ರೆಸ್ಟೋರೆಂಟ್‌ನಲ್ಲಿ ಕುಟುಂಬದೊಂದಿಗೆ ಊಟ ಮಾಡುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬರಿಗೆ, ಪಾಶ್ಚಿಮಾತ್ಯ ಮಹಿಳೆಯೊಬ್ಬರು 'ಭಾರತೀಯನಾಗಿದ್ದರೂ ಉತ್ತಮ ಸುವಾಸನೆ ಬೀರುತ್ತಿದ್ದೀರಿ' ಎಂದು ಜನಾಂಗೀಯ ನಿಂದನೆಯ ಮಾತುಗಳನ್ನಾಡಿದ್ದಾರೆ. ಈ 'ಸಾಂದರ್ಭಿಕ ಜನಾಂಗೀಯತೆ'ಗೆ ಆ ವ್ಯಕ್ತಿ ತೋರಿದ ಸಂಯಮದ ಮತ್ತು ಪ್ರಬುದ್ಧ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ರೆಸ್ಟೋರೆಂಟ್ ಒಂದರಲ್ಲಿ ತನ್ನ ಕುಟುಂಬದೊಂದಿಗೆ ಊಟ ಮಾಡುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬರಿಗೆ ಮಹಿಳೆಯೊಬ್ಬರು ನೀಡಿದ 'ಹೊಗಳಿಕೆ' (Compliment) ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಮಹಿಳೆಯೊಬ್ಬರು ಭಾರತೀಯ ವ್ಯಕ್ತಿಯ ಮೇಜಿನ ಬಳಿಗೆ ಬಂದು, "ಕ್ಷಮಿಸಿ ಸರ್, ಒಬ್ಬ ಭಾರತೀಯ ಪುರುಷ ನೀವು ತುಂಬಾ ಚೆನ್ನಾಗಿ ಸುವಾಸನೆ ಬೀರುತ್ತಿದ್ದೀರಿ"ಎಂದು ಹೇಳುವುದು ದಾಖಲಾಗಿದೆ.
ಈ ಮಾತು ಕೇಳಿ ಆಶ್ಚರ್ಯಚಕಿತರಾದ ಆ ವ್ಯಕ್ತಿ 'ಏನೆಂದು ಮತ್ತೊಮ್ಮೆ ಹೇಳಿ' ಎಂದು ಕೇಳಿದಾಗ, ಆ ಮಹಿಳೆ ಇನ್ನಷ್ಟು ಮುಂದುವರಿದು: "ನೀವು ಒಬ್ಬ ಭಾರತೀಯನಾಗೊ ಅತ್ಯಂತ ಉತ್ತಮ ವಾಸನೆ ಹೊಂದಿದ್ದೀರಿ. ನೀವು ಕರಿಯರಂತೆ ವಾಸನೆ ಬರುತ್ತಿಲ್ಲ ಎಂದು ಜನಾಂಗೀಯ ನಿಂದನೆಯ ರೀತಿಯಲ್ಲಿ ಮಾತನಾಡಿದ್ದಾರೆ.
ಸಾಂದರ್ಭಿಕ ಜನಾಂಗೀಯತೆ
ತನ್ನ ಹೆಣ್ಣುಮಕ್ಕಳೊಂದಿಗೆ ಊಟ ಮಾಡುತ್ತಿದ್ದ ಆ ವ್ಯಕ್ತಿಯನ್ನು ಅಡ್ಡಿಪಡಿಸಿ, ತಾನು ಅತ್ಯಂತ ದಯೆಯಿಂದ ಹೊಗಳುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಆ ಮಹಿಳೆ ಈ ರೀತಿ ಮಾತನಾಡಿದ್ದರು. ವೀಡಿಯೊ ನೋಡಿದ ನೆಟ್ಟಿಗರಿಗೆ, ವಿಶೇಷವಾಗಿ ಭಾರತೀಯರಿಗೆ ಈ ಸಂಭಾಷಣೆ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ. ಯಾವುದೇ ಆರ್ಭಟವಿಲ್ಲದೆ, ಅತ್ಯಂತ ನಯವಾದ ಮಾತುಗಳಲ್ಲೇ ಪಾಶ್ಚಿಮಾತ್ಯರಲ್ಲಿ ಆಳವಾಗಿ ಬೇರೂರಿರುವ 'ಸಾಂದರ್ಭಿಕ ಜನಾಂಗೀಯತೆ' (Casual Racism) ಇಲ್ಲಿ ಎದ್ದು ಕಾಣುತ್ತಿತ್ತು.
