ಬೆಳಗಾವಿಯ ಸಹ್ಯಾದ್ರಿನಗರದಲ್ಲಿ ಮಹಿಳೆಯೊಬ್ಬರು ದೇವಸ್ಥಾನಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಮನೆ ಮಾಲೀಕೆ ಸಮಯಪ್ರಜ್ಞೆಯಿಂದ ಮನೆಯೊಳಗಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫ್ರಿಡ್ಜ್ ಸ್ಫೋಟಗೊಳ್ಳಲು ಕಾರಣಗಳು ಮತ್ತು ತಡೆಗಟ್ಟುವ ಹೇಗೆ?

ಬೆಳಗಾವಿ (ಅ.10) ಕಳೆದ ವಾರ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಎಲ್‌ಪಿಜಿ ಗ್ಯಾಸ್ ದುರಂತ ಬೆನ್ನಲ್ಲೇ ಬೆಳಗಾವಿಯಲ್ಲೂ ಅಂತಹದ್ದೇ ದುರಂತ ಸಂಭವಿಸಿದ್ದು ಕೂದಲೆಳೆ ಅಂತರದಲ್ಲಿ ಮ್ಕಳಿಬ್ಬರು ಪಾರಾಗಿದ್ದಾರೆ.

ಅಮಾವಾಸೆಯ ದಿನವೇ ತಪ್ಪಿದ ದುರಂತ!

ಅಮಾವಾಸ್ಯೆ ದಿನದಂದು ಮನೆಗೆ ಬೀಗ ಹಾಕಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಫ್ರಿಡ್ಜ್ ಬ್ಲಾಸ್‌ ಆದ ಘಟನೆ ಬೆಳಗಾವಿ ಜಿಲ್ಲೆಯ ಸಹ್ಯಾದ್ರಿನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶ್ರೀದೇವಿ ಜೋಶಿ ಎಂಬುವವರ ಮನೆಯ ಮೊದಲ ಮಹಡಿಯಲ್ಲಿ ಈ ಅವಘಡ ಸಂಭವಿಸಿದೆ.

ಮೊದಲ ಮಹಡಿ ಮನೆ ಬಾಡಿಗೆ ಕೊಡಲಾಗಿದೆ. ಇದೇ ಮನೆಯಲ್ಲಿ ರೂಪಾ ನಾಶಿಪುಡಿ ಎಂಬ ಮಹಿಳೆ ತನ್ನಿಬ್ಬರು ಮಕ್ಕಳೊಡನೆ ವಾಸವಾಗಿದ್ದಾರೆ.

ಅಮಾವಾಸ್ಯ ಹಿನ್ನೆಲೆ ಮನೆಗೆ ಬಾಗಿಲು ದೇವಸ್ಥಾನಕ್ಕೆ ಹೋಗಿದ್ದ ರೂಪಾ. ಆದರೆ ಅತ್ತ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ಫ್ರಿಡ್ಜ್ ಬ್ಲಾಸ್ಟ್ ಆಗಿದೆ. ಫ್ರಿಡ್ಜ್ ಬ್ಲಾಸ್ಟ್ ಆಗುತ್ತಿದ್ದಂತೆ ಮನೆಯೊಗಿದ್ದ ಇಬ್ಬರು ಮಕ್ಕಳು ಚೀರಾಡಿದ್ದಾರೆ. ಸ್ಫೋಟದ ಸದ್ದು, ಮಕ್ಕಳ ಚೀರಾಟ ಕೇಳಿ ಮನೆ ಮಾಲೀಕರಾದ ಶ್ರೀದೇವಿ ದಾವಿಸಿ ಬಂದಿದ್ದಾರೆ.

ಮಕ್ಕಳನ್ನು ರಕ್ಷಿಸಿದ ಮನೆ ಮಾಲೀಕೆ

ಈ ವೇಳೆ ಮನೆಯಲ್ಲಿದ್ದ ಮಕ್ಕಳನ್ನು ಶ್ರೀದೇವಿ ತಕ್ಷಣ ರಕ್ಷಿಸಿದ್ದಾರೆ. ಅಷ್ಟೊತ್ತಿಗಾಗಲೇ ಮನೆಯಲ್ಲಿ ಫ್ರಿಡ್ಜ್ ಬ್ಲಾಸ್ಟ್ ಆಗಿ ಹೊಗೆ ತುಂಬಿಕೊಂಡಿತ್ತು. ಆದರೂ ಬಾಗಲು ತೆಗೆದು ಮಕ್ಕಳನ್ನು ರಕ್ಷಿಸಿದ್ದಾರೆ. ಇತ್ತ ದೇವಸ್ಥಾನದಿಂದ ವಾಪಸ್ ಆದ ಬಳಿಕ ರೂಪಾ ಆಘಾತಕ್ಕೊಳಗಾಗಿದ್ದಾರೆ. ಬೆಳಗಾವಿಯ ಎಪಿಎಂಪಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮನೆಯೊಳಗೆ ಫ್ರಿಡ್ಜ್ ಬ್ಲಾಸ್ ಆಗುತ್ತಾ?

ಮನೆಯಲ್ಲಿ ಆಹಾರ ಹಣ್ಣು ಹಂಪಲು ಇಡಲು ಇಂದು ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್‌ಗಳಿವೆ. ಅನೇಕರು ಫ್ರಿಡ್ಜ್ ಬ್ಲಾಸ್ ಆಗುವುದಿಲ್ಲ ಎಂದೆ ನಂಬಿದ್ದಾರೆ. ಆದರೆ ಎಲ್‌ಪಿಜಿ ಸಿಲಿಂಡರ್ ಮಾತ್ರವಲ್ಲ. ಸರಿಯಾದ ರೀತಿ ಫ್ರಿಡ್ಜ ಬಳಸದಿದ್ದರೆ ಗ್ಯಾಸ್ ಸಿಲಿಂಡರ್ ರೀತಿಯೇ ದುರಂತ ಸಂಭವಿಸುತ್ತದೆ ಎಂಬುದಕ್ಕೆ ಬೆಳಗಾವಿಯಲ್ಲಿ ನಡೆದಿರೋ ಈ ಘಟನೆಯೇ ತಾಜಾ ನಿದರ್ಶನವಾಗಿದೆ.

ಹಾಗಾದರೆ ಫ್ರಿಡ್ಜ್ ಬ್ಲಾಸ್ಆಗುವುದು ತಪ್ಪಿಸುವುದು ಹೇಗೆ?

ಫ್ರಿಡ್ಜ್ ಬ್ಲಾಸ್ಟ್ ಆಗುವುದನ್ನ ತಪ್ಪಿಸಲು ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಮೊದಲಿಗೆ ಫ್ರಿಡ್ಜ್ ಏಕೆ ಬ್ಲಾಸ್ ಆಗುತ್ತದೆ ಎಂಬುದು ತಿಳ್ಕೊಳ್ಬೇಕು. ಫ್ರಿಡ್ಜ್ ಸ್ಫೋಟಕ್ಕೆ ಕಂಪ್ರೆಸರ್‌ ದೋಷ, ಕರೆಂಟು ಸಮಸ್ಯೆ, ಅಥವಾ ಮನೆಯಲ್ಲಿನ ಗ್ಯಾಸ್ ಸೋರಿಕೆಯಾಗುವುದು, ಸರಿಯಾಗಿ ಮೆಂಟೈನನ್ಸ್ ಮಾಡದಿದ್ರೆ ಸ್ಫೋಟ ಸಂಭವಿಸಬಹುದು. ಹೀಗಾಗಿ ನಿಮ್ಮ ಮನೆಯಲ್ಲಿ ಫ್ರಿಡ್ಜ್ ಬಳಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

  • ಫ್ರಿಡ್ಜ್‌ಗೆ ಗುಣಮಟ್ಟದ ಸಾಕೆಟ್ ಬಳಸಿ. ಸಡಿಲವಾದ ಪ್ಲಗ್, ಹಾಳಾದ ವೈರ್ ಮತ್ತು ಓವರ್‌ಲೋಡ್ ಆಗುವುದು ತಪ್ಪಿಸಿ.
  • ಫ್ರಿಡ್ಜ್‌ನ ಹಿಂಭಾಗ ಮತ್ತು ಗೋಡೆಯ ನಡುವೆ ಕಂಪನಿಯ ಸೂಚನೆಯಂತೆ ಸಾಕಷ್ಟು ಜಾಗ ಬಿಡಿ. ಇದರಿಂದ ಶಾಖ ಹೊರಹೋಗುತ್ತೆ.
  • ಫ್ರಿಡ್ಜ್‌ನಿಂದ ವಿಚಿತ್ರ ಶಬ್ದ ಬರುತ್ತಿದ್ದರೆ ಅಥವಾ ಸುಟ್ಟ ವಾಸನೆ, ಅತಿಯಾದ ಬಿಸಿಯಾದರೆ ತಕ್ಷಣ ಆಫ್ ಮಾಡಿ. ರಿಪೇರಿಯವರ ಬಳಿ ಚೆಕ್ ಮಾಡಿಸಿ.
  • ಫ್ರಿಡ್ಜ್‌ನ ಕೂಲಿಂಗ್ ಕಡಿಮೆಯಾದರೆ ಅಥವಾ ಪೈಪ್ ಹಾನಿಯಾಗಿದ್ದರೆ ಸ್ವತಃ ದುರಸ್ತಿ ಮಾಡಲು ಹೋಗಬೇಡಿ
  • ಫ್ರಿಡ್ಜ್ ಮೇಲೆ ವಸ್ತುಗಳನ್ನು ಇಡಬೇಡಿ
  • ಫ್ರಿಡ್ಜ್‌ನ ಕಂಡೆನ್ಸರ್ ಕಾಯಿಲ್, ಪ್ಲಗ್ ಆಗಾಗ ಪರಿಶೀಲಿಸಿ. ತಾಂತ್ರಿಕ ದೋಷ ಕಂಡುಬಂದರೆ ನಿರ್ಲಕ್ಷಿಸಬೇಡಿ.

ಗಮನಿಸಿ: ಫ್ರಿಡ್ಜ್ ಬ್ಲಾಸ್ಟ್ ಆಗುವುದು ಸಾಮಾನ್ಯ ಘಟನೆಯಲ್ಲ.ಸರಿಯಾಗಿ ಬಳಸಿದ್ರೆ ತುಂಬಾ ಉಪಯೋಗ ಆದರೆ ನೀವು ಸಣ್ಣ ನಿರ್ಲಕ್ಷ್ಯ ಮಾಡಿದ್ರೂ ಇಂಥ ದುರಂತಕ್ಕೆ ಕಾರಣವಾಗಬಹುದು ಎಂಬುದು ನೆನಪಿಡಿ.