ಅಮೃತಧಾರೆಯಲ್ಲಿ ಇಬ್ಬಿಬ್ಬರು ಹೆಂಡ್ತಿ ಇರೋ ಜೈದೇವ್ಗೆ ರಿಯಲ್ ಲೈಫ್ನಲ್ಲಿ ಇನ್ನೂ ಮದ್ವೆಯಾಗಿಲ್ಲ. ಹಾಗಿದ್ರೆ ಜೈದೇವ್ ಅರ್ಥಾತ್ ನಟ ರಾಣವ್ ಗೌಡ ಅವರಿಗೆ ಯಾವ ರೀತಿ ಲೈಫ್ ಪಾರ್ಟನರ್ ಬೇಕು? ಅವರ ಮಾತಲ್ಲೇ ಕೇಳಿ...
ವಿಲನ್ ಆದ್ರೂ ಹೆಣ್ಣುಮಕ್ಕಳ ಫೆವರೇಟ್ ನಟನಲ್ಲಿ ಒಬ್ಬರು ಯಂಗ್ ಆ್ಯಂಡ್ ಹ್ಯಾಂಡಸಮ್ ಆಗಿರೋ ನಟ ರಾಣವ್ ಗೌಡ. ರಾಣವ್ ಎಂದರೆ ಬಹುಶಃ ಬಹುತೇಕರಿಗೆ ಅರ್ಥವಾಗಲಿಕ್ಕಿಲ್ಲ. ಇವರೇ ಅಮೃತಧಾರೆ JD ಉರ್ಫ್ ಜೈ ಉರ್ಫ್ ಜೈದೇವ್. ಜೈದೇವ್ ಕ್ಯಾರೆಕ್ಟರ್ ಅನ್ನು ಶಪಿಸುವವರೂ ಜೈದೇವ್ ನಟನೆಗೆ ಜೈಜೈ ಎನ್ನುತ್ತಲೇ ಅವರ ಫೆವರೆಟ್ ಆಗಿದ್ದಾರೆ. ಇನ್ನು ಯುವತಿಯರಿಗಂತೂ ಜೈದೇವ್ ಅಂದ್ರೆ ರಾಣವ್ ಅವ್ರು ಕ್ರಷ್ ಆಗಿಬಿಟ್ಟಿದ್ದಾರೆ. ಇಷ್ಟು ಹ್ಯಾಂಡ್ಸಮ್ ನಟ ಹೀರೋ ಆಗಿದ್ರೆ ಚೆನ್ನಾಗಿತ್ತು ಎನ್ನುತ್ತಿರುವವರೇ ಅದೆಷ್ಟೋ ಮಂದಿ. ಆ ಆಸೆ ಕೂಡ ಈಗ ಈಡೇರಿದ್ದು, ನಾಳೆ ಅಂದ್ರೆ ಆಗಸ್ಟ್ 23ರಂದು ಉದ್ಘಾಟನೆಗೊಳ್ಳಲಿರುವ ಹೊಸ ಚಾನೆಲ್ ಝೀ ಪವರ್ ನಲ್ಲಿ ಶುಭಸ್ಯ ಶೀಘ್ರಂನಲ್ಲಿ ರಾಣವ್ ಗೌಡ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಸೀರಿಯಲ್ ಪ್ರೊಮೊ ಬಿಡುಗಡೆಯಾಗಿದ್ದು, ಸಖತ್ ಆಗಿ ಮೂಡಿ ಬಂದಿದೆ.
ಸೀರಿಯಲ್ನಲ್ಲಿ ಇಬ್ಬರು ಪತ್ನಿ ಇದ್ರೂ ಅಸಲಿಗೆ ರಾಣವ್ಗೆ ಇನ್ನೂ ಮದುವೆಯಾಗಿಲ್ಲ. ಅವರು ಸಿಂಗಲ್. ಇದನ್ನು ತಿಳಿದುಕೊಳ್ಳಲು ಅವರ ಮಹಿಳಾ ಅಭಿಮಾನಿಗಳಿಗೆ ಹೆಚ್ಚು ಹೊತ್ತು ಬೇಕಾಗಲ್ಲ. ಅದೇ ಕಾರಣಕ್ಕೆ, ಅವರ ಬಗ್ಗೆ ಆಸಕ್ತಿ ಇರೋ ಯುವತಿಯರಿಗೂ ಕಮ್ಮಿಯೇನಿಲ್ಲ. ಇದಾಗಲೇ ನಟ, ತಮಗೆ ಬರ್ತಿರೋ ಪ್ರಪೋಸಲ್ ಬಗ್ಗೆ ಮಾತನಾಡಿದ್ದಾರೆ. ನನಗೆ ಎಷ್ಟೊಂದು ಪ್ರಪೋಸಲ್ ಬರುತ್ತವೆ, ಮೆಸೇಜ್ ಬರುತ್ತವೆ. ಮದುವೆ ಪ್ರಪೋಸಲ್ ಬಿಡಿ, ಇನ್ನೂ ಏನೇನೋ ಪ್ರಪೋಸಲ್ ಮಾಡ್ತಾರೆ ಎಂದು ಹೇಳುತ್ತಲೇ ಸುಸ್ತಾಗಿದ್ದಾರೆ ನಟ ರಾಣವ್. ಅದು ಯಾವ ರೀತಿಯ ಪ್ರಪೋಸಲ್ ಎನ್ನುವುದು ಅವರು ಹೇಳಿದ ಪರಿಯಲ್ಲಿಯೇ ತಿಳಿಯುತ್ತದೆ. ಅವರೆಲ್ಲಾ ಕಳಿಸ್ತಾರೆ, ಅದು ಅವರ ಪ್ರೀತಿಯನ್ನು ತೋರಿಸುತ್ತದೆ. ಆದರೆ ಆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ನಟ. ಇದರ ಅರ್ಥ ಯಾವ ರೀತಿಯಲ್ಲಿ ಹುಡುಗಿಯರು ಏನೆಲ್ಲಾ ಡಿಮಾಂಡ್ ಮಾಡುತ್ತಾ ಇದ್ದಾರೆ ಎನ್ನುವುದನ್ನು ಊಹಿಸಿಕೊಳ್ಳಬಹುದಾಗಿದೆ.
ಆದರೆ ಇದೀಗ ಮೊದಲ ಬಾರಿಗೆ ಅವರು ತಮ್ಮ ಕನಸಿನ ಕನ್ಯೆಯ ಬಗ್ಗೆ ರಾಣವ್ ಅವರು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾವೆಲ್ಲಾ 90s ಮಕ್ಕಳಾಗಿರೋ ಕಾರಣ, ನಮಗೆ ನಮ್ಮ ಅಮ್ಮನ ರೀತಿಯ ಪತ್ನಿಯೇ ಬೇಕು ಎಂದುಕೊಳ್ಳುವುದು ಸಹಜ. ನಮ್ಮ ಅಮ್ಮ ತುಂಬಾ ಇನ್ನೋಸೆಂಟ್. ಅವರಿಗೆ ಆಡಂಬರ, ಮೋಸ ಎಲ್ಲಾ ಗೊತ್ತಿಲ್ಲ. ಅದೇ ರೀತಿಯ ಹುಡುಗಿ ನನ್ನ ಲೈಫ್ನಲ್ಲಿಯೂ ಬರಲಿ ಎನ್ನೋದು ನನ್ನ ಆಸೆ ಎಂದಿದ್ದಾರೆ ನಟ. ನಾವು ಹೇಗೆ ನೋಡಿಕೊಳ್ಳಬೇಕೋ ಹಾಗೆ ನೋಡಿಕೊಳ್ತೇನೆ ಎಂದಿದ್ದಾರೆ.
ಲಕ್ಷಣವಾಗಿ ಸೀರೆ ಉಟ್ಟುಕೊಂಡು ಬೊಟ್ಟು ಇಟ್ಟುಕೊಂಡಿರಬೇಕು. ಅದರಲ್ಲಿಯೂ ಮುಖ್ಯವಾಗಿ ಯಾವ ಜಾಗಕ್ಕೆ ಯಾವ ರೀತಿಯ ಡ್ರೆಸ್ ಹಾಕಬೇಕು ಎನ್ನುವ ಸೆನ್ಸ್ ಇರಬೇಕು ಎಂದಿದ್ದಾರೆ. ಈಗ ನೋಡಿ ಎಷ್ಟೋ ಮಂದಿ ಹುಡುಗಿಯರು ದೇವಸ್ಥಾನಕ್ಕೆ ಚಡ್ಡಿ ಹಾಕ್ಕೊಂಡು ಹೋಗ್ತಾರೆ. ಅವರಿಗೆ ಏನು ಹೇಳೋದು ಹೇಳಿ. ಅದಕ್ಕಾಗಿಯೇ ಒಂದು ಹುಡುಗಿಯ ಅದರಲ್ಲಿಯೂ ಕನ್ನಡದ ಹುಡುಗಿಯ ಸಂಸ್ಕೃತಿಯನ್ನು ಆಕೆ ತಿಳಿದುಕೊಂಡಿರಬೇಕು ಎಂದು ರಾಣವ್ ಹೇಳಿದ್ದಾರೆ.
