ಚೀನಾದ ಶತಕೋಟಿ ಡಾಲರ್​ ಔಷಧ ಉದ್ಯಮಕ್ಕೆ ಪಾಕಿಸ್ತಾನದ ಕತ್ತೆಗಳು ಬೇಕಾಗಿರುವ ಕಾರಣದಿಂದ 30 ಸಾವಿರ ಇದ್ದ ಕತ್ತೆಗಳ ಬೆಲೆ 2 ಲಕ್ಷ ರೂಪಾಯಿ ದಾಟಿದೆ. ಪಾಕಿಸ್ತಾನಕ್ಕೆ ಸದ್ಯ ಕತ್ತೆ ಕೈಹಿಡಿಯುತ್ತಿದೆ. ಈ ಕುರಿತು ಒಂದು ವರದಿ.

ಚೀನಾದ ಶತಕೋಟಿ ಡಾಲರ್​ ಔಷಧ ಉದ್ಯಮಕ್ಕೆ ಪಾಕಿಸ್ತಾನದ ಕತ್ತೆಗಳು ಬೇಕಾಗಿರುವ ಕಾರಣದಿಂದ 30 ಸಾವಿರ ಇದ್ದ ಕತ್ತೆಗಳ ಬೆಲೆ 2 ಲಕ್ಷ ರೂಪಾಯಿ ದಾಟಿದೆ. ಪಾಕಿಸ್ತಾನಕ್ಕೆ ಸದ್ಯ ಕತ್ತೆ ಕೈಹಿಡಿಯುತ್ತಿದೆ. ಈ ಕುರಿತು ಒಂದು ವರದಿ.

2018ರಲ್ಲಿ ಭಾರತದಲ್ಲಿ ನೋಟ್​ ಬ್ಯಾನ್​ ಆದಾಗಿನಿಂದ ಪಾಕಿಸ್ತಾನದ ಆರ್ಥಿಕತೆಯಲ್ಲಿ ಅಯೋಮಯ ಆಗಿರುವುದು ತಿಳಿದದ್ದೇ. ಭಾರತದ ನೋಟುಗಳನ್ನು ಅಕ್ರಮವಾಗಿ ಮುದ್ರಣ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರಿ ಹೊಡೆತ ಕೊಟ್ಟಿತ್ತು ನೋಟಿನ ಅಮಾನೀಕರಣ. ಅಲ್ಲಿಂದ ಶುರುವಾದ ಪೆಟ್ಟು ಕ್ರಮೇಣ ಒಂದೊಂದು ಘಟನೆಗಳು ನಡೆಯುತ್ತಲೇ ಸದ್ಯ ಪಾಕಿಸ್ತಾನವನ್ನು ಬೀದಿಗೆ ತಂದು ನಿಲ್ಲಿಸಿದೆ. ಭಯೋತ್ಪಾದನೆಯಿಂದಲೇ ದೇಶದ ಆರ್ಥಿಕತೆ ಹೆಚ್ಚಿಸಿಕೊಳ್ಳುತ್ತಿದ್ದ ಪಾಕಿಸ್ತಾನಿಗಳ ಬಾಲವನ್ನು ಭಾರತ ಕತ್ತರಿಸಿ ಹಾಕಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಮೆರೆಯುತ್ತಿದ್ದ ಪಾಕಿಸ್ತಾನಿಗಳಿಗೆ ಅಲ್ಲಿಯೂ ಈಗ ಕತ್ತರಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳ ಬಳಿ ಭಿಕ್ಷೆ ಬೇಡುವ ಸ್ಥಿತಿ ಪಾಕಿಸ್ತಾನಕ್ಕೆ ಬಂದಿದೆ. ಅದರಲ್ಲಿಯೂ ಆಪರೇಷನ್​ ಸಿಂದೂರದ ಬಳಿಕ ಭಯೋತ್ಪಾದಕರ ನೆಲೆಗಳನ್ನು ಭಾರತದ ಸೇನೆ ಧ್ವಂಸ ಮಾಡಿದ ಬಳಿಕ ಪಾಕಿಗಳ ಸ್ಥಿತಿ ಇನ್ನೂ ಅಯೋಮಯವಾಗಿದೆ.

ಆದರೆ, ಇದೀಗ ಪಾಕಿಸ್ತಾನಕ್ಕೆ ಕತ್ತೆಗಳು ಕೈಹಿಡಿಯುತ್ತಿವೆ. ಇದಕ್ಕೆ ಕಾರಣ, ಸದಾ ಪಾಕಿಸ್ತಾನದ ಪರವಾಗಿ ನಿಂತು ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಚೀನಾದಿಂದಾಗಿ! ಇದಕ್ಕೆ ಕಾರಣವೂ ಇದೆ. ಚೀನಾದ ಶತಕೋಟಿ ಡಾಲರ್​ ಉದ್ಯಮಕ್ಕೆ ಪಾಕಿಸ್ತಾನದ ಕತ್ತೆಗಳಿಗೆ ಭಾರಿ ಬೇಡಿಕೆ ಇದೆ. ಚೀನಾದ ಶತಕೋಟಿ ಡಾಲರ್ ಔಷಧ ಉದ್ಯಮವು ಇನ್ನಷ್ಟು ವಿಸ್ತಾರವಾಗಲು ಕತ್ತೆಗಳಿಗೆ ಡಿಮಾಂಡ್​ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 30 ಸಾವಿರ ಪಾಕಿಸ್ತಾನ ರೂಪಾಯಿ ಇದ್ದ ಬೆಲೆ ಇದೀಗ ಒಂದೊಂದು ಕತ್ತೆಗಳಿಗೆ 2 ಲಕ್ಷ ರೂಪಾಯಿ ಏರಿಕೆಯಾಗಿದೆ. ಕತ್ತೆಗಳ ಚರ್ಮದಿಂದ ತಯಾರಿಸಿದ ಸಾಂಪ್ರದಾಯಿಕ ಔಷಧವಾದ ಎಜಿಯಾವೊಗೆ ಚೀನಾದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಬೇಡಿಕೆ ಹೆಚ್ಚಾದಂತೆಲ್ಲಾ ಹಾಗು ಬೆಲೆಗಳು 2 ಲಕ್ಷ ತಲುಪಿರುವುದರಿಂದ ಪಾಕಿಸ್ತಾನದ ಜನರು ಕತ್ತೆಗಳನ್ನು ಹೆಚ್ಚೆಚ್ಚು ಹುಟ್ಟಿಸಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಇವುಗಳ ಸಂತಾನವನ್ನು ಹೆಚ್ಚು ಮಾಡುವುದಕ್ಕಾಗಿ ಶ್ರಮಿಸುತ್ತಿದ್ದಾರೆ.

ಎಜಿಯಾವೊ ಎಂಬುದು ಚೀನಾದ ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಜೆಲಟಿನ್ ಆಗಿದೆ. ಕತ್ತೆಯ ಚರ್ಮವನ್ನು ಕುದಿಸಿ ಇದನ್ನು ತಯಾರಿಸಲಾಗುತ್ತದೆ. ಆಯಾಸ ತಡೆಯುವ, ರೋಗನಿರೋಧಕ ಶಕ್ತಿ ಸುಧಾರಿಸುವ ಮತ್ತು ರಕ್ತಹೀನತೆ ಸಮಸ್ಯೆ ನಿಯಂತ್ರಣಕ್ಕೆ ಜೈವಿಕ ಪ್ರಯೋಜನಗಳಿಗಾಗಿ ಇದನ್ನ ವ್ಯಾಪಕವಾಗಿ ಬಳಸಲಾಗುತ್ತದೆ. ಚೀನಾದಲ್ಲಿ ಮಾತ್ರ ವಿಶೇಷವಾಗಿ ಇದನ್ನು ತಯಾರು ಮಾಡಲಾಗುತ್ತದೆ. ಆದ್ದರಿಂದ ಇದಕ್ಕೆ ಅಷ್ಟೊಂದು ಬೇಡಿಕೆ ಇದೆ. ಕತ್ತೆ ಚರ್ಮದ ವ್ಯಾಪಾರ ಇದೀಗ ಇಡೀ ಜಗತ್ತಿಗೆ ವ್ಯಾಪಿಸಿದೆ. ಇದಕ್ಕೆ ಕಾರಣ ಚೀನಾಗೆ ಪೂರೈಕೆಯಾಗುತ್ತಿರುವ ಕತ್ತೆಗಳಿಗಿಂತ ಬೇಡಿಕೆ ಹೆಚ್ಚಾಗಿರುವುದು. ಕಡಿಮೆ ದರ ಎಂದರೂ ಆರೋಗ್ಯಯುತ ಕತ್ತೆಯ ಬೆಲೆ 1 ಲಕ್ಷ 55 ಸಾವಿರ ರೂಪಾಯಿ ಇದೆ ಅಂತಾ ಕತ್ತೆ ಮಾರಾಟಗಾರರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಕತ್ತೆ ಚರ್ಮವನ್ನ ಬಳಸಿ ತಯಾರಾಗುವ ಚೀನಾದ ಎಜಿಯಾವೊ ಉತ್ಪನ್ನಗಳು ಕಳೆದ ಐದು ವರ್ಷಗಳಲ್ಲಿ ಶೇ.160ರಷ್ಟು ಏರಿಕೆಯಾಗಿದೆ. ಇದರರ್ಥ ಬೇಡಿಕೆ ಪೂರೈಸಲು ಲಕ್ಷಾಂತರ ಕತ್ತೆಗಳ ಚರ್ಮಗಳು ಬೇಕಾಗುತ್ತವೆ ಎಂದು ವರದಿಯಾಗಿದೆ.

ಕತ್ತೆಗಳಿಂದಾಗಿಯೇ ಪಾಕಿಸ್ತಾನವು ತನ್ನ ಜಿಡಿಪಿಯನ್ನೂ ನಿಧಾನವಾಗಿ ಏರಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆಯು ಗಮನಾರ್ಹ ಏರಿಕೆ ಕಂಡಿದ್ದು, 2023-24 ರಲ್ಲಿ 5.9 ಮಿಲಿಯನ್ ತಲುಪಿದೆ. ಆದರೆ ದೇಶದ GDP ಬೆಳವಣಿಗೆಯು ಅದರ ಗುರಿಯನ್ನು ತಲುಪಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, 23-24 ರಲ್ಲಿ ಪಾಕಿಸ್ತಾನದ GDP 2.38% ರಷ್ಟು ಬೆಳೆದು, 3.5% ಗುರಿಯನ್ನು ತಲುಪಿಲ್ಲ. ಇದೀಗ ಕತ್ತೆಗಳು ತಕ್ಕಮಟ್ಟಿಗೆ ಪಾಕ್​ಗೆ ಕೈಹಿಡಿದಿವೆ.