ಅಮೃತಧಾರೆಯಲ್ಲಿ ಆನಂದ್‌ ಪಾತ್ರ ಮಾಡ್ತಿರೋ ನಟ ಆನಂದ್‌ ಅವರು ತಮ್ಮ ರಿಯಲ್‌ ಪುತ್ರ ದುಷ್ಯಂತ್‌ ಜೊತೆ ಬಂದರೋ ಬಂದರೋ ಬಾವ ಬಂದರೋ ಹಾಡಿಗೆ ಸಕತ್‌ ಸ್ಟೆಪ್‌ ಹಾಕಿದ್ದಾನೆ ನೋಡಿ... 

ಈಗ ಎಲ್ಲೆಲ್ಲೂ ಸು ಫ್ರಂ ಸೋನ ಬಂದರೋ ಬಂದರೋ ಬಾವ ಬಂದರೋ ಹಾಡಿನ ಗಮ್ಮತ್ತು. ಕಿರುತೆರೆಯ ಸ್ಟಾರ್‌ಗಳು ಇದರ ರೀಲ್ಸ್‌ ಮಾಡುತ್ತಲೇ ಇದ್ದಾರೆ. ಇದಾಗಲೇ ಹಲವಾರು ಮಂದಿ ಈ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ. ಇದೀಗ ಅಮೃತಧಾರೆ ಸೀರಿಯಲ್‌ನಲ್ಲಿ ಇದ್ದರೆ ಇಂಥ ಸ್ನೇಹಿತ ಇರಬೇಕು ಎಂದೇ ಖ್ಯಾತಿ ಪಡೆದಿರುವ ಆನಂದ್‌ ಅವರು ತಮ್ಮ ರಿಯಲ್‌ ಪುತ್ರ ದುಷ್ಯಂತ್‌ ಚಕ್ರವರ್ತಿ ಜೊತೆ ಈ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ. ಅಮೃತಧಾರೆಯಲ್ಲಿಯೂ ಆನಂದ್‌ ಆಗಿರೋ ನಟನ ನಿಜವಾದ ಹೆಸರು ಕೂಡ ಆನಂದ್‌. ಇವರ ಮಗು ದುಷ್ಯಂತ್‌ ಕೂಡ ಇದಾಗಲೇ ಸೂಪರ್‌ಸ್ಟಾರ್‌ ಆಗಿದ್ದಾನೆ. ಇದಾಗಲೇ ಕೆಲವು ಸೀರಿಯಲ್‌ಗಳಲ್ಲಿ ಈತ ನಟಿಸಿದ್ದು, ಈಗಲೂ ನಟನಾ ವೃತ್ತಿ ಮುಂದುವರೆಸಿದ್ದಾನೆ. ಈ ಹಿಂದೆ ದುಷ್ಯಂತ್‌, ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದಲ್ಲಿ ಬಾಲನಟನಾಗಿ ದುಷ್ಯಂತ್ ನಟಿಸಿದ್ದ. ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’ ಸೆಟ್‌ನಲ್ಲಿ ಅಪ್ಪು ಜೊತೆಗೆ ದುಷ್ಯಂತ್ ಒಂದಷ್ಟು ಸಮಯ ಕಳೆದಿದ್ದ. ಅದು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. 'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3' ರಿಯಾಲಿಟಿ ಶೋನಲ್ಲಿ ದುಷ್ಯಂತ್ ರನ್ನರ್ ಅಪ್ ಸ್ಥಾನ ಗಳಿಸಿದ್ದಾನೆ. ಈಗ ಆತ, ದಿವ್ಯಾ ಉರುಡುಗ, ರಿತ್ವಿಕ್ ಮಠದ್ ನಟನೆಯ ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾನೆ. ಇವನ ಸಂಭಾಷಣೆ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ. ಮಕ್ಕಳ ಜೊತೆ ಶೂಟಿಂಗ್ ಮಾಡೋದು ಮತ್ತೊಂದು ಖುಷಿ ಎಂದು ದಿವ್ಯಾ ಉರುಡುಗ, ರಿತ್ವಿಕ್ ಮಠದ್ ಕೂಡ ಈ ಹಿಂದೆ ಹೇಳಿದ್ದರು. ದುಷ್ಯಂತ್‌ ಇದಾಗಲೇ ಅಪ್ಪ ಆನಂದ್‌ ಜೊತೆಗೂಡಿ ಹಲವು ರೀಲ್ಸ್‌ಗೆ ಸ್ಟೆಪ್‌ ಹಾಕಿದ್ದಾನೆ.

