ನಿಸಾರ್ ಮಿಷನ್​ಗೂ ಇದೆ ಡಾ. ಅಕ್ಷತಾ ಕೃಷ್ಣಮೂರ್ತಿ ಕೊಡುಗೆ: ಯೋಜನೆಯ ಮಹತ್ವ, ವಿವರ ಹೀಗಿದೆ..

ಎಂಐಟಿಯಿಂದ ಸ್ಪೇಸ್ ಸಿಸ್ಟಮ್ಸ್ ಎಂಜಿನಿಯರಿಂಗ್​​ನಲ್ಲಿ ಪಿಎಚ್​ಡಿ ಪಡೆದಿರುವ ಡಾ. ಕೃಷ್ಣಮೂರ್ತಿ ಬಾಹ್ಯಾಕಾಶ ದೂರದರ್ಶಕ ಕಾರ್ಯಾಚರಣೆಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಪ್ರಸ್ತುತ, ಅವರು ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

nisar mission also has dr akshata krishnamurthy contribution significance of the project details are here ash

(ಗಿರೀಶ್ ಲಿಂಗಣ್ಣ - ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮಂಗಳ ಗ್ರಹದಲ್ಲಿ ರೋವರ್ ನಿರ್ವಹಿಸಿದ ಮೊದಲ ಭಾರತೀಯರಾದ ಡಾ. ಅಕ್ಷತಾ ಕೃಷ್ಣಮೂರ್ತಿ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ಯಲ್ಲಿ ಪ್ರತಿಷ್ಠಿತ ವಿಜ್ಞಾನಿ ಮತ್ತು ಸಿಸ್ಟಮ್ಸ್ ಎಂಜಿನಿಯರ್ ಆಗಿದ್ದಾರೆ. 13ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ ಅವರು ನಾಸಾದಲ್ಲಿ ಕೆಲಸ ಮಾಡುವ ಕನಸಿನೊಂದಿಗೆ ಆರಂಭಿಕ ಹೆಜ್ಜೆಗಳನ್ನಿಟ್ಟಿದ್ದರು. 

ಎಂಐಟಿಯಿಂದ ಸ್ಪೇಸ್ ಸಿಸ್ಟಮ್ಸ್ ಎಂಜಿನಿಯರಿಂಗ್​​ನಲ್ಲಿ ಪಿಎಚ್​ಡಿ ಪಡೆದಿರುವ ಡಾ. ಕೃಷ್ಣಮೂರ್ತಿ ಬಾಹ್ಯಾಕಾಶ ದೂರದರ್ಶಕ ಕಾರ್ಯಾಚರಣೆಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಪ್ರಸ್ತುತ, ಅವರು ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಯೋಜನೆಯ ಪರಿಶೀಲನೆ, ದೃಢೀಕರಣ ಮತ್ತು ಸಾಕ್ಷ್ಯ ನಿರ್ವಹಣೆ ಪ್ರಕ್ರಿಯೆಯನ್ನು ಮುನ್ನಡೆಸುತ್ತಿದ್ದಾರೆ. ನಿಸಾರ್ ಯೋಜನೆಯ ವಿಶೇಷ, ಮಹತ್ವ ಹಾಗೂ ಪ್ರಯೋಜನಗಳ ಕುರಿತಾದ ಮಾಹಿತಿ ಇಲ್ಲಿದೆ.

ಇದನ್ನು ಓದಿ: ‘ಇಂಡಿಯಾ ಫಸ್ಟ್' ನಿಲುವಿನೊಂದಿಗೆ ಮಾಲ್ಡೀವ್ಸ್‌ನಿಂದ ಕಾಲ್ತೆಗೆದ ಭಾರತ!

ನಿಸಾರ್ ಮಿಷನ್ ಯಾಕೆ ಮಹತ್ವದ್ದು?

ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಮಿಷನ್ ಜಂಟಿ ಯೋಜನೆಯಾಗಿದೆ. ಡ್ಯುಯಲ್ - ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರೇಡಾರ್ ತಂತ್ರಜ್ಞಾನ ಹೊಂದಿರುವ ಭೂ ವೀಕ್ಷಣಾ ಉಪಗ್ರಹ ಅಭಿವೃದ್ಧಿಪಡಿಸಲು ಮತ್ತು ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ. ಈ ಅದ್ಭುತ ಉಪಗ್ರಹವು ರಿಮೋಟ್ ಸೆನ್ಸಿಂಗ್ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಭೂಮಿಯ ಮೇಲಿನ ಸಂಕೀರ್ಣ ನೈಸರ್ಗಿಕ ಪ್ರಕ್ರಿಯೆಗಳ ಒಳನೋಟಗಳನ್ನು ಒದಗಿಸಲಿದೆ.

