ಪಾಕಿಸ್ತಾನದ ಸೆನೆಟರ್ ಶೆರ್ರಿ ರೆಹಮಾನ್, ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಭಯೋತ್ಪಾದನೆಯ ಕುರಿತು ತಮ್ಮ ದೇಶದ ಸ್ಥಿತಿಗತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಕ್ರಿಯ ಹೋರಾಟ ನಡೆಯುತ್ತಿದೆ, ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಪರವಾಗಿವರದಿ ಮಾಡುತ್ತಿವೆ ಎಂದು ಆರೋಪಿಸಿದರು.

ಪಾಕಿಸ್ತಾನದ ಸೆನೆಟರ್ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಹಿರಿಯ ನಾಯಕಿ ಶೆರ್ರಿ ರೆಹಮಾನ್, ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಭಯೋತ್ಪಾದನೆಯ ಕುರಿತು ತಮ್ಮ ದೇಶದ ಸ್ಥಿತಿಗತಿಗಳನ್ನು ದಿಟ್ಟವಾಗಿ ಸಮರ್ಥಿಸಿಕೊಂಡಿದ್ದಾರೆ. "ಪಾಕಿಸ್ತಾನ ಈಗ ಬದಲಾಗಿರುವ ದೇಶ" ಎಂದ ಶೆರ್ರಿ, ಭಯೋತ್ಪಾದನೆಯ ವಿರುದ್ಧ ಸಕ್ರಿಯ ಹೋರಾಟ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು. ಆದರೆ, ಭಾರತಕ್ಕೆ ಕೂಡ ಅನಾನುಕೂಲವಾಗದಂತೆಯೇ ಅಂತರರಾಷ್ಟ್ರೀಯ ಮಾಧ್ಯಮಗಳು ತಮ್ಮದೇ ರೀತಿಯಲ್ಲಿ ಬಣ್ಣಿಸಿ ಹೊಸ ತಿರುವು ನೀಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಇತ್ತೀಚಿನ ಸೇನಾ ಸಂಘರ್ಷದ ಹಿನ್ನೆಲೆ ಇಸ್ಲಾಮಾಬಾದ್ ಈಗ ವಿಶ್ವ ರಾಜತಾಂತ್ರಿಕ ವೇದಿಕೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಲು ಉನ್ನತ ಮಟ್ಟದ ನಿಯೋಗಗಳನ್ನು ಅಮೆರಿಕ, ಯುಕೆ ಮತ್ತು ಬ್ರೆಸಿಲ್‌ಗೆ ಕಳುಹಿಸುತ್ತಿದೆ. ಭಾರತವು "ಆಪರೇಷನ್ ಸಿಂದೂರ್" ಕುರಿತು ಜಾಗತಿಕ ಮಟ್ಟದಲ್ಲಿ ಬೆಂಬಲ ಬೆಳೆಸಲು ತನ್ನದೇ ಆದ ರಾಯಭಾರಿಗಳನ್ನು ಕಳುಹಿಸಿದ ಬಳಿಕ ಪಾಕಿಸ್ತಾನವೂ ತನ್ನ ನಿಲುವುಗಳನ್ನು ಇತರ ದೇಶಕ್ಕೆ ತಿಳಿಸಲು ಮುಂದಾಗಿದೆ.

ಶೇರ್ರಿ ರೆಹಮಾನ್ ಮತ್ತು ನಿರೂಪಕಿ ಯಾಲ್ಡಾ ಹಕೀಮ್ ನಡುವೆ ನಡೆದ ನೇರ, ಕಠಿಣ ಸಂಭಾಷಣೆ ನಡೆಯಿತು. ಜೈಶ್-ಎ-ಮೊಹಮ್ಮದ್, ಹಕ್ಕಾನಿ ನೆಟ್‌ವರ್ಕ್, ಅಲ್-ಖೈದಾ ಹಾಗೂ ಬ್ರಿಗೇಡ್ 313 ಮುಂತಾದ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುವಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಚರ್ಚೆ ನಡೆಯಿತು. ಬ್ರಿಗೇಡ್ 313 ಪಾಕಿಸ್ತಾನದಲ್ಲಿರುವ ವಿವಿಧ ಉಗ್ರಬಣಗಳನ್ನು ಒಗ್ಗೂಡಿಸುವ ಪ್ರಮುಖ ಶಕ್ತಿಯೆಂದು ಹಕೀಮ್ ಪ್ರಸ್ತಾಪಿಸಿದರೆ, ರೆಹಮಾನ್ ಇದನ್ನು ತೀವ್ರವಾಗಿ ತಿರಸ್ಕರಿಸಿದರು. ಇದನ್ನು ನಿಮಗೆ ಯಾರು ಹೇಳಿದ್ರು ಗೊತ್ತಿಲ್ಲ, ನಾನು ಇಂತಹ ಆರೋಪಗಳನ್ನು ತಳ್ಳಿಹಾಕುವ ಸಾಕ್ಷ್ಯಗಳ ಪಟ್ಟಿಯೇ ಕೊಡಬಲ್ಲೆ ಎಂದರು. ಇದಕ್ಕೆ ನಿರೂಪಕಿ ಡಿಜಿಟಲ್ ದಾಖಲೆಗಳನ್ನು ಕೂಡ ನೀಡಬಹುದು ಎಂದು ಭಾರತ ಬಿಡುಗಡೆ ಮಾಡಿದ ದಾಖಲೆಗಳನ್ನು ಉಲ್ಲೇಖಿಸಿದರು.

