ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಇದೀಗ UEFA ನೇಷನ್ ಲೀಗ್ಸ್ ಫೈನಲ್ ಪಂದ್ಯದಲ್ಲಿ ದುರಂತ ನಡೆದಿದೆ. ಓರ್ವ ಅಭಿಮಾನಿ ಮೃತಪಟ್ಟಿದ್ದಾನೆ.
- Home
- News
- State
- Karnataka News Live: ಚಿನ್ನಸ್ವಾಮಿ ಕಾಲ್ತುಳಿತದ ಬೆನ್ನಲ್ಲೇ UEFA ನೇಷನ್ ಲೀಗ್‌ನಲ್ಲಿ ಅವಘಡ, ಓರ್ವ ಅಭಿಮಾನಿ ಸಾವು
- FB
- TW
- Linkdin
Follow Us
Karnataka News Live: ಚಿನ್ನಸ್ವಾಮಿ ಕಾಲ್ತುಳಿತದ ಬೆನ್ನಲ್ಲೇ UEFA ನೇಷನ್ ಲೀಗ್‌ನಲ್ಲಿ ಅವಘಡ, ಓರ್ವ ಅಭಿಮಾನಿ ಸಾವು
)
ಬೆಂಗಳೂರು (ಜೂ.10) : ರಾಜ್ಯನ ರಾಜಕಾರಣದಲ್ಲಿ ಸಂಭವಿಸಿದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ಇಮೇಜ್ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡಿದ್ದು, ಇಂದು ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಆಗಮಿಸುವಂತೆ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಬುಲಾವ್ ನೀಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಇದ್ದಾರೆ. ಈ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚರ್ಚೆ ನಡೆಸಲಿದ್ದಾರೆ.
ಹಾಲಿ ಸಚಿವ ಸಂಪುಟದ 8 ರಿಂದ 10 ಸಚಿವರು ಉತ್ತಮ ಆಡಳಿತ ನೀಡುವ ಬಗ್ಗೆ ಗಮನ ಕೊಡುತ್ತಿಲ್ಲ. ಈ ಸಚಿವರು ವಿಧಾನಸೌಧದತ್ತ ತಲೆಹಾಕುತ್ತಿಲ್ಲ ಎಂಬ ವರದಿಗಳು ಹೈಕಮಾಂಡ್ ಮುಟ್ಟಿವೆ. ಅಲ್ಲದೆ, ಸಂಪುಟದ ಕೆಲ ಹಿರಿಯ ಸಚಿವರಿಗೂ ಕೊಕ್ ನೀಡಿ, ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಇರಾದೆಯೂ ಹೈಕಮಾಂಡ್ಗೆ ಇದೆ ಎನ್ನಲಾಗಿದೆ.
Karnataka News Live: ಚಿನ್ನಸ್ವಾಮಿ ಕಾಲ್ತುಳಿತದ ಬೆನ್ನಲ್ಲೇ UEFA ನೇಷನ್ ಲೀಗ್‌ನಲ್ಲಿ ಅವಘಡ, ಓರ್ವ ಅಭಿಮಾನಿ ಸಾವು
Karnataka News Live: ಬೆಂಗಳೂರಿನಲ್ಲಿ ಭಾರಿ ಮಳೆ ಆರಂಭ, ತಗ್ಗು ಪ್ರದೇಶದ ಜನ ಎಚ್ಚರಿಕೆಯಿಂದಿರಲು ಸೂಚನೆ
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭಗೊಂಡಿದೆ. ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಶೇಷಾದ್ರಿಪುರಂ, ಮಲ್ಲೇಶ್ವರಂ ಸೇರಿದಂತೆ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
Karnataka News Live: ಐಟಿ ಕ್ಷೇತ್ರಕ್ಕೆ ಕಾಲಿಡಲು ಬಯಸುತ್ತಿರುವ ಎಂಜಿನೀಯರ್ಸ್‌ಗೆ ಸತ್ಯ ನಾಡೆಲ್ಲಾ ಸಲಹೆ
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ ಉದ್ಯೋಗಗಳ ಭದ್ರತೆ ಪ್ರಶ್ನಾರ್ಹವಾಗಿದೆ. ಐಟಿ ಕ್ಷೇತ್ರಕ್ಕೆ ಬರಲು ಬಯಸುವವರಿಗೆ ಮೈಕ್ರೋಸಾಫ್ಟ್ ಸಿಇಒ ಸಲಹೆ ನೀಡಿದ್ದಾರೆ.
