ಪ್ರೇಯಸಿ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ ದಾರಿ-ದೂರದ ಅರಿವೇ ಇಲ್ಲದೆ ಜೌನ್‌ಪುರದಿಂದ ಬನಾರಸ್‌ವರೆಗೆ 68 ಕಿ.ಮೀ ನಡೆದ ಪ್ರಿಯಕರನ ಸಟೈರಿಕಲ್ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿಯಲ್ಲಿ ಬಿದ್ದಾಗ ಸಮಯದ ಅರಿವೇ ಇರುವುದಿಲ್ಲ ಅಂತಾರೆ. ಆದರೆ ಇಲ್ಲೊಬ್ಬ ಪ್ರಿಯಕರನಿಗೆ ತಾನು ಎಷ್ಟು ದೂರ ನಡೆದುಕೊಂಡು ಹೋಗುತ್ತಿದ್ದೇನೆ ಅನ್ನೋದೂ ಗೊತ್ತಾಗಲಿಲ್ಲವಂತೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸಟೈರಿಕಲ್ ಪೋಸ್ಟ್‌ವೊಂದರ ಪ್ರಕಾರ, ಜೌನ್‌ಪುರದಿಂದ ಬನಾರಸ್‌ವರೆಗೆ ಈ ಪ್ರಿಯಕರ ತನ್ನ ಪ್ರೇಯಸಿಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಲೇ ನಡೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಜೌನ್‌ಪುರದಿಂದ ಬನಾರಸ್ ಎಷ್ಟು ದೂರ?
ಜೌನ್‌ಪುರದಿಂದ ಬನಾರಸ್ (ವಾರಾಣಸಿ) ರಸ್ತೆ ಮಾರ್ಗದಲ್ಲಿ ಸುಮಾರು 68.7 ಕಿ.ಮೀ ದೂರವಿದೆ. ಕಾರಿನಲ್ಲಿ NH 31 ಮಾರ್ಗವಾಗಿ ಸುಮಾರು 1 ಗಂಟೆ 26 ನಿಮಿಷ ಬೇಕಾಗಬಹುದು. ರೈಲಿನಲ್ಲಿ ಸುಮಾರು 1 ಗಂಟೆ 2 ನಿಮಿಷ, ಬಸ್‌ನಲ್ಲಿ ಸುಮಾರು 1 ಗಂಟೆ 34 ನಿಮಿಷ ಪ್ರಯಾಣದ ಸಮಯ ಎಂದು ಮಾರ್ಗದ ಮಾಹಿತಿಯಲ್ಲಿ ತೋರಿಸಲಾಗುತ್ತದೆ.
ಆದರೆ ಇದೇ ದಾರಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರೆ?
ಸುಮಾರು 13 ಗಂಟೆ 37 ನಿಮಿಷ!, ಅಂದರೆ, ಪ್ರೇಯಸಿ ಜೊತೆಗಿನ ಮಾತುಕತೆ ನಿಜಕ್ಕೂ ಅಷ್ಟೊಂದು ಸುದೀರ್ಘವಾಗಿದ್ದರೆ, ಇದು ಸಾಮಾನ್ಯ ಫೋನ್ ಕಾಲ್ ಅಲ್ಲ... ಒಂದು ಫುಲ್ ವಾಕಿಂಗ್ ಟೂರ್
ಫೋನ್ ಕಾಲ್ ಶುರು... 68 ಕಿ.ಮೀ ವಾಕಿಂಗ್ ಮುಗಿದಿದೆ
ಯಾವುದೇ ಡೆಸ್ಟಿನೇಷನ್ ಪ್ಲ್ಯಾನ್ ಇಲ್ಲ, ಯಾವುದೇ ವಾಹನದ ಹುಡುಕಾಟ ಇಲ್ಲ, ಯಾವುದೇ ಟ್ರೈನ್ ಅಥವಾ ಬಸ್ ಇಲ್ಲ. ಕೈಯಲ್ಲಿ ಮೊಬೈಲ್, ಕಿವಿಯಲ್ಲಿ ಪ್ರೇಯಸಿಯ ಧ್ವನಿ, ಕಾಲಿಗೆ ಮಾತ್ರ ನಿರಂತರ ವಾಕಿಂಗ್. ಮಾತನಾಡುತ್ತಾ ಮಾತನಾಡುತ್ತಾ ವ್ಯಕ್ತಿ ಜೌನ್‌ಪುರದಿಂದ ಬನಾರಸ್‌ವರೆಗೆ ನಡೆದುಕೊಂಡು ಹೋಗಿದ್ದಾನೆ ಎನ್ನುವ ರೀತಿಯಲ್ಲಿ ಈ ಪೋಸ್ಟ್ ಅನ್ನು ಹಾಸ್ಯಾತ್ಮಕವಾಗಿ ಹಂಚಿಕೊಳ್ಳಲಾಗಿದೆ.