ಇದಕ್ಕೆ ಶೇರ್ರಿ ಭಾರತದಲ್ಲಿ ನಡೆಯುತ್ತಿರುವ ಎಲ್ಲಾ 100 ದಂಗೆಗಳಿಗೆ ನಾವು ಜವಾಬ್ದಾರರೇ?" ಎಂದು ಹೇಳುವ ಮೂಲಕ ಅವರು ಭಾರತದ ಆಂತರಿಕ ಭದ್ರತಾ ಸಮಸ್ಯೆಗಳತ್ತ ಗಮನ ಸೆಳೆಯಲು ಪ್ರಯತ್ನಿಸಿದರು. ಭಾರತದಲ್ಲಿ ನಡೆದ ದಾಳಿಗಳ ಬಳಿಕ ಪಾಕಿಸ್ತಾನವನ್ನು ನಿರಂತರವಾಗಿ ಅಪಪ್ರಚಾರಕ್ಕೆ ಒಳಪಡಿಸಲಾಗುತ್ತಿದೆ ಎಂದು ಆರೋಪಿಸಿದ ಶೆರ್ರಿ. ಅಂತಾರಾಷ್ಟ್ರೀಯ ವಿಶ್ಲೇಷಕರು ಭಾರತೀಯ ಕಥೆಗೆ ಹೊಂದಾಣಿಕೆಯಾಗುತ್ತಾರೆ. ಅವರು ನಮ್ಮ ಮಾತು ಕೇಳುವುದಿಲ್ಲ, ಅದು ನಮ್ಮ ದೌರ್ಬಾಗ್ಯ ಎಂದು ವಿಷಾದಿಸಿದರು.

ಹಕೀಮ್, ಪಾಕಿಸ್ತಾನವನ್ನು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ವಿಷಯದಲ್ಲಿ ಹಣಕಾಸು ಕ್ರಿಯಾ ಕಾರ್ಯಪಡೆಯ (FATF) ಬೂದು ಪಟ್ಟಿಗೆ ಸೇರಿಸಲಾಗಿದ್ದನ್ನು ನೆನೆಸಿದಾಗ, ರೆಹಮಾನ್ ಪಾಕಿಸ್ತಾನದ ಪ್ರಗತಿಯನ್ನು ಉಲ್ಲೇಖಿಸಿದರು. ನಾವು 2,645 ಪ್ರಕರಣಗಳಲ್ಲಿ ಹಣಕಾಸು ಪೂರೈಕೆ ದೂರುಗಳನ್ನು ದಾಖಲಿಸಿದ್ದೇವೆ. ಇವತ್ತು ನಾವು ಬೂದು ಪಟ್ಟಿಯಲ್ಲಿ ಅಲ್ಲ, ಬದಲಿಗೆ ಬಿಳಿ ಪಟ್ಟಿಯಲ್ಲಿ ಇದ್ದೇವೆ. ಮುರಿದ್ಕೆ, ಬಹವಾಲ್ಪುರ ಮುಂತಾದ ತಾಣಗಳನ್ನು ನಿಷೇಧಿಸಲಾಗಿದೆ. ಸುಮಾರು 2000 ಮಂದಿ ಸದಸ್ಯರನ್ನು ಬಂಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಇನ್ನು, ಭಾರತಕ್ಕೆ ಏಕೆ ಈ ಕ್ರಮಗಳು ಅನ್ವಯವಾಗುತ್ತಿಲ್ಲ ಎಂಬ ಪ್ರಶ್ನೆಗೆ, ರೆಹಮಾನ್, ನಾವು ತಲೆಕೆಡಿಸಿಕೊಳ್ಳದಿರುವುದೇ ನಮ್ಮ ವೈಫಲ್ಯ ಎಂದು ಕುಲಭೂಷಣ್ ಜಾಧವ್ (ಪಾಕಿಸ್ತಾನದ ಬಂಧನದಲ್ಲಿರುವ ಆಫೀಸರ್) ಪ್ರಕರಣವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಈ ಚರ್ಚೆಯಲ್ಲಿ ಹಕೀಮ್ ಅವರ ಶಂಕಾಸ್ಪದ ಪ್ರಶ್ನೆಗಳಿಗೆ ರೆಹಮಾನ್ ವಿರೋಧ ವ್ಯಕ್ತಪಡಿಸಿ ಪಾಕಿಸ್ತಾನ ಉಗ್ರರನ್ನು ಆಶ್ರಯಿಸುತ್ತಿದೆ ಎಂಬುದು ಸಂಪೂರ್ಣ ಸುಳ್ಳು ಎಂದರು. ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ದಿನದಂದು ಐಎಸ್‌ಐ ಮುಖ್ಯಸ್ಥರು ಕಾಬೂಲ್‌ನಲ್ಲಿ ಹಾಜರಿದ್ದರು ಎಂಬ ಹಕೀಮ್‌ ನ ಪ್ರಶ್ನೆಗೆ ಪ್ರತಿಯಾಗಿ ಉತ್ತರಿಸಿದ ಶೆರ್ರಿ, ಅದರರ್ಥ ಏನು? ಪಾಕಿಸ್ತಾನ ಒಂದು ಬದಲಾಗುತ್ತಿರುವ ದೇಶ. ಅಫ್ಘಾನಿಸ್ತಾನ ನಮ್ಮ ನೆರೆನಾಡು. ನಮ್ಮ ಗಡಿಯಲ್ಲಿ ಯಾವಾಗಲೂ ಬದಲಾವಣೆ ಇರುತ್ತೆ ಎಂದರು.

ಭಾರತದ ವಾಯುದಾಳಿಯಲ್ಲಿ ಜೈಶ್ ಉಗ್ರ ಮಸೂದ್ ಅಜರ್ ಕುಟುಂಬದವರ ಸಾವು ಎಂಬ ಪ್ರಶ್ನೆಗೆ ಅವರು ನಿರ್ಲಕ್ಷ್ಯ ತೋರಿಸಿ, ಮಕ್ಕಳು ನಾಯಕರಲ್ಲ ಎಂದರು. ಆ ಪ್ರದೇಶದಲ್ಲಿ ಯಾವುದೇ ಉಗ್ರ ಮೂಲ ಸೌಕರ್ಯವಿಲ್ಲ ಅಲ್ಲಿ ಆಸ್ಪತ್ರೆಗಳಿವೆ, ಮಸೀದಿಗಳಿವೆ. ನೀವು ಬನ್ನಿ, ನಾನೇ ತೋರಿಸ್ತೀನಿ,” ಎಂದು ಸಬೂಬು ನೀಡಿದರು.

ಪಾಕ್‌ ನ ಅನುಭವಿ ರಾಜಕಾರಣಿ, ಪತ್ರಕರ್ತೆ ಮತ್ತು ಶೆರ್ರಿ ರೆಹಮಾನ್ ಈ ಹಿಂದೆ ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ (2011–2013) ಸೇವೆ ಸಲ್ಲಿಸಿದ್ದರು ಮತ್ತು ಪಾಕಿಸ್ತಾನದ ಸೆನೆಟ್‌ನಲ್ಲಿ ವಿರೋಧ ಪಕ್ಷದ ನೇತೃತ್ವ ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಫ್ಘಾನಿಸ್ತಾನದಲ್ಲಿ ಜನಿಸಿದ ಪತ್ರಕರ್ತೆ ಯಾಲ್ಡಾ ಹಕೀಮ್ ಅವರು ಶೆರ್ರಿ ರೆಹಮಾನ್ ಜೊತೆಗೆ ನಡೆಸಿದ ಚರ್ಚೆ ಈಗ ವೈರಲ್ ಆಗುತ್ತಿದೆ.