‘ಇಂಡಿಯಾ ಫಸ್ಟ್' ನಿಲುವಿನೊಂದಿಗೆ ಮಾಲ್ಡೀವ್ಸ್‌ನಿಂದ ಕಾಲ್ತೆಗೆದ ಭಾರತ!

ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರವಾಗಿದೆ ಮತ್ತು ಪ್ರಧಾನಮಂತ್ರಿಯವರ 'SAGAR' (Security and Growth for All in the Region) ಮತ್ತು ಭಾರತದ 'ನೆರೆಹೊರೆಯ ಮೊದಲ ನೀತಿ'ಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

india has left the maldives with an india first stance ash

ಗಿರೀಶ್ ಲಿಂಗಣ್ಣ - (ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮಾಲ್ಡೀವ್ಸ್‌ನಿಂದ ಭಾರತವು ಅಂತಿಮವಾಗಿ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದೆ ಎಂದು ಮಾಲ್ಡೀವ್ಸ್‌ ದ್ವೀಪಸಮೂಹದ ಅಧ್ಯಕ್ಷರು ಹೇಳಿದ್ದಾರೆ. ಈ ಮೂಲಕ ಅವರು ಇತ್ತೀಚಿನ ಅಧ್ಯಕ್ಷೀಯ ಚುನಾವಣೆಯ ಮೊದಲು ದೇಶದ ಮತದಾರರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಮುಂದುವರಿದ ಸಹಕಾರಕ್ಕಾಗಿ ಚರ್ಚಿಸಲು ಉಭಯ ಕಡೆಯವರು ಒಪ್ಪಿಕೊಂಡಿದ್ದಾರೆ ಮತ್ತು ಭಾರತವು ಮಾಲ್ಡೀವಿಯನ್ ಜನರ ಪ್ರಜಾಸತ್ತಾತ್ಮಕ ಆದೇಶವನ್ನು ಗೌರವಿಸುತ್ತದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿದೆ.

ಕಳೆದ ತಿಂಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ಆಯಕಟ್ಟಿನ ನೆಲೆಗೊಂಡಿರುವ ದ್ವೀಪ ರಾಷ್ಟ್ರದ ಎಂಟನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ, ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಯ ಮೊಹಮದ್ ಮುಯಿಝು, ಭಾರತ ಸರ್ಕಾರವು ತನ್ನ ಮಿಲಿಟರಿ ಪಡೆಗಳನ್ನು ದೇಶದಿಂದ ಹಿಂದೆಗೆದುಕೊಳ್ಳುವಂತೆ ಔಪಚಾರಿಕ ವಿನಂತಿ ಮುಂದಿಟ್ಟಿದ್ದರು. ನವೆಂಬರ್ 17 ರಂದು ನಡೆದ ಮುಯಿಝು ಪ್ರಮಾಣವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ನೂತನ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿಯವರ ಶುಭಾಶಯಗಳನ್ನು ತಿಳಿಸಿದರು ಮತ್ತು ದ್ವಿಪಕ್ಷೀಯ ಸಹಕಾರ ಹಾಗೂ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಇದನ್ನು ಓದಿ: ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

‘ಮಾಲ್ಡೀವ್ಸ್‌ ಅಧ್ಯಕ್ಷ ಎಚ್ ಡಾ. ಮೊಹಮ್ಮದ್ ಮುಯಿಝು ಅವರನ್ನು ಭೇಟಿ ಮಾಡಲು ಹೆಮ್ಮೆಯೆನಿಸುತ್ತಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರಮೋದಿ ಅವರಿಂದ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ. ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಹಾಗೂ ಜನರ ನಡುವಿನ ಸಂಬಂಧವನ್ನು ದೃಢಗೊಳಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಲಾಯಿತು ಎಂದು ಸಭೆಯ ನಂತರ ರಿಜಿಜು ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಪೋಸ್ಟ್ ಮಾಡಿದ್ದಾರೆ. ನವೆಂಬರ್ 18 ರಂದು ಮಾಲೆಯಲ್ಲಿ ಭೇಟಿಯಾದ ರಿಜಿಜು ಮೂಲಕ ಮುಯಿಝು ಅವರು ಸೈನ್ಯವನ್ನು ಹಿಂತೆಗೆದುಕೊಳ್ಳಬೇಕೆಂಬ  ವಿನಂತಿಯನ್ನು ಭಾರತಕ್ಕೆ  ರವಾನಿಸಿದ್ದರು. ಬಳಿಕ ಅಧ್ಯಕ್ಷರ ಕಚೇರಿಯ ಅಧಿಕೃತ ಹೇಳಿಕೆಯು ಈ ವಿನಂತಿಯನ್ನು ಸಾರ್ವಜನಿಕವಾಗಿ ದೃಢೀಕರಿಸಿದೆ.

ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ, ಮಾಲ್ಡೀವ್ಸ್ ಜನರು ಭಾರತಕ್ಕೆ ಈ ವಿನಂತಿಯನ್ನು ಮಾಡಲು ಬಲವಾದ ಜನಾದೇಶ ನೀಡಿದ್ದಾರೆ ಎಂದು ಅಧ್ಯಕ್ಷರು ಹೇಳಿದರು ಮತ್ತು ಭಾರತವು ಮಾಲ್ಡೀವ್ಸ್ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಗೌರವಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದೂ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. 

ಇದನ್ನೂ ಓದಿ: ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

ಸಚಿವ ರಿಜಿಜು ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ರನ್ನು ಭೇಟಿ ಮಾಡಿದಾಗ, ವೈದ್ಯಕೀಯ ಸ್ಥಳಾಂತರಿಸುವಿಕೆ ಮತ್ತು ಮಾದಕವಸ್ತು ಕಳ್ಳಸಾಗಣೆ ಉದ್ದೇಶಗಳಿಗಾಗಿ ವಿಮಾನವನ್ನು ನಿರ್ವಹಿಸಲು ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯ ವಿಷಯವನ್ನು ಮುಯಿಝು ಪ್ರಸ್ತಾಪಿಸಿದರು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಿನ್ನೆಲೆ:

ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿನಲ್ಲಿದ್ದ ಚೀನಾ - ಪರ ಪೂರ್ವಾಧಿಕಾರಿಯ ಪ್ರಾಕ್ಸಿಯಾಗಿ ಅಧ್ಯಕ್ಷ ಮುಯಿಝು ಅವರನ್ನು ಸೆಪ್ಟೆಂಬರ್ 30, 2023 ರಂದು ಆಯ್ಕೆ ಮಾಡಲಾಯಿತು. ಭಾರತೀಯ ಸೇನಾ ಸಿಬ್ಬಂದಿಯನ್ನು ದ್ವೀಪ ರಾಷ್ಟ್ರದಿಂದ ಹೊರಹಾಕುವ ಪ್ರತಿಜ್ಞೆಯ ಮೇಲೆ ಪ್ರಚಾರ ಮಾಡಿದ್ದರು, ಆದರೆ ರಾಜತಾಂತ್ರಿಕ ವಿಧಾನಗಳ ಮೂಲಕ ಇದನ್ನು ಸಾಧಿಸುವುದಾಗಿ ಪ್ರತಿಪಾದಿಸಿದ್ದರು.

ಇದನ್ನೂ ಓದಿ: Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ಭಾರತವು ಮಾಲ್ಡೀವ್ಸ್‌ನಲ್ಲಿ ಪ್ರಮುಖವಾದ ಕಡಲ ಹಿತಾಸಕ್ತಿ ಹೊಂದಿದೆ, ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಮಹತ್ವದ ನೆರೆ ದೇಶವಾಗಿರುವ ಮಾಲ್ಡೀವ್ಸ್‌, ದ್ವಿಪಕ್ಷೀಯ ಸಂಬಂಧಗಳು, ವಿಶೇಷವಾಗಿ ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಉತ್ಕರ್ಷವನ್ನು ಕಂಡಿದೆ. ಕೋವಿಡ್ -19 ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಭಾರತವು ಮಾಲ್ಡೀವ್ಸ್‌ಗೆ ನೆರವು ನೀಡಿದೆ.

ಭಾರತದ ಕಡೆಗೆ ಹೆಚ್ಚು ಒಲವು ತೋರಿದ ಅಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರ ಕೋರಿಕೆಯ ಮೇರೆಗೆ ಭಾರತವು 2020 ರಲ್ಲಿ ಮಾಲ್ಡೀವ್ಸ್‌ನಲ್ಲಿ ತನ್ನ ಸೈನಿಕರನ್ನು ನಿಯೋಜಿಸಿತ್ತು. ನಿಯೋಜನೆಯು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರ ಒಪ್ಪಂದದ ಭಾಗವಾಗಿತ್ತು, ಇದರಲ್ಲಿ ಜಂಟಿ ತರಬೇತಿ, ಕಡಲ ಭದ್ರತೆ ಮತ್ತು ಕಣ್ಗಾವಲು ಕೂಡ ಸೇರಿದೆ.

ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೈನಿಕರ ಉಪಸ್ಥಿತಿಯು ಚೀನಾವನ್ನು ಕೆರಳಿಸಿದ್ದು ಅದು ತನ್ನ 'ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್' ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. 2018 ರಲ್ಲಿ ಸೋಲಿಹ್ ಅವರಿಂದ ಹೊರಹಾಕಲ್ಪಟ್ಟ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರ ಅಧಿಕಾರಾವಧಿಯಲ್ಲಿ ಚೀನಾ ಮಾಲ್ಡೀವ್ಸ್‌ನಲ್ಲಿ ಭಾರಿ ಹೂಡಿಕೆ ಮಾಡಿತ್ತು.

