50 ಸಾವಿರಕ್ಕೂ ಅಧಿಕ ತಿಂಡಿ-ತಿನಿಸುಗಳಲ್ಲಿ ನಿಮಗೆ ಬೇಕಾದದ್ದನ್ನು ಖುದ್ದು ಬ್ರೋಸ್​​ ಮಾಡಿ ಆಯ್ಕೆ ಮಾಡಿ ಮನೆಯಿಂದಲೇ ಸೇವಿಸುವ ಹೊಸ ಫುಡ್​ ಡೆಲವರಿಯನ್ನು ಶುರು ಮಾಡುತ್ತಿದೆ ರಾಪಿಡೋ. ಇದರ ವಿವರ ಇಲ್ಲಿದೆ...

ಇದೀಗ ಮನೆಯಿಂದಲೇ ಆಹಾರಗಳನ್ನು ತರಿಸಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ. ಕುಳಿತಲ್ಲಿಯೇ ಆರ್ಡರ್​ ಮಾಡಿ ಬೇಕಾದ ತಿನಿಸುಗಳನ್ನು ತರಿಸಿಕೊಳ್ಳಲಾಗುತ್ತಿದೆ. ಅದು ಎಷ್ಟರಮಟ್ಟಿಗೆ ಎಂದರೆ ಕಾಫಿ, ಟೀ ಗಳನ್ನೂ ತರಿಸಿಕೊಂಡು ಕುಡಿಯುವವರಿದ್ದಾರೆ. ಅದರ ಮಜನೇ ಬೇರೆ ಎನ್ನುವುದು ಅಂಥವರ ಮಾತು. ಕೆಲವರಿಗೆ ಹೋಟೆಲ್​ಗಳು ತೀರಾ ದೂರವಿದ್ದು ಹೋಗುವುದು ಕಷ್ಟವಾದರೆ, ಮತ್ತೆ ಕೆಲವರಿಗೆ ಅನಾರೋಗ್ಯದ ನಿಮಿತ್ತ ಹೋಟೆಲ್​ಗಳವರೆಗೆ ಹೋಗುವುದು ಕಷ್ಟ. ಇದನ್ನು ಹೊರತುಪಡಿಸಿದರೆ, ಸೋಮಾರಿತನದಿಂದಲೂ ಇಂದಿನ ಯುವಕ-ಯುವತಿಯರೂ ಕುಳಿತಲ್ಲಿಯೇ ತಿನಿಸು ತರಿಸಿಕೊಳ್ಳುವುದು ಉಂಟು. ಒಮ್ಮೆ ಹೀಗೆ ತರಿಸಿಕೊಂಡರೆ ಅದೇ ಚಟ ಹತ್ತುವ ಕಾರಣದಿಂದ ಪ್ರತಿದಿನವೂ ಹೀಗೆ ಆರ್ಡರ್​ ಮಾಡಿಕೊಂಡು ತರಿಸಿಕೊಳ್ಳುತ್ತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವ ಕಾರಣದಿಂದ ಜಿಮ್ಮು, ಡಯೆಟ್​ ಎಂದೆಲ್ಲಾ ಮಾಡುವವರು, ತಿಂಡಿಯ ವಿಷಯ ಬಂದಾಗ ಮಾತ್ರ ಸ್ವಲ್ಪ ದೂರವೂ ಹೋಗುವುದಕ್ಕೆ ಒಲ್ಲರು.

ಒಟ್ಟಿನಲ್ಲಿ ಕಾರಣ ಏನೇ ಇರಲಿ, ಇಂಥ ಸೋಮಾರಿಗಳಿಂದಾಗಿಯೇ ಬಹುತೇಕ ಮಂದಿಗೆ ಉದ್ಯೋಗ ದೊರೆಯುತ್ತಿದೆ ಎನ್ನುವುದೂ ಸುಳ್ಳಲ್ಲ. ಬೀದಿಗಳಲ್ಲಿ ಒಮ್ಮೆ ಕಣ್ಣಾಯಿಸಿದರೆ ಸ್ವಿಗ್ಗಿ, ಜೊಮೆಟೊದಂಥ ಕಂಪೆನಿಗಳಲ್ಲಿ ಕೆಲಸ ಮಾಡುವ ಯುವಕರೇ ಕಾಣಸಿಗುವಷ್ಟರಮಟ್ಟಿಗೆ ಇವರೆಲ್ಲರೂ ಉದ್ಯೋಗವನ್ನು ಸೃಷ್ಟಿ ಮಾಡಿಕೊಡುತ್ತಿದ್ದಾರೆ. ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಆಹಾರ ಡೆಲಿವರಿ ಇಂದು ಪಟ್ಟಣ, ಹಳ್ಳಿಗಳಲ್ಲಿಯೂ ಶುರುವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಇಂದು ಹಲವು ಕಂಪೆನಿಗಳು ಕೂಡ ಫುಡ್​ ಡೆಲವರಿ ಶುರು ಮಾಡಿಕೊಂಡಿದೆ. ರಾಪಿಡೋ ಕೂಡ ಈ ನಿಟ್ಟಿನಲ್ಲಿ ಈಗ ಹೆಜ್ಜೆ ಇಟ್ಟಿದೆ.

ವಾಹನಗಳನ್ನು ಮನೆಬಾಗಿಲಿಗೆ ತಂದುಕೊಡುವ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ರಾಪಿಡೊ "ಓನ್ಲಿ" ಎಂಬ ಹೊಸ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವ ಮೂಲಕ ಆನ್‌ಲೈನ್ ಆಹಾರ ವಿತರಣಾ ವಿಭಾಗಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಕಂಪೆನಿಯು ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಬೆಂಗಳೂರಿನಲ್ಲಿ ತನ್ನ ಆಹಾರ ವಿತರಣಾ ಸೇವೆಗಳಿಗಾಗಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. "ಓನ್ಲಿ" ಮೂಲಕ ಗ್ರಾಹಕರಿಗೆ ನೇರವಾಗಿ ರೆಸ್ಟೋರೆಂಟ್‌ಗಳಿಂದ ಬ್ರೌಸ್ ಮಾಡಲು ಮತ್ತು ಆರ್ಡರ್ ಮಾಡಲು ಅನುವು ಮಾಡಿಕೊಡಲಾಗುತ್ತದೆ. ರಾಪಿಡೊ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ (NRAI) ನೊಂದಿಗೆ ಪಾಲುದಾರಿಕೆ ಹೊಂದಿದೆ, ಇದು 50 ಸಾವಿರಕ್ಕೂ ಹೆಚ್ಚು ತಿನಿಸುಗಳನ್ನು ಜನರ ಮುಂದೆ ಇಡುತ್ತಿದೆ.

ರಾಪಿಡೊ ರೆಸ್ಟೋರೆಂಟ್‌ಗಳಿಗೆ ಶೂನ್ಯ-ಕಮಿಷನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲು ರಾಪಿಡೋ ಉದ್ದೇಶಿಸಿದೆ, ರೆಸ್ಟೋರೆಂಟ್‌ಗಳಿಗೆ ಸ್ಥಿರ ವಿತರಣಾ ಶುಲ್ಕವನ್ನು ವಿಧಿಸಲಾಗುತ್ತದೆ: ₹400 ಕ್ಕಿಂತ ಕಡಿಮೆ ಆರ್ಡರ್‌ಗಳಿಗೆ ₹25 ಮತ್ತು ₹400 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ₹50. ಇದು 8-15% ವರೆಗಿನ ರೆಸ್ಟೋರೆಂಟ್‌ಗಳಿಗೆ ಕಮಿಷನ್ ದರ ಅನ್ವಯಿಸಲು ಕಂಪೆನಿ ಚಿಂತನೆ ನಡೆಸಿದೆ. ಇದು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಇತರ ಆಹಾರ ಡೆಲವರಿ ಸಂಸ್ಥೆಗಳಿಗಿಂತಲೂ 16-30% ಗಿಂತ ಕಡಿಮೆ ಎಂದು ರಾಪಿಯೋ ಹೇಳಿದೆ. ಹೆಚ್ಚುವರಿಯಾಗಿ, ರೆಸ್ಟೋರೆಂಟ್‌ಗಳು ಪ್ರತ್ಯೇಕ ಪ್ಯಾಕೇಜಿಂಗ್ ಶುಲ್ಕಗಳನ್ನು ಸೇರಿಸಲು ಅನುಮತಿಸಲಾಗುವುದಿಲ್ಲ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಚಾನೆಲ್‌ಗಳಲ್ಲಿ ಬೆಲೆಗಳು ಏಕರೂಪವಾಗಿರುತ್ತವೆ, ಗ್ರಾಹಕರು ಹೆಚ್ಚುವರಿ ಪ್ಲಾಟ್‌ಫಾರ್ಮ್ ಅಥವಾ ರೆಸ್ಟೋರೆಂಟ್ ಮಾರ್ಕ್-ಅಪ್‌ಗಳಿಲ್ಲದೆ ಪಟ್ಟಿ ಮಾಡಲಾದ ಬೆಲೆ ಮತ್ತು GST ಅನ್ನು ಮಾತ್ರ ಪಾವತಿಸುತ್ತಾರೆ ಎಂದು ನಿಯಮಗಳು ಸೂಚಿಸುತ್ತವೆ. ಹೊಸ ಸೇವೆಗಾಗಿ 2 ಮಿಲಿಯನ್‌ಗಿಂತಲೂ ಹೆಚ್ಚು ದ್ವಿಚಕ್ರ ವಾಹನ ಸವಾರರ ವ್ಯಾಪಕ ಜಾಲವನ್ನು ಬಳಸಿಕೊಳ್ಳಲು Rapido ಯೋಜಿಸಿದೆ.