'ಕಾಂತಾರ: ಚಾಪ್ಟರ್ 1' ಚಿತ್ರದ ಒಟ್ಟಾರೆ ಕಲೆಕ್ಷನ್ 800 ಕೋಟಿ ರೂಪಾಯಿ ದಾಟಿತ್ತು. ಆದರೆ 'ಧುರಂಧರ್' ಕಲೆಕ್ಷನ್ 935 ಕೋಟಿ ರೂಪಾಯಿ ದಾಟಿದೆ. ಹಲವು ದೇಶಗಳಲ್ಲಿ ರಣವೀರ್ ನಟನೆಯ 'ಧುರಂಧರ್' ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಆದರೂ ಕೂಡ ಈ ಬ್ಯಾನ್ ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ.

ಕಾಂತಾರ ಮೀರಿಸಿದ ಧುರಂಧರ್

ರಣವೀರ್ ಸಿಂಗ್ (Ranveer Singh) ಹಾಗೂ ಅಕ್ಷಯ್ ಖನ್ನಾ (Akshay Khanna) ನಟನೆಯ 'ಧುರಂದ‌ರ್" (Dhurandhar) 2025ರ ಬಾಕ್ಸ್‌ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ. ಈ ಚಿತ್ರದ ವಿಶ್ವ ಮಟ್ಟದ ಕಲೆಕ್ಷನ್ 935 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿದೆ ಎನ್ನಲಾಗಿದೆ. ಈ ಮೂಲಕ ಬಾಲಿವುಡ್‌ನ ಧುರಂಧರ್ ಸಿನಿಮಾ 'ಕಾಂತಾರ: ಚಾಪ್ಟರ್ 1' ಚಿತ್ರದ ಗಳಿಕೆಯನ್ನು ಮೀರಿಸಿದೆ.

ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ಸಿನಿಮಾ ಈ ವರ್ಷದ ಸೂಪರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿತ್ತು. ಈ ಸಿನಿಮಾ 800 ಕೋಟಿಗೂ ಮೀರಿದ ಗಳಿಕೆ ಮಾಡಿರುವ ಮೂಲಕ ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹಣೆಪಟ್ಟಿ ಗಿಟ್ಟಿಸಿತ್ತು. ಇದೀಗ ಈ ಚಿತ್ರದ ದಾಖಲೆಯನ್ನು 'ಧುರಂಧರ್' ಮುರಿದು ಹಾಕಿದೆ.

'ಕಾಂತಾರ: ಚಾಪ್ಟರ್ 1' ಚಿತ್ರದ ಒಟ್ಟಾರೆ ಕಲೆಕ್ಷನ್ 800 ಕೋಟಿ ರೂಪಾಯಿ ದಾಟಿತ್ತು. ಆದರೆ 'ಧುರಂಧರ್' ಕಲೆಕ್ಷನ್ 935 ಕೋಟಿ ರೂಪಾಯಿ ದಾಟಿದೆ. ಹಲವು ದೇಶಗಳಲ್ಲಿ ರಣವೀರ್ ನಟನೆಯ 'ಧುರಂಧರ್' ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಆದರೂ ಕೂಡ ಈ ಬ್ಯಾನ್ ಸಿನಿಮಾದ ಕಲೆಕ್ಷನ್ ವಿಷಯದಲ್ಲಿ ಅದು ಯಾವುದೇ ಕೆಟ್ಟ ಪರಿಣಾಮ ಉಂಟುಮಾಡಿಲ್ಲ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್‌ನಲ್ಲಿಯೇ 600 ಕೋಟಿ ರೂಪಾಯಿ ಗಳಿಸಿದೆ. ಜಗತ್ತಿನಾದ್ಯಂತ ಇದೀಗ 1000 ಕೋಟಿ ಕಲೆಕ್ಷನ್‌ ಮಾಡುವತ್ತ ಹೆಜ್ಜೆ ಇಟ್ಟಿದೆ.

20ನೇ ದಿನವೂ 'ಧುರಂಧರ್' ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ 17 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವೀಕೆಂಡ್ ಮುಗಿಯುವ ಮೊದಲು ಈ ಸಿನಿಮಾ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಗಳಿಸೋ ಸಾಧ್ಯತೆ ಪಕ್ಕಾ ಎನ್ನಲಾಗುತ್ತಿದೆ. ಈ ಮೂಲಕ ಧುರಂಧರ್ ಸಿನಿಮಾ ಈ ವರ್ಷದ 'ಸಾವಿರ ಕೋಟಿ ರೂಪಾಯಿ ಕ್ಲಬ್' ಸೇರಿದ ಏಕೈಕ ಸಿನಿಮಾ ಆಗಲಿದೆ.

ಅಂದಹಾಗೆ, 'ಧುರಂಧರ್‌' ಸಿನಿಮಾದಲ್ಲಿ ರಣವೀ‌ರ್ ಸಿಂಗ್ ಅವರು 'ಆದಿತ್ಯ ಧಾರ್' ಪಾತ್ರದಲ್ಲಿ ನಟಿಸಿದ್ದಾರೆ. ಖಡಕ್ ವಿಲನ್ ಆಗಿ ಅಕ್ಷಯ್ ಖನ್ನಾ ಅಬ್ಬರಿಸಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಹಲವು ಕಾಲದಿಂದ ನೇಫಥ್ಯಕ್ಕೆ ಸರಿದಿದ್ದ ನಟ ಅಕ್ಷಯ್ ಖನ್ನಾ ಅವರು ಮತ್ತೆ ಮರುಜೀವ ಪಡೆದಿದ್ದಾರೆ. ಬಿಡುಗಡೆ ಆದಾಗ 'ಧುರಂಧರ್' ಸಿನಿಮಾ ಬಗ್ಗೆ ಸಾಕಷ್ಟು ನೆಗೆಟಿವ್ ಟಾಕ್ ಹರಿದಾಡಿತ್ತು. ಆದರೂ ಕೂಡ 'ಧುರಂಧ‌ರ್' ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಬರೋಬ್ಬರಿ 1000 ಕೋಟಿ ಕಲೆಕ್ಷನ್ ಮಾಡಿ ಗೆದ್ದು ಮತ್ತಷ್ಟು ಮುನ್ನುಗ್ಗುತ್ತಿದೆ.