MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್‌ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ 'ಬ್ರಹ್ಮಗಂಟು' ನಟಿ

ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್‌ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ 'ಬ್ರಹ್ಮಗಂಟು' ನಟಿ

ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾಭಾರತಿ ಭಟ್‌ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಇವರ ಮದುವೆ ಮೇಕಪ್‌ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗ್ತಿದೆ. ಅಲ್ಲಿ ಬಂದ ನೆಗೆಟಿವ್‌ ಕಾಮೆಂಟ್‌ಗೆ ಗೀತಾಭಾರತಿ ಭಟ್‌ ತಿರುಗೇಟು ನೀಡಿದ್ದರು. 

1 Min read
Author : Padmashree Bhat
Published : Feb 17 2026, 03:07 PM IST
Share this Photo Gallery
  • FB
  • TW
  • Linkdin
  • Whatsapp
15
ಏನು ಕಾಮೆಂಟ್‌ ಮಾಡಿದ್ರು?
Image Credit : geetha bharathi bhat instagram

ಏನು ಕಾಮೆಂಟ್‌ ಮಾಡಿದ್ರು?

ಮೇಕಪ್‌ ಆರ್ಟಿಸ್ಟ್‌ ಒಬ್ಬರು ಗೀತಾಭಾರತಿಗೆ ಮೇಕಪ್‌ ಮಾಡಿದ ವಿಡಿಯೋ ಹಂಚಿಕೊಂಡಿದ್ದರು. ಓರ್ವ ಮಹಿಳೆಯೆ “ಮೇಕಪ್‌ ಚೆನ್ನಾಗಿದೆ, ನಿಮ್ಮ ವಧು ಆಯ್ಕೆ ತಪ್ಪಾಗಿದೆ” ಎಂದು ಕಾಮೆಂಟ್‌ ಮಾಡಿದ್ದರು. ಇದನ್ನು ನೋಡಿ ಗೀತಾಭಾರತಿ ಭಟ್‌ಗೆ ಸಿಟ್ಟು ಬಂದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

25
ನಾನು ನಿಮ್ಮನ್ನು ಅವಮಾನಿಸಬಹುದು
Image Credit : Asianet News

ನಾನು ನಿಮ್ಮನ್ನು ಅವಮಾನಿಸಬಹುದು

ಯಾರು ಯಾರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೋ, ನಾನು ಕೂಡ ನಿಮ್ಮ ಬಣ್ಣ, ಮುಖದ ಲಕ್ಷಣ, ಇನ್ನಿತರ ವಿಷಯಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬಹುದು ಅಥವಾ ನಿಮ್ಮನ್ನು ನಾನು ಕೂಡ ಅವಮಾನಿಸಬಹುದು! ದೇವರ ಪ್ರತಿಯೊಂದು ಸೃಷ್ಟಿಯೂ ತನ್ನದೇ ಆದ ರೀತಿಯಲ್ಲಿ ಸುಂದರವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಸಾಧ್ಯವಾದರೆ ಇತರರ ಬಗ್ಗೆ ಕರುಣೆಯಿಂದ ಇರಿ, ಇಲ್ಲದಿದ್ದರೆ ಸುಮ್ಮನಿರಿ” ಎಂದು ಗೀತಾ ಹೇಳಿದ್ದಾರೆ.

Related Articles

Related image1
ಕೊನೆಗೂ 30ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆಂದು ಡಯಟ್‌ ಲಿಸ್ಟ್‌ ತೆರೆದಿಟ್ಟ ಗೀತಾ ಭಾರತಿ ಭಟ್
Related image2
ಗುಂಡು ಗುಂಡಗೆ ಮೈ ತುಂಬಿಕೊಂಡಿರುವ ಹುಡುಗಿಯರನ್ನು ಇಷ್ಟ ಪಡುತ್ತಾರೆ: ಗೀತಾ ಭಾರತಿ ಭಟ್
35
ನಿಮ್ಮ ಪ್ರೀತಿಗೆ ನಾನು ಚಿರಋಣಿ
Image Credit : Asianet News

