MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಹಳಿ ತಪ್ಪಿತಾ ಕರ್ನಾಟಕದ ಅಷ್ಟೂ ರೈಲ್ವೆ ಯೋಜನೆಗಳು! ಭೂಸ್ವಾಧೀನ ಮಾಡಿಕೊಳ್ಳೋದೇ ದೊಡ್ಡ ಸವಾಲು, ಇಲ್ಲಿದೆ ಲಿಸ್ಟ್

ಹಳಿ ತಪ್ಪಿತಾ ಕರ್ನಾಟಕದ ಅಷ್ಟೂ ರೈಲ್ವೆ ಯೋಜನೆಗಳು! ಭೂಸ್ವಾಧೀನ ಮಾಡಿಕೊಳ್ಳೋದೇ ದೊಡ್ಡ ಸವಾಲು, ಇಲ್ಲಿದೆ ಲಿಸ್ಟ್

ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಗದಗ-ವಾಡಿ, ತುಮಕೂರು-ದಾವಣಗೆರೆ ಸೇರಿದಂತೆ ಹಲವು ಪ್ರಮುಖ ರೈಲ್ವೆ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. 10 ಯೋಜನೆಗಳ ಪೈಕಿ 7 ಯೋಜನೆಗಳಿಗೆ ಇನ್ನೂ 3,338 ಎಕರೆ ಭೂಮಿ ಸ್ವಾಧೀನವಾಗಬೇಕಿದ್ದು, ಇದು ಕಾಮಗಾರಿಗೆ ದೊಡ್ಡ ಅಡ್ಡಿಯಾಗಿದೆ. 

2 Min read
Author : Gowthami K
Published : Feb 20 2026, 08:08 PM IST
Share this Photo Gallery
  • FB
  • TW
  • Linkdin
  • Whatsapp
16
 ಹಲವು ಪ್ರಮುಖ ರೈಲ್ವೆ ಯೋಜನೆಗಳು ನನೆಗುದಿಗೆ
Image Credit : twitter

ಹಲವು ಪ್ರಮುಖ ರೈಲ್ವೆ ಯೋಜನೆಗಳು ನನೆಗುದಿಗೆ

ಹುಬ್ಬಳ್ಳಿ: ಕರ್ನಾಟಕದಲ್ಲಿ ಹಲವು ಪ್ರಮುಖ ರೈಲ್ವೆ ಯೋಜನೆಗಳು ಭೂಸ್ವಾಧೀನದ ಸಮಸ್ಯೆಯಿಂದಾಗಿ ವರ್ಷಗಳ ಕಾಲ ನನೆಗುದಿಗೆ ಬಿದ್ದಿವೆ. ಸಕಾಲಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ದಶಕಗಳಿಂದ ರೈಲು ಮಾರ್ಗಗಳ ನಿರ್ಮಾಣ ಅರ್ಧಕ್ಕೇ ನಿಂತಿದ್ದು, ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೈಲ್ವೆ ಹೋರಾಟಗಾರರು ಹಾಗೂ ನಾಗರಿಕ ಸಂಘಟನೆಗಳು ರಾಜ್ಯ ಸರ್ಕಾರ ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಒತ್ತಾಯಿಸುತ್ತಿವೆ.

26
ಯಾವೆಲ್ಲಾ ರೈಲು ಯೋಜನೆಗಳು ಬಾಕಿ?
Image Credit : Getty

ಯಾವೆಲ್ಲಾ ರೈಲು ಯೋಜನೆಗಳು ಬಾಕಿ?

South Western Railway ವಲಯದ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 10 ರೈಲು ಮಾರ್ಗ ಯೋಜನೆಗಳು ನಡೆಯುತ್ತಿವೆ. ಇದರಲ್ಲಿ 3 ಯೋಜನೆಗಳಿಗೆ ಬಹುತೇಕ ಭೂಸ್ವಾಧೀನ ಪೂರ್ಣಗೊಂಡಿದ್ದು, ಕಾಮಗಾರಿ ವೇಗ ಪಡೆಯಬೇಕಿದೆ. ಉಳಿದ 7 ಯೋಜನೆಗಳು ಭೂಸ್ವಾಧೀನದ ಕೊರತೆಯಿಂದಾಗಿ ಇನ್ನೂ ಪ್ರಾರಂಭ ಹಂತದಲ್ಲೇ ನಿಂತಿವೆ.

