- Home
- News
- State
- Karnataka Latest News Live: ಹಳ್ಳಿಗುಗ್ಗು ಸಾಲ ಮನ್ನಾ ಮಾಡಿದ್ದಾನೆ ಹೊರತು ಲೂಟಿ ಮಾಡಲಿಲ್ಲ: ಎಚ್ಡಿಕೆ
LIVE NOW
Karnataka Latest News Live: ಹಳ್ಳಿಗುಗ್ಗು ಸಾಲ ಮನ್ನಾ ಮಾಡಿದ್ದಾನೆ ಹೊರತು ಲೂಟಿ ಮಾಡಲಿಲ್ಲ: ಎಚ್ಡಿಕೆ

ಸಾರಾಂಶ
ಮಂಡ್ಯ: ನಾನು ರೈತರ ಸಾಲ ಮನ್ನಾ ಮಾಡಿದ್ದೇನೆ ಹೊರತು ಯಾವುದೇ ರೀತಿಯ ಲೂಟಿ ಮಾಡಲಿಲ್ಲ. ನನ್ನನ್ನು ಹಳ್ಳಿಗುಗ್ಗು ಎನ್ನುವವರಿಗೆ ಹಳ್ಳಿ ಜನರ ಕಷ್ಟ ಅರ್ಥವಾಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಎಷ್ಟೋ ಶಾಲಾ, ಕಾಲೇಜುಗಳನ್ನು ತೆರೆದೆ. ಕೆಲವು ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 200ಕ್ಕೂ ಹೆಚ್ಚು ರೈತರು ಆತ್ಮ*ಹತ್ಯೆ ಮಾಡಿಕೊಂಡರು ಎಂದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನನ್ನಲ್ಲಿ ವಿಶ್ವಾಸವಿಟ್ಟು ಬಹುಮತ ನೀಡಿ ಅಧಿಕಾರ ನೀಡಿದರೆ ಉತ್ತಮ ಜನಪರ ಆಡಳಿತ ನೀಡುವ ಆಸೆಯಿದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ ಎಂದ ಅವರು, ರಾಜ್ಯ ಸರ್ಕಾರ ನಿಮ್ಮ ಹಣವನ್ನೇ ತಂದು ಗ್ಯಾರಂಟಿ ಯೋಜನೆಗಳೆಂದು ಕೊಡುತ್ತಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.