08:57 PM (IST) Feb 17

Karnataka News Live 17 February 2026ಹೂಮಳೆ ಬೆಡಗಿ ಸುಮನ್ ನಗರ್ಕರ್‌ಗೆ ಈಗ ಎವರೆಸ್ಟ್ ಏರೋ ಕನಸಂತೆ!

ಸುಮನ್ ನಗರ್ಕರ್ (Suman Nagarkar) ಅನ್ನೋ ಬೆಳದಿಂಗಳ ಬಾಲೆ ಕನ್ನಡ ಚಿತ್ರಗಳಲ್ಲಿ ನಟಿಸದೇ ಅದೆಷ್ಟೋ ಕಾಲವಾಗಿದೆ. ಈ ನಟಿಗೆ ನಟನೆ ಮಾತ್ರವಲ್ಲದೇ ಲೈಫ್‌ಸ್ಟೈಲ್ ಬಗ್ಗೆ ಅಭಿರುಚಿ ಇದೆ. ಈ ಪ್ರತಿಭಾವಂತೆ ಇದೀಗ ಹೊಸ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ. ಅದು ಎವರೆಸ್ಟ್ ಕನಸು.

Read Full Story
08:50 PM (IST) Feb 17

Karnataka News Live 17 February 2026ಬೆಂಗಳೂರು ಖಾಸಗಿ ಶಾಲೆಯಲ್ಲೂ ಬಡ್ತಿ ಗುದ್ದಾಟ - ರೌಡಿಗಳಿಂದ ಶಿಕ್ಷಕಿ ಮೇಲೆ ಹಲ್ಲೆ ಮಾಡಿಸಿದ ಉಪ ಪ್ರಾಂಶುಪಾಲೆ!

ಬೆಂಗಳೂರಿನ ಬಸವನಗುಡಿಯ ಶಾಲೆಯೊಂದರಲ್ಲಿ, ಬಡ್ತಿ ನೀಡಿದ್ದಕ್ಕೆ ಅಸೂಯೆಗೊಂಡ ಉಪಪ್ರಾಂಶುಪಾಲೆಯೊಬ್ಬರು ರೌಡಿಗಳನ್ನು ಕರೆಸಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿ, ಅವರ ಪತಿ ಹಾಗೂ 16 ವರ್ಷದ ಮಗಳ ಮೇಲೆ ಈ ಗ್ಯಾಂಗ್ ಪೈಶಾಚಿಕವಾಗಿ ಹಲ್ಲೆ ನಡೆಸಲಾಗಿದೆ.

Read Full Story
08:36 PM (IST) Feb 17

Karnataka News Live 17 February 2026ಪುತ್ತೂರು - ಇದ್ದಕ್ಕಿದ್ದಂತೆ ತರಗತಿ ಬಿಟ್ಟು ಬಂದು ರಸ್ತೆಗಿಳಿದ ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರು!

ಪುತ್ತೂರಿನಲ್ಲಿ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದ ಉಂಟಾದ ಧೂಳಿನ ಸಮಸ್ಯೆಯಿಂದಾಗಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯು ಹಾಲಿ ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.

Read Full Story
08:08 PM (IST) Feb 17

Karnataka News Live 17 February 2026ಕಾರು ಡಿಕ್ಕಿ ಹೊಡೆದು 23ರ ಯುವಕನ ಬಲಿ ಪಡೆದ ಅಪ್ರಾಪ್ತನಿಗೆ ಸಿಕ್ತು ವಾರದಲ್ಲೇ ಜಾಮೀನು - ಇದೊಬ್ಬ ಮಗನ ಕಳೆದುಕೊಂಡು ತಾಯಿಯ ಆಕ್ರಂದನ

ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕನೋರ್ವ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 23 ವರ್ಷದ ಯುವ ತರುಣ ಸಾವಿಗೀಡಾದ ಘಟನೆ ವಾರದ ಹಿಂದೆ ನಡೆದಿತ್ತು. ಆದರೆ ಘಟನೆ ನಡೆದ ಒಂದು ವಾರದಲ್ಲಿ ಆ ಅಪ್ರಾಪ್ತ ಬಾಲಕನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
07:39 PM (IST) Feb 17

