ಅಮೃತಧಾರೆಯಲ್ಲಿ ಶಕುಂತಲಾ ಮಗ-ಸೊಸೆಯನ್ನು ಮನೆಬಿಟ್ಟು ಓಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಇಷ್ಟು ದಿನ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಳ್ತಿದ್ದ ಶಕುಂತಲಾ ಮಾಡರ್ನ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ ನೋಡಿ! 

ಶಕುಂತಲಾ ಎಂದರೆ ಸಾಕು, ಸೀರಿಯಲ್​ ಪ್ರೇಮಿಗಳ ಮೈಯೆಲ್ಲಾ ಉರಿದು ಹೋಗುತ್ತದೆ. ಇದಕ್ಕೆ ಕಾರಣ ಅಮೃತಧಾರೆ (Amruthadhaare) ಸೀರಿಯಲ್​. ತನ್ನನ್ನು ಅಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಸಿದ ಮಗನಿಗೇ ಕೊಳ್ಳಿ ಇಟ್ಟವಳು ಈಕೆ. ಸೊಸೆ ಭೂಮಿಕಾಳನ್ನು ಹೊರಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ. ಸೀರಿಯಲ್​ ಎಂದ ಮೇಲೆ ವಿಲನ್​ ಇರಲೇಬೇಕು. ಆದರೆ ಆ ಕ್ಯಾರೆಕ್ಟರ್​ನ ಕ್ರೂರತನ ಹೆಚ್ಚಾದಾಗ ವೀಕ್ಷಕರು ಇದೊಂದು ಸೀರಿಯಲ್​ ಎನ್ನುವುದನ್ನೂ ಮರೆತು ಆ ಕ್ಯಾರೆಕ್ಟರ್​ ಮಾಡುವ ಪಾತ್ರಧಾರಿಗಳನ್ನೇ ದ್ವೇಷಿಸುವುದು ಉಂಟು. ಅಮೃತಧಾರೆ ಸೀರಿಯಲ್​ನಲ್ಲಿ ಕೂಡ ಹಾಗೆಯೇ. ಶಕುಂತಲಾ ಪಾತ್ರಧಾರಿ ಮಾತ್ರವಲ್ಲದೇ, ಆಕೆಯ ಕ್ರೂರತನ ಒಂದು ಹಂತ ಮೀರಿರುವ ಕಾರಣ, ಇದರ ರೋಲ್​ ಮಾಡ್ತಿರೋ ಹಿರಿಯ ನಟಿ ವನಿತಾ ವಾಸು (Vanitha Vasu) ಅವರನ್ನೇ ಹೇಟ್ ಮಾಡುತ್ತಿರುವ ಕಮೆಂಟ್​ಗಳ ಸುರಿಮಳೆಯಾಗುತ್ತದೆ.

ಇದನ್ನೂ ಓದಿ: ಭೂಮಿಕಾ-ಗೌತಮ್‌ ಪುತ್ರನೇ ಆನಂದ್​ ರಿಯಲ್​ ಮಗ! ಏನಿದು Amruthadhaare Serial ಟ್ವಿಸ್ಟ್​?

ಇಂಥ ಕಮೆಂಟ್ಸ್​ ನೋಡಿದಾಗ ಪಾತ್ರಧಾರಿಗಳು ತಮ್ಮ ಪಾತ್ರವನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಅದೇ ರೀತಿ ವನಿತಾ ವಾಸು ಕೂಡ ಇದಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ, ಕಿರುತೆರೆಗೆ ಎಂಟ್ರಿ ಕೊಟ್ಟು ಈಗ ನೆಗೆಟಿವ್​ ರೋಲ್​ನಲ್ಲಿ ನಟಿಸುತ್ತಿದ್ದಾರೆ. ಮಗುವನ್ನೂ ಬಿಡದೇ ಎಲ್ಲರ ಕೊ*ಲೆಗೆ ಸ್ಕೆಚ್​ ಹಾಕಿ ಸೋತಿದ್ದ ಶಕುಂತಲಾ ಇದೀಗ ಅದರಲ್ಲಿ ಸಕ್ಸಸ್​​ ಕಂಡಿದ್ದು, ಮಗ ಮತ್ತು ಸೊಸೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಆಸ್ತಿಗಾಗಿಯೇ ಅವಳು ಹೀಗೆಲ್ಲಾ ಮಾಡ್ತಿರೋದು ತಿಳಿದು ಮಗ ಗೌತಮ್​ ಆಸ್ತಿಯನ್ನೂ ಬಿಟ್ಟು ಹೋಗಿದ್ದಾನೆ. ರೋಗಿ ಬಯಸಿದ್ದೂ ಹಾಲು- ಅನ್ನ... ವೈದ್ಯ ಹೇಳಿದ್ದೂ ಹಾಲು-ಅನ್ನ ಎನ್ನುವಂತೆ ಯಾರು ಹಾಳಾದ್ರೆ ಏನಂತೆ, ಶಕುಂತಲಾ ಮತ್ತು ಜೈದೇವ್​ ಇದೀಗ ಸಂಪೂರ್ಣ ಆಸ್ತಿಯನ್ನು ಎಂಜಾಯ್​ ಮಾಡುವಂತಾಗಿದೆ.

