ಭೂಮಿಕಾ-ಗೌತಮ್ ಪುತ್ರನೇ ಆನಂದ್ ರಿಯಲ್ ಮಗ! ಏನಿದು Amruthadhaare Serial ಟ್ವಿಸ್ಟ್?
ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದ್ದು, ಭೂಮಿಕಾ ಮನೆ ಬಿಟ್ಟಿದ್ದಾಳೆ. ಮಗ ದೊಡ್ಡವನಾಗಿದ್ದು, ಅವನೇ ಆನಂದ್ ರಿಯಲ್ ಪುತ್ರ! ಏನಿದು ಟ್ವಿಸ್ಟ್?

ಯಾರೂ ಊಹಿಸದ ಟ್ವಿಸ್ಟ್
ಅಮೃತಧಾರೆಯಲ್ಲಿ ಯಾರೂ ಊಹಿಸದ ರೋಚಕ ಟ್ವಿಸ್ಟ್ ಸಿಕ್ಕಾಗಿದೆ. ಒಂದೇ ಏಟಿಗೆ ವೀಕ್ಷಕರು ಶಾಕ್ ಮೇಲೆ ಶಾಕ್ ಆಗುವಂಥ ಟ್ವಿಸ್ಟ್ ಕೊಟ್ಟಿದ್ದಾರೆ ಡೈರೆಕ್ಟರ್. ಸೀರಿಯಲ್‌ಗಳನ್ನು ಎಳೆಯದೇ, ವೀಕ್ಷಕರಿಗೆ ಬೋರ್ ಆಗದೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಹೇಗೆ ಕೊಡಲು ಸಾಧ್ಯ ಎನ್ನುವುದಕ್ಕೆ ಅಮೃತಧಾರೆ ಸೀರಿಯಲ್ ಸಾಕ್ಷಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ.
ಶಕುಂತಲಾಳಿಗೆ ಜಯ
ಅಷ್ಟಕ್ಕೂ ಇದೀಗ, ಶಕುಂತಲಾಗೆ ಜಯ ಸಿಕ್ಕಿದೆ. ಅವಳಿ ಮಕ್ಕಳ ಸತ್ಯವನ್ನು ಶಕುಂತಲಾ ಭೂಮಿಕಾಗೆ ಹೇಳಿದ್ದಾಳೆ. ಆದರೆ ಭೂಮಿಕಾ ಈ ಬಗ್ಗೆ ಗೌತಮ್‌ಗೆ ಕೂಡ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದಾಳೆ. ಪತಿಯನ್ನು ಅಷ್ಟು ಪ್ರೀತಿ ಮಾಡುವವಳು ಕೊನೆಯ ಪಕ್ಷ ಒಂದು ಮಾತನ್ನಾದರೂ ಕೇಳಬಹುದಿತ್ತಲ್ಲವಾ ಎನ್ನುವ ಪ್ರಶ್ನೆ ವೀಕ್ಷಕರ ಮನಸ್ಸಿನಲ್ಲಿ ಹಾಗೆಯೇ ಉಳಿದು ಬಿಡುತ್ತದೆ.
ಪತಿಯ ಬಗ್ಗೆ ಭೂಮಿಕಾ ಅಸಮಾಧಾನ
ಆದರೆ ಪತಿ ತನಗೆ ಮೋಸ ಮಾಡಿದ್ದಾನೆ ಎನ್ನುವ ಕಾರಣಕ್ಕೆ ಭೂಮಿಕಾಗೆ ಘಾಸಿಯಾಗಿದೆ. ಆದರೆ ಈ ಸತ್ಯವನ್ನು ಭೂಮಿಕಾಗೆ ಹೇಳದೇ ಇರುವುದಕ್ಕೆ ಬಹು ದೊಡ್ಡ ಕಾರಣವೇ ಇದೆ. ಆದರೂ ಅದನ್ನು ಆಕೆ ಯೋಚನೆ ಮಾಡದೇ ಮನೆಬಿಟ್ಟು ಹೋಗಿದ್ದಾಳೆ.
