Asianet Suvarna News Asianet Suvarna News

ಗಗನಯಾತ್ರಿಗಳ ದೈಹಿಕ, ಮಾನಸಿಕ ಆರೋಗ್ಯದೊಡನೆ ಚೆಲ್ಲಾಟವಾಡುತ್ತವೆಯೇ ಬಾಹ್ಯಾಕಾಶ ವಿಕಿರಣಗಳು?

ಅಯನೈಸಿಂಗ್ ವಿಕಿರಣಗಳು ಡಿಎನ್ಎಗೆ ಹಾನಿ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದು, ಆ ಮೂಲಕ ಕ್ಯಾನ್ಸರ್ ಬರುವ ಅಪಾಯವನ್ನು, ಹೃದಯ ಮತ್ತು ನೇತ್ರ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

do space radiation mess with the physical and mental health of astronauts ash
Author
First Published Dec 15, 2023, 1:51 PM IST

ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನವದೆಹಲಿ (ಡಿಸೆಂಬರ್ 15, 2023): ಗಗನಯಾತ್ರಿಗಳು ಭೂಮಿಯ ಕೆಳಕಕ್ಷೆಯನ್ನು ದಾಟಿ (ಲೋ ಅರ್ತ್ ಆರ್ಬಿಟ್‌ - ಎಲ್ಇಒ) ದಾಟಿ ಮುಂದುವರಿದಾಗ, ಅವರಿಗೆ ಬಾಹ್ಯಾಕಾಶ ವಿಕಿರಣಗಳಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ. ಇದರ ಪರಿಣಾಮವಾಗಿ ಗಗನಯಾತ್ರಿಗಳಿಗೆ ಹೆಚ್ಚಿನ ವಿಕಿರಣ ಅಸೌಖ್ಯ, ಜೀವನಪರ್ಯಂತ ಕ್ಯಾನ್ಸರ್ ಬರುವ ಸಾಧ್ಯತೆಗಳ ಹೆಚ್ಚಳ, ಕೇಂದ್ರೀಯ ನರಮಂಡಲದ ಮೇಲೆ ಅಡ್ಡಪರಿಣಾಮ ಮತ್ತು ಕ್ಷೀಣಗೊಳಿಸುವಂತಹ ಆರೋಗ್ಯ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ.

ವಿಜ್ಞಾನಿಗಳು ಪ್ರಸ್ತುತ ಬಾಹ್ಯಾಕಾಶ ಪ್ರಯಾಣದಿಂದ ಗಗನಯಾತ್ರಿಗಳ ಲೈಂಗಿಕ ಆರೋಗ್ಯವೂ ಸೇರಿದಂತೆ, ಎಲ್ಲ ರೀತಿಯಲ್ಲೂ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ಅನ್ವೇಷಣೆ ನಡೆಸುತ್ತಿದ್ದಾರೆ. ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಪ್ರಾಯೋಜಿತ ಅಧ್ಯಯನಗಳು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಲಾಕ್ಟಿಕ್ ಕಾಸ್ಮಿಕ್ ವಿಕಿರಣಗಳಿಗೆ ತೆರೆದುಕೊಳ್ಳುವುದು ಮತ್ತು ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣಾ ವಾತಾವರಣದಲ್ಲಿ ಇರುವುದು ನಾಳೀಯ ಅಂಗಾಂಶಗಳ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದು ಪತ್ತೆಹಚ್ಚಿವೆ. ಇದರ ಪರಿಣಾಮವಾಗಿ, ನಿಮಿರು ದೌರ್ಬಲ್ಯ ಉಂಟಾಗಿ, ಅದು ಗಗನಯಾತ್ರಿಗಳು ಭೂಮಿಗೆ ಮರಳಿ, ದೀರ್ಘಕಾಲ ಚೇತರಿಕೆಯ ಹಾದಿಯಲ್ಲಿ ಇರುವಾಗಲೂ ತಲೆದೋರಬಹುದು ಎನ್ನಲಾಗಿದೆ.

ಇದನ್ನು ಓದಿ: ಹಮಾಸ್ ವಿರುದ್ಧ ‘ಹತ್ಯೆ ಯಂತ್ರ’ ಅಖಾಡಕ್ಕಿಳಿಸಿದ ಇಸ್ರೇಲ್: ಕಿಡಾನ್ ಪಡೆಗಿದೆ ವಿಶೇಷ ಬಲ

ಬಾಹ್ಯಾಕಾಶ ವಿಕಿರಣಗಳು ಎಂದರೇನು?

ವಿಕಿರಣ ಎನ್ನುವುದು ಒಂದು ರೀತಿಯ ಶಕ್ತಿಯಾಗಿದ್ದು, ಕಿರಣಗಳ ರೂಪದಲ್ಲಿ, ವಿದ್ಯುತ್ಕಾಂತೀಯ ಅಲೆಗಳು ಅಥವಾ ಕಣಗಳು ರೂಪದಲ್ಲಿ ಹೊರಬರುತ್ತವೆ. ಕೆಲವು ವಿಧದ ವಿಕಿರಣಗಳನ್ನು, ಉದಾಹರಣೆಗೆ ದೃಗ್ಗೋಚರ ಬೆಳಕು ಮತ್ತು ಅತಿಗೆಂಪು ವಿಕಿರಣವನ್ನು ನೋಡಲು ಅಥವಾ ಅನುಭವಿಸಲು ಸಾಧ್ಯವಾಗುತ್ತದೆ. ಆದರೆ ಇತರ ವಿಕಿರಣಗಳಾದ ಕ್ಷ ಕಿರಣಗಳು ಮತ್ತು ಗಾಮಾ ಕಿರಣಗಳನ್ನು ನಾವು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದಕ್ಕಾಗಿ ವಿಶೇಷ ಉಪಕರಣಗಳ ಅವಶ್ಯಕತೆ ಇರುತ್ತದೆ. ವಿಕಿರಣಗಳು ಜೀವಿಗಳು ಮತ್ತು ಉಪಕರಣಗಳಿಗೆ ತೊಂದರೆ ಉಂಟುಮಾಡುತ್ತವಾದರೂ, ಅವುಗಳನ್ನು ಜಾಗರೂಕವಾಗಿ ಬಳಸಿಕೊಳ್ಳುವುದರಿಂದ ಈ ವ್ಯವಸ್ಥೆಗಳ ಕುರಿತು ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ.

ಬಾಹ್ಯಾಕಾಶದಲ್ಲಿರುವ ವಿಕಿರಣಗಳು ಭೂಮಿಯ ಮೇಲಿರುವ ವಿಕಿರಣಗಳಿಗಿಂತ ಭಿನ್ನವಾಗಿವೆ. ಬಾಹ್ಯಾಕಾಶದಲ್ಲಿರುವ ವಿಕಿರಣಗಳು ಅಣುಗಳನ್ನು ಹೊಂದಿದ್ದು, ಅವುಗಳು ಅಂತರತಾರಾ (ಇಂಟರ್‌ಸ್ಟೆಲ್ಲಾರ್) ಅವಕಾಶದಲ್ಲಿ ಬಹುತೇಕ ಬೆಳಕಿನ ವೇಗದಲ್ಲಿ ಚಲಿಸುವುದರಿಂದ ಅವುಗಳಿಂದ ಇಲೆಕ್ಟ್ರಾನ್‌ಗಳು ತೆಗೆಯಲ್ಪಟ್ಟಿರುತ್ತವೆ. ಅಂತಿಮವಾಗಿ, ಅಣುವಿನಲ್ಲಿ ಕೇವಲ ನ್ಯೂಕ್ಲಿಯಸ್ ಮಾತ್ರವೇ ಉಳಿದಿರುತ್ತದೆ.

ಇದನ್ನೂ ಓದಿ: ನಿಸಾರ್ ಮಿಷನ್​ಗೂ ಇದೆ ಡಾ. ಅಕ್ಷತಾ ಕೃಷ್ಣಮೂರ್ತಿ ಕೊಡುಗೆ: ಯೋಜನೆಯ ಮಹತ್ವ, ವಿವರ ಹೀಗಿದೆ..

ಬಾಹ್ಯಾಕಾಶ ವಿಕಿರಣಗಳು ಮೂರು ರೀತಿಯಲ್ಲಿರುತ್ತವೆ:

• ಭೂಮಿಯ ಕಾಂತಕ್ಷೇತ್ರದಲ್ಲಿ ಸೆರೆಯಾಗಿರುವ ಕಣಗಳು

• ಸೌರ ಜ್ವಾಲೆಗಳ (ಅಥವಾ ಸೌರ ಕಣಗಳ ಚಲನೆ) ಸಂದರ್ಭದಲ್ಲಿ ಬಿಡುಗಡೆ ಹೊಂದಿರುವ ಕಣಗಳು

ಮತ್ತು

• ಗ್ಯಾಲಾಕ್ಟಿಕ್ ಕಾಸ್ಮಿಕ್ ಕಿರಣಗಳು (ಪ್ರೋಟಾನ್ಸ್ ರೀತಿಯ ಅತ್ಯಂತ ಶಕ್ತಿಶಾಲಿ ಕಣಗಳು ಮತ್ತು ಸೌರ ಮಂಡಲದಾಚೆಗಿನ ಭಾರವಾದ ಅಯಾನ್‌ಗಳು).

