ಇಲ್ಲಿನ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ್ದ 167 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಲಿಷ್ಠ ಮುಂಬೈ ತಂಡವು ಮೊದಲ ಓವರ್ನಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಕರಿಯಪ್ಪ ಬೌಲಿಂಗ್ನಲ್ಲಿ ಪೃಥ್ವಿ ಶಾ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
Cricket Nov 4, 2021, 5:47 PM IST
*ಇಂದಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆರಂಭ
*ತಲಾ 6 ತಂಡಗಳನ್ನು 5 ಎಲೈಟ್ ಗುಂಪುಗಳಾಗಿ ವಿಂಗಡಣೆ : ಪ್ಲೇಟ್ ಗುಂಪಿನಲ್ಲಿ 8 ತಂಡಗಳು
* ನವೆಂಬರ್ 22 ರಂದು ದೆಹಲಿಯಲ್ಲಿ ಅಂತಿಮ ಹಣಾಹಣಿ
Cricket Nov 4, 2021, 8:13 AM IST
ಸರ್ಫರಾಜ್ ಖಾನ್, ಪ್ರಶಾಂತ್ ಸೋಲಂಕಿ, ಶಂಸ್ ಮುಲಾನಿ ಹಾಗೂ ಸಾಯಿರಾಜ್ ಪಾಟೀಲ್ಗೆ ಮುಂಬೈ ಏರ್ಪೋರ್ಟ್ನಲ್ಲಿ ಕೋವಿಡ್ 19 ತಗುಲಿರುವುದು ಖಚಿತವಾಗಿದೆ. ಇದೀಗ ಈ ನಾಲ್ವರು ಆಟಗಾರರನ್ನು ಮನೆಗ ಕಳಿಸಲಾಗಿದ್ದು, 7 ದಿನಗಳ ಕಾಲ ಐಸೋಲೇಷನ್ನಲ್ಲಿರಲು ಆಟಗಾರರಿಗೆ ಸೂಚಿಸಲಾಗಿದೆ.
Cricket Oct 27, 2021, 4:53 PM IST
ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಕರ್ನಾಟಕ ತಂಡದ ಇನಿಂಗ್ಸ್ ಆರಂಭಿಸಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಕೆ.ಎಲ್. ರಾಹುಲ್, ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಡದಿಂದ ಹೊರಗುಳಿದಿದ್ದಾರೆ.
Cricket Oct 21, 2021, 1:13 PM IST
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮುರುಗನ್ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಶ್ವಿನ್ 8 ಪಂದ್ಯಗಳನ್ನಾಡಿ ಒಟ್ಟು 10 ವಿಕೆಟ್ ಕಬಳಿಸಿ ಮಿಂಚಿದ್ದರು.
Cricket Feb 2, 2021, 2:14 PM IST
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು, ಬರೋಡಾ ವಿರುದ್ಧ 7 ವಿಕೆಟ್ಗಳಿಂದ ಜಯಿಸಿತು. ತಂಡಕ್ಕಿದು 2ನೇ ಟ್ರೋಫಿ. 2006-07ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ತಂಡ ಚಾಂಪಿಯನ್ ಆಗಿತ್ತು. ಎರಡೂ ಬಾರಿ ದಿನೇಶ್ ಕಾರ್ತಿಕ್ ಅವರೇ ತಂಡದ ನಾಯಕ ಅನ್ನುವುದು ವಿಶೇಷ.
Cricket Feb 1, 2021, 8:32 AM IST
ಮೊದಲ ಸೆಮೀಸ್ನಲ್ಲಿ ಕಳೆದ ವರ್ಷದ ರನ್ನರ್ ಅಪ್ ತಮಿಳುನಾಡು ತಂಡ, ರಾಜಸ್ಥಾನ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಫೈನಲ್ಗೇರಿದ್ದರೆ, 2ನೇ ಸೆಮಿಫೈನಲ್ನಲ್ಲಿ ಬಲಿಷ್ಠ ಪಂಜಾಬ್ ವಿರುದ್ಧ 25 ರನ್ಗಳ ರೋಚಕ ಜಯ ಪಡೆದ ಬರೋಡಾ ತಂಡ ಪ್ರಶಸ್ತಿ ಸುತ್ತಿಗೇರಿದೆ.
Cricket Jan 31, 2021, 9:11 AM IST
2ನೇ ಸೆಮೀಸ್ನಲ್ಲಿ ಮೊದಲು ಬ್ಯಾಟ್ ಮಾಡಿದ ಬರೋಡಾ ತಂಡಕ್ಕೆ ನಾಯಕ ಕೇದಾರ್ ದೇವ್ಧರ್(64) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಇನ್ನು ಮಧ್ಯಮ ಕ್ರಮಾಂಕಲ್ಲಿ ಕಾರ್ತಿಕ್ ಕಾಕಡೆ(53) ಸಮಯೋಚಿತ ಅರ್ಧಶತಕ ಸಿಡಿಸುವ ಮೂಲಕ ಬರೋಡಾ ತಂಡ 3 ವಿಕೆಟ್ಗೆ 160 ರನ್ ಗಳಿಸಿತು.
