- Home
- Entertainment
- ಗಂಡನಿಗೆ ನೋವು ಕೊಟ್ಟು ಹೀಗೆಲ್ಲಾ ಪೋಸ್ ಕೊಡೋದು ಎಷ್ಟು ಸರಿ? Amruthadhaare ಭೂಮಿಗೆ ಫ್ಯಾನ್ಸ್ ಕ್ಲಾಸ್!
ಗಂಡನಿಗೆ ನೋವು ಕೊಟ್ಟು ಹೀಗೆಲ್ಲಾ ಪೋಸ್ ಕೊಡೋದು ಎಷ್ಟು ಸರಿ? Amruthadhaare ಭೂಮಿಗೆ ಫ್ಯಾನ್ಸ್ ಕ್ಲಾಸ್!
ಪತಿಗೂ ಹೇಳದೇ ಅಮೃತಧಾರೆಯಲ್ಲಿ ಭೂಮಿಕಾ ಮನೆಬಿಟ್ಟಿದ್ದಾಳೆ. ಇದರಿಂದ ಗೌತಮ್ ಕಂಗಾಲಾಗಿ ಹೋಗಿದ್ದಾನೆ. ಅತ್ತ ಮನೆಬಿಟ್ಟು ಪತಿಗೆ ನೋವು ಕೊಟ್ಟ ಭೂಮಿಕಾ ಅರ್ಥಾತ್ ನಟಿ ಛಾಯಾ ಸಿಂಗ್, ಸಕತ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫ್ಯಾನ್ಸ್ ಏನಂದ್ರು ನೋಡಿ!

ಮನೆ ಬಿಟ್ಟ ಭೂಮಿಕಾ
ಅಮೃತಧಾರೆಯ ಭೂಮಿಕಾ ಮನೆಬಿಟ್ಟಾಗಿದೆ. ಅವಳಿ ಮಕ್ಕಳ ಸತ್ಯ ಗೊತ್ತಾಗುತ್ತಿದ್ದಂತೆಯೇ ಅತ್ತೆ ಮೇಲಿನ ಮಾತಿಗೆ ಭೂಮಿಕಾ ಗೌತಮ್ಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾಳೆ. ಶಕುಂತಲಾ ವಿರುದ್ಧ ಸಿಡಿದು ನಿಂತು ಬುದ್ಧಿ ಕಲಿಸುತ್ತಾಳೆ ಎಂದುಕೊಂಡರೆ ಗಂಡನನ್ನೇ ದೂರ ಮಾಡಿ ಮನೆಬಿಟ್ಟು ಹೋಗಿಯೇ ಬಿಟ್ಟಿದ್ದಾಳೆ!
ಪಾಪಿ ಶಕುಂತಲಾಗೆ ಸದ್ಯ ಜಯ
ಪಾಪಿ ಶಕುಂತಲಾಗೆ ಸದ್ಯ ಜಯ ಸಿಕ್ಕಿದೆ. ಅತ್ತ ಗೌತಮ್ಗೂ ವಿಷಯ ಗೊತ್ತಾಗಿ, ಆಸ್ತಿಗಾಗಿ ಹೀಗೆಲ್ಲಾ ಮಾಡ್ತಿರೋದು ತಿಳಿದು ಎಲ್ಲಾ ಆಸ್ತಿಯನ್ನೂ ಶಕುಂತಲಾಗೇ ಬರೆದು ಕೊಟ್ಟು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಐದು ವರ್ಷಗಳಿಂದ ಅಲೆದೂ ಅಲೆದೂ ಸುಸ್ತಾದ ಗೌತಮ್ಗೆ ಕೊನೆಗೂ ಭೂಮಿಕಾ ಮತ್ತು ಮಗ ಸಿಕ್ಕಿದ್ದಾರೆ.
5 ವರ್ಷಗಳ ಬಳಿಕ ಮುಖಾಮುಖಿ
ಸದ್ಯ ಪ್ರೋಮೋದಲ್ಲಿ ಮಾತ್ರ ಇಷ್ಟು ಪ್ರಸಾರ ಆಗಿದ್ದು, ಟಿವಿಯಲ್ಲಿ ಇದಿನ್ನೂ ಪ್ರಸಾರ ಕಾಣಬೇಕಿದೆ. ಐದು ವರ್ಷಗಳ ಬಳಿಕ ಪತಿ-ಪತ್ನಿ ಮುಖಾಮುಖಿಯಾದಾಗ ಏನಾಗುತ್ತದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಎಲ್ಲಿಯೂ ಬೋರಾಗದಂತೆ ಧಾರಾವಾಹಿಯ ಪ್ರಸಾರ ಆಗ್ತಿರೋದರಿಂದ ವೀಕ್ಷಕರು ಕೂಡ ಸಕತ್ ಖುಷಿ ಪಟ್ಟುಕೊಂಡು ವೀಕ್ಷಿಸುತ್ತಿದ್ದಾರೆ.
ಕಪ್ಪು ಸೀರೆಯಿಂದ ಮಿಂಚಿಂಗ್
ಇದು Amruthadhaare Serial ಕಥೆ ಆದ್ರೆ, ಅಸಲಿಗೆ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಸಕತ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕಪ್ಪು ಸೀರೆಯಲ್ಲಿ ಅವರು ಮಿಂಚಿದ್ದಾರೆ. ಇದಾಗಲೇ ಅಮೃತಧಾರೆಯಲ್ಲಿ ಅವರ ಅಭಿನಯಕ್ಕೆ ಮನಸೋತಿರುವ ವೀಕ್ಷಕರು ಸದಾ ಡೀಸೆಂಟ್ ಆಗಿ ಕಾಣಿಸಿಕೊಳ್ಳುವ ಛಾಯಾ ಅವರ ಬಗ್ಗೆಯೂ ಅಪಾರ ಅಭಿಮಾನ ಹೊಂದಿದ್ದಾರೆ.
ಕಾಲೆಳೆದ ನೆಟ್ಟಿಗರು
ಇದೀಗ ಫೋಟೋಶೂಟ್ ವೈರಲ್ ಆಗುತ್ತಲೇ ಪ್ರೀತಿಯಿಂದ ನಟಿಯ ಕಾಲೆಳೆದಿದ್ದಾರೆ ಕಮೆಂಟಿಗರು. ಅಲ್ಲಿ ಡುಮ್ಮ ಸರ್ ಅನ್ನು ಬಿಟ್ಟು ಬಂದು ಅವರಿಗೆ ನೋವು ಕೊಟ್ಟು ಹೀಗೆ ಫೋಟೋಶೂಟ್ ಮಾಡಿಸಿಕೊಳ್ಳೋದು ಸರಿನಾ? ಹೀಗೆ ಯಾಕೆ ಮಾಡಿದ್ರಿ? ಗೌತಮ್ ಸರ್ ಅನ್ನು ನೋಡಲು ಆಗ್ತಿಲ್ಲ ಎಂದೆಲ್ಲಾ ಹೇಳುತ್ತಿದ್ದಾರೆ.
ನಟಿಯ ರಿಯಲ್ ಲೈಫ್ ಪತಿ
ಇನ್ನು ನಟಿ ಛಾಯಾ ಸಿಂಗ್ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಕೃಷ್ಣ ಅವರ ಜೊತೆ ಮದುವೆಯಾಗಿ 12 ವರ್ಷಗಳು ಕಳೆದಿವೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ.
ಕೃಷ್ಣ ಮತ್ತು ಛಾಯಾ ಸಿಂಗ್ ಭೇಟಿ
2010ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ ನಟಿಸಿದ್ದಾರೆ. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.