ಡಾ. ಅಕ್ಷತಾ ಕೃಷ್ಣಮೂರ್ತಿ ನಿಸಾರ್ ಪ್ರಾಜೆಕ್ಟ್ ತಂಡದ ನಿರ್ಣಾಯಕ ಸದಸ್ಯರಾಗಿದ್ದಾರೆ. ನಿಸಾರ್ ಯೋಜನೆಯು ಭೂಮಿ ಮತ್ತು ಮಂಜುಗಡ್ಡೆಗಳ ಮ್ಯಾಪಿಂಗ್, ಪರಿಸರ ವ್ಯವಸ್ಥೆಯ ಅಡಚಣೆಗಳನ್ನು ಪತ್ತೆಹಚ್ಚುವುದು, ಮಂಜುಗಡ್ಡೆ ಕುಸಿತಗಳನ್ನು ಮೇಲ್ವಿಚಾರಣೆ ಮಾಡುವುದು, ಭೂಕಂಪಗಳು ಮತ್ತು ಸುನಾಮಿಯಂತಹ ನೈಸರ್ಗಿಕ ಅಪಾಯಗಳ ಅಧ್ಯಯನದ ಮೇಲೆ ಕೇಂದ್ರೀಕರಿಸುತ್ತದೆ. ಈ ಯೋಜನೆಯಡಿ 2024ರಲ್ಲಿ ಉಪಗ್ರಹ ಉಡಾವಣೆ ನಿರೀಕ್ಷಿಸಲಾಗಿದೆ. ಹವಾಮಾನ ಬದಲಾವಣೆ, ಸಂಪನ್ಮೂಲ ನಿರ್ವಹಣೆ ಮತ್ತು ಅಪಾಯ ತಗ್ಗಿಸುವಿಕೆಯ ಬಗ್ಗೆ ತಿಳುವಳಿಕೆ ಹೆಚ್ಚಿಸಲು ಈ ಯೋಜನೆಯಡಿ ಉಡಾವಣೆ ಮಾಡಲಾಗುವ ಉಪಗ್ರಹ ಅಮೂಲ್ಯವಾದ ದತ್ತಾಂಶ ಒದಗಿಸಿಕೊಡಲಿದೆ.

ಇದನ್ನು ಓದಿ: ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಯುವ ಉತ್ಸಾಹಿಗಳಿಗೆ ಸ್ಫೂರ್ತಿ ಅಕ್ಷತಾ ಕೃಷ್ಣಮೂರ್ತಿ

ಡಾ. ಅಕ್ಷತಾ ಕೃಷ್ಣಮೂರ್ತಿ ಮಂಗಳಯಾನ ರೋವರ್ ನಿರ್ವಹಿಸಿದ ಮೊದಲ ಭಾರತೀಯರಾಗಿ ಮತ್ತು ನಿಸಾರ್​​ ಮಿಷನ್‌ಗೆ ಅವರು ನೀಡಿದ ಗಮನಾರ್ಹ ಕೊಡುಗೆಗಳಿಂದಾಗಿ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಉತ್ಸಾಹಿಗಳಿಗೆ, ವಿಶೇಷವಾಗಿ ಸ್ತ್ರೀಯರಿಗೆ ಸ್ಫೂರ್ತಿಯಾಗಿದ್ದಾರೆ. ನಿಸಾರ್​​​ ಪ್ರಾಜೆಕ್ಟ್ ಪರಿಶೀಲನೆ ಮತ್ತು ಸಾಕಾರಗೊಳಿಸುವಿಕೆ, ಸಾಕ್ಷ್ಯ ನಿರ್ವಹಣೆಯಲ್ಲಿನ ಪರಿಶ್ರಮದ ಮೂಲಕ ಬ್ರಹ್ಮಾಂಡದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಪ್ರಯತ್ನ ಮುಂದುವರಿಸುತ್ತಿದ್ದಾರೆ. ದೃಢ ಸಂಕಲ್ಪ ಮತ್ತು ಸಮರ್ಪಣಾ ಭಾವದೊಂದಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ಸಾಧಿಸಬಹುದು ಎಂಬುದಕ್ಕೆ ಅಕ್ಷತಾ ಕೃಷ್ಣಮೂರ್ತಿ ಅವರ ಈ ಸಾಧನಾ ಪಯಣವೇ ಸಾಕ್ಷಿಯಾಗಿದೆ.

ಇದನ್ನೂ ಓದಿ: ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

Latest Videos
Follow Us:
Download App:
  • android
  • ios