Asianet Suvarna News Asianet Suvarna News

ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಬೋಯಿಂಗ್ ಪ್ರಸ್ತುತ ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾದ ಗಗನಯಾನಕ್ಕೆ ಅವಶ್ಯಕವಾದ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್‌ ನಿರ್ಮಿಸುವ ಕುರಿತು ಯೋಚಿಸುತ್ತಿದೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಒಪ್ಪಂದಗಳು ಏರ್ಪಟ್ಟಿಲ್ಲ ಎನ್ನಲಾಗಿದೆ.

boeing isro collaboration in aerospace project construction of space capsule simulator ash
Author
First Published Dec 5, 2023, 5:14 PM IST

(ಗಿರೀಶ್ ಲಿಂಗಣ್ಣ- ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾದ ಎಸ್ ಸೋಮನಾಥ್ ಅವರು ಇತ್ತೀಚೆಗೆ ಏರೋಸ್ಪೇಸ್ ಉಪಕರಣಗಳು, ಸಿಸ್ಟಮ್‌ಗಳ ನಿರ್ಮಾಣದಲ್ಲಿ ತೊಡಗಿರುವ ಸಂಸ್ಥೆಗಳ ಕುರಿತು ಮಾತನಾಡಿದ್ದರು. ಬೋಯಿಂಗ್ ಸೇರಿದಂತೆ ಇತರ ಸಂಸ್ಥೆಗಳು ಮುಂದಿನ ತಲೆಮಾರುಗಳಿಗೆ ನೆರವಾಗಬಲ್ಲ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿವೆ.

ಬೋಯಿಂಗ್ ಪ್ರಸ್ತುತ ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾದ ಗಗನಯಾನಕ್ಕೆ ಅವಶ್ಯಕವಾದ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್‌ ನಿರ್ಮಿಸುವ ಕುರಿತು ಯೋಚಿಸುತ್ತಿದೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಒಪ್ಪಂದಗಳು ಏರ್ಪಟ್ಟಿಲ್ಲ ಎನ್ನಲಾಗಿದೆ.

ಇದನ್ನು ಓದಿ: ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

ಇನ್ನು ಮುಂದಿನ ಕೆಲ ಸಮಯದಲ್ಲಿ, ಭಾರತ ಹಲವು ಮಾನವರಹಿತ ಬಾಹ್ಯಾಕಾಶ ಯೋಜನೆಗಳನ್ನು ನಡೆಸಿ, ಅದರ ಬಳಿಕ ಭಾರತೀಯ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಮಹತ್ವಾಕಾಂಕ್ಷಿ ಗಗನಯಾನ ಯೋಜನೆ ತನ್ನ ಮೊದಲ ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ನಾಲ್ವರು ಗಗನಯಾತ್ರಿಗಳ ತಂಡವನ್ನು ಮೂರು ದಿನಗಳ ಅವಧಿಗೆ 2025ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದೆ. ಈ ಯೋಜನೆಯ ಅಂತಿಮ ಗುರಿಯೆಂದರೆ ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವುದಾಗಿದೆ. ಇದಕ್ಕಾಗಿ ತರಬೇತಿ ನಡೆಸಲು ಒಂದು ಸ್ಪೇಸ್ ಕ್ಯಾಪ್ಸುಲ್ ಸಿಮ್ಯುಲೇಟರ್ ಅವಶ್ಯಕತೆಯಿದೆ.

ಗುಜರಾತಿನ ಪಂಡಿತ್ ದೀನ್‌ದಯಾಳ್ ಎನರ್ಜಿ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷರಾದ ಸೋಮನಾಥ್, ಗಗನಯಾನ ಯೋಜನೆಗಾಗಿ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ ಎಂದಿದ್ದರು. ಈ ಗಗನಯಾತ್ರಿಗಳು ಈಗಾಗಲೇ ತಮ್ಮ ತರಬೇತಿ ಪೂರ್ಣಗೊಳಿಸಿದ್ದು, ಬಾಹ್ಯಾಕಾಶಕ್ಕೆ ಹೋಗಲು ತಮ್ಮ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಸೋಮನಾಥ್ ಅವರ ಪ್ರಕಾರ, ಈ ಯೋಜನೆ ಭಾರತದ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹಲವಾರು ಗುರಿಗಳನ್ನು ಸಾಧಿಸಲು ಬಹಳಷ್ಟು ಮಹತ್ವ ಹೊಂದಿದೆ.