Karnataka News Live 17 February 2026ಶೂಟಿಂಗ್‌ ಸೆಟ್‌ನಲ್ಲಿ Karna Serial ಕರ್ಣ-ನಿಧಿ ಕದ್ದುಮುಚ್ಚಿ ರೊಮಾನ್ಸ್‌ - ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ ನೋಡಿ

ಕರ್ಣ ಸೀರಿಯಲ್‌ನಲ್ಲಿ ಕರ್ಣ ಮತ್ತು ನಿಧಿ ಜೋಡಿಯ ಪ್ರೀತಿಯ ಗುಟ್ಟು ಇನ್ನೂ ರಹಸ್ಯವಾಗಿಯೇ ಇದೆ. ಆದರೆ, ಅಭಿಮಾನಿಗಳು ಮೆಚ್ಚಿರುವ ಇವರಿಬ್ಬರ ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ಹೇಗೆ ನಡೆಯುತ್ತದೆ ಎನ್ನುವ ತೆರೆಮರೆಯ ವಿಡಿಯೋವೊಂದು ವೈರಲ್ ಆಗಿದೆ. 

Read Full Story
07:34 PM (IST) Feb 17

Karnataka News Live 17 February 2026ಮದುವೆ ಸಮಾರಂಭ ಹತ್ತಿರ ಬರ್ತಿದಂತೆ ಚಿನ್ನದ ಬೆಲೆ ಭಾರೀ ಇಳಿಕೆ, ಡಾಲರ್ ಮೌಲ್ಯ ಏರಿಕೆ ಕನಿಷ್ಟ ಮಟ್ಟಕ್ಕೆ ಇಳಿದ ಬಂಗಾರ!

ಜಾಗತಿಕ ರಾಜಕೀಯ ಬೆಳವಣಿಗೆಗಳು ಮತ್ತು ಡಾಲರ್ ಮೌಲ್ಯದ ಏರಿಕೆಯಿಂದಾಗಿ ಚಿನ್ನದ ಬೆಲೆಗಳು ಒಂದು ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಫೆಬ್ರವರಿ 17 ರಂದು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

Read Full Story
07:19 PM (IST) Feb 17

Karnataka News Live 17 February 2026ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು - ಬೆಂಗಳೂರು-ಮೈಸೂರು ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ, ಪ್ರಯಾಣಿಕರ ಪರದಾಟ!

ಬಿಡದಿ ರೈಲ್ವೆ ನಿಲ್ದಾಣದ ಬಳಿ ಗೂಡ್ಸ್ ರೈಲೊಂದು ತಾಂತ್ರಿಕ ಕಾರಣಗಳಿಂದ ಹಳಿ ತಪ್ಪಿದ ಪರಿಣಾಮ, ಬೆಂಗಳೂರು ಮತ್ತು ಮೈಸೂರು ನಡುವಿನ ರೈಲು ಸಂಚಾರದಲ್ಲಿ ಗಂಭೀರ ವ್ಯತ್ಯಯ ಉಂಟಾಗಿದೆ. ಈ ಘಟನೆಯಿಂದಾಗಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದ್ದು, ರೈಲ್ವೆ ಇಲಾಖೆ ದುರಸ್ತಿ ಕಾರ್ಯ ಕೈಗೊಂಡಿದೆ.
Read Full Story
06:18 PM (IST) Feb 17

Karnataka News Live 17 February 2026ಕೋಲಾರದಲ್ಲಿ ಜಗತ್ತಿನ 4ನೇ ಅತಿದೊಡ್ಡ ಹೆಲಿಕಾಪ್ಟರ್ ಘಟಕ; 20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ- ಎಂ.ಬಿ. ಪಾಟೀಲ

ಫ್ರಾನ್ಸ್‌ನ 'ಏರ್ ಬಸ್' ಮತ್ತು ಭಾರತದ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್' ಸಹಭಾಗಿತ್ವದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಜೋಡಣೆ ಘಟಕ ಕೋಲಾರದಲ್ಲಿ ಚಾಲನೆಗೊಂಡಿದೆ. ಪ್ರಧಾನಿ ಮೋದಿಯಿಂದ ಉದ್ಘಾಟನೆಗೊಂಡ ಈ ಘಟಕ, ಮುಂದಿನ 20 ವರ್ಷಗಳಲ್ಲಿ 500 ಹೆಲಿಕಾಪ್ಟರ್‌ ತಯಾರಿಸುವ ಗುರಿ ಹೊಂದಿದೆ.

