Asianet Suvarna News Asianet Suvarna News

Syed Mushtaq Ali Trophy ಇಂದಿನಿಂದ ಆರಂಭ : ರಾಜ್ಯಕ್ಕಿಂದು ಮುಂಬೈ ಚಾಲೆಂಜ್‌!

*ಇಂದಿನಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಆರಂಭ
*ತಲಾ 6 ತಂಡಗಳನ್ನು 5 ಎಲೈಟ್‌ ಗುಂಪುಗಳಾಗಿ ವಿಂಗಡಣೆ : ಪ್ಲೇಟ್‌ ಗುಂಪಿನಲ್ಲಿ 8 ತಂಡಗಳು
* ನವೆಂಬರ್‌ 22 ರಂದು ದೆಹಲಿಯಲ್ಲಿ ಅಂತಿಮ ಹಣಾಹಣಿ

Mumbai will face Karnataka in Syed Mushtaq Ali Trophy at Guwahati on thursday
Author
Bengaluru, First Published Nov 4, 2021, 8:13 AM IST

ಗುವಾಹಟಿ (ನ.4) : 2022ರ ಐಪಿಎಲ್‌ಗೆ (IPL) ನಡೆಯುವ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ದೇಸಿ ಕ್ರಿಕೆಟಿಗರಿಗೆ ವೇದಿಕೆ ಸಿದ್ಧವಾಗಿದೆ. ಗುರುವಾರದಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ (Syed Mushtaq Ali Trophy) ಆರಂಭಗೊಳ್ಳಲಿದ್ದು, ಎಲೈಟ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ.

ಕರ್ನಾಟಕಕ್ಕೆ ಮನೀಶ್‌ ಪಾಂಡೆ (Manish Pandey) ನಾಯಕರಾಗಿದ್ದು, ದೇವದತ್‌ ಪಡಿಕ್ಕಲ್‌ (Devdutt Padikkal), ಕೆ.ಗೌತಮ್‌, ಕರುಣ್‌ ನಾಯರ್‌, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವು ತಾರಾ ಆಟಗಾರರ ಬಲವಿದೆ. ಮುಂಬೈ‌ (Mumbai)  ತಂಡದಲ್ಲಿ ಅಜಿಂಕ್ಯ ರಹಾನೆ (Ajinkya Rahane) ನಾಯಕರಾಗಿದ್ದು ಪೃಥ್ವಿ ಶಾ (prithvi shaw), ಯಶಸ್ವಿ ಜೈಸ್ವಾಲ್‌, ಶಿವಂ ದುಬೆ, ಧವಳ್‌ ಕುಲಕರ್ಣಿಯಂತಹ ಅನುಭವಿಗಳಿದ್ದಾರೆ.

Rahul Dravid: ಟೀಮ್ ಇಂಡಿಯಾ ನೂತನ ಕೋಚ್ ಆಗಿ ದ್ರಾವಿಡ್ ನೇಮಕ

ವೇಗದ ಬೌಲಿಂಗ್‌ ಆಲ್ರೌಂಡರ್‌ ಹಾಗೂ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ಗಾಗಿ ಬಿಸಿಸಿಐ (BCCI) ಆಯ್ಕೆಗಾರರು ಹಾಗೂ ಐಪಿಎಲ್‌ ತಂಡಗಳು ಹುಡುಕಾಟ ನಡೆಸಲಿದ್ದು, ವೆಂಕಟೇಶ್‌ ಅಯ್ಯರ್‌, ಶಿವಂ ದುಬೆ, ವಿಜಯ್‌ ಶಂಕರ್‌, ಚಿರಾಗ್‌ ಜಾನಿ ಸೇರಿ ಹಲವರ ಮೇಲೆ ಎಲ್ಲರ ಕಣ್ಣಿದೆ. ತಲಾ 6 ತಂಡಗಳನ್ನು 5 ಎಲೈಟ್‌ (Elite) ಗುಂಪುಗಳಾಗಿ ವಿಂಗಡಿಸಿದ್ದು, ಪ್ಲೇಟ್‌ ಗುಂಪಿನಲ್ಲಿ 8 ತಂಡಗಳಿವೆ. 6 ನಗರಗಳಲ್ಲಿ ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಒಟ್ಟು ಐದು ಲೀಗ್ ಪಂದ್ಯಗಳನ್ನು ಆಡಲಿದೆ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಲಕ್ನೋ (Lucknow), ಗುವಾಹಟಿ (Guwahati), ಬರೋಡಾ, ದೆಹಲಿ, ಹರಿಯಾಣ ಮತ್ತು ವಿಜಯವಾಡದಲ್ಲಿ ನಡೆಯಲಿದ್ದು, ನಾಕೌಟ್‌ ಪಂದ್ಯಗಳು (knockouts) ನವೆಂಬರ್ 16 ರಿಂದ ದೆಹಲಿಯಲ್ಲಿ (Delhi) ಪ್ರಾರಂಭವಾಗಲಿದ್ದು, ಫೈನಲ್ ಕೂಡ ದೆಹಲಿಯಲ್ಲಿ ನಡೆಯಲಿದೆ. ಒಟ್ಟು ಆರು ನಗರಗಳಲ್ಲಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಪಂದ್ಯ ನಡೆಯಲಿವೆ.

