ಕಿಚ್ಚನ ಹುಟ್ಟುಹಬ್ಬದ ಸಂಭ್ರಮಕ್ಕೆ ಮೊದಲು ಕಿಕ್ ಕೊಟ್ಟಿದ್ದು 'ಬಿಲ್ಲ ರಂಗ ಭಾಷಾ' ಸಿನಿಮಾದ ರಗಡ್ ಪೋಸ್ಟರ್. ಆ ಪೋಸ್ಟರ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿರುವಾಗಲೇ, ಸುದೀಪ್ ಮತ್ತೊಂದು ಬಿಗ್ ಅನೌನ್ಸ್‌ಮೆಂಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಅದೇನು ನೋಡಿ..
Kichcha Sudeep Birthday Special-Sudeep Next Film-School Bus Voicen Announcement-Kiccha Sudeep 47-Tamil Director Samuthirakani Kannada Movie-ಕಿಚ್ಚನ 'ಬೇಟೆ' ಶುರು: ಸ್ಕೂಲ್ ಬಸ್ ಹತ್ತಲಿದ್ದಾರೆ ಅಭಿನಯ ಚಕ್ರವರ್ತಿ! ಇದು ಸುದೀಪ್ ಕೊಟ್ಟ ಅಸಲಿ ಬರ್ತ್‌ಡೇ ಗಿಫ್ಟ್!
ಕನ್ನಡ ಚಿತ್ರರಂಗದ 'ಬಾದ್‌ಶಾ', ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಬಂತೆಂದರೆ ಅಲ್ಲಿ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ. ಆದರೆ ಈ ಬಾರಿ ಕಿಚ್ಚ ಕೇವಲ ಊಟ ಹಾಕಿಸಿಲ್ಲ, ಬದಲಿಗೆ ಬ್ಯಾಕ್ ಟು ಬ್ಯಾಕ್ ಸರ್ಪ್ರೈಸ್‌ಗಳ ಮೂಲಕ ಬಾಕ್ಸ್ ಆಫೀಸ್‌ಗೆ 'ಕಿಚ್ಚು' ಹಚ್ಚುವ ಮುನ್ಸೂಚನೆ ನೀಡಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಸುದೀಪ್, ಈಗ ವೈಲೆಂಟ್ ಆಗಿ ಕಂಬ್ಯಾಕ್ ಮಾಡುತ್ತಿದ್ದಾರೆ!
"ಸಿಂಹ ಸುಮ್ಮನೆ ಕೂತಿದೆ ಅಂದ್ರೆ ಸುಸ್ತಾಗಿದೆ ಎಂದಲ್ಲ, ಮುಂದಿನ ಬೇಟೆಗೆ ತಯಾರಾಗಿದೆ ಎಂದರ್ಥ.."
ಕೆಲವು ದಿನಗಳ ಹಿಂದೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಈ ಡೈಲಾಗ್ ಈಗ ಅಕ್ಷರಶಃ ನಿಜವಾಗಿದೆ. ಈ ಸಾಲುಗಳ ಹಿಂದಿನ ಮರ್ಮ ಏನೆಂದು ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ. ಹೌದು, ಕಿಚ್ಚನ ಮುಂದಿನ ಬೇಟೆ ಅಂತಿಂಥದ್ದಲ್ಲ, ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿರುವ ಬಹುದೊಡ್ಡ ಪ್ರಾಜೆಕ್ಟ್!
ಬಿಲ್ಲ ರಂಗ ಭಾಷಾ ಹವಾ ನಡುವೆ ಹೊಸ ಬಾಂಬ್!
ಕಿಚ್ಚನ ಹುಟ್ಟುಹಬ್ಬದ ಸಂಭ್ರಮಕ್ಕೆ ಮೊದಲು ಕಿಕ್ ಕೊಟ್ಟಿದ್ದು 'ಬಿಲ್ಲ ರಂಗ ಭಾಷಾ' ಸಿನಿಮಾದ ರಗಡ್ ಪೋಸ್ಟರ್. ಆ ಪೋಸ್ಟರ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿರುವಾಗಲೇ, ಸುದೀಪ್ ಮತ್ತೊಂದು ಬಿಗ್ ಅನೌನ್ಸ್‌ಮೆಂಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಕಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ದೇಶಕ ಸಮುದ್ರಖಣಿ ಜೊತೆ ಕಿಚ್ಚ ಕೈಜೋಡಿಸುತ್ತಿರುವುದು ಈಗ ಅಧಿಕೃತವಾಗಿದೆ.