ಈ 7 ಯೋಜನೆಗಳಿಗೆ ಒಟ್ಟಾರೆ 12,783 ಎಕರೆ ಭೂಮಿ ಅಗತ್ಯವಿದ್ದು, ಇದುವರೆಗೆ 9,445 ಎಕರೆ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇನ್ನೂ 3,338.187 ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದೆ. ಭೂಸ್ವಾಧೀನ ವಿಳಂಬದಿಂದಾಗಿ ಹಳೆಯ ಹಾಗೂ ಹೊಸ ಯೋಜನೆಗಳೆಲ್ಲವೂ ಗಂಭೀರವಾಗಿ ಹಿನ್ನಡೆಯಾಗಿದೆ.

Related Articles

Related image1
ಯಲಹಂಕದಲ್ಲಿ ದೇಶದ ಅತಿದೊಡ್ಡ ಮೆಗಾ ರೈಲ್ವೆ ಕೋಚ್ ಟರ್ಮಿನಲ್, ದೇವನಹಳ್ಳಿ ನಿಗದಿಯಾಗಿದ್ದನ್ನ ಕೈಬಿಟ್ಟಿದ್ದೇಕೆ ಕೇಂದ್ರ?
Related image2
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ, ಬರೋಬ್ಬರಿ 8 ಎಕರೆ ಭೂಸ್ವಾಧೀನ
36
ಭೂಸ್ವಾಧೀನ ಬಾಕಿಯಿರುವ ಹಳೆಯ ಯೋಜನೆಗಳು
Image Credit : Asianet News

ಭೂಸ್ವಾಧೀನ ಬಾಕಿಯಿರುವ ಹಳೆಯ ಯೋಜನೆಗಳು

ಗದಗ–ವಾಡಿ ರೈಲು ಮಾರ್ಗ:

ಅಗತ್ಯವಿರುವ 4,301 ಎಕರೆ ಪೈಕಿ 3,978 ಎಕರೆ ಸ್ವಾಧೀನಗೊಂಡಿದ್ದು, ಇನ್ನೂ 323.082 ಎಕರೆ ಬಾಕಿಯಿದೆ.

ತುಮಕೂರು–ಚಿತ್ರದುರ್ಗ–ದಾವಣಗೆರೆ ಮಾರ್ಗ:

2,510 ಎಕರೆ ಪೈಕಿ 2,326 ಎಕರೆ ಸ್ವಾಧೀನಗೊಂಡಿದ್ದು, 184.105 ಎಕರೆ ಭೂಮಿ ಇನ್ನೂ ಬಾಕಿಯಾಗಿದೆ.

ಬಾಗಲಕೋಟೆ–ಕುಡಚಿ ಮಾರ್ಗ:

2,571 ಎಕರೆ ಪೈಕಿ 2,459 ಎಕರೆ ಸ್ವಾಧೀನವಾಗಿದ್ದು, 112 ಎಕರೆ ಉಳಿದಿದೆ.

ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗ:

1,387 ಎಕರೆ ಪೈಕಿ ಕೇವಲ 682 ಎಕರೆ ಮಾತ್ರ ಸ್ವಾಧೀನಗೊಂಡಿದ್ದು, ಇನ್ನೂ 705 ಎಕರೆ ಭೂಸ್ವಾಧೀನ ಅಗತ್ಯವಿದೆ.

