ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಮೊಟ್ಟಮೊದಲ ಸೂಪರ್ ಹಿಟ್ ಸಿನಿಮಾ ಆಗಿ 'ಪ್ರೇಮದ ಊರಲಿ' ಹೊಸ ಇತಿಹಾಸ ನಿರ್ಮಿಸಿದೆ. ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಹೊಸಬರ ತಂಡದ ಸಿನಿಮಾ, ಹಾಕಿರುವ ಕಾಸಿಗೆ ಅದೆಷ್ಟೋ ಪಟ್ಟು ಹೆಚ್ಚು ಲಾಭ ತಂದು ಇನ್ನೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಒಟಿಟಿ ಹಕ್ಕು ಯಾರ ಪಾಲು? ಈ ಸ್ಟೋರಿ ನೋಡಿ..

ಈ ವರ್ಷದ ಸೂಪರ್ ಹಿಟ್ ‘ಪ್ರೇಮದ ಊರಲಿ’ ಸಿನಿಮಾಗೆ ಸಂಬಂಧಿಸಿದ ಹೊಸ ನ್ಯೂಸ್.. ಒಟಿಟಿ ಯಾರ ಪಾಲು?

ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಮೊಟ್ಟಮೊದಲ ಸೂಪರ್ ಹಿಟ್ ಸಿನಿಮಾ ಆಗಿ 'ಪ್ರೇಮದ ಊರಲಿ' (Premada Oorali) ಹೊಸ ಇತಿಹಾಸ ನಿರ್ಮಿಸಿದೆ. ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಹೊಸಬರ ತಂಡದ ಸಿನಿಮಾ ಇದೀಗ ಹಾಕಿರುವ ಕಾಸಿಗೆ ಅದೆಷ್ಟೋ ಪಟ್ಟು ಹೆಚ್ಚು ಲಾಭ ತಂದುಕೊಟ್ಟು, ಇನ್ನೂ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಗೊತ್ತೇ ಇದೆ. ಬಿಡುಗಡೆಯಾದ 2ನೇ ವಾರದಲ್ಲಿ ಪ್ರೇಮದ ಊರಲಿ ಸಿನಿಮಾ 34 ಕೋಟಿ ಗಳಿಸಿ, ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಮನೋಜ್ ಕುಮಾರ್ ನಿರ್ದೇಶನದಲ್ಲಿ ತೆರೆಗೆ ಬಂದಿರುವ 'ಪ್ರೇಮದ ಊರಲಿ' ಸಿನಿಮಾ ಇದೀಗ ಬರೋಬ್ಬರಿ 34 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿ ಮುನ್ನುಗ್ಗುತ್ತಿದೆ. ರಂಗಾಯಣ ರಘು, ಶ್ರೀರಾಮ್ (ಸಂತು), ತಪಸ್ವಿನಿ ಪೂಣಚ್ಚ, ರಾಮಿಕಾ ಶಿವು ತಾರಾಗಣದ ಈ ಸಿನಿಮಾವನ್ನು ನಿರ್ಮಾಪಕರಾದ ದೇವೇಂದ್ರ ನಾಯ್ಡು (ನಿರ್ಮಾಪಕಿ: ಮಮತಾ ದೇವೇಂದ್ರ ಎಂ) ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಹೊಸ ಟಾನಿಕ್ ನೀಡಿದ್ದಾರೆ.

ಈ ವರ್ಷದ ಮೊದಲ ಸೂಪರ್ ಹಿಟ್ ಕನ್ನಡ ಸಿನಿಮಾ 'ಪ್ರೇಮದ ಊರಲಿ' ಒಟಿಟಿಗೆ ಬರೋದು ಯಾವಾಗ?

ಯಾವ ಒಟಿಟಿಯಲ್ಲಿ ಪ್ರಸಾರವಾಗಲಿದೆ ಈ ಸಿನಿಮಾ?

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಪ್ರೇಮದ ಊರಲಿ' ಸಿನಿಮಾ ನಮ್ಮ ಕನ್ನಡ ಒಟಿಟಿಯಲ್ಲೇ ಬರಲಿದ್ಯಾ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..

ಕನ್ನಡ ಚಿತ್ರರಂಗಕ್ಕೆ ಹೊಸ OTT ವೇದಿಕೆಯಾಗಿ AVR Cine Max ಈಗಾಗಲೇ ಕಾರ್ಯಾರಂಭ ಮಾಡಲಿರುವುದು ಗೊತ್ತೇ ಇದೆ. 750ಕ್ಕೂ ಹೆಚ್ಚು ಸಿನಿಮಾಗಳು, ವೆಬ್ ಸೀರೀಸ್, ರಿಯಾಲಿಟಿ ಶೋ, ಕ್ರೀಡೆ ಹಾಗೂ ಲೈವ್ ಕಾರ್ಯಕ್ರಮಗಳೊಂದಿಗೆ ಕನ್ನಡಿಗರಿಗಾಗಿ ವಿಶೇಷ ಮನರಂಜನಾ ವೇದಿಕೆಯಾಗಿ 'ಎವಿಅರ್ ಸಿನಿಮ್ಯಾಕ್ಸ್' ಲಭ್ಯವಿದೆ. ಈ ಎವಿಆರ್‌ ಸಿನಿಮ್ಯಾಕ್ಸ್‌ ಓಟಿಟಿ (AVR Cine Max) ಮಾಲೀಕರಾದ ನಿರ್ಮಾಪಕ ಅರವಿಂದ್‌ ವೆಂಕಟೇಶ್‌ ರೆಡ್ಡಿಯವರು ಇದೀಗ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಅದು.. ಈ ವರ್ಷ ಸೂಪರ್ ಹಿಟ್ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿರುವ ಕನ್ನಡ ಸಿನಿಮಾ 'ಪ್ರೇಮದ ಊರಲಿ' ಒಟಿಟಿ ರೈಟ್ಸ್‌ ಮ್ಯಾಟರ್!

ಇದೀಗ ಸಿಕ್ಕ ಹೊಸ ವಿಷಯ.. ಪ್ರೇಮದ ಊರಲಿ ಸಿನಿಮಾದ ಒಟಿಟಿ ಹಕ್ಕು ಯಾರ ಕೈ ಸೇರಲಿದೆ?

ಕನ್ನಡದ ಸಾಕಷ್ಟು ಸಿನಿಮಾಗಳ ಒಟಿಟಿ ಹಕ್ಕುಗಳನ್ನು ಖರೀದಿಸಿ ನಿರ್ಮಾಪಕರಿಗೆ ಅನ್ನದಾತ ಎನ್ನಿಸಿಕೊಂಡಿರುವ ಅರವಿಂದ್‌ ವೆಂಕಟೇಶ್‌ ರೆಡ್ಡಿಯವರು ಇದೀಗ ಸೂಪರ್ ಹಿಟ್ 'ಪ್ರೇಮದ ಊರಲಿ' ಸಿನಿಮಾದ ಒಟಿಟಿ ಖರೀದಿಗೆ ಸಜ್ಜಾಗಿದ್ದಾರೆ. 10 ಕೋಟಿಗೆ ಪ್ರೇಮದ ಊರಲಿ ಸಿನಿಮಾವನ್ನು ಖರೀದಿ ಮಾಡಲು ತಮ್ಮ 'ಎವಿಆರ್ ಸಿನೆಮ್ಯಾಕ್ಸ್ (AVR Cine-Max)' ಮೂಲಕ ಮುಂದೆ ಬಂದಿರುವ ಅರವಿಂದ್‌ ವೆಂಕಟೇಶ್‌ ರೆಡ್ಡಿಯವರ ಜೊತೆಗೆ ಒಟಿಟಿ ದೈತ್ಯ ಕಂಪನಿಗಳಾದ ಅಮೆಜಾನ್, ನೆಟ್‌ಫ್ಲಿಕ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಂತಹ ಕಂಪನಿಗಳು ಪೈಪೋಟಿಗೆ ಇಳಿದಿವೆ. ಸದ್ಯ ಈ ನ್ಯೂಸ್ ಸಾಕಷ್ಟು ಕುತೂಹಲ ಕೆರಳಿಸುತ್ತಿವೆ.

ಅರವಿಂದ್‌ ವೆಂಕಟೇಶ್‌ ರೆಡ್ಡಿ ಅವರ ಈ ಹೊಸ ಓಟಿಟಿಯ ಉಸ್ತುವಾರಿಯನ್ನು ನಿರ್ದೇಶಕ ಅವಿನಾಶ್‌ ದಿವಾಕರ್ ಶೃಂಗೇರಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಆರಂಭಿಸಿರುವ ಓಟಿಟಿ ಇದು. ಕನ್ನಡ ಚಲನಚಿತ್ರ ಹಾಗೂ ಸೃಜನಾತ್ಮಕ ಮನರಂಜನಾ ವಿಷಯಗಳನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಈ ಓಟಿಟಿಯದ್ದು.

ಎವಿಆರ್‌ ಸಿನಿಮ್ಯಾಕ್ಸ್‌ ಓಟಿಟಿಯಲ್ಲಿ ಈಗಾಗಲೇ 750ಕ್ಕೂ ಹೆಚ್ಚು ಸಿ‌ನಿಮಾಗಳಿವೆ. ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ, ಕ್ರೀಡೆ, ಸಂಗೀತ, ನೇರ ಕಾರ್ಯಕ್ರಮಗಳೂ ಇಲ್ಲಿ ವೇದಿಕೆ ಲಭ್ಯವಿದೆ. ‘ರವಿಶ್ರೀವತ್ಸ ಅವರ ‘ಗ್ಯಾಂಗ್ಸ್‌ ಆಫ್ ಯುಕೆ’ ಚಿತ್ರ ವೆಬ್ ಸರಣಿ ರೂಪದಲ್ಲಿ ಬರುತ್ತಿದೆ. ಕಟ್ಟೆ ಸೇರಿದಂತೆ ಹಲವು ಸಿನಿಮಾಗಳನ್ನು ಈಗಾಗಲೇ ಖರೀದಿಸಿ ಕನ್ನಡ ಸಿನಿಮಾರಂಗದ ಪಾಲಿಗೆ 'ಆಪದ್ಭಾಂಧವ' ಎನ್ನಿಸಿಕೊಂಡಿರುವ ಅರವಿಂದ್‌ ವೆಂಕಟೇಶ್‌ ರೆಡ್ಡಿಯವರ ಎವಿಆರ್ ಸಿನಿಮ್ಯಾಕ್ಸ್, ಇದೀಗ ಸೂಪರ್ ಹಿಟ್ 'ಪ್ರೇಮದ ಊರಲಿ'ವನ್ನು ಖರೀದಿಮಾಡುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ. ಈ ಮೂಲಕ ಕನ್ನಡದ ಬ್ಲಾಕ್‌ಬಸ್ಟರ್ ಹಿಟ್ 'ಪ್ರೇಮದ ಊರಲಿ' ಕನ್ನಡದ ಒಟಿಟಿ ವೇದಿಕೆಯಲ್ಲೇ ಪ್ರಸಾರಕಾಣುವ ಸಾಧ್ಯತೆ ಸದ್ಯಕ್ಕೆ ನಿಚ್ಚಳವಾಗಿದೆ.