Read Full Story
06:08 PM (IST) Feb 17

Karnataka News Live 17 February 2026ಮುಡಾ ಮಾಜಿ ಆಯುಕ್ತ ಒಬ್ಬ ಕರೆಪ್ಟ್ ಬಾಸ್ಟೆರ್ಡ್ ಅಧಿಕಾರಿ, ಸಿದ್ದರಾಮಯ್ಯ ಇದು ನಿನ್ನ ಆಡಳಿತನಾ? ಏಕವಚನದಲ್ಲಿ ವಿಶ್ವನಾಥ್ ಕಿಡಿ

ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಮುಂಬಡ್ತಿ ನೀಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಯನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story
05:16 PM (IST) Feb 17

Karnataka News Live 17 February 2026ಅದೊಂದು ಸುಳಿವಿನಿಂದ ಸಿಕ್ಕಿಬಿದ್ಲು! ಬಾಯ್‌ಫ್ರೆಂಡ್‌ ಸೇರಲು ಖತರ್‌ನಾಕ್ ಪ್ಲಾನ್ ಮಾಡಿದ್ದ ಪ್ರಿಯಾಂಕಾ ಸಿಕ್ಕಿಬಿದ್ದಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ

ಸಂಬಂಧಿಕರ ಮದುವೆಗೆಂದು ಹೋಗಿ ನಾಪತ್ತೆಯಾಗಿದ್ದ ಪ್ರಿಯಾಂಕಳ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೆರೆಯ ಬಳಿ ಬಟ್ಟೆ ಬ್ಯಾಗ್ ಎಸೆದು ತಾನು ಸತ್ತಂತೆ ಬಿಂಬಿಸಿ, ಪ್ರಿಯಕರನೊಂದಿಗೆ ಪರಾರಿಯಾಗಲು ಆಕೆ ರೂಪಿಸಿದ್ದಳು. ಆದರೆ, ಪೊಲೀಸರ ತನಿಖೆಯಿಂದ ಆಕೆಯ ನಾಟಕ ಬಯಲಾಗಿದೆ.

Read Full Story
05:06 PM (IST) Feb 17

Karnataka News Live 17 February 2026SSLC ಪರೀಕ್ಷೆ ಮಾರ್ಚ್ 18ರಿಂದ ಆರಂಭ, ಈ ಬಾರಿ ಹಲವು ಬದಲಾವಣೆಗಳು, ಫಲಿತಾಂಶದ ದಿನಾಂಕವೂ ಪ್ರಕಟ!

ರಾಜ್ಯದಲ್ಲಿ SSLC ಪರೀಕ್ಷೆ-1 ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದ್ದು, ಒಟ್ಟು 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Read Full Story
04:57 PM (IST) Feb 17

Karnataka News Live 17 February 2026ಸಖತ್‌ ಆಗಿರೋ Love Mocktail 3 Movie ಮತ್ತೊಂದು ಹಾಡು; ಡಾರ್ಲಿಂಗ್‌ ಕೃಷ್ಣಗೆ ಮತ್ತೊಂದು ಗೆಲುವು ಪಕ್ಕಾನಾ?

Love Mocktail 3 movie: ಡಾರ್ಲಿಂಗ್‌ ಕೃಷ್ಣ ನಟನೆಯ ಲವ್ ಮಾಕ್ಟೇಲ್ 3 ಸಿನಿಮಾದ `ಒಬ್ಬಂಟಿಯಾದೆ ನಾ' ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್‌ ಆಗಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ಹೀರೋ ಆಗಿ ನಟಿಸಿರುವ ಸಿನಿಮಾ ‘ಲವ್ ಮಾಕ್ಟೇಲ್ 3’. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
04:50 PM (IST) Feb 17

Karnataka News Live 17 February 2026ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ದಾರುಣ ಸಾವು; ಊಟಕ್ಕೆಂದು ಹೊರಟಾಗ ಗುದ್ದಿದ ಬುಲೆಟ್, ಚಿಕಿತ್ಸೆ ಫಲಿಸದೇ ದುರ್ಮರಣ!

ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿ ಊಟಕ್ಕೆಂದು ರಸ್ತೆ ದಾಟುತ್ತಿದ್ದ ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯೋಗೇಶ್ವರಿ ಅವರಿಗೆ ವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Read Full Story
04:40 PM (IST) Feb 17

Karnataka News Live 17 February 2026ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ, ಯಾವ ದಿನ ಯಾವ ಸಬ್ಜೆಕ್ಟ್ ಇಲ್ಲಿದೆ ಸಂಪೂರ್ಣ ಮಾಹಿತಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ 28 ರಿಂದ ನಡೆಯಲಿದ್ದು, 7.1 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮುಂದಿನ ವರ್ಷದಿಂದ ಫೇಷಿಯಲ್ ಅಟೆಂಡೆನ್ಸ್ ಜಾರಿ.

Read Full Story
04:29 PM (IST) Feb 17

Karnataka News Live 17 February 2026ಮಂಗಳೂರಿನಲ್ಲಿ ಕಟ್ಟಿದ 3 ಕೋಟಿ ಮನೆ ತಿಂಗಳಲ್ಲೇ ನಾಶ; ಮತ್ತೆ ಲಕ್ಷುರಿ ಮನೆ ಕಟ್ಟಿದ Madhyama Kutumba; ಖರ್ಚು?

ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಮಂಗಳೂರು ಮೂಲದ ಕುಟುಂಬವೊಂದು ಮನೆ ಕಟ್ಟಿತ್ತು. ಆದರೆ ಮನೆ ಕಟ್ಟಿದ ತಿಂಗಳಿಗೆ ಇಂಟಿರಿಯರ್‌ ಎಲ್ಲವೂ ಫಂಗಸ್‌ ಆಗಿ, ಹಾಳಾಗಿತ್ತು. ಈಗ ಮತ್ತೆ ಹೊಸದಾಗಿ ಇಂಟಿರಿಯರ್‌ ಡಿಸೈನ್‌ ಮಾಡಿ ಮನೆ ಕಟ್ಟಿಸಿದ್ದಾರೆ.

Read Full Story
04:24 PM (IST) Feb 17

Karnataka News Live 17 February 2026ಜಗತ್ತಿನ ಪ್ರೇಮಿಗಳ ಲವ್ ಪ್ರಪೋಸ್‌ಗೆ ಹೂವು ಕೊಟ್ಟ ಕನ್ನಡಿಗರು; 6 ಕೋಟಿ ಗುಲಾಬಿ ರಫ್ತು ಮಾಡಿದ ಕೆಂಪೇಗೌಡ ಏರ್‌ಪೋರ್ಟ್!

ಪ್ರೇಮಿಗಳ ದಿನದ ಸೀಸನ್‌ನಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವು 60 ದಶಲಕ್ಷಕ್ಕೂ ಹೆಚ್ಚು ಗುಲಾಬಿಗಳನ್ನು ರಫ್ತು ಮಾಡಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 64ರಷ್ಟು ಏರಿಕೆ ಕಂಡಿದ್ದು, ಸಿಂಗಾಪುರ ಅಂತರಾಷ್ಟ್ರೀಯವಾಗಿ ಮತ್ತು ದೆಹಲಿ, ಕೋಲ್ಕತ್ತಾ ದೇಶೀಯ ಮಾರುಕಟ್ಟೆಗಳಾಗಿವೆ.