ಸಿನಿಮಾದ ಹೆಸರೇನು? ಇಲ್ಲಿದೆ ನೋಡಿ ಟ್ವಿಸ್ಟ್!
ಇಷ್ಟು ದಿನ "ಯಾರಿರಬಹುದು ಆ ತಮಿಳು ನಿರ್ದೇಶಕ?" ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸುದೀಪ್ ನಟಿಸಲಿರುವ ಈ ಹೊಸ ಚಿತ್ರಕ್ಕೆ "ಸ್ಕೂಲ್ ಬಸ್ ವಾಯ್ಸನ್" (School Bus Voicen) ಎಂದು ಹೆಸರಿಡಲಾಗಿದೆ. ಈ ಟೈಟಲ್ ಕೇಳಿದ ತಕ್ಷಣವೇ ಸಿನಿಮಾ ಪ್ರೇಮಿಗಳಲ್ಲಿ ಒಂದು ವಿಭಿನ್ನ ಕುತೂಹಲ ಮೂಡಿದೆ. ಹೆಸರೇ ಹೇಳುವಂತೆ ಇದೊಂದು ಕೇವಲ ಮಾಸ್ ಸಿನಿಮಾವಲ್ಲ, ಬದಲಿಗೆ ಸಮಾಜಕ್ಕೆ ಒಂದು ಗಟ್ಟಿ ಸಂದೇಶ ನೀಡುವ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ.
ಯಾಕೆ ಈ ಸಿನಿಮಾ ಸ್ಪೆಷಲ್?
ಸುದೀಪ್ ಎಂದರೆ ನಮಗೆ ನೆನಪಾಗುವುದು ಅಬ್ಬರದ ಆಕ್ಷನ್, ಮಾಸ್ ಡೈಲಾಗ್ಸ್ ಮತ್ತು ಹೈ-ವೋಲ್ಟೇಜ್ ಎನರ್ಜಿ. ಆದರೆ 'ಸ್ಕೂಲ್ ಬಸ್ ವಾಯ್ಸನ್' ಮೂಲಕ ಕಿಚ್ಚ ಮತ್ತೆ ತಮ್ಮೊಳಗಿನ ಅದ್ಭುತ ನಟನನ್ನು ಹೊರಹಾಕಲು ಸಜ್ಜಾಗಿದ್ದಾರೆ. ಸಮುದ್ರಖಣಿ ಅವರ ನಿರ್ದೇಶನ ಅಂದ ಮೇಲೆ ಅಲ್ಲಿ ಭಾವನೆಗಳ ಅಲೆ ಇರಲೇಬೇಕು. ಮಾಸ್ ಸಿನಿಮಾಗಳ ನಡುವೆ ಸುದೀಪ್ ಅವರ ನಟನಾ ಕೌಶಲಕ್ಕೆ ಒರೆಗೆ ಹಚ್ಚುವಂತಹ ಪಾತ್ರ ಇದಾಗಲಿದೆ ಎಂಬ ನಿರೀಕ್ಷೆ ಗಾಂಧಿನಗರದಲ್ಲಿ ಸೃಷ್ಟಿಯಾಗಿದೆ.
ಒಟ್ಟಿನಲ್ಲಿ, ಬಿಲ್ಲ ರಂಗ ಭಾಷಾ ಮೂಲಕ ಅಬ್ಬರಿಸಲು ರೆಡಿಯಾಗಿರುವ ಕಿಚ್ಚ, ಈ ಕಡೆ 'ಸ್ಕೂಲ್ ಬಸ್' ಹತ್ತಿ ಕ್ಲಾಸ್ ಮತ್ತು ಮಾಸ್ ಎರಡನ್ನೂ ಬ್ಯಾಲೆನ್ಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಕಿಚ್ಚನ ಈ ಹೊಸ ಅವತಾರ ನೋಡಲು ಅಭಿಮಾನಿಗಳು ಈಗಿನಿಂದಲೇ ಕಾದು ಕುಳಿತಿದ್ದಾರೆ. ಅಲ್ಲಿಗೆ, ಕಿಚ್ಚನ ಭೇಟೆ ಅಧಿಕೃತವಾಗಿ ಶುರುವಾದಂತಾಗಿದೆ!


