ಬೆಂಗಳೂರಿನಲ್ಲಿ ಮನೆ ಬಾಡಿಗೆ ಮತ್ತು ಜೀವನ ವೆಚ್ಚ ವಿಪರೀತವಾಗಿ ಹೆಚ್ಚಾಗಿದ್ದು, ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂ. ಸಂಬಳವಿಲ್ಲದಿದ್ದರೆ ಇಲ್ಲಿಗೆ ಬರಬೇಡಿ ಎಂದು ಮಹಿಳೆಯೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಪರ-ವಿರೋಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಕಡಿಮೆ ಬಾಡಿಗೆಗೂ ಉತ್ತಮ ಮನೆಗಳು ಸಿಗುತ್ತವೆ ಎಂದು ಕೆಲವರು ವಾದಿಸಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೀವನ ಭಾರೀ ದುಬಾರಿಯಾಗುತ್ತಿದೆ. ಪ್ರಮುಖವಾಗಿ ಬಾಡಿಗೆ ಮೊತ್ತ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನು ಒಂದು ಮನೆ ಬಾಡಿಕೆ ಪಡೆದುಕೊಳ್ಳಬೇಕು ಎಂದರೆ, ಕಡಿಮೆ ಅಂದರೂ ಎರಡರಿಂದ ಮೂರು ಲಕ್ಷ ರೂಪಾಯಿಯನ್ನು ಮನೆ ಮಾಲೀಕರ ಕೈಗೆ ನೀಡಬೇಕು. ಇನ್ನು, ಸೆಕ್ಯೂರಿಟಿ ಡೆಪಾಸಿಟ್ ಅಂತ ಲಕ್ಷ ಲಕ್ಷ ರೂಪಾಯಿ ಕೊಡಬೇಕು. ಈ ಸಂಬಂಧ ಬೆಂಗಳೂರಿನ ಮಹಿಳೆಯರು ನೀಡಿರುವ ಹೇಳಿಕೆ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಒಂದು ಮಧ್ಯಮ ವರ್ಗದ ಕುಟುಂಬ ಮನೆ ಹುಡುಕುವು ಎಷ್ಟು ಕಷ್ಟ ಅಂತ ವಿವರಿಸಿದ್ದಾರೆ.

ಸ್ವತಃ ಮನೆಯ ಕನಸು!

ಬೆಂಗಳೂರಿಗೆ ಶಿಫ್ಟ್ ಆಗಲು ಯೋಚನೆ ಮಾಡುತ್ತಿರುವವರಿಗೆ ಬಹುಮುಖ್ಯ ಸೂಚನೆ, ತಿಂಗಳಿಗೆ ನಿಮಗೆ ಒಂದು ಲಕ್ಷ ರೂಪಾಯಿ ಆದಾಯ ಇಲ್ಲ ಎಂದರೆ ಬರೋದೆ ಬೇಡ ಎಂದಿದ್ದಾರೆ. ಮಹಿಳೆ ಹೇಳಿರುವಂತೆ, ಒಂದು ಸ್ವತಃ ಮನೆ ಇರುವುದು ಮಧ್ಯಮ ವರ್ಗದ ಕುಟುಂಬದ ಒಂದು ಬಲವಾದ ಆಸೆ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ಈ ಕನಸು ನನಸಾಗುವುದು ಕಷ್ಟ ಸಾಧ್ಯ. ಏಕೆಂದರೆ ಇಲ್ಲಿ ಒಂದು ಮನೆಯ ಬೆಲೆ ಕಡಿಮೆ ಎಂದರೂ 2 ಕೋಟಿ ರೂಪಾಯಿ ಇಂದ ಆರಂಭವಾಗುತ್ತದೆ. ಉತ್ತಮ ಸಾರಿಗೆ ಸಂಪರ್ಕ ಇರುವ ಕೆಲವು ಪ್ರದೇಶಗಳು, ಗೇಟೆಡ್ ಕಮ್ಯುನಿಟಿಯಲ್ಲಿ ಮನೆ ಬೇಕು ಎಂದರೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಬೇಕಾಗುತ್ತದೆ ಎಂದಿದ್ದಾರೆ.