ನಿಮ್ಮ ಪ್ರೀತಿಗೆ ನಾನು ಚಿರಋಣಿ

ನನಗೆ ಬಂದ ಕೆಟ್ಟ ಕಾಮೆಂಟ್‌ಗಳ ಬಗ್ಗೆ ನೀವು ಪ್ರತಿಯೊಬ್ಬರು ತೋರುತ್ತಿರುವ ಪ್ರತಿಕ್ರಿಯೆ, ಪ್ರೀತಿ ಮತ್ತು ಕರುಣೆಯ ಮಾತುಗಳನ್ನು ಕಂಡು ನಾನು ನಿಜಕ್ಕೂ ಭಾವುಕಳಾಗಿದ್ದೇನೆ, ಇದನ್ನು ಅರಗಿಸಿಕೊಳ್ಳಲು ಟೈಮ್‌ ಬೇಕು! ನೀವು ಕೊಟ್ಟ ಪ್ರೀತಿಯಿಂದ ನಾನು ಧನ್ಯಳಾಗಿದ್ದೇನೆ. ನನಗೆ ಇಷ್ಟು ಪ್ರೀತಿ, ಒಳ್ಳೆಯ ಮಾತುಗಳನ್ನು ಕಳುಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು! ನಾನು ನಿಜವಾಗಿಯೂ ಚಿರಋಣಿ! ಎಂದಿದ್ದಾರೆ ಗೀತಾ.

45
ಕೆಟ್ಟ ಕಾಮೆಂಟ್‌ ಬರುತ್ತೆ
Image Credit : Asianet News

ಕೆಟ್ಟ ಕಾಮೆಂಟ್‌ ಬರುತ್ತೆ

ಇದೆಲ್ಲ ಏನೂ ಇಲ್ಲ, ಇದಕ್ಕಿಂತ ಕೆಟ್ಟ ಕಾಮೆಂಟ್‌ಗಳು ಬರುತ್ತವೆ, ಆದರೆ ನಾನು ಅವುಗಳನ್ನು ಎಂದಿಗೂ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿಲ್ಲ ಅಥವಾ ಪ್ರಾಮುಖ್ಯತೆ ನೀಡಿಲ್ಲ, ನಾನು ಅದನ್ನೆಲ್ಲ ನಿರ್ಲಕ್ಷ್ಯ ಮಾಡುತ್ತಿದ್ದೆ. ಈ ಬಾರಿ ನನಗೆ ಸುಮ್ಮನಿರಲು ಇಷ್ಟವಿರಲಿಲ್ಲ.. ಈ ರೀತಿಯ ಮಹಿಳೆಯರಿಗೆ ಅಥವಾ ಯಾರೇ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ, ಅವರ ನಿಜವಾದ ಸ್ಥಾನ, ಯೋಗ್ಯತೆಯನ್ನು ತೋರಿಸುವ ಅಗತ್ಯವಿದೆ ಎಂದಿದ್ದಾರೆ.

55
ತೆರೆ ಮೇಲೆ ಬರೋದು ಯಾವಾಗ?
Image Credit : Asianet News

ತೆರೆ ಮೇಲೆ ಬರೋದು ಯಾವಾಗ?

ಗೀತಾ ಭಾರತಿ ಭಟ್‌ ಅವರು ಸದ್ಯ ಯಾವುದೇ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಮುಂದೆ ಅವರು ತೆರೆ ಮೇಲೆ ಕಾಣಿಸಿಕೊಳ್ಳಬಹುದೇನೋ! 

ಅಂದಹಾಗೆ ಬ್ರಹ್ಮಾವರ ರಾಜಾರಾಮ್‌ ಭಟ್‌ ಅವರನ್ನು ಗೀತಾ ಮದುವೆಯಾಗಿದ್ದಾರೆ. ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ನಟಿ
ವಿವಾದ

Latest Videos
Recommended Stories
Recommended image1
ಪದೇ ಪದೇ‌ ಕಾರ್ತಿಕ್‌ ಮಹೇಶ್‌ ಜೊತೆ Love Gossip; ಕೊನೆಗೂ ಸತ್ಯ ಹೇಳಿದ Karna Serial ನಮ್ರತಾ ಗೌಡ
Recommended image2
Naa Ninna Bidalaare Serial ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ಗೆ ಸರ್ಜರಿ; ಸದ್ಯ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!
Recommended image3
Bhagyalakshmi Serial Twist: ಬಿಲ್ಡಿಂಗ್‌ನಿಂದ ಹಾರಿ ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರ ಮುಗಿದೋಯ್ತಾ?
Related Stories
Recommended image1
ಕೊನೆಗೂ 30ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆಂದು ಡಯಟ್‌ ಲಿಸ್ಟ್‌ ತೆರೆದಿಟ್ಟ ಗೀತಾ ಭಾರತಿ ಭಟ್
Recommended image2
ಗುಂಡು ಗುಂಡಗೆ ಮೈ ತುಂಬಿಕೊಂಡಿರುವ ಹುಡುಗಿಯರನ್ನು ಇಷ್ಟ ಪಡುತ್ತಾರೆ: ಗೀತಾ ಭಾರತಿ ಭಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved