ಇಂಗ್ಲೀಷ್ ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಗೆ ಸೇರಿದರೆ ₹1000 ಬಹುಮಾನ!
ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್ಚಾಮರಾಜನಗರದ ಸರ್ಕಾರಿ ಶಾಲೆಯೊಂದು ಇಂಗ್ಲಿಷ್ ಮಾಧ್ಯಮದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ₹1000 ನೀಡುತ್ತಿದೆ. ಶಿಕ್ಷಕ ಶ್ರೀಧರ್ ಅವರ ಈ ಉಪಕ್ರಮದಿಂದಾಗಿ ದಾಖಲಾತಿ ಹೆಚ್ಚಿದೆ.

ಚಾಮರಾಜನಗರ: ಸರ್ಕಾರಿ ಶಾಲೆ ಅಂದ್ರೆ ಮೂಗು ಮರಿಯುವ ಪೋಷಕರೇ ಇತ್ತ ಗಮನಿಸಿ ನೋಡಿ. ಸರ್ಕಾರಿ ಶಾಲೆಗೆ ದಾಖಲಾತಿ ಮಾಡುವ ಪೋಷಕರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಒಂದನೇ ತರಗತಿಗೆ ಸೇರಿದ್ರೆ ಒಂದು ಸಾವಿರ ರೂಪಾಯಿ ಗಿಪ್ಟ್ ಕೊಟ್ಟಿದ್ದಾರೆ. ಈ ಶಾಲಾ ಶಿಕ್ಷಕನ ನಯಾ ಐಡಿಯಾಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೆ ಸರಿಯುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ನಿಟ್ಟಿನಲ್ಲಿ ಖಾಸಗೀ ಶಾಲೆಗಳತ್ತ ಮುಖ ಮಾಡಿದ್ದಾರೆ. ಈ ಹಿನ್ನಲೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರಲೂ ಶಾಲಾ ಶಿಕ್ಷಕನೊಬ್ಬ ನಯಾ ಐಡಿಯಾ ಮಾಡಿದ್ದಾನೆ. ಶಾಲೆಯ ದಾಖಲಾತಿ ಹೆಚ್ಚಿಸಲು ಹೊಸ ಪ್ಲ್ಯಾನ್ ಮಾಡಿದ್ದಾರೆ. ಒಂದನೇ ತರಗತಿಯ ಇಂಗ್ಲೀಷ್ ಮಾಧ್ಯಮಕ್ಕೆ ಸೇರುವ ವಿಧ್ಯಾರ್ಥಿಗಳಿಗೆ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ಕೊಡಲೂ ನಿರ್ಧರಿಸಿದ್ದಾರೆ. ಹೌದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿರುವ ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀಧರ್ ಎಂಬುವರು ತಮಗೆ ಬರುವ ವೇತನದಲ್ಲಿ ಹೊಸದಾಗಿ ಶಾಲೆಗೆ ಇಂಗ್ಲೀಷ್ ಮಾಧ್ಯಮಕ್ಕೆ ಬರುವ ವಿಧ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ.
ಇದರಿಂದ ಈಗಾಗಲೇ 5 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಇನ್ನೂ ಒಂದನೇ ತರಗತಿ ದಾಖಲಾಗುವ 15 ವಿಧ್ಯಾರ್ಥಿಗಳಿಗೆ ತಲಾ 1 ಸಾವಿರ ರೂ ಕೊಡ್ತಾರಂತೆ. ಈ ರೀತಿಯ ಪ್ರೋತ್ಸಾಹ ಹಿನ್ನಲೆ ಪ್ರತಿ ವರ್ಷ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿದೆ. 50 ಕ್ಕೆ ಕುಗ್ಗಿದ್ದ ವಿಧ್ಯಾರ್ಥಿಗಳ ಸಂಖ್ಯೆ ಇದೀಗಾ 150 ರ ಗಡಿ ದಾಟಿದೆ. ಆದ್ರೆ ಈ ಬಾರಿ ಇಂಗ್ಲೀಷ್ ಮಾಧ್ಯಮಕ್ಕೆ ಸೇರುವ ವಿಧ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನಲೆ ಶಿಕ್ಷಕ ಶ್ರೀಧರ್ ದಾಖಲಾತಿ ಹೆಚ್ಚಿಸಲು ಈ ನಯಾ ಐಡಿಯಾ ಮಾಡಿದ್ದಾರೆ.
ಇನ್ನೂ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ ಮಾಡಿದ್ದರಿಂದ ನಮಗೂ ಕೂಡ ಅನುಕೂಲವಾಗಿದೆ ಅಂತಾರೆ ಪೋಷಕರು. ಖಾಸಗಿ ಶಾಲೆಗಳಿಗೆ ಪ್ರತಿ ವರ್ಷ ಕೂಡ ಸಾವಿರಾರು ರೂಪಾಯಿ ಕೊಟ್ಟು ದಾಖಲು ಮಾಡಬೇಕು. ಇದರಿಂದ ಬಡ ಪೋಷಕರಿಗೆ ಕಷ್ಟವಾಗುತ್ತಿತ್ತು. ಆದ್ರೆ ಆಂಗ್ಲ ಮಾಧ್ಯಮದ ದಾಖಲಾತಿ ಜೊತೆಗೆ ಶಿಕ್ಷಕರು ಕೂಡ ಒಂದು ಸಾವಿರ ಕೊಡ್ತಿರುವುದ ಮಾತ್ರ ಸಂತಸದ ವಿಚಾರ ಅಂತಾರೆ. ಅಲ್ಲದೇ ನನ್ನ ಮಗಳು ಕೂಡ ಇಂಗ್ಲೀಷ್ ಕಲಿತಿದ್ದಾಳೆ, ಇದೇ ಶಿಕ್ಷಣ ಕೊಡಿಸಲು ಖಾಸಗಿಯಾಗಿ ಓದಿಸಿದ್ರೆ ಕಷ್ಟವಾಗುತ್ತಿತ್ತು. ಆದ್ರೆ ಖಾಸಗಿ ಶಾಲೆಯ ಮಕ್ಕಳಂತೆ ಶಾಲೆಯ ಬಹುತೇಕ ಮಕ್ಕಳು ಇಂಗ್ಲೀಷ್ ಮಾತನಾಡುತ್ತಿದ್ದು, ಇದು ಸಂತಸದ ಸಂಗತಿಯಾಗಿದೆ ಅಂತಾರೆ.
ಒಟ್ನಲ್ಲಿ ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು ಶಿಕ್ಷಕ ಶ್ರೀಧರ್ ತಮ್ಮ ವೇತನದಲ್ಲಿ ಒಂದು ಸಾವಿರ ರೂಪಾಯಿ ಕೊಡ್ತಿರುವ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಸರ್ಕಾರಿ ಶಾಲೆಗೂ ಕೂಡ ಇದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ.