- Home
- News
- State
- Karnataka News Live: ಪಾಂಡೇಶ್ವರ ರೈಲ್ವೆ ಕ್ರಾಸಿಂಗ್, ಮಂಗಳೂರು ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ?
Karnataka News Live: ಪಾಂಡೇಶ್ವರ ರೈಲ್ವೆ ಕ್ರಾಸಿಂಗ್, ಮಂಗಳೂರು ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ?

ಬೆಂಗಳೂರು: ಫೇಸ್ಬುಕ್ ಪೋಸ್ಟ್ನಲ್ಲಿ ‘ಜಿಹಾದಿ’ ಮತ್ತು ‘ಕಾಫಿರ್’ ಎಂಬ ಪದಗಳನ್ನು ಬಳಸಿರುವುದರಿಂದ ಮಾತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಅಥವಾ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸಿದ ಅಪರಾಧ ಸಾಬೀತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಹಿಂದೂ ಸಾಮ್ರಾಟ್ ಧರ್ಮಸೇನೆ’ ಹೆಸರಿನ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿದ್ದ ಸಂದೇಶದ ಸಂಬಂಧ ತಮ್ಮ ವಿರುದ್ಧ ಮಧುಗಿರಿಯ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಅತುಲ್ ಕುಮಾರ್ ಸಬರ್ವಾಲ್ ಅಲಿಯಾಸ್ ಮಧುಗಿರಿ ಮೋದಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರ ವಿರುದ್ಧದ ಎಫ್ಐಆರ್ ಮತ್ತು ನ್ಯಾಯಾಲಯದ ವಿಚಾರಣೆ ರದ್ದುಪಡಿಸಿರುವ ನ್ಯಾಯಪೀಠ, ‘ಜಿಹಾದಿ’ ಅಥವಾ ‘ಕಾಫಿರ್’ ಪದಗಳ ಬಳಕೆ ಯಾವುದೇ ಸಂದರ್ಭದಲ್ಲಿಯೂ ಅಪರಾಧವಾಗುವುದಿಲ್ಲ ಎಂಬ ಸಾರ್ವತ್ರಿಕ ನಿಯಮವನ್ನು ಹೈಕೋರ್ಟ್ ರೂಪಿಸಿಲ್ಲ. ಈ ನಿರ್ದಿಷ್ಟ ಪ್ರಕರಣದಲ್ಲಿದ್ದ ಪೋಸ್ಟ್ನ ಪೂರ್ಣ ವಿಷಯ, ಅದರ ಸಂದರ್ಭ ಮತ್ತು ಕಾನೂನಿನ ಅಗತ್ಯ ಅಂಶ ಪರಿಶೀಲಿಸಿ ಎಫ್ಐಆರ್ ರದ್ದುಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
Karnataka News Live 10 October 2026 ಪಾಂಡೇಶ್ವರ ರೈಲ್ವೆ ಕ್ರಾಸಿಂಗ್, ಮಂಗಳೂರು ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ?
Karnataka News Live 10 October 2026 ಚಿತ್ರದುರ್ಗ - ಯುವಕನ ಕಿಡ್ನಾಪ್ ಮಾಡಿ ಗುಪ್ತಾಂಗ ಕತ್ತರಿಸಿದ ಮಂಗಳಮುಖಿಯರು!
ಚಿತ್ರದುರ್ಗದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಯುವಕನನ್ನು ಮಂಗಳಮುಖಿಯರು ಕಿಡ್ನಾಪ್ ಮಾಡಿ ಬಲವಂತವಾಗಿ ಗುಪ್ತಾಂಗ ಆಪರೇಷನ್ ಮಾಡಿಸಿದ್ದಾರೆ. ದಾವಣಗೆರೆಯಲ್ಲಿ ಈ ಕೃತ್ಯವೆಸಗಿ, ಚಿತ್ರಹಿಂಸೆ ನೀಡಿದ್ದಲ್ಲದೆ, ಆಪರೇಷನ್ ಖರ್ಚು 3 ಲಕ್ಷ ರೂ. ನೀಡುವಂತೆ ಯುವಕನ ಮನೆಬಳಿ ಬಂದು ಗಲಾಟೆ ಮಾಡಿದ್ದಾರೆ.
Karnataka News Live 10 October 2026 KSRTC Travel Card - ಇನ್ಮುಂದೆ ರಾಜ್ಯದ ಸರ್ಕಾರಿ ಬಸ್‌ಗಳಿಗೂ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್! ಹೇಗೆ ರೀಚಾರ್ಜ್ ಮಾಡುವುದು?
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 'ನಮ್ಮ ಮೆಟ್ರೋ' ಮಾದರಿಯಲ್ಲಿ ನಾಲ್ಕೂ ನಿಗಮಗಳ ಬಸ್ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಲು ಮುಂದಾಗಿದೆ. ಶಕ್ತಿ ಯೋಜನೆಯ ಫಲಾನುಭವಿಗಳ ಜೊತೆಗೆ ಇತರ ಪ್ರಯಾಣಿಕರಿಗೂ ಈ ಕಾರ್ಡ್ ನೀಡಲಿದ್ದು, ರೀಚಾರ್ಜ್ ಮಾಡುವ ಮೂಲಕ ಟಿಕೆಟ್ ಹಣ ಪಾವತಿಸಬಹುದು.
Karnataka News Live 10 October 2026 ದಸರಾ ಪ್ರಯಾಣಿಕರಿಗೆ KSRTC ಬೃಹತ್ ಯೋಜನೆ; 3 ಸಾವಿರ ವಿಶೇಷ ಬಸ್ ಸೇವೆ, ಪ್ಯಾಕೇಜ್
Karnataka News Live 10 October 2026 Bengaluru - ಮನೆ ಮುಂದೆ ವಾಹನ ನಿಲ್ಲಿಸುವ ಮುನ್ನ ಈ ಹೊಸ ನಿಯಮ ತಿಳಿಯಿರಿ! ಸಂಚಾರ ದಟ್ಟಣೆ ನಿಯಂತ್ರಣ
Bengaluru: ಜಯನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಶೀಘ್ರದಲ್ಲೇ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ವಾಣಿಜ್ಯ ರಸ್ತೆಗಳಲ್ಲಿ ಮಾತ್ರ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಪಾರ್ಕಿಂಗ್ ಶುಲ್ಕ ಅನ್ವಯವಾಗಲಿದೆ.
Karnataka News Live 10 October 2026 ಜಾಲಹಳ್ಳಿ ಕ್ರಾಸ್ ಕೆಳಸೇತುವೆ ಕಾಮಗಾರಿ; 26 ಆಸ್ತಿಗಳ ಭೂ ಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಸೂಚನೆ
Karnataka News Live 10 October 2026 CJP Delhi Protest - Gen-Z ಪ್ರತಿಭಟನೆಯಿಂದ ಸರ್ಕಾರ ಉರುಳಿದ 5 ದೇಶಗಳಿವು!
ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಜೆನ್-ಜಿ ವಿದ್ಯಾರ್ಥಿ ಹೋರಾಟಗಳ ಪ್ರಭಾವವನ್ನು ಈ ಲೇಖನ ವಿವರಿಸುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟಿತರಾಗುವ ಯುವಜನತೆ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಸರ್ಕಾರಗಳನ್ನೇ ಉರುಳಿಸಿದ ಬಗೆ ಇಲ್ಲಿದೆ.
Karnataka News Live 10 October 2026 ‘ನನಗೆ ಸ್ಟಿಂಗೂ ಪಂಗೂ ಗೊತ್ತಿಲ್ಲ, ಆ ವಿಷಯದಲ್ಲಿ ನಾನು ಎಲ್‌ಬೋರ್ಡ್’ ರಾಜಕೀಯಕ್ಕೆ ಬಂದು 50 ವರ್ಷ
Karnataka News Live 10 October 2026 ಬೆಂಗಳೂರು ಟ್ರಾಫಿಕಲ್ಲಿ ಕಳೆವ ಸಮಯ 1 ತಿಂಗಳ ದುಡಿಮೆಗೆ ಸಮ; ಸಾವಿನ ಅಪಾಯ ಶೇ.7.5ರಷ್ಟು ಹೆಚ್ಚಳ
ಬೆಂಗಳೂರಿನ ಟ್ರಾಫಿಕ್ ದಟ್ಟಣೆಯಿಂದಾಗಿ ಉದ್ಯೋಗಿಗಳ ಒಂದು ತಿಂಗಳ ದುಡಿಮೆಯ ಸಮಯ ವ್ಯರ್ಥವಾಗುತ್ತಿದ್ದು, ಇದು ವಾರ್ಷಿಕ ವೇತನದ ಶೇ.8ರಷ್ಟು ಕಡಿತಕ್ಕೆ ಸಮವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಲ್ಲದೆ, ಟ್ರಾಫಿಕ್‌ನಿಂದಾಗಿ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಜೀವಹಾನಿ ಅಪಾಯ ಹೆಚ್ಚುತ್ತಿದೆ.