ಇದನ್ನೂ ಓದಿ: Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ಗಗನಯಾನ ಯೋಜನೆಯನ್ನು ಸಾಧ್ಯವಾಗಿಸಲು ಹಲವಾರು ತಾಂತ್ರಿಕ ಅಭಿವೃದ್ಧಿಗಳನ್ನು ನಡೆಸಬೇಕಾಯಿತು ಎಂದು ಸೋಮನಾಥ್ ಹೇಳಿದ್ದಾರೆ. ಈ ಗುರಿಯನ್ನು ಸಾಧಿಸಲು ಇಸ್ರೋದ ತಂಡ ದಣಿವರಿಯದೆ ಕಾರ್ಯ ನಿರ್ವಹಿಸಿದೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ, ಗಗನಯಾನ ಯೋಜನೆಯ ಸಲುವಾಗಿ ಹಲವು ನೂತನ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದ್ದು, ಅವುಗಳನ್ನು ಸರಿದೂಗಿಸಿ, ಜಾರಿಗೆ ತರಲಾಗಿದೆ.

ಸೋಮನಾಥ್ ಅವರ ಪ್ರಕಾರ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಈಗಾಗಲೇ ಮುಂಚೂಣಿ ರಾಷ್ಟ್ರವಾಗಿ ರೂಪುಗೊಂಡಿದೆ. ಸಾಧಾರಣ ಹೂಡಿಕೆಗಳ ಹೊರತಾಗಿಯೂ, ಭಾರತ ತನ್ನದೇ ಆದ ಬಾಹ್ಯಾಕಾಶ ನೌಕೆಗಳು ಮತ್ತು ಲಾಂಚರ್‌ಗಳನ್ನು ನಿರ್ಮಿಸಲು ಶಕ್ತವಾಗಿದ್ದು, ತನ್ನ ಹಣಕಾಸಿನ‌ ಇತಿಮಿತಿಗಳಲ್ಲೇ ಯೋಜನೆಗಳನ್ನು ರೂಪುಗೊಳಿಸಿದೆ.

ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

ಭಾರತದ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಯನ್ನು ಸೋಮನಾಥ್ ಬಣ್ಣಿಸಿದ್ದು, ಈಗ ಉಪಗ್ರಹ ನಿರ್ಮಾಣ ಮತ್ತು ಉಡಾವಣೆಯಲ್ಲಿ ಹಲವು ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಎಂದಿದ್ದಾರೆ. ಅವರು ಏರೋಸ್ಪೇಸ್ ಉಪಕರಣಗಳು ಮತ್ತು ಸಿಸ್ಟಮ್‌ಗಳ ನಿರ್ಮಾಣದಲ್ಲಿ ವಿವಿಧ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಎಂದಿದ್ದು, ಬೋಯಿಂಗ್ ಸೇರಿದಂತೆ ಈ ಕಂಪನಿಗಳು ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಒದಗಿಸಲು ನೆರವಾಗಲಿವೆ ಎಂದಿದ್ದಾರೆ.

ಆದರೆ ಗಗನಯಾನ ಯೋಜನೆಯಲ್ಲಿ ಸ್ಪೇಸ್ ಕ್ಯಾಪ್ಸುಲ್ ಸಿಮ್ಯುಲೇಟರ್‌ ಮಹತ್ವವೇನು?

ಇದೊಂದು ಅತ್ಯಾಧುನಿಕ ತರಬೇತಿ ವ್ಯವಸ್ಥೆಯಾಗಿದ್ದು, ಒಂದು ನೈಜ ಬಾಹ್ಯಾಕಾಶ ನೌಕೆಯ ಸನ್ನಿವೇಶಗಳನ್ನು ಅನುಕರಿಸುತ್ತದೆ. ಇದು ಗಗನಯಾತ್ರಿಗಳಿಗೆ ಅತ್ಯಂತ ನೈಜವಾದ ಸನ್ನಿವೇಶಗಳನ್ನು ನಿರ್ಮಿಸಿ, ಅವರಿಗೆ ನಿರ್ಣಾಯಕ ಪ್ರಕ್ರಿಯೆಗಳನ್ನು ಎದುರಿಸಿ, ಅಭ್ಯಾಸ ನಡೆಸಲು ಅನುಕೂಲ ಕಲ್ಪಿಸುತ್ತದೆ.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

ಈ ಸಿಮ್ಯುಲೇಟರ್‌ ಆಧುನಿಕ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ ಒಳಗೊಂಡಿದ್ದು, ಬಾಹ್ಯಾಕಾಶ ಯಾತ್ರೆಯ ಸಂದರ್ಭದಲ್ಲಿ ಎದುರಾಗುವ, ಉಡಾವಣೆ, ಭೂಮಿಗೆ ಮರು ಪ್ರವೇಶ ಸೇರಿದಂತೆ ವಿವಿಧ ರೀತಿಯ ಕಷ್ಟಕರ ಸವಾಲುಗಳನ್ನು ಅನುಕರಿಸುತ್ತದೆ. ಗಗನಯಾತ್ರಿಗಳು ಈ ಸಿಮ್ಯುಲೇಟರ್‌‌ಗಳನ್ನು ಬಳಸಿಕೊಂಡು ತಮ್ಮ ಕೌಶಲಗಳನ್ನು ಸುಧಾರಿಸುತ್ತಾರೆ ಮತ್ತು ಬಾಹ್ಯಾಕಾಶ ನೌಕೆಯ ನಿಯಂತ್ರಣವನ್ನು ಅಭ್ಯಾಸ ಮಾಡುತ್ತಾರೆ. ಇದು ಗಗನಯಾತ್ರಿಗಳು ಗಗನಯಾನ ಯೋಜನೆಯ ಸಂದರ್ಭದಲ್ಲಿ ಎದುರಿಸಬಹುದಾದ ಸಂಕೀರ್ಣತೆಗಳು ಮತ್ತು ಅನಿಶ್ಚಿತತೆಗಳಿಗೆ ಸಿದ್ಧಗೊಳ್ಳಲು ನೆರವಾಗುತ್ತದೆ.

ಒಂದು ಸಂಕೀರ್ಣ ಮತ್ತು ವೈವಿಧ್ಯಮಯ ಉಪಕರಣ

ಒಂದು ಸ್ಪೇಸ್ ಕ್ಯಾಪ್ಸುಲ್ ಸಿಮ್ಯುಲೇಟರ್‌ ನಿರ್ಮಾಣದಲ್ಲಿನ ಸಂಕೀರ್ಣತೆಗಳು ಬಳಕೆದಾರರಿಗೆ ಅವಶ್ಯಕವಾದ ವಾಸ್ತವತೆಯ ಮಟ್ಟ, ಕಾರ್ಯಶೀಲತೆಗಳ ಮೇಲೆ ಆಧರಿಸಿರುತ್ತವೆ. ಸ್ಪೇಸ್ ಕ್ಯಾಪ್ಸುಲ್ ಸಿಮ್ಯುಲೇಟರ್‌ ಉತ್ಪಾದನೆಯಲ್ಲಿರುವ ಸಂಕೀರ್ಣತೆಗೆ ಕಾರಣವಾಗುವ ಕೆಲವು ಅಂಶಗಳು:

ಇದನ್ನೂ ಓದಿ: ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

ಸಿಮ್ಯುಲೇಟರ್‌ ಗಾತ್ರ ಮತ್ತು ಆಕಾರ: ಸಿಮ್ಯುಲೇಟರ್‌ ಒಂದು ವಾಸ್ತವ ಸ್ಪೇಸ್ ಕ್ಯಾಪ್ಸುಲ್‌ನ ನೈಜ ಗಾತ್ರದಲ್ಲೇ ಇರಬಹುದು ಅಥವಾ ಪ್ರಯೋಗಾಲಯ ಅಥವಾ ತರಗತಿಯ ಸಣ್ಣ ಗಾತ್ರದ ರಚನೆಯೂ ಆಗಿರಬಹುದು. ಸಿಮ್ಯುಲೇಟರ್‌ ಗಾತ್ರ ಮತ್ತು ಆಕಾರ ಅದರ ನಿರ್ಮಾಣ ವಸ್ತುಗಳು, ತಯಾರಿಕೆ, ಸಾಗಾಣಿಕಾ ವೆಚ್ಚ, ಸ್ಥಳ ಮತ್ತು ನಿರ್ಮಾಣಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ.

ಸಿಮ್ಯುಲೇಟರ್‌ನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್: ಬಾಹ್ಯಾಕಾಶ ಕ್ಯಾಪ್ಸೂಲ್‌ನ ಭೌತಶಾಸ್ತ್ರ, ಆಯಾಮಗಳು, ನಿಯಂತ್ರಣ ಮತ್ತು ವ್ಯವಸ್ಥೆಗಳನ್ನು ನಿರ್ವಹಿಸಲು ವಿವಿಧ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಉಪಕರಣಗಳನ್ನು ಬಳಸುತ್ತವೆ. ಸಿಮ್ಯುಲೇಟರ್‌‌ನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳು ಸಿಮ್ಯುಲೇಶನ್ ಪ್ರಕ್ರಿಯೆಯ ನಿಖರತೆ, ನಂಬಿಕಾರ್ಹತೆ ಮತ್ತು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತವೆ. ಅದರೊಡನೆ, ಸಿಮ್ಯುಲೇಟರ್‌ ಇತರ ಉಪಕರಣಗಳು ಮತ್ತು ಮಾಹಿತಿ ಮೂಲಗಳೊಡನೆ ಹೊಂದಿಕೊಳ್ಳಲೂ ಅನುಕೂಲ ಕಲ್ಪಿಸುತ್ತವೆ.

ಇದನ್ನು ಓದಿ: ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

ಪರಸ್ಪರ ಸಂವಹನ ಮತ್ತು ಪ್ರತಿಕ್ರಿಯೆಯ ಪ್ರಮಾಣ: ಸಿಮ್ಯುಲೇಟರ್‌ ಬಳಕೆದಾರರಿಗೆ ದೃಶ್ಯ, ಶ್ರವ್ಯ, ಸ್ಪರ್ಶ, ಮತ್ತು ಚಲನೆಯ ಅನುಭವಗಳನ್ನು ಒದಗಿಸಬಲ್ಲದು. ಅವುಗಳ ಪ್ರಮಾಣ ಮತ್ತು ಪ್ರತಿಕ್ರಿಯೆ ಬಳಕೆದಾರರ ಅನುಭವ, ಕಲಿಯುವಿಕೆ ಹಾಗೂ ಸಿಮ್ಯುಲೇಶನ್‌ ಸುರಕ್ಷತೆಯ ಮೇಲೆ ಮತ್ತು ಸಿಮ್ಯುಲೇಟರ್‌ ಉಪಕರಣಗಳ ಸಂಕೀರ್ಣತೆ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಲ್ಲದು.

ಸ್ಪೇಸ್ ಕ್ಯಾಪ್ಸುಲ್ ಸಿಮ್ಯುಲೇಟರ್‌‌ಗಳಿಗೆ ಕೆಲವು ಉದಾಹರಣೆಗಳು:

