ಪೋರ್ನ್‌ ವಿಡಿಯೋ ನೋಡಿ ಕಲಿತಿರುವೆ, ತುಂಬಾ ನಾಟಿ ಫೋಟೋ ಕಳುಹಿಸಿದೆ; ಶಾಕಿಂಗ್ ಹೇಳಿಕೆ ಕೊಟ್ಟ ಕನ್ನಡತಿ ಲಕ್ಷಿ!

ನಟಿ ಲಕ್ಷ್ಮಿ ರೈ ಹಳೆ ಸಂದರ್ಶನ ಮತ್ತೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಡೇಟಿಂಗ್‌ ಹೋಗಲು ಪೋಷಕರಿಗೆ ಸುಳ್ಳು ಹೇಳಿದ್ದಾರಂತೆ...

Actress Lakshmi Raai talks openly about learning from adult film vcs

ವಾಲ್ಮಿಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ ರೈ 5 ವರ್ಷಗಳ ಹಿಂದೆ ಹಿಂದಿ ಯುಟ್ಯೂಬ್ ಚಾನಲ್‌ವೊಂದರಲ್ಲಿ ನೀಡಿದ ಸಂದರ್ಶನ ಮತ್ತೊಮ್ಮೆ ವೈರಲ್ ಆಗುತ್ತಿದೆ. ಕೆಲವೊಂದು ಘಟನೆಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ ತಮ್ಮ ಜೀವನದಲ್ಲಿ ಹಾಗೆ ನಡೆದಿದ್ದರೆ ಒಪ್ಪಿಕೊಳ್ಳಬೇಕು ಎನ್ನುವ ಸಣ್ಣ ಆಟ. ಯಾರಿಗೂ ಯಾವುದಕ್ಕೂ ಕೇರ್ ಮಾಡದೆ ಲಕ್ಷ್ಮಿ ರೈ ಬೋಲ್ಡ್ ಆಗಿ ಉತ್ತರಿಸಿದ್ದಾರೆ.

ಎಂದಾದರೂ ತುಂಡು ಬಟ್ಟೆ ಧರಿಸಿ ಯಾಕಾದರೂ ಇದನ್ನು ಹಾಕಿಕೊಂಡೆ ಎಂದು ಯೋಚನೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದಾಗ 'ತುಂಡು ಬಟ್ಟೆ ಹಾಕಿಕೊಂಡು ಹಲವು ಸಲ ಬೇಸರ  ಮಾಡಿಕೊಂಡಿರುವೆ' ಎಂದಿದ್ದಾರೆ ಲಕ್ಷ್ಮಿ. ಅಲ್ಲದೆ ಹುಡುಗ ವಿಚಾರದಲ್ಲಿ ತಂದೆ ತಾಯಿಗೆ ಸುಳ್ಳು ಹೇಳಿದ್ದೀರಾ ಎಂದು ಕೇಳಿದಾಗ 'ಹೊರಗಡೆ ಹುಡುಗನ ಜೊತೆ ಡೇಟಿಂಗ್ ಹೋಗಲು ಸುಳ್ಳು ಹೇಳಿರುವೆ' ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ಇಷ್ಟು ಹೇಳಿದ ಮೇಲೆ Love at First sight ಮೇಲೆ ನಂಬಿಕೆ ಇರಬೇಕು ಅಲ್ವಾ? 'ಜೀವನದಲ್ಲಿ ಲವ್ ಅಟ್‌ ಫಸ್ಟ್‌ ಸೈಟ್‌ ಫೀಲ್ ಆಗಿದೆ...ಒಂದು ಸಲ ಅಲ್ಲ ಹಲವು ಸಲ' ಎಂದು ಹೇಳಿ ನಕ್ಕಿದ್ದಾರೆ.

ಸೆಕ್ಸ್‌ ವೇಳೆ ಹುಡುಗರ 'ಸೈಜ್‌' ಖಂಡಿತಾ ಮುಖ್ಯವಾಗುತ್ತದೆ ಎಂದ ನಟಿ ಕೃತಿ!

