Asianet Suvarna News Asianet Suvarna News

Feelfree: ಅವಳ ಹಿಂಭಾಗ ನೋಡಿದರೆ ಕಾಮೋದ್ರೇಕ! ಇದು ತಪ್ಪಾ?

ನಾನಾ ವ್ಯಕ್ತಿಗಳ ಕಾಮೋದ್ರೇಕದ ಪರಿ ನಾನಾ ಥರದಲ್ಲಿ ಇರುತ್ತದೆ. ಇಲ್ಲೊಬ್ಬನಿಗೆ ಹೆಂಡತಿಯ, ಬೇರೆ ಸ್ತ್ರೀಯರ ಗುದ ನೋಡಿದರೆ ಮಾತ್ರವೇ ಲೈಂಗಿಕ ಉದ್ರೇಕವಾಗುವುದಂತೆ. ಇದೊಂದು ಸಮಸ್ಯೆಯಾ?

 

 

Things must know about male sex drive and his attraction towards women
Author
Bengaluru, First Published Nov 22, 2021, 4:20 PM IST
  • Facebook
  • Twitter
  • Whatsapp

ಪ್ರಶ್ನೆ: ನಾನು ಮೂವತ್ತು ವರ್ಷದ ಗಂಡಸು. ಅವಿವಾಹಿತನಾಗಿದ್ದಾಗ ಮಹಿಳೆಯರ ಹಿಂದಿನ ಭಾಗ ಕಂಡು ಉದ್ರೇಕಿತನಾಗಿ ಹಸ್ತಮೈಥುನ (Masturbation) ಮಾಡಿಕೊಳ್ಳುತ್ತಿದ್ದೆ. ಕಡೆಗೆ ಇದೊಂದು ಅಭ್ಯಾಸವೇ ಆಗಿಹೋಯಿತು. ಇತ್ತೀಚೆಗೆ ನನಗೆ ಮದುವೆಯಾಯಿತು. ಹೆಂಡತಿ (wife) ನನ್ನಿಷ್ಟದಂತೆ ಸಹಕರಿಸುತ್ತಾಳೆ. ಆದರೆ ನನಗೆ ಆಕೆಯನ್ನು ಮುಂದಿನಿಂದ ನೋಡಿದ್ದಕ್ಕಿಂತಲೂ ಹೆಚ್ಚಾಗಿ ಹಿಂದಿನಿಂದ ನೋಡಿದಾಗಲೇ ಹೆಚ್ಚು ಉದ್ರೇಕವಾಗುತ್ತದೆ. ಇದರ ಬಗ್ಗೆ ಹೇಳಿದಾಗ ನನ್ನ ಹೆಂಡತಿ ನಗುತ್ತಾಳೆ. ಇತರ ಸುಂದರ ಸ್ತ್ರೀಯರ ಬೆನ್ನಿನ ಕೆಳಭಾಗ ಕಂಡು ಉದ್ರೇಕಿತನಾಗಿ ಹೆಂಡತಿಯಲ್ಲಿ ಸುಖಪಟ್ಟಾಗ ಮಾತ್ರ ಆಕೆ ಸಿಟ್ಟು ಮಾಡಿಕೊಳ್ಳುತ್ತಾಳೆ. ಇದು ತಪ್ಪಾ? ಇದನ್ನು ಬಿಡುವುದು ಹೇಗೆ?