ಭಾರತೀಯ ವ್ಯಕ್ತಿಯ ಸಭ್ಯ ಹಾಗೂ ಶಾಂತ ಪ್ರತಿಕ್ರಿಯೆಗೆ ಮೆಚ್ಚುಗೆ
ಈ ಘಟನೆಯಲ್ಲಿ ಜನರ ಗಮನ ಸೆಳೆದದ್ದು ಆ ಮಹಿಳೆಯ ಕೀಳು ಕಾಮೆಂಟ್ ಅಲ್ಲ, ಬದಲಾಗಿ ಆ ಭಾರತೀಯ ವ್ಯಕ್ತಿ ಅದನ್ನು ನಿಭಾಯಿಸಿದ ರೀತಿ. ಆ ವ್ಯಕ್ತಿ ಯಾವುದೇ ಕೋಪವನ್ನು ಪ್ರದರ್ಶಿಸದೆ, ತೀವ್ರ ಸಂಯಮದಿಂದಲೇ ಪರಿಸ್ಥಿತಿಯನ್ನು ಎದುರಿಸಿದರು.
ಅವರು ಅತ್ಯಂತ ನಯವಾಗಿ, ಇದು ನೀವು ನೀಡುತ್ತಿರುವ ಹೊಗಳಿಕೆಯೇ? ಎಂದು ಕೇಳಿದರು. ಮಹಿಳೆ "ಹೌದು" ಎಂದಾಗ, ಆ ವ್ಯಕ್ತಿ "ಖಂಡಿತವಾಗಿಯೂ ಅದು ಹೊಗಳಿಕೆಯಲ್ಲ. ನೀವು ಅದನ್ನು ಹೇಳಿದ ರೀತಿ ತುಂಬಾ ವಿಚಿತ್ರವಾಗಿದೆ ಮತ್ತು ಆಕ್ಷೇಪಾರ್ಹವಾಗಿದೆ. ಬಹುಶಃ ನೀವು ಮಾತನಾಡುವ ರೀತಿಯನ್ನು ತಿದ್ದುಕೊಳ್ಳುವುದು ಒಳ್ಳೆಯದು" ಎಂದು ಸೌಮ್ಯವಾಗಿಯೇ ಬುದ್ಧಿ ಹೇಳಿದರು. ವ್ಯಕ್ತಿಯ ಈ ನಿರೀಕ್ಷಿತವಲ್ಲದ ಪ್ರಬುದ್ಧ ಪ್ರತಿಕ್ರಿಯೆಯಿಂದ ಆಶ್ಚರ್ಯಚಕಿತಳಾದ ಮಹಿಳೆ, "ಸರಿ" ಎಂದು ಹೇಳಿ ಅಲ್ಲಿಂದ ಹೊರಟಳು
ಪ್ರಿಯಾಂಕಾ ಚೋಪ್ರಾ ಅನುಭವ
ಭಾರತೀಯರು ಎಂದರೆ 'ಕಪ್ಪು ಬಣ್ಣ ವಾಸನೆ ಹೊಡೆಯುತ್ತಾರೆ' ಎಂಬ ತಪ್ಪು ಕಲ್ಪನೆ ಮತ್ತು ಪೂರ್ವಗ್ರಹ ಪಾಶ್ಚಿಮಾತ್ಯ ದೇಶಗಳಲ್ಲಿ ಆಳವಾಗಿ ಬೇರೂರಿದೆ. ಹಾಗಾಗಿ, ಕರಿಯ ವಾಸನೆ ಬಾರದಿರುವುದೇ ಒಂದು ದೊಡ್ಡ ಸಾಧನೆ ಅಥವಾ ಹೊಗಳಿಕೆಗೆ ಅರ್ಹವಾದ ವಿಚಾರ ಎಂಬಂತೆ ಆ ಮಹಿಳೆ ಆಲೋಚಿಸಿದ್ದರು.
