- Home
- Entertainment
- Sandalwood
- 777 Charlie: 777 ಚಾರ್ಲಿ ಗೆ 3 ವರ್ಷ… ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ ಪೋಸ್ಟ್ ಹಂಚಿಕೊಂಡು ಹೇಳಿದ್ದೇನು?
777 Charlie: 777 ಚಾರ್ಲಿ ಗೆ 3 ವರ್ಷ… ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ ಪೋಸ್ಟ್ ಹಂಚಿಕೊಂಡು ಹೇಳಿದ್ದೇನು?
ದೇಶ ವಿದೇಶದಲ್ಲೂ ಜನ ಮನ ಗೆದ್ದ 777 ಚಾರ್ಲಿ ಸಿನಿಮಾಗೆ ಮೂರು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ನಟರಾದ ಸಂಗೀತ ಶೃಂಗೇರಿ ಹಾಗೂ ರಕ್ಷಿತ್ ಶೆಟ್ಟಿ ಏನು ಹೇಳಿದ್ದಾರೆ ನೋಡಿ.

ಸಿನಿ ರಸಿಕರ, ಶ್ವಾನ ಪ್ರಿಯರ ಹೃದಯ ಗೆದ್ದ, ಕನ್ನಡದಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾದಲ್ಲೂ ವಿದೇಶದಲ್ಲೂ ಧೂಳೆಬ್ಬಿಸಿ, ಕಣ್ಣಂಚನ್ನು ಒದ್ದೆ ಮಾಡಿದ ಸಿನಿಮಾ 777 ಚಾರ್ಲಿ (777 Charlie).
ರಕ್ಷಿತ್ ಶೆಟ್ಟಿ (Rakshith Shetty), ಸಂಗೀತ ಶೃಂಗೇರಿ, ಮುಖ್ಯ ಪಾತ್ರದಲ್ಲಿ ನಟಿಸಿ ರಾಜ್ ಬಿ ಶೆಟ್ಟಿ, ಡ್ಯಾನಿಶ್ ಶೇಟ್, ಬಾಬಿ ಸಿಂಹ ಪೋಷಕ ಪಾತ್ರದಲ್ಲಿ ನಟಿಸಿರುವ ಸಿನಿಮಾ ನೀರಿಕ್ಷೆಗೂ ಮೀರಿ ಯಶಸ್ಸು ಕಂಡಿತ್ತು.
ಕಿರಣ್ ರಾಜ್ (Kiran Raj) ನಿರ್ದೇಶನದ ಚೊಚ್ಚಲ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಸಿನಿಮಾ ನೋಡಿ ಅದೆಷ್ಟೋ ಕಣ್ಣುಗಳು ಒದ್ದೆಯಾಗಿದ್ದರು. ಇದೀಗ ಸಿನಿಮಾ ಬಿಡುಗಡೆಯಾಗಿ ಜೂನ್ 10ಕ್ಕೆ ಮೂರು ವರ್ಷ ತುಂಬಿದೆ.
777 ಚಾರ್ಲಿ ಸಿನಿಮಾಗೆ 3 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ಸಂಗೀತ ಶೃಂಗೇರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಚಾರ್ಲಿಯನ್ನು ನೆನಪಿಸಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ, ಚಾರ್ಲಿಗೆ 3 ವರ್ಷ. ಚಾರ್ಲಿ ಸಿನಿಮಾಕ್ಕಿಂತ ಹೆಚ್ಚಾಗಿತ್ತು, ಇದು ನಾನೇ ಸ್ವತಃ ಅನುಭವಿಸಿದ ಅನುಬಂಧ. ಇವತ್ತಿಗೆ ನಮಗೆ 3 ವರ್ಷ ತುಂಬಿದ್ದು, ಈ ಸಿನಿಮಾ ನಮ್ಮ ಜೀವನಕ್ಕೆ ಕೊಟ್ಟಂತಹ ಪ್ರೀತಿಗೆ, ಕ್ಷಣಗಳಿಗೆ ಕೃತ್ಜ್ಞನಾಗಿದ್ದೇನೆ ಎಂದು ಬರೆದುಕೊಂಡು ಚಾರ್ಲಿ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದಾರೆ.
ಇನ್ನು ನಟಿ ಸಂಗೀತ ಶೃಂಗೇರಿ ಕೂಡ Celebrating 3 years of 777 Charlie ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಸಿನಿಮಾದ ಶೂಟಿಂಗ್ ಸೆಟ್ ನಿಂದ ಹಲವು ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಚಾರ್ಲಿ ಜೊತೆ ಕಳೆದಂತಹ ಕ್ಷಣಗಳನ್ನು ಮೆಲುಕು ಹಾಕುತ್ತಾ, ಚಾರ್ಲಿ ಜೊತೆಗಿನ ಆಟ, ನಿದ್ದೆ, ಮುದ್ದಾಟದ ಫೋಟೊ ಶೇರ್ ಮಾಡಿದ್ದಾರೆ, ಜೊತೆಗೆ ರಕ್ಷಿತ್ ಶೆಟ್ಟಿ ಜೊತೆಗಿನ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ.
ಸಿನಿ ರಸಿಕರು ಸಹ ಚಾರ್ಲಿಯನ್ನು ನೆನೆದು, ಸಂಭ್ರಮಿಸಿ, ಬೇಸರವನ್ನು ಸಹ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಎಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ, ಕಣ್ಣಂಚನ್ನು ಒದ್ದೆ ಮಾಡಿದ್ರೂ, ಈ ಚಾರ್ಲಿ ಯಾವಾಗ್ಲೂ ಫೇವರಿಟ್ ಎಂದು ಹೇಳಿ ಜನ ಕಾಮೆಂಟ್ ಮಾಡಿದ್ದಾರೆ.