ತಲಾ 6 ತಂಡಗಳನ್ನು 5 ಎಲೈಟ್‌ ಗುಂಪುಗಳಾಗಿ ವಿಂಗಡಣೆ : ಪ್ಲೇಟ್‌ ಗುಂಪಿನಲ್ಲಿ 8 ತಂಡಗಳು

ಎಲೈಟ್‌ ಎ (A): ತಮಿಳುನಾಡು, ಪುದುಚೇರಿ, ಮಹಾರಾಷ್ಟ್ರ, ಒಡಿಶಾ, ಗೋವಾ ಮತ್ತು ಪಂಜಾಬ್.

ಎಲೈಟ್‌ ಬಿ (B): ಬಂಗಾಳ, ಛತ್ತೀಸ್‌ಗಢ, ಕರ್ನಾಟಕ, ಮುಂಬೈ, ಬರೋಡಾ ಮತ್ತು ಸರ್ವಿಸಸ್

ಎಲೈಟ್‌ ಸಿ (C): ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಹಿಮಾಚಲ ಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ಆಂಧ್ರ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ; ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ!

ಎಲೈಟ್‌ ಡಿ (D): ರೈಲ್ವೆಸ್, ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಬಿಹಾರ

ಎಲೈಟ್‌ ಇ (E): ಉತ್ತರ ಪ್ರದೇಶ, ಹೈದರಾಬಾದ್, ಉತ್ತರಾಖಂಡ, ಸೌರಾಷ್ಟ್ರ, ದೆಹಲಿ ಮತ್ತು ಚಂಡೀಗಢ

ಪ್ಲೇಟ್‌ ಗುಂಪು (Plate Group): ತ್ರಿಪುರ, ವಿದರ್ಭ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯ ನಡೆಯುವ ಸ್ಥಳಗಳು!

ಎಲೈಟ್ ಗ್ರೂಪ್ ಎ - ಲಕ್ನೋ.
ಎಲೈಟ್ ಗ್ರೂಪ್ ಬಿ - ಗುವಾಹಟಿ. 
ಎಲೈಟ್ ಗ್ರೂಪ್ ಸಿ - ಬರೋಡಾ.

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

ಎಲೈಟ್ ಗ್ರೂಪ್ ಡಿ - ದೆಹಲಿ - ಅರುಣ್ ಜೇಟ್ಲಿ ಸ್ಟೇಡಿಯಂ ಮತ್ತು ಏರ್‌ಫೋರ್ಸ್ ಕಾಂಪ್ಲೆಕ್ಸ್ ಮೈದಾನ, ಪಾಲಂ.
ಎಲೈಟ್ ಗ್ರೂಪ್ ಇ - ಹರಿಯಾಣ - ರೋಹ್ಟಕ್, ಸುಲ್ತಾನ್‌ಪುರ. 
ಪ್ಲೇಟ್ ಗ್ರೂಪ್ - ವಿಜಯವಾಡ - ಮುಲಪದ, ವಿಶಾಖಪಟ್ಟಣಂ.
ನಾಕೌಟ್ ಪಂದ್ಯಗಳು - ದೆಹಲಿ.

Follow Us:
Download App:
  • android
  • ios