Asianet Suvarna News Asianet Suvarna News

ಡಿಕೆಶಿ 100 ಕೋಟಿ ರೂ ಆಫರ್, ಹೊರಬಂದ್ರೆ ಉರುಳುತ್ತೆ ಸರ್ಕಾರ್, ದೇವರಾಜೇ ಗೌಡ ಬಾಂಬ್!

ಪೆನ್‌ಡ್ರೈವ್ ಪ್ರಕರಣದಲ್ಲಿ ತಿರುವು,ಡಿಕೆ ಶಿವಕುಮಾರ್ 100 ಕೋಟಿ ರೂ ಆಫರ್ ಆರೋಪ, ಸೋಮವಾರವರೆಗೆ ರೇವಣ್ಣಗೆ ರಿಲೀಫ್, ರಶ್ಮಿಕಾ ಮಂದಣ್ಣ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಪೆನ್‌ಡ್ರೈವ್ ಪ್ರಕರಣದಲ್ಲಿ ಪೊಲೀಸರು ವಶದಲ್ಲಿರುವ ದೇವೇರಾಜೇ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕಾರ್ತಿಕ್‌ನಿಂದ ಪೆನ್‌ಡ್ರೈವ್ ಪಡೆದು ಹಂಚಿದ್ದೇ ಡಿಕೆ ಶಿವಕುಮಾರ್. ಆದರೆ ಪೆನ್‌ಡ್ರೈವ್ ಹಂಚಲು ಸೂಚನೆ ನೀಡಿದ್ದು ಹೆಚ್‌ಡಿ ಕುಮಾರಸ್ವಾಮಿ ಎಂದು ಹೇಳಲು ನನಗೆ 100 ಕೋಟಿ ರೂಪಾಯಿ ಡಿಕೆಶಿ ಆಫರ್ ಮಾಡಿದ್ದರು ಎಂದು ದೇವೇರಾಜೇ ಗೌಡ ಹೇಳಿದ್ದಾರೆ. ಈ ಪೆನ್‌ಡ್ರೈವ್ ಪ್ರಕರಣದ ಪ್ರಮುಖ ರೂವಾರಿ ಡಿಕೆ ಶಿವಕುಮಾರ್. ಈ ಪ್ರಕರಣ ನಿರ್ವಹಣೆಗೆ ನಾಲ್ವರು ಸಚಿವರ ತಂಡ ರಚಿಸಲಾಗಿದೆ. ನನಗೆ ಅಡ್ವಾನ್ಸ್ ಆಗಿ 5 ಕೋಟಿ ರೂಪಾಯಿ ತಲುಪಿಸಿದ್ದರು. ಆದರೆ ನಾನು ಒಪ್ಪದಿದ್ದಾರೆ, ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ. ನಾನು ಹೊರಬಂದರೆ ಸರ್ಕಾರ ಉರುಳತ್ತೆ ಎಂದು ದೇವರಾಜೆ ಗೌಡ ಹೇಳಿದ್ದಾರೆ.