46
ಹೊಸ ರೈಲು ಮಾರ್ಗಗಳಿಗೆ ಭೂಮಿ ಇನ್ನೂ ಹಸ್ತಾಂತರವಾಗಿಲ್ಲ
Image Credit : Meta AI

ಹೊಸ ರೈಲು ಮಾರ್ಗಗಳಿಗೆ ಭೂಮಿ ಇನ್ನೂ ಹಸ್ತಾಂತರವಾಗಿಲ್ಲ

ಈ ಮೂರು ಹೊಸ ಯೋಜನೆಗಳಿಗೆ ಇನ್ನೂ ಒಂದು ಎಕರೆ ಭೂಮಿಯೂ ರೈಲ್ವೆ ಇಲಾಖೆಗೆ ಹಸ್ತಾಂತರವಾಗಿಲ್ಲ:

  • ಧಾರವಾಡ–ಕಿತ್ತೂರು–ಬೆಳಗಾವಿ ಮಾರ್ಗ – 1,435 ಎಕರೆ
  • ಹಾಸನ–ಬೇಲೂರು ಮಾರ್ಗ – 509 ಎಕರೆ
  • ಮಾರಿಕುಪ್ಪಂ–ವಿರುಪಾಕ್ಷಪುರ ಮಾರ್ಗ – 70 ಎಕರೆ

ಭೂಮಿ ಹಸ್ತಾಂತರವಾಗದ ಕಾರಣ ಈ ಯೋಜನೆಗಳ ಕಾಮಗಾರಿ ಆರಂಭವಾಗಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರ ಶೀಘ್ರವಾಗಿ ಭೂಸ್ವಾಧೀನ ಪೂರ್ಣಗೊಳಿಸಿದರೆ ಮಾತ್ರ ಯೋಜನೆಗಳು ಕಾರ್ಯಗತವಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

56
ಪೂರ್ಣ ಅಥವಾ ಬಹುತೇಕ ಪೂರ್ಣ ಭೂಸ್ವಾಧೀನಗೊಂಡ ಯೋಜನೆಗಳು
Image Credit : stockPhoto

ಪೂರ್ಣ ಅಥವಾ ಬಹುತೇಕ ಪೂರ್ಣ ಭೂಸ್ವಾಧೀನಗೊಂಡ ಯೋಜನೆಗಳು

ರಾಯದುರ್ಗ–ತುಮಕೂರು (ಕಲ್ಯಾಣದುರ್ಗ) ಮಾರ್ಗ – 1,413 ಎಕರೆ ಸಂಪೂರ್ಣ ಸ್ವಾಧೀನ

ಮುನಿರಾಬಾದ್ (ಗಿಣಗೇರಾ)–ರಾಯಚೂರು ಮಾರ್ಗ – 2,425 ಎಕರೆ ಸಂಪೂರ್ಣ ಸ್ವಾಧೀನ

ಚಿಕ್ಕಮಗಳೂರು–ಬೇಲೂರು ಮಾರ್ಗ – 322 ಎಕರೆ ಪೈಕಿ 320 ಎಕರೆ ಸ್ವಾಧೀನ (2 ಎಕರೆ ಮಾತ್ರ ಬಾಕಿ)

ಈ ಯೋಜನೆಗಳಲ್ಲಿ ಈಗ ಕಾಮಗಾರಿ ವೇಗವಾಗಿ ನಡೆಯಬೇಕಿರುವ ಜವಾಬ್ದಾರಿ ರೈಲ್ವೆ ಇಲಾಖೆಯ ಮೇಲಿದೆ.

66
ಅಧಿಕಾರಿಗಳು ಮತ್ತು ಹೋರಾಟಗಾರರ ಅಭಿಪ್ರಾಯ
Image Credit : Asianet News

ಅಧಿಕಾರಿಗಳು ಮತ್ತು ಹೋರಾಟಗಾರರ ಅಭಿಪ್ರಾಯ

ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಮಾತನಾಡಿ, “10 ಯೋಜನೆಗಳಲ್ಲಿ 3ಕ್ಕೆ ಭೂಮಿ ಬಹುತೇಕ ಸಿಕ್ಕಿದೆ. ಉಳಿದ 7 ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಭೂಮಿ ಹಸ್ತಾಂತರವಾಗಬೇಕಿದೆ. ಭೂಸ್ವಾಧೀನ ಆದ ಕೂಡಲೇ ಕಾಮಗಾರಿ ವೇಗ ಪಡೆಯಲಿದೆ,” ಎಂದರು.

