heartbreaking cjp Abhijeet dipke grandmother dies ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಅಜ್ಜಿ ಸಾವಿತ್ರಿ ಬಾಯಿ ದೀಪ್ಕೆ(85) ನಿಧನರಾಗಿದ್ದಾರೆ. ಇಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ತೆರಳಿ ದೀಪ್ಕೆ ಪೊಲೀಸರು ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಇತ್ತ ಅಜ್ಜಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ..
ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಅಜ್ಜಿ ಸಾವಿತ್ರಿ ಬಾಯಿ ದೀಪ್ಕೆ(85) ನಿಧನರಾಗಿದ್ದಾರೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ವಯೋಸಹಜ ಕಾಯಿಲೆ, ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದಾಗಿ ಕೆಲವು ದಿನಗಳಿಂದ ಸಾವಿತ್ರಿಬಾಯಿ ಅಸ್ವಸ್ಥರಾಗಿದ್ದರು.
ದೀಪ್ಕೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಅಜ್ಜಿ ನಿಧನ
ಇಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದರು. ಅದರಮತೆ ಇಂದು ಬೆಳಗ್ಗೆ ಪ್ರತಿಭಟನೆ ಸ್ಥಳಕ್ಕೆ ಹೊರಡುವಾಗಲೇ ದೆಹಲಿ ಪೊಲೀಸರು ಸಿಜೆಪಿ ಪಕ್ಷದ ಮುಖಂಡರನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಅಜ್ಜಿ ಸಾವಿತ್ರಿಬಾಯಿ ನಿಧನರಾಗಿದ್ದಾರೆ ಎನ್ನಲಾಗಿದೆ.
ಮೃತ ಸಾವಿತ್ರಿಬಾಯಿ ಅಭಿಜಿತ್ ದೀಪ್ಕೆ ಅವರ ತಂದೆ ಭಗವಾನ್ ಅವರ ತಾಯಿಯಾಗಿದ್ದಾರೆ. ಇಂದು ಅವರು ನಿಧನರಾದಾಗ ದೀಪ್ಕೆ ದೆಹಲಿಯಲ್ಲಿದ್ದರು. ದೀಪ್ಕೆ ಪೊಲೀಸರ ವಶಕ್ಕೆ ಪಡೆದ ಕೆಲವೆ ಗಂಟೆಗಳಲ್ಲಿ ಅಜ್ಜಿ ನಿಧನರಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಶನಿವಾರ ಬೆಳಿಗ್ಗೆ ಮುಂಬೈನಿಂದ ಹೊರಟಿದ್ದರು. ಆದರೆ, ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ಪೊಲೀಸರು ಬಂಧಿಸಿದರು.
ದೀಪ್ಕೆ ಕುಟುಂಬಸ್ಥರು ಹಿಂಗೋಲಿಗೆ
ಸಾವಿತ್ರಿಬಾಯಿ ಅವರ ಸುದ್ದಿ ತಿಳಿಯುತ್ತಿದ್ದಂತೆ ದೀಪ್ಕೆ ಅವರ ಕುಟುಂಬಸ್ಥರಾದ ಭಗವಾನ್ ದೀಪ್ಕೆ, ಅನಿತಾ ದೀಪ್ಕೆ ಛತ್ರಪತಿ ಸಂಭಾಜಿನಗರದಲ್ಲಿದ್ದರು. ಸಾವಿನ ಸುದ್ದಿ ತಿಳಿದ ನಂತರ ಅವರು ಹಿಂಗೋಲಿಗೆ ತೆರಳಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ದೀಪ್ಕೆ ಅಜ್ಜಿಯ ನಿಧನದಿಂದಾಗಿ ದುಃಖಿತರಾಗಿರುವ ಅಭಿಜಿತ್ ದೀಪ್ಕೆ ಅವರಿಗೆ ಛತ್ರಪತಿ ಸಂಭಾಜಿನಗರಕ್ಕೆ ಪ್ರಯಾಣಿಸಲು ಅಥವಾ ಈ ಕಷ್ಟದ ಸಮಯದಲ್ಲಿ ತನ್ನ ಕುಟುಂಬದೊಂದಿಗೆ ಇರಲು ಹಿಂಗೋಲಿಗೆ ಪ್ರಯಾಣಿಸಲು ಪೊಲೀಸರು ಅವಕಾಶ ನೀಡಲಿದ್ದಾರೆಯೇ? ಎಂಬ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ. ಅಭಿಜಿತ್ ದೀಪ್ಕೆ ಅಜ್ಜಿಯ ಅಂತ್ಯಸಂಸ್ಕಾರ ಬರುತ್ತಾರಾ? ಬಂಧನದಿಂಡ ಬಿಡುಗಡೆಯಾಗುತ್ತಾರಾ? ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಆದರೆ ಅಂತಿಮ ದರ್ಶನಕ್ಕೆ ಪೊಲೀಸರ ಬಂದೋಬಸ್ತ್‌ನಲ್ಲಿ ಅವಕಾಶ ನೀಡುವ ಸಾಧ್ಯತೆಯೂ ಇದೆ.


