ಸಯ್ಯದ್ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಪಂಜಾಬ್‌ ಫೈನಲ್‌ ಪ್ರವೇಶಿಸಲು ಕರ್ನಾಟಕ ತಂಡವು ಕೇವಲ 88 ರನ್‌ಗಳ ಸಾಧಾರಣ ಗುರಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಅಹಮದಾಬಾದ್‌(ಜ.26): ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಕೇವಲ 87 ರನ್‌ಗಳಿಗೆ ಸರ್ವಪತನ ಕಂಡಿದ್ದು, ಬಲಿಷ್ಠ ಪಂಜಾಬ್‌ಗೆ ಗೆಲ್ಲಲು ಸಾಧಾರಣ ಗುರಿ ನೀಡಿದೆ. ರಾಜ್ಯ ತಂಡದ ಬ್ಯಾಟ್ಸ್‌ಮನ್‌ಗಳ ದಯಾನೀಯ ಬ್ಯಾಟಿಂಗ್‌ ವೈಫಲ್ಯ ಹಾಗೂ ಪಂಜಾಬ್‌ ಬೌಲರ್‌ಗಳ ಶಿಸ್ತುಬದ್ದ ದಾಳಿ ಎದುರು ಹಾಲಿ ಚಾಂಪಿಯನ್‌ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಯಿತು.

ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಇಲ್ಲಿನ ಮೊಟೆರಾ ಕ್ರೀಡಾಂಗಣದಲ್ಲಿ ಪಂಜಾಬ್‌ ಬೌಲಿಂಗ್‌ ಎದುರು ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಅಂದಹಾಗೆ 87 ರನ್‌ ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಕರ್ನಾಟಕ ದಾಖಲಿಸಿದ ಅತಿ ಕಡಿಮೆ ಮೊತ್ತ ಎನಿಸಿದೆ. ಪಡಿಕ್ಕಲ್(11), ಕರುಣ್‌ ನಾಯರ್(12), ಅನಿರುದ್ಧ್ ಜೋಶಿ(27), ಶ್ರೇಯಸ್‌ ಗೋಪಾಲ್‌(13) ಮಾತ್ರ ಎರಡಂಕಿ ಮೊತ್ತ ದಾಖಲಿಸಿದ್ದು ಬಿಟ್ಟರೆ, ಉಳಿದ್ಯಾವ ಆಟಗಾರರು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ.

Scroll to load tweet…
Scroll to load tweet…

ಪಂಜಾಬ್‌ ಪರ ಸಿದ್ದಾರ್ಥ್‌ ಕೌಲ್‌ 3, ಸಂದೀಪ್ ಶರ್ಮಾ, ಆರ್ಶದೀಪ್‌ ಸಿಂಗ್ ಹಾಗೂ ರಮನ್ದೀಪ್‌ ಸಿಂಗ್‌ 2 ತಲಾ ವಿಕೆಟ್ ಪಡೆದರೆ, ಮಯಾಂಕ್‌ ಮಾರ್ಕಂಡೆ ತಲಾ ಒಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 87/10
ಅನಿರುದ್ಧ್ ಜೋಶಿ: 27
ಸಿದ್ದಾರ್ಥ್‌ ಕೌಲ್‌: 15/3