ಈ ಹಿಂದೆ ಜಾಗತಿಕ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಕೂಡ ಅಮೆರಿಕದಲ್ಲಿ ತಮ್ಮ ಹದಿಹರೆಯದ ಶಾಲಾ ದಿನಗಳಲ್ಲಿ ಅನುಭವಿಸಿದ ಜನಾಂಗೀಯ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದರು. "ಶಾಲೆಯಲ್ಲಿ ಸಹಪಾಠಿ ಹುಡುಗಿಯರು 'ನಿನ್ನ ಬಳಿ ಬಂದರೆ ಕರಿ ವಾಸನೆ ಬರುತ್ತದೆ, ಕಾರ್ಯಕ್ರಮ ನಡೆಯುವಾಗ ಕರಿ ವಾಸನೆ ಆವರಿಸುತ್ತದೆ, ಈಕೆಗೆ ಸ್ನಾನ ಮಾಡಲು ಸಮಯವಿಲ್ಲ ಅನಿಸುತ್ತದೆ' ಎಂದು ನಿಂದಿಸುತ್ತಿದ್ದರು. ಲಾಕರ್‌ಗಳಿಗೆ ತಳ್ಳುವುದು, ಬಾತ್‌ರೂಮ್‌ಗಳಲ್ಲಿ ಕೆಟ್ಟದಾಗಿ ಬರೆಯುವುದನ್ನು ಮಾಡುತ್ತಿದ್ದರು" ಎಂದು ಪ್ರಿಯಾಂಕಾ ಪಾಡ್‌ಕಾಸ್ಟ್ ಒಂದರಲ್ಲಿ ನೆನಪಿಸಿಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ
ಈ ವೀಡಿಯೊ ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಪರಿಚಿತರ ಬಳಿ ಹೋಗಿ ಇಂತಹ ಕೀಳು ಮಾತುಗಳನ್ನು ಆಡುವ ಧೈರ್ಯ ಅವಳಿಗೆ ಎಲ್ಲಿಂದ ಬಂತು? ಎಂದು ಹಲವರು ಪ್ರಶ್ನಿಸಿದ್ದಾರೆ.
ಇದೇ ಮಾತುಗಳನ್ನು ಒಬ್ಬ ಬಿಳಿಯ ವ್ಯಕ್ತಿಗೆ ಹೇಳಿದ್ದರೆ, ಅದನ್ನು ಜನಾಂಗೀಯ ನಿಂದನೆ ಮತ್ತು ಕಿರುಕುಳ ಎಂದು ತಕ್ಷಣವೇ ಕರೆದು ದೊಡ್ಡ ಗಲಾಟೆ ಮಾಡುತ್ತಿದ್ದರು ಎಂದು ಮತ್ತೊಬ್ಬ ಬಳಕೆದಾರರು ದ್ವಂದ್ವ ಮಾನದಂಡವನ್ನು ಎತ್ತಿ ತೋರಿಸಿದ್ದಾರೆ. ಅದೇ ಸಮಯದಲ್ಲಿ, ಅತ್ಯಂತ ಅಹಿತಕರ ವಾತಾವರಣದಲ್ಲೂ ತಾಳ್ಮೆ ಕಳೆದುಕೊಳ್ಳದೆ ವಿವೇಚನೆಯಿಂದ ಉತ್ತರಿಸಿದ ಭಾರತೀಯ ವ್ಯಕ್ತಿಯ ಸಂಯಮವನ್ನು ಜಗತ್ತಿನಾದ್ಯಂತ ಜನರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