ಮಿಲ್ಲಿ - ಸೀವೆರ್ಟ್ (mSv) ಎನ್ನುವುದು ವಿಕಿರಣಗಳನ್ನು ಅಳೆಯುವ ಘಟಕವಾಗಿದೆ. ಗಗನಯಾತ್ರಿಗಳು 50 ರಿಂದ 2,000 ಎಂಎಸ್‌ವಿ ವ್ಯಾಪ್ತಿಯಲ್ಲಿ ಅಯಾನೈಸಿಂಗ್ ವಿಕಿರಣಗಳಿಗೆ ತೆರೆದುಕೊಳ್ಳುತ್ತಾರೆ. ಇದನ್ನು ಇನ್ನಷ್ಟು ವಿಷದೀಕರಿಸುವುದಾದರೆ, 1 ಎಂಎಸ್‌ವಿ ಪ್ರಮಾಣದ ಅಯನೈಸಿಂಗ್ ವಿಕಿರಣ ಮೂರು ಎದೆಯ ಕ್ಷ ಕಿರಣಗಳನ್ನು ಎದುರಿಸುವುದಕ್ಕೆ ಸಮಾನವಾಗಿರುತ್ತದೆ. ಅಂದರೆ, ಬಾಹ್ಯಾಕಾಶಕ್ಕೆ ತೆರಳಿರುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 150ರಿಂದ 6,000 ಎದೆಯ ಎಕ್ಸ್-ರೇ ತೆಗೆಯುವಷ್ಟರ ಪ್ರಮಾಣದ ವಿಕಿರಣಗಳಿಗೆ ತುತ್ತಾಗಿರುತ್ತಾರೆ.

ಇದನ್ನು ಓದಿ: ‘ಇಂಡಿಯಾ ಫಸ್ಟ್' ನಿಲುವಿನೊಂದಿಗೆ ಮಾಲ್ಡೀವ್ಸ್‌ನಿಂದ ಕಾಲ್ತೆಗೆದ ಭಾರತ!

ವಿಕಿರಣಗಳು ಎರಡು ರೀತಿಯಲ್ಲಿ ಬರುತ್ತವೆ

• ನಾನ್ ಅಯನೈಸಿಂಗ್ ಅಥವಾ ಕಡಿಮೆ ಶಕ್ತಿ ಹೊಂದಿರುವ ವಿಕಿರಣಗಳು

ಮತ್ತು

• ಅಯನೈಸಿಂಗ್ ಅಥವಾ ಹೆಚ್ಚಿನ ಶಕ್ತಿ ಹೊಂದಿರುವ ವಿಕಿರಣಗಳು.

ಇದನ್ನು ಓದಿ: ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಅಯನೈಸಿಂಗ್ ವಿಕಿರಣಗಳು ಸಾಮಾನ್ಯವಾಗಿ ತನ್ನ ಕಕ್ಷೆಯಲ್ಲಿರುವ ಒಂದು ಇಲೆಕ್ಟ್ರಾನ್ ಅನ್ನು ಸಂಪೂರ್ಣವಾಗಿ ತೆಗೆಯುವಷ್ಟು ಶಕ್ತಿಯನ್ನು ಹೊಂದಿದ್ದು, ಆ ಮೂಲಕ ಅಣುವನ್ನು ಧನಾತ್ಮಕ ಚಾರ್ಜ್ ಹೊಂದಿರುವ ಅಣುವನ್ನಾಗಿಸುತ್ತದೆ. ಆದರೆ ನಾನ್ ಅಯನೈಸಿಂಗ್ ವಿಕಿರಣಗಳು ಕಡಿಮೆ ಶಕ್ತಿಯನ್ನು ಹೊಂದಿದ್ದು, ತಾನು ಎದುರಿಸುವ ವಸ್ತುವಿನಿಂದ ಇಲೆಕ್ಟ್ರಾನ್‌ಗಳನ್ನು ತೆಗೆಯುವಷ್ಟು ಸಾಮರ್ಥ್ಯ ಹೊಂದಿಲ್ಲ.

ಅಯನೈಸಿಂಗ್ ವಿಕಿರಣಗಳು ಆಲ್ಫಾ ಕಣಗಳು (ವೇಗವಾಗಿ ಚಲಿಸುವ ಹೀಲಿಯಂ ಆ್ಯಟಂ ನ್ಯೂಕ್ಲಿಯೈ), ಬೀಟಾ ಕಣಗಳು (ವೇಗವಾಗಿ ಚಲಿಸುವ ಇಲೆಕ್ಟ್ರಾನ್‌ಗಳು ಅಥವಾ ಪಾಸಿಟ್ರಾನ್‌ಗಳು), ಗಾಮಾ ಕಿರಣಗಳು, ಕ್ಷ-ಕಿರಣಗಳು, ಮತ್ತು ಔಟರ್ ಸ್ಪೇಸ್‌ನಿಂದ ಬರುವ ಗ್ಯಾಲಾಕ್ಟಿಕ್ ಕಾಸ್ಮಿಕ್ ರೇಡಿಯೇಶನ್ (ಜಿಸಿಆರ್) ಗಳನ್ನು ಒಳಗೊಂಡಿದೆ. ನಾನ್ ಅಯನೈಸಿಂಗ್ ವಿಕಿರಣಗಳು ಅಪಾಯ ತಂದೊಡ್ಡಬಲ್ಲವಾದರೂ, ಅತಿಗೆಂಪು ವಿಕಿರಣವನ್ನು ತಡೆಗಟ್ಟುವ ರೀತಿಯಲ್ಲೇ ಈ ವಿಕಿರಣಗಳನ್ನೂ ಒಂದು ವಾತಾವರಣ ಸುರಕ್ಷಿತವಾಗಿ ತಡೆಯಬಲ್ಲದು.

ಇದನ್ನೂ ಓದಿ: ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

ಇನ್ನೊಂದೆಡೆ, ಅಯನೈಸಿಂಗ್ ವಿಕಿರಣಗಳನ್ನು ತಪ್ಪಿಸಿ ಮುಂದುವರಿಯುವುದು ಸವಾಲಿನ ಕೆಲಸವಾಗಿದೆ. ಅಯನೈಸಿಂಗ್ ವಿಕಿರಣಗಳು ತಾವು ಚಲಿಸುವಾಗ ಎದುರಾಗುವ ವಸ್ತುಗಳನ್ನು ಭೇದಿಸುವ, ಅವುಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಈ ರೀತಿ ಮಾಡುವುದರಿಂದ, ಅವು ಅಯನೈಸೇಷನ್ ಪ್ರಕ್ರಿಯೆ ನಡೆಸುತ್ತವೆ. ಅಂದರೆ, ಈ ವಿಕಿರಣಗಳು ತಾವು ಸಂಪರ್ಕಿಸುವ ವಸ್ತುಗಳ ಅವುಗಳಲ್ಲಿರುವ ಇಲೆಕ್ಟ್ರಾನ್‌ಗಳನ್ನು ಹೊರ ಹಾಕುತ್ತವೆ.

ಅಯನೈಸಿಂಗ್ ಮತ್ತು ನಾನ್ ಅಯನೈಸಿಂಗ್ ಅಪಾಯಗಳು

ಅಯನೈಸಿಂಗ್ ವಿಕಿರಣಗಳು ಡಿಎನ್ಎಗೆ ಹಾನಿ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದು, ಆ ಮೂಲಕ ಕ್ಯಾನ್ಸರ್ ಬರುವ ಅಪಾಯವನ್ನು, ಹೃದಯ ಮತ್ತು ನೇತ್ರ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಬಾಹ್ಯಾಕಾಶದಲ್ಲಿ ವಾತಾವರಣದ ಕೊರತೆ ಇರುವುದರಿಂದ ಮತ್ತು ಕಾಂತಕ್ಷೇತ್ರದ ಅಲಭ್ಯತೆಯ ಕಾರಣದಿಂದ ಗಗನಯಾತ್ರಿಗಳು ಭೂಮಿಗಿಂತ ಬಹಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಯನೈಸಿಂಗ್ ವಿಕಿರಣಗಳಿಗೆ ತುತ್ತಾಗುತ್ತಾರೆ. ಬಾಹ್ಯಾಕಾಶದಲ್ಲಿ ಅಯನೈಸಿಂಗ್ ವಿಕಿರಣಗಳಿಗೆ ಸೋಲಾರ್ ಎನರ್ಜಿಟಿಕ್ ಪಾರ್ಟಿಕಲ್‌ಗಳು (ಎಸ್ಇಪಿಗಳು), ಹಾಗೂ ಗ್ಯಾಲಾಕ್ಟಿಕ್ ಕಾಸ್ಮಿಕ್ ವಿಕಿರಣಗಳು (ಜಿಸಿಆರ್) ಮೂಲಗಳಾಗಿವೆ.

ಇದನ್ನೂ ಓದಿ: Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ನಾಸಾ ಗಗನಯಾತ್ರಿಗಳು ಅನುಭವಿಸಬಹುದಾದ ಅಯನೈಸಿಂಗ್ ವಿಕಿರಣಗಳ ಗರಿಷ್ಠ ಪ್ರಮಾಣವನ್ನು ಈಗಾಗಲೇ ನಿಗದಿಪಡಿಸಿದೆ. ಇದನ್ನು ರಿಸ್ಕ್ ಆಫ್ ಎಕ್ಸ್‌ಪೋಶರ್ ಇಂಡ್ಯೂಸ್ಡ್ ಡೆತ್ (ವಿಕಿರಣಗಳಿಗೆ ತೆರೆದುಕೊಳ್ಳುವುದರಿಂದ ಸಾವು ಸಂಭವಿಸುವ ಅಪಾಯ - ಆರ್‌ಇಐಡಿ) ಎಂಬುದರ ಆಧಾರದಲ್ಲಿ ನಿಗದಿಪಡಿಸಿದೆ. ಪ್ರಸ್ತುತ ನಾಸಾ ಗಗನಯಾತ್ರಿಗಳ ಲಿಂಗ, ವಯಸ್ಸುಗಳ ಭೇದವಿಲ್ಲದೆ, ಎಲ್ಲರಿಗೂ ಸಮಾನ ಯೋಜನಾ ಪಾಲ್ಗೊಳ್ಳುವಿಕೆಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಒಂದೇ ಪ್ರಮಾಣಿತ ಮಿತಿಯನ್ನು ನಿಗದಿಪಡಿಸಿದೆ.

ನಾನ್ ಅಯನೈಸಿಂಗ್ ವಿಕಿರಣಗಳು ಅಣುವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವಂತೆ ಮಾಡುವ ಸಾಮರ್ಥ್ಯ ಹೊಂದಿವೆಯಾದರೂ, ಅವುಗಳನ್ನು ಅಯಾನೀಕರಣಗೊಳಿಸುವುದಿಲ್ಲ. ನಾನ್ ಅಯನೈಸಿಂಗ್ ವಿಕಿರಣಗಳು ಸಹ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಆರೋಗ್ಯಕ್ಕೆ ಅಪಾಯ ತಂದೊಡ್ಡಬಲ್ಲವಾಗಿದ್ದು, ಅವರಲ್ಲಿ ಅತಿಗೆಂಪು ವಿಕಿರಣದಿಂದ ಚರ್ಮದ ಕ್ಯಾನ್ಸರ್, ದೃಷ್ಟಿ ಸಮಸ್ಯೆ, ಮತ್ತು ಬಾಹ್ಯಾಕಾಶ ನೌಕೆಯಲ್ಲಿರುವ ಲೇಸರ್‌ಗಳು ಮತ್ತು ರೇಡಿಯೋ ಫ್ರೀಕ್ವೆನ್ಸಿ ಉಪಕರಣಗಳಿಂದ ಅಪಾಯಗಳನ್ನು ಉಂಟುಮಾಡಬಲ್ಲವು. ಗಗನಯಾತ್ರಿಗಳು ನಾನ್ ಅಯನೈಸಿಂಗ್ ವಿಕಿರಣಗಳಿಂದ ಕನ್ನಡಕ, ಹೆಲ್ಮೆಟ್ ವೈಸರ್ ಫಿಲ್ಟರ್‌ಗಳ ಮೂಲಕ, ಮತ್ತು ರೇಡಿಯೋ ಆವರ್ತನಗಳಿಂದ ಹೊರತಾದ ಪ್ರದೇಶಗಳಲ್ಲಿ ಇರುವ ಮೂಲಕ ರಕ್ಷಣೆ ಪಡೆಯುತ್ತಾರೆ.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

Follow Us:
Download App:
  • android
  • ios