• ಯುನಿವರ್ಸಿಟಿ ಆಫ್ ನಾರ್ತ್ ಡಕೋಟಾದಲ್ಲಿರುವ ಅಪೋಲೋ ಕ್ಯಾಪ್ಸುಲ್ ಪ್ರೋಟೋಟೈಪ್ ಮೂಲ ಅಪೋಲೋ ಕಮಾಂಡ್ ಮಾಡ್ಯುಲ್‌ನ ಪರಿಪೂರ್ಣ ಪ್ರತಿಕೃತಿಯಾಗಿದೆ. ಇದು ಏಕಕಾಲದಲ್ಲಿ ಮೂವರಿಗೆ ಸ್ಥಾನ ಕಲ್ಪಿಸಬಲ್ಲದಾಗಿದ್ದು, ಆರ್ಬಿಟರ್ ಸ್ಪೇಸ್ ಸಿಮ್ಯುಲೇಟರ್‌ ಆ್ಯಂಡ್ ಸ್ಯಾಟಲೈಟ್ ಟೂಲ್‌ಕಿಟ್ ಎಸ್‌ಟಿಕೆ ಸಾಫ್ಟ್‌ವೇರ್ ಮೂಲಕ ಉಡಾವಣೆ, ಕಕ್ಷೀಯ ಚಟುವಟಿಕೆಗಳು, ವಿವಿಧ ಬಾಹ್ಯಾಕಾಶ ವಾಹನಗಳ ಲ್ಯಾಂಡಿಂಗ್ ಸಿಮ್ಯುಲೇಶನ್ ನಡೆಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

• ಯುನಿವರ್ಸಿಟಿ ಆಫ್ ನಾರ್ತ್ ಡಕೋಟಾದಲ್ಲಿರುವ ಸ್ಪೇಸ್ ಶಿಪ್ ವನ್ ಪ್ರೋಟೋಟೈಪ್ ಖಾಸಗಿಯಾಗಿ ನಿರ್ಮಿಸಿರುವ ಮೊದಲ ಬಾಹ್ಯಾಕಾಶ ನೌಕೆಯ ಸಣ್ಣ ಗಾತ್ರದ ಸಿಮ್ಯುಲೇಟರ್‌ ಆಗಿದ್ದು, ಏಕ ಕಾಲಕ್ಕೆ ಒಬ್ಬ ವ್ಯಕ್ತಿಗೆ ಸಿಮ್ಯುಲೇಶನ್ ನಡೆಸಲು ಅನುಕೂಲಕರವಾಗಿದೆ. ಇದು ಎಕ್ಸ್ ಪ್ಲೇನ್ ಫ್ಲೈಟ್ ಸಿಮ್ಯುಲೇಟರ್‌ ಸಾಫ್ಟ್‌ವೇರ್ ಮೂಲಕ ಉಡಾವಣೆ, ಕಕ್ಷೀಯ ಚಟುವಟಿಕೆಗಳು, ಲ್ಯಾಂಡಿಂಗ್, ಎತ್ತರದಿಂದ ಡ್ರಾಪ್ ಆಫ್ ಸೇರಿದಂತೆ ವಿವಿಧ ಅನುಭವಗಳನ್ನು ಒದಗಿಸುತ್ತದೆ.

• ಎಂಐಟಿ ಮೀಡಿಯಾ ಲ್ಯಾಬ್‌ನಲ್ಲಿರುವ ಟೆಸ್ಸೆರಾ ಪ್ರಾಜೆಕ್ಟ್ ಒಂದು ಸ್ವಯಂ ಜೋಡಣಾ ಬಾಹ್ಯಾಕಾಶ ನಿರ್ಮಾಣಕ್ಕೊಂದು ಉದಾಹರಣೆಯಾಗಿದ್ದು, ಇದು ಸ್ಪೇಸ್ ಕ್ಯಾಪ್ಸುಲ್, ಸ್ಪೇಸ್ ಸ್ಟೇಷನ್, ಅಥವಾ ಬಾಹ್ಯಾಕಾಶ ನೆಲೆಯಾಗಿ ರೂಪಾಂತರ ಹೊಂದಬಲ್ಲದು. ಅದಕ್ಕಾಗಿ ಸೂಕ್ತ ಸಂವಹನ ಮತ್ತು ಸಹಕಾರ ನೀಡುವ ಮಾಡ್ಯುಲರ್ ರೋಬಾಟಿಕ್ ಯುನಿಟ್‌ಗಳನ್ನು ಇದು ಬಳಸಿಕೊಳ್ಳುತ್ತದೆ.
 

ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

Follow Us:
Download App:
  • android
  • ios