Asianet Suvarna News Asianet Suvarna News

Feelfree: ಮುಖಮೈಥುನ ಆನಂದದಾಯಕವೇ, ಅನಾರೋಗ್ಯಕಾರಿಯೇ?

ಮುಖಮೈಥುನದಲ್ಲಿ ಇರುವ ಆನಂದ ಅನುಭವಿಸದೆ ಇರುವವರಷ್ಟೇ ಅದರ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಾರೆ. ಆದರೆ ಸ್ವಚ್ಛತೆಯೂ ಮುಖ್ಯ.

 

Is the oral sex Healthy or dangerous to health
Author
Bengaluru, First Published Oct 30, 2021, 2:23 AM IST

ಪ್ರಶ್ನೆ: ನಾನು ವಿವಾಹಿತೆ. ನನ್ನ ಮದುವೆಯಾಗಿ ಆರು ತಿಂಗಳಾಗಿದೆ. ನನಗೆ ಇಪ್ಪತ್ತಾರು ವರ್ಷ ಹಾಗೂ ಗಂಡನಿಗೆ ಇಪ್ಪತ್ತೆಂಟು ವರ್ಷ. ಮೊದಲ ರಾತ್ರಿಯಿಂದಲೇ ನಮ್ಮ ಸೆಕ್ಸ್ ಲೈಫು (Sex Life) ಚೆನ್ನಾಗಿದೆ. ಸರಾಸರಿ ಪ್ರತಿದಿನ ಸಂಭೋಗಿಸುತ್ತೇವೆ. ಇತ್ತೀಚೆಗೆ ಮುಖ ಮೈಥುನ ಅಥವಾ ಓರಲ್ ಸೆಕ್ಸ್ (Oral Sex) ವಿಚಾರದಲ್ಲಿ ನಮ್ಮಿಬ್ಬರಿಗೆ ಭಿನ್ನಾಭಿಪ್ರಾಯ ಬಂತು. ಅವರು ನನ್ನಿಂದ ಮುಖ ಮೈಥುನವನ್ನು ಬಯಸುತ್ತಿದ್ದಾರೆ. ಮುಖ ಮೈಥುನ ಒಳ್ಳೆಯದು, ತುಂಬಾ ಆನಂದದಾಯಕ ಎಂದು ನನ್ನ ಪತಿ ಹೇಳುತ್ತಾರೆ. ಅವರು ನನಗೂ ಮುಖಮೈಥುನ ಮಾಡಲು ಯತ್ನಿಸಿದ್ದಾರೆ. ಆದರೆ ನಾನು ಅದಕ್ಕೆ ಆಸ್ಪದ ಕೊಟ್ಟಿಲ್ಲ. ನನಗೆ ಅದು ಅನಾರೋಗ್ಯಕರ (Unhealthy) ಎಂದೇ ಅನಿಸುತ್ತದೆ. ಶಿಶ್ನ (penis) ಹಾಗೂ ಯೋನಿ(Vagina)ಗಳನ್ನು ದೇವರು ಮನುಷ್ಯನಿಗೆ ಕೊಟ್ಟಿರುವುದು ಸಂಭೋಗದಿಂದ ಆನಂದ ಹೊಂದಲೆಂದು. ಅಲ್ಲವೇ? ಮುಖಮೈಥುನದಂಥ ಕ್ರಿಯೆಗಳು ದಾಂಪತ್ಯದಲ್ಲಿ(Married Life) ಅಗತ್ಯವೇ? ನೀವು ಏನು ಹೇಳುತ್ತೀರಿ?

ಉತ್ತರ: ನಿಮ್ಮ ಸೆಕ್ಸ್ ಲೈಫು ಸೂಪರ್ ಆಗಿರುವುದು ಸಂತೋಷ. ದೇವರು ಶಿಶ್ನ ಹಾಗೂ ಯೋನಿಗಳನ್ನು ಮನುಷ್ಯನಿಗೆ ಕೊಟ್ಟಿದ್ದಾನೆ, ನಿಜ. ಹಾಗೇ ಬಾಯಿ, ತುಟಿ, ನಾಲಿಗೆಗಳನ್ನೂ ಕೊಟ್ಟಿದ್ದಾನಲ್ಲ! 

#Feelfree: ಹುಡುಗಿಯರ ಬಗ್ಗೆ ಕುತೂಹಲವಿಲ್ಲ, ಆಂಟಿಯನ್ನು ಕಂಡರೆ ಕಾಮೋದ್ರೇಕ!