ಭಾರತ ಮತ್ತು ಚೀನಾ ಎರಡೂ ಈ ಪ್ರದೇಶದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಸ್ಪರ್ಧೆಗಿಳಿದಿವೆ.  ಮುಯಿಝು ವಿಜಯವು ರಾಷ್ಟ್ರದ ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸಿತು ಮತ್ತು ಈ ಪ್ರದೇಶದಲ್ಲಿನ ಶಕ್ತಿಯ ಸೂಕ್ಷ್ಮ ಸಮತೋಲನದ ಬಗ್ಗೆ ಕಳವಳವನ್ನು ಹುಟ್ಟುಹಾಕಿತು. 2018 ರ ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾಮೀನ್ ಅವರ ಸಹವರ್ತಿಯಾಗಿದ್ದ ಮುಯಿಝು, ಭಾರತವು ಮಾಲ್ಡೀವ್ಸ್‌ನ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ ಮತ್ತು ಅದರ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

ಮುಯಿಝು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, ಭಾರತೀಯ ಸೈನಿಕರನ್ನು ತೆರವುಗೊಳಿಸಿದ ಬಳಿಕ ಆ ಜಾಗಕ್ಕೆ ಬೇರೆ ಯಾವುದೇ ದೇಶದಿಂದ ಪಡೆಗಳನ್ನು ತಂದು ನಿಯೋಜಿಸುವುದಿಲ್ಲ ಎಂಬುದನ್ನು ಗಟ್ಟಿಧ್ವನಿಯಲ್ಲಿ ಹೇಳಿಲ್ಲ ಎಂಬುದನ್ನು ಗಮನಿಸಬೇಕು.  ಅವರು ಭಾರತದೊಂದಿಗೆ ರಕ್ಷಣಾ ಒಪ್ಪಂದವನ್ನು ಪರಿಶೀಲಿಸುವುದಾಗಿ ಮತ್ತು ಚೀನಾದ ಸಾಲಗಳು ಹಾಗೂ ಯೋಜನೆಗಳ ನಿಯಮಗಳನ್ನು ಮರುಸಂಧಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು.

ಮೋದಿ-ಮುಯಿಝು ಶೃಂಗ ಸಭೆ:

ಡಿಸೆಂಬರ್ 1, 2023 ರಂದು ದುಬೈನಲ್ಲಿ COP28 ವರ್ಲ್ಡ್ ಕ್ಲೈಮೇಟ್ ಆಕ್ಷನ್ ಶೃಂಗಸಭೆಯ ಪಾರ್ಶ್ವದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮುಯಿಝು ಅವರು ಮೊದಲ ಬಾರಿಗೆ ಭೇಟಿಯಾದರು. ಅವರು ಆರ್ಥಿಕ ಸಂಬಂಧಗಳು, ಅಭಿವೃದ್ಧಿ ಸಹಕಾರದಂತಹ ವಿವಿಧ ಕ್ಷೇತ್ರಗಳಲ್ಲಿ ಭಾರತ-ಮಾಲ್ಡೀವ್ಸ್ ಸ್ನೇಹವನ್ನು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸಿದರು ಮತ್ತು ಜನರ ನಡುವಣ ಸಂಬಂಧಗಳು ಹಾಗೂ ತಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಕೋರ್ ಗ್ರೂಪ್ ಅನ್ನು ಸ್ಥಾಪಿಸಲು ಒಪ್ಪಿಕೊಂಡರು. ಭಾರತವು ತನ್ನ 77 ಭಾರತೀಯ ಸೇನಾ ಸಿಬ್ಬಂದಿಯನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಳ್ಳಬೇಕು ಮತ್ತು ಉಭಯ ದೇಶಗಳ ನಡುವಿನ 100 ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳನ್ನು ಪರಿಶೀಲಿಸುವ ನಿರ್ಧಾರವನ್ನು ಭಾರತವು ಅಧ್ಯಕ್ಷ ಮುಯಿಝು ಅವರ ಕೋರಿಕೆಯ ಕೆಲವು ದಿನಗಳ ನಂತರ ಸಭೆ ನಡೆಸಿತು.

ಇದನ್ನೂ ಓದಿ: ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರವಾಗಿದೆ ಮತ್ತು ಪ್ರಧಾನಮಂತ್ರಿಯವರ 'SAGAR' (Security and Growth for All in the Region) ಮತ್ತು ಭಾರತದ 'ನೆರೆಹೊರೆಯ ಮೊದಲ ನೀತಿ'ಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಭಾರತಕ್ಕೆ ಮಾಲ್ಡೀವ್ಸ್‌ನ ಕಾರ್ಯತಂತ್ರದ ಪ್ರಾಮುಖ್ಯತೆ ಮತ್ತು ಮುಯಿಝು ಅವರ ಸಂಭಾವ್ಯ ಸೂಕ್ಷ್ಮ ವಿದೇಶಿ ನೀತಿಯನ್ನು ಸಹ ಸಭೆಯಲ್ಲಿ ಎತ್ತಿ ತೋರಿಸಲಾಯಿತು.

ಇದನ್ನು ಓದಿ: ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

Latest Videos
Follow Us:
Download App:
  • android
  • ios