ರವಿ ಹಂಜ್ ಬರೆದಿರುವ 'ಬಸವ ಮಂಟಪ' ಕೃತಿಯಲ್ಲಿ ಬಸವಣ್ಣನವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೀರಶೈವ ಲಿಂಗಾಯತ ಮುಖಂಡರು ಮತ್ತು ಸಚಿವರು ಸುದ್ದಿಗೋಷ್ಠಿ ನಡೆಸಿ ಲೇಖಕನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು(ನ.19): ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಹಾಗೂ ವಿವಾದಾತ್ಮಕ ಪುಸ್ತಕ 'ಬಸವ ಮಂಟಪ' ವಿಚಾರವಾಗಿ ಇದೀಗ ಕರ್ನಾಟಕದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಅಮೆರಿಕದಲ್ಲಿ ನೆಲೆಸಿರುವ, ದಾವಣಗೆರೆ ಮೂಲದ ಲೇಖಕ ರವಿ ಹಂಜ್(Ravi Hanj) ಅವರು ಬರೆದಿರುವ 'ಬಸವ ಮಂಟಪ' ಕೃತಿಯಲ್ಲಿನ ಕೆಲವು ಬರಹಗಳು ಮತ್ತು ಸಂದರ್ಶನದಲ್ಲಿ ನೀಡಿರುವ ಹೇಳಿಕೆಗಳಲ್ಲಿ ಬಸವಣ್ಣನವರು ಮತ್ತು ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂದು ಚಾಲುಕ್ಯ ಸರ್ಕಲ್ ನಲ್ಲಿರುವ ಬಸವ ಮಂಟಪದಲ್ಲಿ ಇದೇ ವಿಚಾರವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ್, ಶರಣ ಪ್ರಕಾಶ ಪಾಟೀಲ್, ಆಳಂದ ಶಾಸಕ ಶ್ರೀ ಬಿ.ಆರ್. ಪಾಟೀಲ್, ಬಸವ ಸಮಿತಿಯ ಅರವಿಂದ ಜತ್ತಿ, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ ಮಾಜಿ ಉಪಮೇಯರ್ , ಸಿ ಎಸ್ ಪುಟ್ಟರಾಜು ಭಾಗಿಯಾಗಿ ಲೇಖಕ ರವಿ ಹಂಜ್ ವಿರುದ್ಧ ಕಿಡಿಕಾರಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬಸವಣ್ಣನವರನ್ನ ಕ್ರಿಮಿನಲ್ ಮಾಡಲು ಹೊರಟಿದ್ದಾನೆ…!
ರವಿ ಹಂಜ್ ಎಂಬ ಓರ್ವ ವ್ಯಕ್ತಿ ಬಸವಣ್ಣವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಸವಣ್ಣನವರು ಜಗತ್ತಿಗೆ ಮೊಟ್ಟ ಮೊದಲು ಪಾರ್ಲಿಮೆಂಟ್ ಕೊಟ್ಟವರು, ಕನ್ನಡದಲ್ಲಿ ವಚನ ಬರೆದವರು, ಆ ಮೂಲಕ ಜನರನ್ನು ಸಮಾಜವನ್ನು ತಿದ್ದುವ ಕೆಲಸ ಮಾಡಿದವರು. ಮಹಿಳೆಯರಿಗೆ ಸಮಾನತೆ , ಕೊಡಬೇಕು ಎಂದವರು. ಆದರೆ ಅಂತಹ ಮಾನವತಾವಾದಿ ಬಸವಣ್ಣನವರನ್ನು ಈ ರವಿ ಹಂಜ್ ಎಂಬ ವ್ಯಕ್ತಿ ಕ್ರಿಮಿನಲ್ ಮಾಡೋಕೆ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವಿ ಹಂಜ್ನಂತ ವ್ಯಕ್ತಿಗಳು ಇಂದಲ್ಲ, 12 ನೇ ಶತಮಾನದಲ್ಲೇ ಇಂಥವರಿದ್ದರು. ಈತ ಮಾತ್ರ ಅಲ್ಲ, ಹಿಂದಿನಿಂದಲೂ ಬಸವಣ್ಣನವರ ಅವಮಾನಿಸುವ ಇಂಥ ಕೃತ್ಯ ನಡೆಯುತ್ತಲೇ ಇದೆ. ಈತ ತಾನೊಬ್ಬ ದೊಡ್ಡ ಸಂಶೋಧಕನ ರೀತಿ ಮಾತನಾಡುತ್ತಿದ್ದಾನೆ. ಬಸವಣ್ಣನವರಿಗೆ ಕೊಲೆಗಾರ ಎಂದಿದ್ದಾನೆ. ವಿಶ್ವೇಶ್ವರ ಭಟ್ಟರಿಗಾದ್ರೂ ಗೊತ್ತಾಗಲಿಲ್ಲವಾ? ಎಂದು ಪ್ರಶ್ನಿಸಿದರು. ಮುಂದುವರಿದು ನೀವು ನಿಮ್ಮ ಧರ್ಮ ಪ್ರಚಾರ ಮಾಡಿ ನಾವು ಬಸವ ಧರ್ಮ ಪ್ರಚಾರ ಮಾಡ್ತೇವೆ ಎಂದು ಸವಾಲು ಹಾಕಿದರು.
ರವಿ ಹಂಜ್ ವಿರುದ್ಧ ಕ್ರಮಕ್ಕೆ ಸಿಎಂಗೆ ಆಗ್ರಹ
ನಾವು ಸುಮ್ಮನಿರಲು ಸಾಧ್ಯವಿಲ್ಲ. ಬಸವಣ್ಣನವರನ್ನ ಅವಮಾನಿಸಿರುವ ಈ ವಿಚಾರವನ್ನು ನಾವು ಮುಖ್ಯಮಂತ್ರಿ ಗಮನಕ್ಕೆ ತಂದು ರವಿ ಹಂಜ್ ಎಂಬಾತನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ಮಾಡುತ್ತೇವೆ. ನಾವು ನಮ್ಮ ಧರ್ಮ ಪ್ರೀತಿಸಬೇಕು, ಬೇರೆಯವರ ಧರ್ಮವನ್ನು ಗೌರವಿಸಬೇಕು ಹೊರತು ಈ ರೀತಿ ಅವಮಾನ, ಅಪ್ರಚಾರ ಮಾಡುವುದಲ್ಲ ಸಾಂಸ್ಕೃತಿಕ ನಾಯಕನಾಗಿರುವ ಬಸವಣ್ಣವರಿಗೆ ಅವಹೇಳನ ಮಾಡಿದ್ದಾರೆ ಕ್ರಮ ಆಗಲೇಬೇಕು ಎಂದರು.
ಮುಂದುವರಿಯುವುದು…














