು.