ದಯಮಾಡಿ ಬೆಂಗಳೂರಿಗೆ ಬರಬೇಡಿ!

ಬಾಡಿಗೆ ವಿಚಾರವನ್ನು ಪ್ರಸ್ತಾಪಿಸಿರುವ ಮಹಿಳೆ, ಗೇಟೆಡ್ ಕಮ್ಯುನಿಟಿಯಲ್ಲಿ ನೀವು ಬಾಡಿಗೆ ಪಡೆದುಕೊಳ್ಳಬೇಕು ಎಂದರೆ ತಿಂಗಳ ಖರ್ಚು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಒಂದು ಸಾಮಾನ್ಯ 2ಟುಬಿಹೆಚ್‌ಕೆ ಅಪಾರ್ಟ್ಮೆಂಟ್ ತಿಂಗಳಿಗೆ 40 ಸಾವಿರದಿಂದ 45 ಸಾವಿರ ರೂಪಾಯಿ ಬಾಡಿಗೆ ಇದೆ. ಇಂಡಿಪೆಂಡೆಂಟ್ ಮನೆ ಬಾಡಿಗೆ ಪಡೆಯಬೇಕು ಎಂದರೆ ಕನಿಷ್ಠ 40 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಈ ಅಂಕಿಅಂಶಗಳನ್ನು ಗಮನಿಸಿದರೆ ತಿಂಗಳಿಗೆ 3-4 ಲಕ್ಷ ರೂಪಾಯಿ ಸಂಪಾದನೆ ಇರ್ಬೇಕು. ತಿಂಗಳಿಗೆ ನಿಮ್ಮ ಸಂಬಳ ಒಂದು ಲಕ್ಷ ರೂಪಾಯಿ ಒಳಗೆ ಇದ್ದರೆ ದಯಮಾಡಿ ಬೆಂಗಳೂರಿಗೆ ಬರಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಡಿಯೋಗೆ ಹಲವು ನೆಟ್ಟಿಗರು ತಮ್ಮದೇ ಪ್ರತಿಕ್ರಿಯೆ ನೀಡಿ ಕಮೆಂಟ್ ಮಾಡುತ್ತಿದ್ದಾರೆ. ಯಾರೇ ಆದರೂ ಜೂನಿಯರ್ ಆಗಿ ತಮ್ಮ ಕೆಲಸ ಆರಂಭ ಮಾಡಬೇಕು. ಯಾರು ಈ ರೀತಿಯ ಸಲಹೆಗಳಿಗೆ ಬೆಲೆ ಕೊಡಬೇಡಿ. ಮಹಿಳೆ 2ಬಿ ಎಚ್‌ಕೆ ಮನೆಗೆ ಹೆಚ್ಚು ಬಾಡಿಗೆ ಹೇಳುತ್ತಿದ್ದಾರೆ. ಕಳೆದ ತಿಂಗಳು ನಾವು ನಾಲ್ಕು ರೂಮ್ ಇರುವ ವಿಲ್ಲಾಗೆ 50 ಸಾವಿರ ರೂಪಾಯಿ ಬಾಡಿಗೆ ನೀಡಿದ್ದೇವೆ. 50 ಸಾವಿರ ರೂಪಾಯಿ ನೀಡಿದರೆ ಐಷಾರಾಮಿ ಗೇಟೆಡ್ ಕಮ್ಯೂನಿಟಿಯಲ್ಲಿ ಇರಬಹುದು. ಇದು ನಿಮ್ಮ ಸಮಸ್ಯೆ ಆಗಿರುತ್ತದೆ ವಿನಃ ನಗರ ಸಮಸ್ಯೆ ಆಗಿರೋದಿಲ್ಲ ಎಂದು ಹಲವು ಕಾಮೆಂಟ್‌ಗಳಲ್ಲಿ ಬರೆದುಕೊಂಡಿದ್ದಾರೆ.

View post on Instagram