ಉತ್ತರ: ವೈಯಕ್ತಿಕ ಲೈಂಗಿಕ ಆಸಕ್ತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಬಂದಾಗ ಇದು ಸರಿ ಅಥವಾ ಇದು ತಪ್ಪು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಪೃಷ್ಠ (Anal) ಭಾಗ ನೋಡಿ ಉದ್ರೇಕಿತರಾಗುವ ನಿಮ್ಮ ಅಭ್ಯಾಸದಿಂದ ಇತರ ಮಹಿಳೆಯರಿಗೆ ಮುಜುಗರವಾಗಿದೆಯೇ, ಅವರಿಗೆ ಅದರಿಂದ ತೊಂದರೆಯಾಗಿದೆಯೇ ಎಂಧು ಗಮನಿಸಿ. ಹಾಗೆ ತೊಂದರೆಯಾಗಿದ್ದರೆ ಅದು ತಪ್ಪು. ನಿಮ್ಮ ಈ ಅಭ್ಯಾಸವನ್ನು ಮನಸ್ಸನ್ನು ನಿಗ್ರಹಿಸುವುದರ ಮೂಲಕ, ಬೇರೆ ಕಡೆ ಕಣ್ಣನ್ನು ಹೊರಳಿಸುವುದರ ಮೂಲಕ ನಿಯಂತ್ರಿಸಬೇಕು. ಕಷ್ಟವಾದರೆ, ಕೌನ್ಸೆಲಿಂಗ್‌ (Counselling) ಪಡೆದು ನಿವಾರಿಸಿಕೊಳ್ಳಬಹುದು. ಆದರೆ ನಿಮ್ಮ ಪತ್ನಿಯಲ್ಲಿ ಇದರ ಸದ್ಬಳಕೆ ಮಾಡಿಕೊಳ್ಳಲು ಸಂಕೋಚ ಪಡಬೇಡಿ. ನಿಮ್ಮ ಲೈಂಗಿಕ ಆದ್ಯತೆಗಳನ್ನು ಹೇಳಿ ಸುಖಪಡುವುದಕ್ಕೆ ಹಾಗೂ ಸುಖ ನೀಡುವುದಕ್ಕೆ ತಾನೇ ದಾಂಪತ್ಯ ಇರುವುದು. ನಿಮಗೆ ಇದ್ದಂತೆ ನಿಮ್ಮ ಪತ್ನಿಗೂ ಇಂಥದೇ ಆಸೆಗಳು ಇರಬಹುದು. ಅದನ್ನೂ ಕಿವಿಗೊಟ್ಟು ಆಲಿಸಿ. ಪರಸ್ಪರ ಹಂಚಿಕೊಳ್ಳಿ. ಆಗ ನಿಮ್ಮ ಲೈಂಗಿಕ ಅನುಭವ ಇನ್ನಷ್ಟು ಮಧುರವಾಗುವುದು. ಅಂದ ಹಾಗೆ, ಇತರ ಸ್ತ್ರೀಯರ ಬೆನ್ನಿನ ಕೆಳಭಾಗ ನೋಡುತ್ತಿರುವುದನ್ನು ಹೆಚ್ಚು ಅಭ್ಯಾಸ ಮಾಡಿಕೊಳ್ಳಬೇಡಿ!

Feelfree: ಮುಖಮೈಥುನ ಆನಂದದಾಯಕವೇ, ಅನಾರೋಗ್ಯಕಾರಿಯೇ?

ಪ್ರಶ್ನೆ : ನಾನು ಇತ್ತೀಚೆಗೆ ಪೋರ್ನ್ (Porn) ವೀಡಿಯೋ ನೋಡಿದೆ. ಅದರಲ್ಲಿ ಅವರು ಹತ್ತಾರು ನಿಮಿಷಗಟ್ಟಲೆ ಬೇರೆ ಬೇರೆ ಭಂಗಿಯಲ್ಲಿ ಸೆಕ್ಸ್ ಮಾಡುತ್ತಿರುತ್ತಾರೆ. ಅದನ್ನು ಕಂಡಾಗ ನಾವು ಮಾಡುತ್ತಿರುವ ಸಂಭೋಗದ ಬಗ್ಗೆ ಅನುಮಾನ ಬರಲು ಶುರುವಾಗಿದೆ. ನಮಗೆ ಅಷ್ಟು ಹೊತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗೋದು ಸಾಧ್ಯವಾಗಲ್ಲ. ಬೇಗ ವೀರ್ಯ ಹೊರಬರುತ್ತೆ. ಲೈಂಗಿಕತೆಯನ್ನು ಬಹಳ ಕಾಲ ನಡೆಸಲು ಏನಾದರೂ ಔಷಧಗಳಿವೆಯೇ? ಹೆಚ್ಚು ಕಾಲ ನಿಮಿರು (Erection) ಉಳಿಸಿಕೊಳ್ಳಲು ಸಾಧ್ಯವೇ?

Feelfree: ಮಗುವಾದ ಬಳಿಕ ಸೆಕ್ಸ್ ಫೀಲ್ ಹೆಚ್ಚಾಗ್ತಿದೆ, ಮನೆಯವ್ರು ಗಂಡನ ಹತ್ರ ಬಿಡ್ತಿಲ್ಲ!