ಇದೇ ವೇಳೆ ರೈಲ್ವೆ ಹೋರಾಟಗಾರ ಕುತಬುದ್ದೀನ ಖಾಜಿ ಮಾತನಾಡಿ, “ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ರೈಲ್ವೆ ಯೋಜನೆಗಳು ಶೀಘ್ರ ಪೂರ್ಣಗೊಳ್ಳಲು ಸಾಧ್ಯ. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು, ಕೇಂದ್ರ ಸರ್ಕಾರ ತಕ್ಷಣ ಕಾಮಗಾರಿ ಆರಂಭಿಸಬೇಕು,” ಎಂದು ಒತ್ತಾಯಿಸಿದರು.

ತ್ವರಿತ ಕ್ರಮಕ್ಕೆ ಒತ್ತಾಯ

ಒಟ್ಟಾರೆ, ಭೂಸ್ವಾಧೀನ ವಿಳಂಬವೇ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿದ್ದು, ಸರ್ಕಾರಗಳು ತಕ್ಷಣ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಭೂಮಿ ಹಸ್ತಾಂತರಿಸಿದರೆ ಮಾತ್ರ ದಶಕಗಳಿಂದ ಕಾಯುತ್ತಿರುವ ರೈಲು ಮಾರ್ಗಗಳ ಕನಸು ನನಸಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಧಾರವಾಡ
ಭಾರತೀಯ ರೈಲ್ವೆ
ಭೂ ಒತ್ತುವರಿ
ಐಆರ್‌ಸಿಟಿಸಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬಾಗಲಕೋಟೆ ಶಿವಾಜಿ ಮೆರವಣಿಗೆಗೆ ಕಲ್ಲು ತೂರಿದ ಮುಸ್ಲಿಂ ಮತಾಂಧರಿಗೆ ಪಾಕಿಸ್ತಾನ ನಂಟಿನ ಶಂಕೆ; ಆರ್. ಅಶೋಕ್
Recommended image2
ನಟೇಶ್ ಭ್ರಷ್ಟಾಚಾರ ಆರೋಪ: 6 ಸೆಕೆಂಡು ಆಡಿಯೋ ರಿಲೀಸ್‌ ಮಾಡಿದ ಸ್ನೇಹಮಯಿ ಮನೆಗೆ ಸಿಸಿಬಿ ರೈಡ್! ಏನೆಲ್ಲಾ ದಾಖಲೆ ಸಿಕ್ತು?
Recommended image3
ಸರ್ಕಾರದಿಂದ ಸ್ನೇಹಮಯಿ ಕೃಷ್ಣನ ಜೀವಕ್ಕೆ ಅಪಾಯ; ಸಿಸಿಬಿ ಅರೆಸ್ಟ್ ಮಾಡಿದರೂ ನಮ್ಮಪ್ಪನ ಸುಳಿವೇ ಸಿಗ್ತಿಲ್ಲ- ವಿವೇಕ್!
Related Stories
Recommended image1
ಯಲಹಂಕದಲ್ಲಿ ದೇಶದ ಅತಿದೊಡ್ಡ ಮೆಗಾ ರೈಲ್ವೆ ಕೋಚ್ ಟರ್ಮಿನಲ್, ದೇವನಹಳ್ಳಿ ನಿಗದಿಯಾಗಿದ್ದನ್ನ ಕೈಬಿಟ್ಟಿದ್ದೇಕೆ ಕೇಂದ್ರ?
Recommended image2
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ, ಬರೋಬ್ಬರಿ 8 ಎಕರೆ ಭೂಸ್ವಾಧೀನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved