Asianet Suvarna News Asianet Suvarna News

2 ಲಕ್ಷ ಹನಿಮೂನ್ ಪ್ಯಾಕೇಜ್‌ನಲ್ಲಿ ಮಾಲ್ಡೀವ್ಸ್‌ಗೆ ಹೊರಟ ಸೋನು ಗೌಡ; ಸಿಗರೇಟ್‌ ಬೆಲೆ 1600 ರೂ. ಎಂದು ಬೇಸರ!

ಇಬ್ಬರೇ ಹೆಣ್ಣು ಮಕ್ಕಳಿದ್ದರೂ ಹನಿಮೂನ್ ಪ್ಯಾಕೇಜ್ ಆಯ್ಕೆ ಮಾಡಿಕೊಂಡ ಸೋನು ಗೌಡ. ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ ವಿಡಿಯೋಗಳು..... 

Bigg boss Sonu Gowda visits maldivs in honeymoon package vcs
Author
First Published Sep 6, 2023, 10:13 AM IST

ಬಿಗ್ ಬಾಸ್ ಸುಂದರಿ ಸೋನು ಗೌಡ ಕೆಲವು ದಿನಗಳಿಂದ ಮಾಲ್ಡೀವ್ಸ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಸ್ನೇಹಿತೆ ಜೊತೆ ಇಡೀ ಮಾಲ್ಡೀವ್ಸ್‌ ಸುತ್ತಾಡಿಕೊಂಡು ಯುಟ್ಯೂಬ್ ವ್ಲಾಗ್ ಮಾಡುತ್ತಿದ್ದಾರೆ. ಅಲ್ಲಿನ ಎಂಜಾಯ್‌ಮೆಂಟ್‌ನಲ್ಲಿ ಮುಳುಗಿ ಸೋನು ಬಿಕಿನಿ ಧರಿಸಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.

ಹನಿಮೂನ್ ಪ್ಯಾಕೇಜ್?

ಸೋನು ಗೌಡ ಮತ್ತು ಸ್ನೇಹಿತೆ ಮಾಲ್ಡೀವ್ಸ್‌ ಟ್ರಿಪ್‌ಗೆ ಹನಿಮೂನ್ ಪ್ಯಾಕೇಜ್‌ನಲ್ಲಿ ಹೋಗಿದ್ದಾರೆ ಎನ್ನಲಾಗಿದೆ. 'ಹನಿಮೂನ್ ಪ್ಯಾಕೇಜ್‌ನಲ್ಲಿ ಒಂದು ಜ್ಯೂಸ್‌ ಕೂಡ ಕೊಡುವುದಿಲ್ಲ. ನಾವು ಕಾಫಿ ಬೇಕು ಎಂದು ಕೇಳಿದರೆ ಅವರು ಹಾಲಿನ ಪೌಡರ್ ತಂದುಕೊಟ್ಟಿದ್ದಾರೆ ಇಲ್ಲಿ ಆಗುತ್ತಿರುವುದನ್ನು ನೋಡಿ ನಕ್ಕಿ ನಕ್ಕಿ ಸಾಕಾಗಿದೆ. ನಾವು ಹನಿಮೂನ್ ಪ್ಯಾಕೇಜ್‌ನಲ್ಲಿ ಬಂದಿರುವುದಕ್ಕೆ ಕೇವಲ 2 ಲಕ್ಷ ಆಯ್ತು. ಮಾಲ್ಡೀವ್ಸ್‌ ಎಂಜಾಯ್ ಮಾಡುತ್ತಿದ್ದೀನಿ ಹೀಗಾಗಿ ನಿಜ ಹೇಳಬೇಕು ನಾನು ಇಲ್ಲಿ ಸ್ಮೋಕ್ ಮಾಡಿದೆ ಇಲ್ಲಿ ಒಂದು ಸಿಗರೇಟ್ ಪ್ಯಾಕೇಟ್ ಬೆಲೆ 20 ಡಾಲರ್ ಅಂದ್ರೆ ಒಂದು ಸಿಗರೇಟ್‌ಗೆ 82 ಡಾಲರ್ ಲೆಕ್ಕ ಬಿತ್ತು. ಫ್ಲೈಟ್‌ನಲ್ಲಿ ಪ್ರಯಾಣ ಮಾಡುವಾಗ ಯಾರೂ ಲೈಟರ್ ಮತ್ತು ಸಿಗರೇಟ್‌ ಹಿಟ್ಕೊಂಡು ಬರ್ತಾರಾ' ಎಂದು ಸೋನು ಖಾಸಗಿ ಟಿವಿ ಸಂದರ್ಶನಲ್ಲಿ ಮಾಲ್ಡೀವ್ಸ್‌ನಲ್ಲಿ ಲೈವ್‌ನಲ್ಲಿ ಮಾನಾಡಿದ್ದಾರೆ. 

ಒಂದು ಮಿಲಿಯನ್ ಜನ ನೋಡಲಿ ಅಂತ ಬಿಕಿನಿ ವಿಡಿಯೋ ಹಾಕಿದ ಸೋನು ಗೌಡ!

'ಮಾಲ್ಡೀವ್ಸ್‌ಗೆ ಬಂದ ಮೇಲೆ ನಾನು ವೈರಲ್ ಆಗುತ್ತೀನಿ ಎಂದು ಗೊತ್ತಿರಲಿಲ್ಲ. ನಮ್ಮ ಖುಷಿಗೆ ನಾನು ಎಂಜಾಯ್ ಮಾಡಲ್ಲ ಬಿಕಿನಿ ಹಾಕಬೇಕು ಅಲ್ವಾ? ನನಗೆ ಒಂದು ಮಿಲಿಯನ್ ಫಾಲೋವರ್ಸ್ ಆಗಿರುವುದಕ್ಕೆ ನಾನು ಬೇರೆ ಅವರ ತರ ಜಾತ್ರೆ ಆಚರಣೆ ಮಾಡಿಕೊಳ್ಳುವುದಿಲ್ಲ. ನನ್ನ ಬಳಿ ಇನ್ನು ಹೆಚ್ಚಿಗೆ ಬಿಕಿನಿ ವಿಡಿಯೋಗಳು ಇಲ್ಲ ಅಷ್ಟೇ ಇರುವುದು. ನಾವು ಉಳಿಸುಕೊಂಡಿರುವುದು ಸೆಂಟಾರಾ ರೆಸಾರ್ಟ್‌ನಲ್ಲಿ ನಾವು ಸಿಂಗಲ್ ಹೀಗಾಗಿ ನಮಗೆ ತಕ್ಕಂತೆ ಎಂಜಾಯ್ ಮಾಡುತ್ತಿರುವೆ. ಬೆಳಗ್ಗೆ ಎದ್ದು ತಿನ್ನೋದು ಮಲಗೋದು ಫೋಟೋಶೂಟ್ ಮಾಡೋದು ಹಾಗೂ ಸ್ವಿಮ್ಮಿಂಗ್ ಮಾಡುವುದು ಅಷ್ಟೇ ಕೆಲಸ' ಎಂದು ಸೋನು ಗೌಡ ಹೇಳಿದ್ದಾರೆ. 

ಕಾಂತಾರ ಸಿನಿಮಾ ನೋಡಿ 2 ವಾರ ಆಸ್ಪತ್ರೆಯಲ್ಲಿದ್ದ ಬಿಗ್ ಬಾಸ್ ಸೋನು ಗೌಡ

ಟ್ರೋಲ್‌ಗೆ ಕಣ್ಣೀರು:

'ಇಷ್ಟೊಂದು ಶೋಕಿ ಮಾಡುತ್ತೀಯಾ ಜನರಿಗೆ ಸಹಾಯ ಮಾಡುವುದಕ್ಕೆ ಆಗಲ್ವಾ ಎಂದು ಕೇಳುತ್ತಾರೆ. ಒಬ್ರು ಸಹಾಯ ಮಾಡಿ ವಿಡಿಯೋ ಮಾಡುತ್ತಾರೆ ಆದರೆ ನಾನು ಹಾಗಲ್ಲ ...ನಿಜಕ್ಕೂ ತರಕಾರಿ ಹಣ್ಣು ದಿನಸಿ ಪ್ರತಿಯೊಂದನ್ನು ಏನೇ ಉಳಿದರೂ ಯಾವುತ್ತೂ ವೇಸ್ಟ್‌ ಮಾಡಿಲ್ಲ ಅನಾಥಾಶ್ರಮಕ್ಕೆ ನೀಡುತ್ತೀವಿ ಅದನ್ನು ವಿಡಿಯೋ ಮಾಡಿ ಹಾಕಲ್ಲ ನನಗೆ ಹಿಂಸೆ ಆಗುತ್ತಿದೆ. ಏನೂ ತೋರಿಸಿಕೊಂಡು ಮಾಡುವುದಿಲ್ಲ. ಜನರ ಟ್ರೋ ನೋಡಿ ನನಗೆ ಮೆಂಟಲಿ ಶಾಕ್ ಆಗುತ್ತಿದೆ...ಯಾರ ಜೊತೆನೂ ಮಾತನಾಡಬಾರದು ಜೊತೆಗಿರಬಾರದು ಅನಿಸುತ್ತಿದೆ. ಬಿಗ್ ಬಾಸ್‌ನಿಂದ ಬಂದ್ಮೇಲೆ ನನ್ನನ್ನು ಬೀಪ್‌ ಪದಗಳಿಂದ ಮಾತನಾಡಿಸುತ್ತಿದ್ದೀರಿ. ನನ್ನ ನೋವು ಯಾರಿಗೂ ಹೇಳಿಕೊಳ್ಳಲು ಆಗಲ್ಲ ಹೀಗಾಗಿ ಯಾರ ಜೊತೆಗೂ ವಿಡಿಯೋ ಮಾಡಲ್ಲ. ಟ್ರೋಲ್‌ಗಳು ಮಾಡುವ ಕೆಟ್ಟ ಕೆಲಸದಿಂದ ಸಾವಿರಾರು ಹೆಣ್ಣುಮಕ್ಕಳ ಜೀವನ ಹಾಳಾಗುತ್ತಿದೆ. ನಾನು ಇನ್ನೂ ಬದುಕಿದ್ದೀನಿ ಅಂದ್ರೆ ನನ್ನ ಫ್ಯಾಮಿಲಿಗೋಸ್ಕರ' ಎಂದು ಸೋನು ಗೌಡ ಕಣ್ಣೀರಿಟ್ಟಿದ್ದಾರೆ. 

Follow Us:
Download App:
  • android
  • ios