Cricket Jan 30, 2021, 10:22 AM IST
ಕಳೆದ ಆವೃತ್ತಿಯಲ್ಲಿಯೂ ತಮಿಳುನಾಡು ತಂಡ ಫೈನಲ್ ಪ್ರವೇಶಿಸಿತ್ತಾದರೂ, ಕೊನೆಯ ಕ್ಷಣದಲ್ಲಿ ಕರ್ನಾಟಕ ತಂಡದ ಎದುರು ರೋಚಕ ಸೋಲು ಕಂಡಿತ್ತು. ಈ ಆವೃತ್ತಿಯಲ್ಲಾದರೂ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Cricket Jan 29, 2021, 4:57 PM IST
ಮೊದಲ ಸೆಮೀಸ್ನಲ್ಲಿ ಕಳೆದ ವರ್ಷದ ರನ್ನರ್-ಅಪ್ ತಮಿಳುನಾಡು ಹಾಗೂ ರಾಜಸ್ಥಾನ ತಂಡಗಳು ಸೆಣಸಿದರೆ, 2ನೇ ಸೆಮಿಫೈನಲ್ನಲ್ಲಿ ಬರೋಡಾ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ತಮಿಳುನಾಡು ಹಾಗೂ ಪಂಜಾಬ್ ಬಲಿಷ್ಠವಾಗಿದ್ದು, ಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳೆನಿಸಿವೆ.
Cricket Jan 29, 2021, 11:19 AM IST
ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಬರೋಡ ತಂಡ ಗೆಲ್ಲಲು ಕೊನೆಯ ಓವರ್ನಲ್ಲಿ ಬರೋಬ್ಬರಿ 18 ರನ್ಗಳ ಅಗತ್ಯವಿತ್ತು. ಮೊದಲ 3 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ್ದ ಬರೋಡ, ಆ ಬಳಿಕ ವಿಷ್ಣು ಸೋಲಂಕಿ ಮೂರು ಎಸೆತಗಳಲ್ಲಿ ಕ್ರಮವಾಗಿ ಸಿಕ್ಸ್, ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ತಂಡಕ್ಕೆ ರೋಚಕ ಗೆಲುವು ತಂದಿತ್ತರು.
Cricket Jan 27, 2021, 4:42 PM IST
ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತ ಆಟವಾಡಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 87 ರನ್ ಬಾರಿಸುವಷ್ಟರಲ್ಲಿ ಸರ್ವಪತನ ಕಂಡಿತ್ತು. ಸುಲಭ ಗುರಿ ಬೆನ್ನತ್ತಿದ ಪಂಜಾಬ್ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
Cricket Jan 26, 2021, 4:43 PM IST
ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಇಲ್ಲಿನ ಮೊಟೆರಾ ಕ್ರೀಡಾಂಗಣದಲ್ಲಿ ಪಂಜಾಬ್ ಬೌಲಿಂಗ್ ಎದುರು ಕರ್ನಾಟಕದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಅಂದಹಾಗೆ 87 ರನ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ದಾಖಲಿಸಿದ ಅತಿ ಕಡಿಮೆ ಮೊತ್ತ ಎನಿಸಿದೆ.
Cricket Jan 26, 2021, 1:47 PM IST
ಅದೃಷ್ಟದ ಮೇಲೆ ನಾಕೌಟ್ ಹಂತ ಪ್ರವೇಶಿಸಿದ್ದ ಕರ್ನಾಟಕ ತಂಡ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಹೀಗಿದ್ದು ಉತ್ತಮ ಆರಂಭ ಪಡೆಯುವಲ್ಲಿ ಕರ್ನಾಟಕ ತಂಡ ವಿಫಲವಾಗಿದೆ. ಮೊದಲ 5 ಓವರ್ ಮುಕ್ತಾಯದ ವೇಳೆಗೆ ಕರ್ನಾಟಕ ತಂಡ 4 ವಿಕೆಟ್ ಕಳೆದುಕೊಂಡು 32 ರನ್ ಬಾರಿಸಿದೆ.
Cricket Jan 26, 2021, 12:44 PM IST
ಲೀಗ್ ಹಂತದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತಿದ್ದ ಕರ್ನಾಟಕ ಒತ್ತಡದಿಂದಲೇ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ನಾಯಕ ಕರುಣ್ ನಾಯರ್ ಕಳಪೆ ಫಾರ್ಮ್ನಲ್ಲಿದ್ದು, ಇದು ತಂಡದ ಮೇಲೂ ದೊಡ್ಡ ಪರಿಣಾಮ ಬೀರುತ್ತಿದೆ. ಜೊತೆಗೆ ತಂಡದ ಆಯ್ಕೆಯಲ್ಲೂ ಕರ್ನಾಟಕ ಹಲವು ಎಡವಟ್ಟುಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.
Cricket Jan 26, 2021, 9:24 AM IST