ಗೌತಮ್‌ಗೆ ತಿಳಿದ ವಿಷಯ
ಇತ್ತ ಜೈದೇವ್ ಮನೆಗೆ ಬಂದಾಗ ಶಕುಂತಲಾ ಎಲ್ಲಾ ವಿಷಯವನ್ನು ಆತನಿಗೆ ಹೇಳುವಾಗ ಗೌತಮ್ ಕೇಳಿಸಿಕೊಂಡಿದ್ದಾನೆ. ತಾನು ಮೋಸ ಹೋಗಿರುವುದು ತಿಳಿದಿದೆ. ಈ ಆಸ್ತಿಗಾಗಿ ಹೀಗೆಲ್ಲಾ ಮಾಡಿರುವುದು ಎಂದು ಕೇಳಿ ಆತನಿಗೆ ಭಾರಿ ನೋವಾಗಿದೆ. ತನ್ನ ತಾಯಿಯಂತೆ ನೋಡಿಕೊಂಡು ಆಕೆಯನ್ನು ನಂಬಿದ್ದಕ್ಕಾಗಿ ಮನನೊಂದ ಗೌತಮ್ ಎಲ್ಲಾ ಆಸ್ತಿಯನ್ನೂ ಬಿಟ್ಟುಕೊಟ್ಟು ಹೊರಟು ಹೋಗಿದ್ದಾನೆ.
ಪತ್ನಿಯ ಅರಸಿ ಹೊರಟ ಗೌತಮ್
ಪತ್ನಿ ಮತ್ತು ಮಕ್ಕಳನ್ನು ಅರಸಿ ಹೊರಟಿದ್ದಾನೆ ಗೌತಮ್. ಐದು ವರ್ಷ ಹಾಗೆಯೇ ಸಾಗಿದೆ. ಕೊನೆಗೆ ದಂಪತಿ ಒಂದಾಗುವ ಕಾಲ ಬಂದೇ ಬಿಟ್ಟಿದೆ. ಗೌತಮ್‌ಗೆ ಮಗ ಆಕಾಶ್ ಸಿಕ್ಕಿದ್ದಾನೆ. ಆದರೆ ಅಲ್ಲಿಗೆ ಬಂದ ಭೂಮಿಕಾ ಪತಿಯನ್ನು ನೋಡಿ ಸಿಟ್ಟುಗೊಂಡು ಹೋಗಿದ್ದಾಳೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್
ಆದರೆ ಟ್ವಿಸ್ಟ್ ಇರುವುದು ಇಲ್ಲಿಯೇ. ಅದೇನೆಂದರೆ, ಐದು ವರ್ಷಗಳ ಬಳಿಕ ಭೂಮಿಕಾ ಮತ್ತು ಗೌತಮ್ ಮಗ ಆಕಾಶ್ ಪಾತ್ರಧಾರಿ ನಿಜಕ್ಕೂ ಆನಂದ್ ಪಾತ್ರಧಾರಿಯಾಗಿರುವ ಆನಂದ್ ಕುಮಾರ್ ಅವರ ಪುತ್ರ. ಈತನ ಹೆಸರು ದುಷ್ಯಂತ್ ಚಕ್ರವರ್ತಿ.
ಈಗಾಗಲೇ ಸೂಪರ್‌ಸ್ಟಾರ್
ದುಷ್ಯಂತ್ ಇದಾಗಲೇ ಸೂಪರ್‌ಸ್ಟಾರ್ ಆಗಿದ್ದಾನೆ. ಇದಾಗಲೇ ಕೆಲವು ಸೀರಿಯಲ್‌ಗಳಲ್ಲಿ ಈತ ನಟಿಸಿದ್ದು, ಈಗಲೂ ನಟನಾ ವೃತ್ತಿ ಮುಂದುವರೆಸಿದ್ದಾನೆ. ಈ ಹಿಂದೆ ದುಷ್ಯಂತ್, ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದಲ್ಲಿ ಬಾಲನಟನಾಗಿ ದುಷ್ಯಂತ್ ನಟಿಸಿದ್ದ. ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’ ಸೆಟ್‌ನಲ್ಲಿ ಅಪ್ಪು ಜೊತೆಗೆ ದುಷ್ಯಂತ್ ಒಂದಷ್ಟು ಸಮಯ ಕಳೆದಿದ್ದ. ಅದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. 'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3' ರಿಯಾಲಿಟಿ ಶೋನಲ್ಲಿ ದುಷ್ಯಂತ್ ರನ್ನರ್ ಅಪ್ ಸ್ಥಾನ ಗಳಿಸಿದ್ದಾನೆ. ಈಗ ಆತ, ದಿವ್ಯಾ ಉರುಡುಗ, ರಿತ್ವಿಕ್ ಮಠದ್ ನಟನೆಯ ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾನೆ.