Asianet Suvarna News Asianet Suvarna News

ದೇವರಾಜೆ ಗೌಡ ಆರೋಪಕ್ಕೆ ಕೆರಳಿದ ಕಾಂಗ್ರೆಸ್, ಹೇಳಿಕೆ ಪ್ರಸಾರ ಮಾಡಿದ್ದೇ ತಪ್ಪು ಎಂದ ಸಚಿವ!

ದೇವರಾಜೆ ಗೌಡ 100 ಕೋಟಿ ರೂ ಆಫರ್ ಆರೋಪಕ್ಕೆ ಕಾಂಗ್ರೆಸ್ ನಾಯಕರು ವಾಗ್ದಾಳಿ, ಹುಟ್ಟು ಹಬ್ಬ ದಿನ ಪ್ರಜ್ವಲ್ ಪ್ರಕರಣ ಕುರಿತು ದೇವೇಗೌಡ ಪ್ರತಿಕ್ರಿಯೆ, ಹತ್ಯೆಯಾದ ಅಂಜಲಿಗೆ ನ್ಯಾಯ ಕೊಡಿಸಲು ಸರ್ಕಾರದ ವಿರುದ್ಧ ಪ್ರತಿಭಟನೆ, ಸೋಮವಾರ 5ನೇ ಹಂತದ ಮತದಾನ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ದೇವರಾಜೆ ಗೌಡ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಡಿಕೆ ಶಿವಕುಮಾರ್ 100 ಕೋಟಿ ಆಫರ್ ಮಾಡಿದ್ದರು ಅನ್ನೋ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕೆರಳಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಪ್ರಸಾರ ಮಾಡಿದ್ದೇ ತಪ್ಪು ಎಂದು ಸಚಿವರು ಹೇಳಿದ್ದರೆ, ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. 100 ಕೋಟಿ ರೂಪಾಯಿ ಆಫರ್ ಇದ್ದರೆ ಮೊದಲೇ ಅಮಿತ್ ಶಾಗೆ ದೂರು ನೀಡಬೇಕಿತ್ತು ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
 

Video Top Stories