ಇನ್ನು ನಟ ಆನಂದ್‌ ಕುರಿತು ಹೇಳುವುದಾದರೆ, ಆನಂದ್​ ಅವರು ಪತ್ನಿ ಚೈತ್ರಾ ಜೊತೆಗೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದಾರೆ. ತೆರೆ ಮೇಲೆ ಎಲ್ಲರನ್ನೂ ಹಾಸ್ಯದ ಕಡಲಿನಲ್ಲಿ ತೇಲಿಸುವ ಅದೆಷ್ಟೋ ನಟರ ಬಾಳಲ್ಲಿ ನೋವಿನ ಸರಮಾಲೆಗಳೇ ಇರುತ್ತವೆ. ಎಷ್ಟೋ ನಟರು ಹಿಂದೊಮ್ಮೆ ತುತ್ತು ಅನ್ನಕ್ಕೂ ಪರದಾಡಿದ್ದು ಇದೆ. ಇನ್ನು ಕೆಲವರು ಬಾಲ್ಯದಿಂದಲೂ ನೋವನ್ನೇ ಹೊತ್ತು ಬಂದಿದ್ದರೆ, ಮತ್ತೆ ಕೆಲವರಿಗೆ ಕಹಿ ಘಟನೆಗಳಿಂದ ಜೀವನ ತತ್ತರಿಸಿ ಹೋಗಿರುವುದೂ ಉಂಟು. ಬಹುತೇಕ ಎಲ್ಲರ ಬಾಳಿನಲ್ಲಿಯೂ ಈ ಏಳು-ಬೀಳುಗಳು ಸಹಜವೇ. ಅದೇ ರೀತಿ ಎಲ್ಲರನ್ನೂ ನಗಿಸುವ ಆನಂದ್​ ಅವರ ಜೀವನದಲ್ಲಿಯೂ ಬಹು ದೊಡ್ಡ ಆಘಾತವೇ ನಡೆದಿತ್ತು. ಪತ್ನಿ ಕೊರೋನಾ ಸಂದರ್ಭದಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡಿದ್ದರು. ಅದನ್ನು ಆನಂದ್​ ಈ ಹಿಂದೆ ನೆನಪಿಸಿಕೊಂಡಿದ್ದರು. ಇದೇ ವೇಳೆ, ನಿಜ ಜೀವನದಲ್ಲಿ ಏಳುಬೀಳು ಕಂಡವರು ಆನಂದ್​ ಮತ್ತು ಚೈತ್ರಾ. ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್​ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು.

ಇದೀಗ ಈ ಜೋಡಿ ಆರು ವರ್ಷಗಳ ದಾಂಪತ್ಯ ಜೀವನವನ್ನು ಪುಟ್ಟ ಕಂದನ ಜೊತೆ ಆನಂದದಿಂದ ಕಳೆಯುತ್ತಿದೆ. ಈ ಹಿಂದೆ ಚೈತ್ರಾ, ಕೊರೋನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ನಡೆಸಿದ್ದರು. ಆನಂದ್​ ಅವರ ತಾಯಿ ಕೊರೋನಾದಿಂದ ಒಂದೆಡೆ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಂದೆಡೆ ಪತ್ನಿ ಚೈತ್ರಾ. ಇವರಿಬ್ಬರನ್ನೂ ಉಳಿಸಿಕೊಳ್ಳಲು ಆನಂದ್​ ಹೆಣಗಾಡಿದ್ದರು. ಕೊನೆಗೆ ಇಬ್ಬರೂ ಜೀವಾಪಾಯದಿಂದ ಪಾರಾದಾಗ ಖುದ್ದು ವೈದ್ಯರೂ ಚಕಿತಪಟ್ಟುಕೊಂಡಿದ್ದರಂತೆ. ಇದು ಕೂಡ ಪತ್ನಿಯ ಮರುಜನ್ಮ ಎಂದಿದ್ದರು ಆನಂದ್​. ಜೋಡಿ ನಂಬರ್​ 1 ವೇದಿಕೆಯಲ್ಲಿ ಹಲವು ಟಾಸ್ಕ್​ಗಳಲ್ಲಿ ಈ ಜೋಡಿ ನಕ್ಕು ನಗಿಸಿದ್ದು ಇದೆ. ಅದರಲ್ಲಿ ಒಂದು ಆನಂದ್​ ಅವರು ಪತ್ನಿಯನ್ನು ಮುಟ್ಟದೇ ಐದು ಸಲ್​ ಕಿಸ್​ ಮಾಡಬೇಕು ಎನ್ನುವುದು. ಅದೇ ರೀತಿ ಅವರ ಪತ್ನಿ ಕವಿತಾ ಕೂಡ ಪತಿಗೆ ಇದೇ ರೀತಿ ಕಿಸ್​ ಮಾಡಬೇಕು. ಈ ಟಾಸ್ಕ್​ ಬಗ್ಗೆ ನಿರೂಪಕಿ ಶ್ವೇತಾ ಹೇಳುತ್ತಿದ್ದಂತೆಯೇ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದರು.

ಕೊನೆಗೆ ಟಾಸ್ಕ್​ನಂತೆ ಆನಂದ್​ ಅವರು ತಮ್ಮ ಪತ್ನಿಯನ್ನು ಮುಟ್ಟದೇ ಕಿಸ್​ ಮಾಡುವಲ್ಲಿ ಸಕ್ಸಸ್​ ಆಗಿದ್ದರೆ, ಅತ್ತ ಕವಿತಾ ಕೂಡ ಈ ಟಾಸ್ಕ್​ ಅನ್ನು ಪೂರೈಸಿದ್ದರು. ಇವರಿಬ್ಬರೂ ಹೀಗೆ ಪರಸ್ಪರ ಪ್ರೀತಿಯಿಂದ ಮುತ್ತಿಕ್ಕುತ್ತಿರುವುದನ್ನು ನೋಡಿ ಅವರ ಪ್ರೀತಿಗೆ ಜಡ್ಜ್​ಸ್​ ಕೂಡ ಭಾವುಕರಾಗಿದ್ದರು.

View post on Instagram