ಜೋಕ್ ಹಾಗಿರಲಿ. ಮುಖಮೈಥುನ ಅಥವಾ ಓರಲ್ ಸೆಕ್ಸ್ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯವನ್ನು ಹೇಳಿಕೊಂಡಿದ್ದೀರಿ. ಪ್ರಪಂಚದಲ್ಲಿ ಎಲ್ಲ ವಿವಾಹಿತರೂ ಸಂಭೋಗ (Sexual Intercourse) ನಡೆಸುತ್ತಾರೆ ಎಂದೇನಿಲ್ಲ. ಶೇ. 20 ವಿವಾಹಿತರು ವರ್ಷಕ್ಕೆ ಒಂದು ಬಾರಿ ಕೂಡ ಸಂಭೋಗ ನಡೆಸದ ನಿದರ್ಶನಗಳು ಇವೆ. ಅದಕ್ಕೆ ಬೇರೆ ಬೇರೆ ದೈಹಿಕ, ಮಾನಸಿಕ ಕಾರಣಗಳು ಇರುತ್ತವೆ. ಆದರೆ ಮನುಷ್ಯ ಜೀವಿಗೆ ಸಹಜವಾದ, ಸೆಕ್ಸ್ (Sex) ಎಂಬ ಸುಂದರ ಅನುಭವ ಒಂದರಿಂದ ಇವರು ವಂಚಿತರಾಗುತ್ತಾರೆ ಎಂದು ಹೇಳಿದರೆ ತಪ್ಪೇನಿಲ್ಲ.

ಮುಖಮೈಥುನದ ಬಗ್ಗೆಯೂ ಇದನ್ನೇ ಹೇಳಬಹುದು. ಎಲ್ಲ ಸರಿಯಾಗಿದ್ದರೆ, ಓರಲ್ ಸೆಕ್ಸ್ ಎಂಬುದು ತುಂಬಾ ಒಳ್ಳೆಯ, ಸುಖಕರವಾದ ಒಂದು ಅನುಭವ. ಆದರೆ ಇದೇ ವೇಳೆಗೆ ಈ ಕೆಳಗಿನ ಹಲವು ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು. ಕೆಲವು ಅಧ್ಯಯನಗಳು ಹೇಳುವ ಪ್ರಕಾರ, ಆರೋಗ್ಯಕರವಾಗಿರುವ ಶೇ.80 ಮಂದಿ ದಂಪತಿಗಳು ಜೀವನದಲ್ಲಿ ಒಮ್ಮೆಯಲ್ಲ ಒಂದು ಬಾರಿ ಮುಖಮೈಥುನದ ಅನುಭವ ಹೊಂದಿಯೇ ಇರುತ್ತಾರಂತೆ. ಇದನ್ನು ಸರಿಯಾಗಿ ನಡೆಸುವ ಕೌಶಲ ಗೊತ್ತಿದ್ದರೆ ಇದು ಹೆಣ್ಣು ಗಂಡು ಇಬ್ಬರಿಗೂ ಅತ್ಯಂತ ಆನಂದದಾಯಕ. ಆದರೆ ಅದಕ್ಕೂ ಮುನ್ನ ಕೆಲವು ವಿಷಯಗಳು ತಿಳಿದಿರಲಿ. 
ಓರಲ್ ಸೆಕ್ಸ್ ಅಪರಾಧವಲ್ಲ. ಆದರೆ ಸಂಗಾತಿಯ ಒಪ್ಪಿಗೆ ಇಲ್ಲದೆ ಅದನ್ನು ನೆರವೇರಿಸಿದರೆ ಅದು ಅಪರಾಧ. ಈ ಅಪರಾಧಕ್ಕೆ ಕಾನೂನಿನಲ್ಲಿ ಶಿಕ್ಷೆಯೂ ಇದೆ. ಮುಖಮೈಥುನ ಅಸಹ್ಯಕರವಲ್ಲ. ಆಧುನಿಕರಾದ ಜೋಡಿಗಳು ತಮ್ಮ ಸಂಗಾತಿ ಮುಖಮೈಥುನ ಮಾಡಬೇಕು ಎಂದೇ ಬಯಸುತ್ತಾರೆ. 

​Feelfree: ಮಗುವಾದ ಬಳಿಕ ಸೆಕ್ಸ್ ಫೀಲ್ ಹೆಚ್ಚಾಗ್ತಿದೆ, ಮನೆಯವ್ರು ಗಂಡನ ಹತ್ರ ಬಿಡ್ತಿಲ್ಲ!

ಇದು ಅನಾರೋಗ್ಯಕರವೂ ಅಲ್ಲ. ಗುಪ್ತಾಂಗಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಇದು ಆರೋಗ್ಯಕರ. ಆದರೆ ಗುಪ್ತಾಂಗಗಳನ್ನು ಸರಿಯಾಗಿ ಕ್ಲೀನ್ ಮಾಡದೆ ಇರುವುದು, ಅಲ್ಲಿ ಫಂಗಸ್ ಇರುವುದು, ಚರ್ಮದ ಸಮಸ್ಯೆಗಳು ಇತ್ಯಾದಿಗಳಿದ್ದರೆ, ಅಲ್ಲಿ ಓರಲ್‌ ಸೆಕ್ಸ್ ನೆರವೇರಿಸಿದ ಸಂಗಾತಿಗೆ ಇದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಹೀಗಾಗಿ ಮುಖಮೈಥುನಕ್ಕೆ ಮುನ್ನ ಸರ್ವಾಂಗ ಸ್ವಚ್ಛತೆ ಅವಶ್ಯಕ. ಮೈಥುನಕ್ಕೆ ಮುನ್ನ ಸ್ನಾನ ಮಾಡಿ ಬರುವುದು ಒಳ್ಳೆಯ ರೂಢಿ. ಇಲ್ಲಿಗೆ ಸಿಂಪಡಿಸಿಕೊಳ್ಳುವುದಕ್ಕೆ ಕೆಲವು ಪರಿಮಳಯುಕ್ತವಾದ ಸ್ಪ್ರೇಗಳು ಕೂಡ ಸಿಗುತ್ತವೆ. ಇದು ಸಂಗಾತಿಗೆ ಆನಂದದಾಯಕವಾದ ಅನುಭವ ನೀಡುತ್ತವೆ. ನೀವು ಅದನ್ನು ಪ್ರಯತ್ನಿಸಬಹುದು. 

ಓರಲ್ ಸೆಕ್ಸ್‌ನಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು ಇರುವುದನ್ನೂ ತಜ್ಞರು ಕಂಡುಕೊಂಡಿದ್ದಾರೆ. ಉದಾಹರಣೆಗೆ, ಒತ್ತಡದ ನಿವಾರಣೆ (Stress Burster). ಮನಸ್ಸಿನಲ್ಲಿ ಒತ್ತಡಗಳು ತುಂಬಿಕೊಂಡಿದ್ದಾಗ ದೇಹಕ್ಕೆ ಮಸಾಜ್‌ ಮಾಡಿದರೆ ಹೇಗೆ ರಿಲ್ಯಾಕ್ಸ್ (Relax) ಆಗುತ್ತದೋ ಹಾಗೇ ಸೆಕ್ಸ್ ಕೂಡ ಒತ್ತಡ ನಿವಾರಕ. ಓರಲ್ ಸೆಕ್ಸ್ ಇನ್ನಷ್ಟು ಆನಂದದಾಯಕ. ದೇಹದಲ್ಲಿ ಉಂಟಾಗುವ ಎಂಡಾರ್ಫಿನ್ ಸ್ರಾವಗಳು ದೇಹವನ್ನು ಹಗುರಗೊಳಿಸುತ್ತವೆ, ಉಲ್ಲಾಸಗೊಳಿಸುತ್ತವೆ. ಹಾಗೇ ಇದು ಸಂಗಾತಿಗಳಲ್ಲಿ ಬಾಂಡಿಂಗ್ (Bonding) ಅಥವಾ ಬಾಂಧವ್ಯ ವೃದ್ಧಿಗೊಳಿಸುವುದೂ ಗೊತ್ತಾಗಿದೆ. ತನ್ನ ಸಂಗಾತಿ (Partner) ತನಗಾಗಿ ಏನನ್ನೂ ಮಾಡಲು ಸಿದ್ಧ ಎಂಬ ಭಾವನೆಯೇ ಸುಖಕರವಾದುದು ಅಲ್ಲವೇ? ಪ್ರಾಚೀನ ಭಾರತದ ಕಾಮಶಾಸ್ತ್ರ ರಚಿಸಿದ ವಾತ್ಸಾಯನ (Vatsayana) ಮುನಿ ಕೂಡ ಮುಖಮೈಥುನವನ್ನು ಎತ್ತಿ ಹಿಡಿದಿದ್ದಾನೆ. ಖಜುರಾಹೋ ಮುಂತಾದ ದೇವಾಲಯಗಳ ಹೊರಗೋಡೆಯ ಕೆತ್ತನೆಗಳಲ್ಲಿ ಮುಖಮೈಥುನದ ಶಿಲ್ಪಗಳಿವೆ. ಅಂದರೆ ಪ್ರಾಚೀನ ಭಾರತದಲ್ಲೂ ಇದು ಒಪ್ಪಿತ ಕ್ರಿಯೆಯಾಗಿತ್ತು ಎಂದೇ ಅರ್ಥ. 

Feelfree: ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

Follow Us:
Download App:
  • android
  • ios