Read Full Story
04:00 PM (IST) Feb 17

Karnataka News Live 17 February 2026ಉದ್ಯಮಿ ಸಿಜೆ ರಾಯ್ ಸಾವಿನ ನಿಗೂಢ ಕಾರಣಕ್ಕೆ ಶೀಘ್ರ ತೆರೆ, ಅಂತಿಮ ಹಂತದತ್ತ ಎಸ್ಐಟಿ ತನಿಖೆ, ವರದಿ ಸಲ್ಲಿಕೆಗೆ ಸಿದ್ಧತೆ

ಉದ್ಯಮಿ ಸಿ.ಜೆ.ರಾಯ್‌ ಆತ್ಮ*ಹತ್ಯೆ ಪ್ರಕರಣದ ಎಸ್ಐಟಿ ತನಿಖೆ ಅಂತಿಮ ಹಂತದಲ್ಲಿದೆ. ಐಟಿ ದಾಳಿ, ವ್ಯವಹಾರ, ಮತ್ತು ವೈಯಕ್ತಿಕ ಒತ್ತಡ ಸೇರಿದಂತೆ ನಾಲ್ಕು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಶೀಘ್ರದಲ್ಲೇ ಸಮಗ್ರ ವರದಿ ಸಲ್ಲಿಕೆಯಾಗಲಿದೆ. ಈ ವರದಿ ಸಲ್ಲಿಕೆಯಾದ ನಂತರವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ.

Read Full Story
03:36 PM (IST) Feb 17

Karnataka News Live 17 February 2026ಹೊಸ ಸೀರಿಯಲ್‌ ಮರ್ಯಾದೆ ರಾಮಣ್ಣ ಪ್ರಸಾರ; ಹಾಗಿದ್ರೆ ಯಾವ ಧಾರಾವಾಹಿ ಅಂತ್ಯ ಆಗುತ್ತೆ?

Maryade Ramanna Serial Kannada: ಇತ್ತೀಚೆಗೆ ಹೊಸ ಧಾರಾವಾಹಿಗಳು ಆರಂಭ ಆಗುತ್ತಿವೆ. ಜಗದ್ಧಾತ್ರಿ ಹಾಗೂ ಕೃಷ್ಣರುಕ್ಕು ಧಾರಾವಾಹಿಗಳು ಬರಲಿವೆ ಎನ್ನಲಾಗಿತ್ತು. ಈಗ ಇನ್ನೊಂದು ಸೀರಿಯಲ್‌ ಕೂಡ ಬರಲಿದ್ದು, ಪ್ರೋಮೋ ರಿಲೀಸ್‌ ಆಗಿದೆ. ಹಾಗಾದರೆ ಯಾವ ಧಾರಾವಾಹಿ ಅಂತ್ಯ ಆಗಲಿದೆ.

Read Full Story
03:27 PM (IST) Feb 17

Karnataka News Live 17 February 2026ಶಾಸಕರ ಫಾರಿನ್ ಟೂರ್ ಖಾಸಗಿ ಎಂದ ಯತೀಂದ್ರ; ಇಲ್ಲ ಕಣಣ್ಣೋ ಇದು ಸರ್ಕಾರದ ಇಲಾಖಾ ಅಧ್ಯಯನ ಎಂದ ಪ್ರದೀಪ್ ಈಶ್ವರ!

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಗೊಂದಲ ಸೃಷ್ಟಿಯಾಗಿದೆ. ಇದು ವೈಯಕ್ತಿಕ ಪ್ರವಾಸ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರೆ, ಇದು ಮಜಾ ಮಾಡುವುದಕ್ಕಲ್ಲ, ಇಲಾಖೆಯ ಅಧ್ಯಯನ ಪ್ರವಾಸ ಎಂದು ಶಾಸಕ ಪ್ರದೀಪ್ ಈಶ್ವರ್ ಸಮರ್ಥಿಸಿಕೊಂಡಿದ್ದಾರೆ.

Read Full Story
03:07 PM (IST) Feb 17

Karnataka News Live 17 February 2026ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್‌ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ 'ಬ್ರಹ್ಮಗಂಟು' ನಟಿ

ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾಭಾರತಿ ಭಟ್‌ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಇವರ ಮದುವೆ ಮೇಕಪ್‌ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗ್ತಿದೆ. ಅಲ್ಲಿ ಬಂದ ನೆಗೆಟಿವ್‌ ಕಾಮೆಂಟ್‌ಗೆ ಗೀತಾಭಾರತಿ ಭಟ್‌ ತಿರುಗೇಟು ನೀಡಿದ್ದರು.

Read Full Story