ಅಷ್ಟಕ್ಕೂ ಏನು ಮಾತಾಡ್ತಿದ್ರಿ?
ಈ ಕಥೆ ಕೇಳಿದ ಕೂಡಲೇ ನೆಟ್ಟಿಗರಿಗೆ ಎದುರಾಗುವ ಪ್ರಶ್ನೆ ಒಂದೇ, 68 ಕಿ.ಮೀ ನಡೆದುಕೊಂಡು ಹೋಗುವಷ್ಟು ಇಬ್ಬರೂ ಏನು ಮಾತಾಡ್ತಿದ್ರು? ಸುಮಾರು 13 ಗಂಟೆಗೂ ಹೆಚ್ಚು ಕಾಲ ಕಾಲ್ನಡಿಗೆಯಲ್ಲಿ ಹೋಗುವಷ್ಟು ಮಾತು ಮುಗಿಯಲೇ ಇಲ್ಲವೇ ಎಂಬುದೇ ಈ ಸಟೈರಿಕಲ್ ಪೋಸ್ಟ್‌ನ ಪ್ರಮುಖ ತಮಾಷೆ. ಕೆಲವರು ಇದನ್ನು ‘True Love’ ಎಂದು ತಮಾಷೆ ಮಾಡಿದರೆ, ಇನ್ನೂ ಕೆಲವರು “ಅಣ್ಣಾ, ಮಧ್ಯದಲ್ಲಿ ಒಮ್ಮೆ Google Maps ಆದ್ರೂ ನೋಡಬೇಕಿತ್ತು, ಎಂದು ಕಾಮೆಂಟ್ ಮಾಡುವಂತಿದೆ.
ಪ್ರೀತಿಯ ಪವರ್ ಅಂದ್ರೆ ಇದೇನಾ?
ಪ್ರೀತಿಯ ಮಾತುಗಳಲ್ಲಿ ಮುಳುಗಿದರೆ ಸಮಯ ಹೋಗೋದು ಗೊತ್ತಾಗುವುದಿಲ್ಲ ಅನ್ನೋ ಮಾತಿದೆ. ಆದರೆ ಇಲ್ಲಿ ಸಮಯ ಮಾತ್ರವಲ್ಲ. 68.7 ಕಿ.ಮೀ ದಾರಿಯೂ ಗೊತ್ತಾಗಲಿಲ್ಲ, ಕಾರಿನಲ್ಲಿ ಹೋದರೆ ಸುಮಾರು ಒಂದೂವರೆ ಗಂಟೆ, ಬಸ್‌ನಲ್ಲಿ ಅದಕ್ಕಿಂತ ಸ್ವಲ್ಪ ಹೆಚ್ಚು, ರೈಲಿನಲ್ಲಿ ಸುಮಾರು ಒಂದು ಗಂಟೆ... ಆದರೆ ಕಾಲ್ನಡಿಗೆಯಲ್ಲಿ 13 ಗಂಟೆ 37 ನಿಮಿಷ, ಹೀಗಾಗಿ ಫೋನ್ ಕಾಲ್‌ನಿಂದ ಶುರುವಾದ ಈ ‘ವಾಕಿಂಗ್ ಜರ್ನಿ’ ಇದೀಗ ನೆಟ್ಟಿಗರಿಗೆ ಸಖತ್ ಮನರಂಜನೆ ನೀಡುತ್ತಿದೆ.
ಸೂಚನೆ: ಈ ಪೋಸ್ಟ್ ಮನರಂಜನಾ ಉದ್ದೇಶಕ್ಕಾಗಿ ಮಾತ್ರ ರಚಿಸಲಾಗಿದೆ. ಇಲ್ಲಿ ಹೇಳಿರುವ ಘಟನೆಯನ್ನು ಪರಿಶೀಲಿತ ಅಥವಾ ದೃಢೀಕೃತ ಸುದ್ದಿಯಾಗಿ ಪರಿಗಣಿಸಬಾರದು.