ಉತ್ತರ: ನಿಮ್ಮ ಸಂಭೋಗದಲ್ಲಿ (Sex) ಏನಾಗುತ್ತದೆ ಎಂಬುದನ್ನು ನೀವು ವಿವರವಾಗಿ ಹೇಳಿಲ್ಲ. ನಿಮಗೆ ಶೀಘ್ರಸ್ಖಲನ ಸಮಸ್ಯೆಯಿದ್ದರೆ ಅದನ್ನು ಕೆಗೆಲ್ಸ್ ವ್ಯಾಯಾಮ ಇತ್ಯಾದಿಗಳ ಮೂಲಕ ಪರಿಹರಿಸಿಕೊಳ್ಳಬಹುದು. ನಿಜವಾಗಿ ಲೈಂಗಿಕ ಕ್ರಿಯೆ ಬಹು ದೀರ್ಘ ಕಾಲ ನಡೆಸಲೇನೂ ಸಾಧ್ಯವಿಲ್ಲ. ಅದು ಅರ್ಧ ನಿಮಿಷದಿಂದ ಐದು ನಿಮಿಷದವರೆಗೆ ಎಷ್ಟು ಹೊತ್ತಾದರೂ ಇರಬಹುದು. ನೀವು ನೋಡಿದ ಪೋರ್ನ್‌ನಲ್ಲಿ ಸೆಕ್ಸ್‌ನ ವೈಭವೀಕರಣ ಇರುತ್ತದೆ. ಅದು ರಿಯಲ್ ಅಲ್ಲ ಅನ್ನೋದು ಗೊತ್ತಿರಲಿ. ಮುನ್ನಲಿವಿನಲ್ಲಿ ಜಾಸ್ತಿ ಹೊತ್ತು ತೊಡಗಿಸಿಕೊಳ್ಳೋದು (Fore play) , ಲೈಂಗಿಕ ಕ್ರಿಯೆ (sex) ಒಮ್ಮೆಲೇ ಮಾಡುವ ಬದಲು ಆಗಾಗ ಬ್ರೇಕ್ ಕೊಟ್ಟು ಮಾಡುವುದು ಇತ್ಯಾದಿಗಳಿಂದ ಲೈಂಗಿಕ ಕ್ರಿಯೆ ಕ್ಷಿಪ್ರವಾಗಿ ಮುಗಿಯುವುದನ್ನು ಮುಂದೆ ನೂಕಬಹುದು.

ಆದರೆ ಪೋರ್ನ್ ವೀಡಿಯೋದಲ್ಲಿ ಕಂಡ ಲೈಂಗಿಕ ದೃಶ್ಯಗಳಲ್ಲಿ ವೈಭವೀಕರಣವೇ ಹೆಚ್ಚು, ವಾಸ್ತವ ಕಡಿಮೆ ಅನ್ನೋದು ಗೊತ್ತಿರಲಿ. ಕೆಲವೊಮ್ಮೆ ಗಂಡಸು ಬಹುಕಾಲ ನಿಮಿರಿದ ಶಿಶ್ನದಿಂದ ಸಂಭೋಗ ನಡೆಸುತ್ತಿದ್ದರೆ, ಅದಾಗಲೇ ಉತ್ಕರ್ಷ ತಲುಪಿ ಇಳಿದ ಸ್ತ್ರೀಗೆ ಅದರಿಂದ ತೊಂದರೆ ಉಂಟಾಗುವ ಸಾಧ್ಯತೆಯೇ ಹೆಚ್ಚು. ಕೆಲವರಿಗೆ ದೀರ್ಘಕಾಲಿಕ ನಿಮಿರುವಿಕೆಯ ಸಮಸ್ಯೆಯೂ ಇರಬಹುದು. ಇದೆಲ್ಲ ಜೋಡಿಯಿಂದ ಜೋಡಿಗೆ ಬದಲಾಗುತ್ತದೆ. ನಿಮಗೆ ಯಾವುದು ಸುಖಕರ, ಹಿತಕರ ಎಂದು ನೋಡಿಕೊಳ್ಳಬೇಕು. 

#Feelfree: ಹುಡುಗಿಯರ ಬಗ್ಗೆ ಕುತೂಹಲವಿಲ್ಲ, ಆಂಟಿಯನ್ನು ಕಂಡರೆ ಕಾಮೋದ್ರೇಕ!

Follow Us:
Download App:
  • android
  • ios