Karnataka News Live: ವಿಡಿಯೋ ಮೇಕ್ಓವರ್, ಸ್ಮಾರ್ಟ್ ಆನ್ ಡಿವೈಸ್ ಎಐ ಒಳಗೊಂಡ ಆ್ಯಪಲ್ iOS 26 ಬಿಡುಗಡೆ
ಆಪಲ್‌ನ iOS 26 "ಲಿಕ್ವಿಡ್ ಗ್ಲಾಸ್" ವಿನ್ಯಾಸ, ಆನ್-ಡಿವೈಸ್ AI, ಲೈವ್ ಟ್ರಾನ್ಸ್‌ಲೇಷನ್, ಜೆನ್‌ಮೋಜಿ ಸೇರಿದಂತೆ ಹತ್ತು ಹಲವು ಫೀಚರ್ಸ್ ಹೊಂದಿರುವ ಹಾಗೂ ಎಐ ಟೆಕ್ iOS 26 ಬಿಡುಗಡೆಯಾಗಿದೆ. ಏನಿದರೆ ವಿಶೇಷತೆ?
Karnataka News Live: 777 ಚಾರ್ಲಿ ಗೆ 3 ವರ್ಷ… ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ ಪೋಸ್ಟ್ ಹಂಚಿಕೊಂಡು ಹೇಳಿದ್ದೇನು?
ದೇಶ ವಿದೇಶದಲ್ಲೂ ಜನ ಮನ ಗೆದ್ದ 777 ಚಾರ್ಲಿ ಸಿನಿಮಾಗೆ ಮೂರು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ನಟರಾದ ಸಂಗೀತ ಶೃಂಗೇರಿ ಹಾಗೂ ರಕ್ಷಿತ್ ಶೆಟ್ಟಿ ಏನು ಹೇಳಿದ್ದಾರೆ ನೋಡಿ.
Karnataka News Live: ಕಾಡಿನ ಚಿರತೆಗಳ ಭಯಕ್ಕೆ ಬನ್ನೇರುಘಟ್ಟ ಮೃಗಾಲಯದ ಗರ್ಭಿಣಿ ಜೀಬ್ರಾ ಸಾವು
ಬನ್ನೇರುಘಟ್ಟ ಮೃಗಾಲಯದಲ್ಲಿರುವ ವನ್ಯ ಮೃಗಗಳಿಗೆ ಇದೀಗ ಕಾಡು ಚಿರತೆಗಳ ಆತಂಕ ಕಾಡುತ್ತಿದೆ. ಇದೀಗ ಗರ್ಭಿಣಿ ಜೀಬ್ರಾ ಇದೇ ಕಾಡು ಚಿರತೆಗಳ ಓಡಾಟದ ಭಯದಿಂದ ಸಾವನ್ನಪ್ಪಿದೆ.
Karnataka News Live: ರಾಜ್ಯದಲ್ಲಿ ಕೋವಿಡ್‌ಗೆ ಮತ್ತೆರೆಡು ಬಲಿ, 7 ಸಾವಿರ ಗಡಿ ತಲುಪಿದ ವೈರಸ್ ಕೇಸ್
ಭಾರತದಲ್ಲಿ ಕೋವಿಡ್ ಪ್ರಕರಣ ಮತ್ತೆ ಹೆಚ್ಚಾಗಿದೆ. ಇದೀಗ 7000 ಗಡಿ ತಲುಪಿದೆ. ಇತ್ತ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಇಬ್ಬರು ಕೋವಿಡ್ ವೈರಸ್‌ಗೆ ಬಲಿಯಾಗಿದ್ದಾರೆ.
Karnataka News Live: ಒಂದು ಕಾಲದಲ್ಲಿ ಹುಡುಗರ ಹೃದಯವನ್ನೇ ಗೆದ್ದಿದ್ದ ನಟಿಯರು ಈಗ ಹೇಗಿದ್ದಾರೆ ನೋಡಿ
90ರ ದಶಕದಲ್ಲಿ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿಯರು ಈವಾಗ ವಯಸ್ಸಾದ ಮೇಲೆ ಹೇಗಾಗಿದ್ದಾರೆ ಇಲ್ಲಿದೆ ಫೋಟೊಗಳು.
Karnataka News Live: ಕಾಲ್ತುಳಿತದಿಂದ KSCAಗೆ ಶಾಕ್ ಕೊಟ್ಟ ಬಿಸಿಸಿಐ, ಬೆಂಗಳೂರು ಚಿನ್ನಸ್ವಾಮಿ ಪಂದ್ಯ ಸ್ಥಳಾಂತರ
ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಿಂದ ಕೆಎಸ್‌ಸಿಎ ತೀವ್ರ ಹಿನ್ನಡೆ ಅನುಭವಿಸಿದೆ. ಎಫ್ಐಆರ್ ಸಂಕಷ್ಟದ ನಡುವೆ ಇದೀಗ ಬಿಸಿಸಿಐ ಶಾಕ್ ಕೊಟ್ಟಿದೆ.
Karnataka News Live: ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಪರವಾಗಿವೆ - ಸ್ಕೈ ನ್ಯೂಸ್ ಚರ್ಚೆಯಲ್ಲಿ ಪಾಕ್ ಸೆನೆಟರ್ ಆರೋಪ
ಪಾಕಿಸ್ತಾನದ ಸೆನೆಟರ್ ಶೆರ್ರಿ ರೆಹಮಾನ್, ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಭಯೋತ್ಪಾದನೆಯ ಕುರಿತು ತಮ್ಮ ದೇಶದ ಸ್ಥಿತಿಗತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಕ್ರಿಯ ಹೋರಾಟ ನಡೆಯುತ್ತಿದೆ, ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಪರವಾಗಿವರದಿ ಮಾಡುತ್ತಿವೆ ಎಂದು ಆರೋಪಿಸಿದರು.
Karnataka News Live: BoycottMaldives ಬಿಸಿ, ಭಾರತೀಯ ಪ್ರವಾಸಿಗರ ಸೆಳೆಯಲು ಕತ್ರಿನಾ ಕೈಫ್‌ರನ್ನ ಜಾಗತಿಕ ರಾಯಭಾರಿ ಮಾಡಿದ ಮಾಲ್ಡೀವ್ಸ್!
Karnataka News Live: ಬೆಂಗಳೂರಿಗೆ ಆರ್ಥಿಕ ಸಂಕಷ್ಟ? ಬ್ಯಾಚ್ಯುಲರ್ಸ್‌ಗೆ ಆಸರೆಯಾಗಿದ್ದ 200 ಪಿಜಿ ಸ್ಥಗಿತ
ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದೆಯಾ? ಒಂದು ಕಾಲದಲ್ಲಿ ಭಾರಿ ಲಾಭದಲ್ಲಿದ್ದ ಪಿಜಿ (ಪೇಯಿಂಗ್ ಗೆಸ್ಟ್) ಉದ್ಯಮ ಇದೀಗ ನಷ್ಟದಲ್ಲಿದೆ. ಪ್ರತಿ ದಿನ ಒಂದೊಂದು ಪಿಜಿಗಳು ಬಂದ್ ಆಗುತ್ತಿದೆ. ಇದೀಗ ನಗರದಲ್ಲಿ 200 ರಿಂದ 300 ಪಿಜಿ ಸ್ಥಗಿತಗೊಂಡಿದೆ.
Karnataka News Live: ಮೊಟ್ಟಮೊದಲ ಬಾರಿಗೆ MGNREGS ಖರ್ಚಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ!
ಇದು ಬೇಡಿಕೆ ಆಧಾರಿತ ಜನ ಕಲ್ಯಾಣ ಕಾರ್ಯಕ್ರಮವಾಗಿರುವುದರಿಂದ ಅಂತಹ ಖರ್ಚು ಮಿತಿಗಳು ಈ ಯೋಜನೆಗೆ ಕೆಲಸ ಮಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ವಾದಿಸಿದೆ ಎಂದು ವರದಿ ಹೇಳಿದೆ.
Karnataka News Live: ಹೋಟೆಲ್ಲೇ ಮನೆ ಬಾಗಿಲಿಗೆ! ಬೇಕಾದ ಆಹಾರ ನೀವೇ ಕ್ಲಿಕ್ಕಿಸಿ ತರಿಸಿಕೊಳ್ಳಿ... ರಾಪಿಡೋ ವಿನೂತನ ಯೋಜನೆ
50 ಸಾವಿರಕ್ಕೂ ಅಧಿಕ ತಿಂಡಿ-ತಿನಿಸುಗಳಲ್ಲಿ ನಿಮಗೆ ಬೇಕಾದದ್ದನ್ನು ಖುದ್ದು ಬ್ರೋಸ್ ಮಾಡಿ ಆಯ್ಕೆ ಮಾಡಿ ಮನೆಯಿಂದಲೇ ಸೇವಿಸುವ ಹೊಸ ಫುಡ್ ಡೆಲವರಿಯನ್ನು ಶುರು ಮಾಡುತ್ತಿದೆ ರಾಪಿಡೋ. ಇದರ ವಿವರ ಇಲ್ಲಿದೆ...
Karnataka News Live: ಫಳ ಫಳ ಹೊಳೆಯುವ ಚರ್ಮಕ್ಕಾಗಿ ಆಲೂಗಡ್ಡೆ ಜೊತೆ ಈ ಫೇಸ್‌ಪ್ಯಾಕ್ ಹಚ್ಚಿ
Karnataka News Live: ಹೆಚ್ಚೆಚ್ಚು ಕತ್ತೆ ಹುಟ್ಟಿಸಲು ಪಾಕ್ ಯೋಜನೆ - ಚೀನಾದಿಂದ ಭಾರಿ ಬೇಡಿಕೆ; ಒಂದೊಂದಕ್ಕೆ 2 ಲಕ್ಷ ರೂ!
ಚೀನಾದ ಶತಕೋಟಿ ಡಾಲರ್ ಔಷಧ ಉದ್ಯಮಕ್ಕೆ ಪಾಕಿಸ್ತಾನದ ಕತ್ತೆಗಳು ಬೇಕಾಗಿರುವ ಕಾರಣದಿಂದ 30 ಸಾವಿರ ಇದ್ದ ಕತ್ತೆಗಳ ಬೆಲೆ 2 ಲಕ್ಷ ರೂಪಾಯಿ ದಾಟಿದೆ. ಪಾಕಿಸ್ತಾನಕ್ಕೆ ಸದ್ಯ ಕತ್ತೆ ಕೈಹಿಡಿಯುತ್ತಿದೆ. ಈ ಕುರಿತು ಒಂದು ವರದಿ.
Karnataka News Live: ChatGPT ಡೌನ್ - ಮೀಮ್ಸ್‌ಗಳ ಹಬ್ಬ, ಭಾರತ-ಅಮೆರಿಕಕ್ಕೆ ಹೆಚ್ಚು ತೊಂದರೆ!
Karnataka News Live: ಅಂದು ಬೀದಿ ವ್ಯಾಪಾರ ಮಾಡುತ್ತಿದ್ದವರು ಇಂದು ಬಾಲಿವುಡ್ ನ ಶ್ರೀಮಂತ ಕುಟುಂಬ
ಒಂದು ಕಾಲದಲ್ಲಿ ಬೀದಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಈ ಕುಟುಂಬವು ಈಗ ಕಪೂರ್‌ಗಳು, ಜೋಹರ್‌ಗಳು, ಖಾನ್‌ಗಳು, ಚೋಪ್ರಾಗಳು ಮತ್ತು ಬಚ್ಚನ್‌ಗಳನ್ನು ಹಿಂದಿಕ್ಕಿ ಬಾಲಿವುಡ್‌ನಲ್ಲಿ ಅತ್ಯಂತ ಶ್ರೀಮಂತ ಕುಟುಂಬವಾಗಿ ಎದ್ದು ನಿಂತಿದೆ.
Karnataka News Live: ಎಂಜಿಆರ್ ಬಂಗಲೆ ಪಟ್ಟಾ ಹಕ್ಕಿನಿಂದ ಕುಟುಂಬದವರ ಹೆಸರು ಮಾಯ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಾರಸುದಾರ!
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿಆರ್‌ರ ತಿರುಚ್ಚಿಯಲ್ಲಿರುವ 25 ಕೋಟಿ ಮೌಲ್ಯದ ಬಂಗಲೆಯ ಪಟ್ಟಾವನ್ನು ಕಾನೂನುಬಾಹಿರವಾಗಿ ಎಐಎಡಿಎಂಕೆ ಪಕ್ಷಕ್ಕೆ ಬರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನಿವೃತ ಸರ್ವೆಯರ್ ಒಬ್ಬರು ಜಿಲ್ಲಾ ಕಚೇರಿಯಲ್ಲಿ ಇದನ್ನು ಪ್ರಶ್ನಸಿದ್ದಾರೆ.