- Home
- Entertainment
- Sandalwood
- ಸಖತ್ ಆಗಿರೋ Love Mocktail 3 Movie ಮತ್ತೊಂದು ಹಾಡು; ಡಾರ್ಲಿಂಗ್ ಕೃಷ್ಣಗೆ ಮತ್ತೊಂದು ಗೆಲುವು ಪಕ್ಕಾನಾ?
ಸಖತ್ ಆಗಿರೋ Love Mocktail 3 Movie ಮತ್ತೊಂದು ಹಾಡು; ಡಾರ್ಲಿಂಗ್ ಕೃಷ್ಣಗೆ ಮತ್ತೊಂದು ಗೆಲುವು ಪಕ್ಕಾನಾ?
Love Mocktail 3 movie: ಡಾರ್ಲಿಂಗ್ ಕೃಷ್ಣ ನಟನೆಯ ಲವ್ ಮಾಕ್ಟೇಲ್ 3 ಸಿನಿಮಾದ `ಒಬ್ಬಂಟಿಯಾದೆ ನಾ' ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ಹೀರೋ ಆಗಿ ನಟಿಸಿರುವ ಸಿನಿಮಾ ‘ಲವ್ ಮಾಕ್ಟೇಲ್ 3’. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಪ್ರೇಮಿಗಳ ದಿನಕ್ಕೆ ಉಡುಗೊರೆ
ಇತ್ತೀಚೆಗಷ್ಟೇ ಈ ಸಿನಿಮಾದ ತಂದೆ ಮಗಳ ಬಾಂಧವ್ಯ ಕಥೆ ಹೇಳುವ ಈ ಸಿನಿಮಾದ ಹಾಡೊಂದು ರಿಲೀಸ್ ಆಗಿತ್ತು. ಈ ಹಿಂದಿನ ಎರಡು ಹಾಡುಗಳನ್ನು ಕೇಳಿದ್ದ ವೀಕ್ಷಕರು ಟ್ರೇಲರ್‌ಗೋಸ್ಕರ ಕಾಯುತಿದ್ದರು. ಪ್ರೇಮಿಗಳ ದಿನಕ್ಕೆ ಉಡುಗೊರೆ ಎಂಬಂತೆ `ಒಬ್ಬಂಟಿಯಾದೆ ನಾ' ಎಂಬ ಲಿರಿಕಲ್ ವೀಡಿಯೋ ರಿಲೀಸ್ ಆಗಿದೆ.
ಮಾತು ಮೌನವಾಗಿದೆ
ಈಗಾಗಲೇ ಪ್ರೇಮಿಗಳ ದಿನದ ಗುಂಗಿನಲ್ಲಿ ತೇಲಿಬಂದಂತಿರೋ ಈ ಹಾಡು ಸೋಶಿಯಲ್ ಮೀಡುಯಾದಲ್ಲಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಮಾತು ಮೌನವಾಗಿದೆ ಶೋಕ ಭಾವ ಮೂಡಿದೆ ಎಂಬ ಸಾಲುಗಳೊಂದಿಗೆ ಈ ಹಾಡು ಶುರುವಾಗುವುದು. ಈ ಹಾಡನ್ನು ರಾಘವೇಂದ್ರ ಕಾಮತ್ ಬರೆದಿದ್ದಾರೆ.
ನಕುಲ್ ಅಭಯಂಕರ್ ಸಂಗೀತ ಸಂಯೋಜನೆ
ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಸ್ವತಃ ಧ್ವನಿ ನೀಡಿದ್ದಾರೆ. ಪ್ರೇಮಿಗಳ ದಿನದಂದೇ ಈ ಹಾಡು ಬಿಡುಗಡೆಯಾಗಿದ್ದು, ಎವರ್‌ಗ್ರೀನ್ ಪ್ರೇಮಗೀತೆಗಳ ಸಾಲಿನಲ್ಲಿ ದಾಖಲಾಗುವ ಲಕ್ಷಣ ಕಾಣುತ್ತಿದೆ.
ಹಾಡುಗಳಿಗೆ ವಿಶೇಷ ಒತ್ತು
ಡಾರ್ಲಿಂಗ್ ಕೃಷ್ಣ ಲವ್‌ಮಾಕ್ಟೇಲ್ ಸಿನಿಮಾದ ಮೊದಲ ಚಾಪ್ಟರ್‌ನಲ್ಲಿ ಹಾಡುಗಳಿಗೆ ವಿಶೇಷ ಒತ್ತು ಕೊಟ್ಟಿದ್ದರು. ಅಂದಹಾಗೆ ಈ ಸಿನಿಮಾದ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ ಇನ್ನೊಂದು ಯಶಸ್ಸು ಕೊಡಲು ರೆಡಿಯಾಗಿದೆ.
ಯಾವಾಗ ರಿಲೀಸ್ ಆಗಲಿದೆ?
ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