ವನಿತಾ ವಾಸು ಹೊಸ ಲುಕ್ಕು

ಇಂತಿಪ್ಪ ಶಕುಂತಲಾ ಉರ್ಫ್​ ವನಿತಾ ವಾಸು ಲುಕ್ಕೇ ಚೇಂಜ್​ ಆಗಿದೆ. ಅಷ್ಟಕ್ಕೂ ಆಗರ್ಭ ಶ್ರೀಮಂತೆಯಾಗಿರುವ ಶಕುಂತಲಾ ಪ್ರತಿದಿನವೂ ಮನೆಯಲ್ಲಿಯೂ ರೇಷ್ಮೆ ಸೀರೆ ಉಟ್ಟುಕೊಳ್ಳುವ ಅನಿವಾರ್ಯತೆ. ಇದೀಗ ವನಿತಾ ವಾಸು ಅವರು ಡಿಫರೆಂಟ್​ ಲುಕ್​ನಲ್ಲಿ ಪೋಸ್​ ಕೊಟ್ಟು ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ಮಾಡರ್ನ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ತಮಾಷೆಯ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಶಕ್ಕು ರಾಕ್ಸ್​ ಎಂದೆಲ್ಲಾ ಕೆಲವರು ಬರೆದಿದ್ದರೆ, ಮಗ-ಸೊಸೆಯನ್ನು ಮನೆಯಿಂದ ಹೊರಕ್ಕೆ ಹಾಕಿದ ಮೇಲೆ ಲುಕ್ಕೇ ಚೇಂಜ್​ ಆಗೋಯ್ತು ಎನ್ನುತ್ತಿದ್ದಾರೆ.

ಮಾಡರ್ನ್ ಡ್ರೆಸ್​ನಲ್ಲಿ 'ಶಕುಂತಲಾ'

ಅಷ್ಟಕ್ಕೂ, ಇದೇನು ಸೀರಿಯಲ್​ ಲುಕ್​ ಅಲ್ಲ, ಬದಲಿಗೆ ಹಾಗೆ ಸುಮ್ಮನೇ ನಟಿ ಮಾಡ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಕುರಿತು ಹೇಳುವುದಾದರೆ, 80-90ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದವರು ಇವರು. ಶಂಕರ್ ನಾಗ್, ಅನಂತ್ ನಾಗ್, ವಿಷ್ಣುವರ್ಧನ್, ಅಂಬರೀಶ್‌ ಜೊತೆ ತೆರೆಹಂಚಿಕೊಂಡಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಸಿನಿಲೋಕದಲ್ಲಿ ಸಕ್ರಿಯರಾಗಿರುವ ವನಿತಾ ವಾಸು ಈಗ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ನಿತಿನ್ ನಿಸಾಲ್ ಎಂಬುವರನ್ನ ಇವರು ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವನಿತಾ ವಾಸು ಮೂಲತಃ ಮಲಯಾಳಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ! ವನಿತಾ ವಾಸು ಅವರಿಗೆ ಕಶಿಶ್ ನಿಸಾಲ್ ಎಂಬ ಮಗ ಇದ್ದಾನೆ.

ಇದನ್ನೂ ಓದಿ: ಗಂಡನಿಗೆ ನೋವು ಕೊಟ್ಟು ಹೀಗೆಲ್ಲಾ ಪೋಸ್​ ಕೊಡೋದು ಎಷ್ಟು ಸರಿ? Amruthadhaare ಭೂಮಿಗೆ ಫ್ಯಾನ್ಸ್​ ಕ್ಲಾಸ್​!

View post on Instagram