ಇಷ್ಟೇ ಮಾಡಿರುವ ಹುಡುಗ ಪಾರ್ಟನರ್ ಫೋನ್ ಚೆಕ್ ಮಾಡಲ್ವಾ? 'ನನ್ನ ಪಾರ್ಟನರ್ ಫೋನ್‌ನ ಆಗಾಗ ಚೆಕ್ ಮಾಡಿರುವೆ. ನಾನೊಬ್ಬಳೇ ಅಲ್ಲ ಅನೇಕರು ಚೆಕ್ ಮಾಡುತ್ತಾರೆ. ಹುಡುಗರು ತುಂಬಾ ವಿಚಾರಗಳನ್ನು ಮುಚ್ಚಿಡುತ್ತಾರೆ ಆದರೆ ಹುಡುಗಿಯರು ಹಾಗೆ ಮಾಡಲ್ಲ' ಎನ್ನುತ್ತಾರೆ ಲಕ್ಷ್ಮಿ. ಹಾಗಿದ್ದರೆ ತಮಾಷೆಗಾದರೂ ನಾಟಿ ನಾಟಿ ಫೋಟೋ ಕಳುಹಿಸಿದ್ದೀರಾ ಎಂದಾಗ 'ನಾನು ತುಂಬಾ ಜನರಿಗೆ ನಾಟಿ ಫೋಟೋಗಳನ್ನು ಕಳುಹಿಸಿರುವೆ ಯಾವ ರೀತಿ ಎಂದು ತುಂಬಾ ಡಿಟೇಲ್ ಆಗಿ ಹೇಳಲು ಆಗಲ್ಲ' ಎಂದು ಸುಮ್ಮನಾಗಿದ್ದಾರೆ. ಮಾಜಿ ಪ್ರಿಕರನನ್ನು ನೆನಪಿಸಿಕೊಂಡಿದ್ದೀರಾ ಎಂದಾಗ 'ನನ್ನ ಮಾಜಿ ಪ್ರಿಯಕರನನ್ನು ಓಪನ್ ಆಗಿ ಒಮ್ಮೆ ಡೇಟಿಂಗ್ ಕರೆದುಕೊಂಡು ಹೋಗಿರುವೆ' ಎಂದಿದ್ದಾರೆ.  

2 ಲಕ್ಷ ಹನಿಮೂನ್ ಪ್ಯಾಕೇಜ್‌ನಲ್ಲಿ ಮಾಲ್ಡೀವ್ಸ್‌ಗೆ ಹೊರಟ ಸೋನು ಗೌಡ; ಸಿಗರೇಟ್‌ ಬೆಲೆ 1600 ರೂ. ಎಂದು ಬೇಸರ!

ನೋಡಲು ಸೈಲೆಂಟ್ ಆಗಿ ಕಾಣಿಸುವ ಲಕ್ಷ್ಮಿ ಅಡಲ್ಟ್‌ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದಾಗ 'ಅಡಲ್ಟ್ ಸಿನಿಮಾ ನೋಡಿ ನಾನು ಹೊಸತು ವಿಚಾರಗಳು ಕಲಿತಿರುವೆ' ಎಂದು ಬೋಲ್ಡ್‌ ಆಗಿ ಸತ್ಯ ಒಪ್ಪಿಕೊಳ್ಳುತ್ತಾರೆ. 'ನನ್ನ ಫ್ರೆಂಡ್ ಡ್ರಿಂಕ್‌ನ ನಾನು ತೆಗೆದುಕೊಂಡಿರುವೆ. ಅಪರಿಚಿತರ ಜೊತೆ ನಾನು ಪಾರ್ಟಿ ಮಾಡಿರುವೆ ಆದರೆ ಟಿಂಡರ್‌ನಲ್ಲಿ ಸ್ನೇಹ ಮಾಡಿಕೊಂಡು ಡೇಟಿಂಗ್ ಹೋಗಿಲ್ಲ ಈ ಡೇಟಿಂಗ್ ಆಪ್‌ನಲ್ಲಿ ನನಗೆ ನಂಬಿಕೆ ಇಲ್ಲ. ಅದೆಷ್ಟೋ ಜನರಿದ್ದಾರೆ ಅವರ ಜೊತೆ ಹೋಗಬೇಕು ಯಾಕೆ ಗೊತ್ತಿಲ್ಲದವರು ಜೊತೆ ಹೋಗಿ ಅರ್ಥ ಮಾಡಿಕೊಳ್ಳಬೇಕು' ಹೀಗೆ ಸಾಕಷ್ಟು ವಿಚಾರಗಳನ್ನು ಬಹಿರಂಗವಾಗಿ ರಿವೀಲ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios