Parasocial relationship : ಕೆಲ ಕಂಟೆಂಟ್‌ ಕ್ರಿಯೇಟರ್ಸ್‌ ನಮ್ಮ ಆಪ್ತರಾಗಿದ್ದಾರೆ. ಅವರ ಮುಖವನ್ನೇ ನಾವು ನೋಡಿಲ್ಲ. ಆದ್ರೂ ಅವರು ಹತ್ತಿರವೇ ಇದ್ದಂತೆ ಭಾಸವಾಗುತ್ತೆ. ಅದಕ್ಕೆ ಕಾರಣ ಏನು ಗೊತ್ತಾ? 

ನಿಜ ಹೇಳಿ, ನಿಮ್ಮಿಷ್ಟದ ಯೂಟ್ಯೂಬರ್‌ ಇಲ್ಲ ಇನ್ಸ್ಟಾಗ್ರಾಮ್‌ ಕ್ರಿಯೇಟರ್ ನಿಮಗೆ ಆಪ್ತರಾಗಿರ್ತಾರೆ. ಅವರನ್ನು ನೀವು ಎದುರಿಗೆ ನೋಡಿರೋದೇ ಇಲ್ಲ. ಆದ್ರೆ ಅವರ ಇಷ್ಟ, ಅವರ ಲವ್‌ ಲೈಫ್‌, ಅವರ ನಿತ್ಯದ ಕೆಲ್ಸ ಎಲ್ಲವೂ ನಿಮಗೆ ಗೊತ್ತಿರುತ್ತೆ. ಅವರನ್ನು ನೀವು ಸ್ನೇಹಿತರಂತೆ, ಆಪ್ತರಂತೆ ನೋಡಲು ಶುರು ಮಾಡಿರ್ತೀತಿ. ನೀವು ಅವ್ರ ಎದುರಿಗೆ ಬಂದ್ರೆ ಅವರಿಗೆ ನಿಮ್ಮ ಪರಿಚಯವೇ ಇರೋದಿಲ್ಲ, ಆದ್ರೆ ನೀವು ಮಾತ್ರ ಎಲ್ಲ ಬಲ್ಲವರಂತೆ ಅವರ ಜೊತೆ ಮಾತನಾಡ್ತೀರಿ. ಇದು ಏಕಾಗುತ್ತೆ, ಅದಕ್ಕೆ ಕಾರಣ ಏನು ಗೊತ್ತಾ? ಬರೀ ನೀವು ಮಾತ್ರ ಅಲ್ಲ, ನಿಮ್ಮಂತೆ ಯೂಟ್ಯೂಬ್‌, ಇನ್ಸ್ಟಾ ಸೇರಿದಮತೆ ಸೋಶಿಯಲ್‌ ಮೀಡಿಯಾವನ್ನು ನಿತ್ಯ ನೀಡುವ, ಕಂಟೆಂಟ್‌ ಕ್ರಿಯೇಟರ್‌ ಫಾಲೋ ಮಾಡುವ ಅನೇಕರಿಗೆ ಈ ಅನುಭವ ಆಗಿರುತ್ತೆ. TikTok, Instagram, YouTube ನಂತೆ ಅನೇಕ ಪ್ಲಾಟ್ಫಾರ್ಮ್ಗಳು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ರಿಯೇಟರ್ಗಳಿಗೆ ತಮ್ಮ ಲೈಪ್ನ ರಿಯಾಲಿಟಿ ಪೋಸ್ಟ್‌ ಮಾಡುವ ಅವಕಾಶ ನೀಡಿದೆ. ಈ ಕಾರಣಕ್ಕೆ ಜನರಿಗೆ ಕ್ರಿಯೇಟರ್ಗಳ ಜೊತೆ ಒಂದು ವಿಶೇಷ ಕನೆಕ್ಷನ್‌ ಶುರುವಾಗಿರುತ್ತೆ. ಮನೋವಿಜ್ಞಾನದಲ್ಲಿ ಇದನ್ನು ಪ್ಯಾರಾಸೋಶಿಯಲ್ ರಿಲೇಶನ್ಶಿಪ್ ಅಂತ ಕರೀತಾರೆ.

ಪ್ಯಾರಾಸೋಶಿಯಲ್ ರಿಲೇಶನ್ಶಿಪ್ ಅಂದ್ರೇನು?

ಒಬ್ಬ ವ್ಯಕ್ತಿ ಒಬ್ಬ ಸಾರ್ವಜನಿಕ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಕನೆಕ್ಷನ್‌ ಅನುಭವಿಸೋದನ್ನು ಪ್ಯಾರಾಸೋಶಿಯಲ್‌ ರಿಲೇಶನ್ಶಿಪ್‌ ಎಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಅವರು ನಿಮ್ಮ ಬಗ್ಗೆ ತಿಳಿದಿರೋದಿಲ್ಲ. ನೀವು ಮಾತ್ರ ಅವರ ಬಗ್ಗೆ ಎಲ್ಲವನ್ನೂ ತಿಳಿದಿರ್ತೀರಿ. ಬರೀ ಯೂಟ್ಯೂಬರ್‌, ರೀಲ್ಸ್‌ ಮಾಡುವ ಕಂಟೆಂಟ್‌ ಕ್ರಿಯೇಟರ್‌ ಜೊತೆ ಮಾತ್ರ ಈ ಪ್ಯಾರಾಸೋಶಿಯಲ್‌ ರಿಲೇಶನ್ಶಿಪ್ ಶುರು ಆಗ್ಬೇಕು ಅಂದೇನಿಲ್ಲ. ಸೋಶಿಯಲ್ ಮೀಡಿಯಾ ಹೆಚ್ಚಾಗಿರುವುದರಿಂದ ಈಗಿನ ಜನರು ಅದಕ್ಕೆ ಹೆಚ್ಚು ಅಂಟಿಕೊಳ್ತಿದ್ದಾರೆ. ಸೀರಿಯಲ್‌, ಸಿನಿಮಾ ಕಲಾವಿದರ ಜೊತೆ, ಯಾವುದೋ ಕಥೆ, ಪುಸ್ತಕದಲ್ಲಿ ಬರುವ ಕ್ಯಾರೆಕ್ಟರ್ ಮೇಲೂ ನಿಮಗೆ ಪ್ಯಾರಾಸೋಶಿಯಲ್‌ ರಿಲೇಶನ್ಶಿಪ್ ಶುರುವಾಗ್ಬಹುದು.

Chanakya Niti: ಈ 4 ಗುಣ ಇರುವ ವ್ಯಕ್ತಿಗೆ ಖಂಡಿತ ಒಲಿಯುತ್ತಾಳೆ ಲಕ್ಷ್ಮಿ ದೇವಿ!

ಪ್ಯಾರಾಸೋಶಿಯಲ್‌ ರಿಲೇಶನ್ಶಿಪ್ 1950ರ ದಶಕದಲ್ಲೇ ಶುರುವಾಯ್ತು. ಸಮಾಜಶಾಸ್ತ್ರಜ್ಞರಾದ ಡೊನಾಲ್ಡ್ ಹಾರ್ಟನ್ ಮತ್ತು ರಿಚರ್ಡ್ ವೋಹಲ್ ಮೊದಲ ಬಾರಿ ಇದನ್ನು ಬಳಸಿದ್ರು. ಆ ಟೈಂನಲ್ಲಿ ಸೋಶಿಯಲ್‌ ಮೀಡಿಯಾ ಇರಲಿಲ್ಲ. ಜನರು ಟಿವಿ ಶೋ ಹೋಸ್ಟ್‌ ಗಳನ್ನು ನಿತ್ಯ ನೋಡ್ತಿದ್ರು. ಅವರ ಜೊತೆ ಒಂದು ಸಂಪರ್ಕ ಅನುಭವಿಸ್ತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಇದು ಡಿಜಿಟಲ್‌ ಯುಗ. ಇಲ್ಲಿ ಕಂಟೆಂಟ್‌ ಕ್ರಿಯೇಟರ್ಸ್‌ ದಿನ ಕಾಣಿಸ್ತಾರೆ. ಭಾವನೆಗಳನ್ನು ಮತ್ತಷ್ಟು ಬಲಗೊಳಿಸ್ತಾರೆ. ಕಂಟೆಂಟ್ ಕ್ರಿಯೇಟರ್ಸ್‌, ತಮ್ಮ ಜೀವನದ ಪ್ರತಿಯೊಂದು ವಿಷ್ಯವನ್ನು ವಿಡಿಯೋ ಮಾಡಿ ಪೋಸ್ಟ್‌ ಮಾಡ್ತಾರೆ. ನೀವು ಅವ್ರ ವಿಡಿಯೋವನ್ನು ಪ್ರತಿ ದಿನ ನೋಡ್ತಿದ್ದರೆ ನಿಮಗೆ ಅವರು ಇಷ್ಟವಾಗಲು ಶುರುವಾಗ್ತಾರೆ. ಅವರು ನಿಮಗೆ ಚೆನ್ನಾಗಿ ಗೊತ್ತು ಎನ್ನುವ ಭಾವನೆ ಬರಲು ಶುರುವಾಗುತ್ತದೆ. ಅವರ ಎಲ್ಲ ವಿಷ್ಯ ನಿಮಗೆ ತಿಳಿದಿರುತ್ತದೆ.

ಸೋಶಿಯಲ್‌ ಮೀಡಿಯಾದಿಂದ ಹೆಚ್ಚಾಗಲು ಇದೂ ಕಾರಣ

ಹಿಂದಿಗಿಂತ ಈಗ ಸೋಶಿಯಲ್‌ ಮೀಡಿಯಾದಿಂದ ಪ್ಯಾರಾಸೋಶಿಯಲ್‌ ರಿಲೇಶನ್ಶಿಪ್ ಹೆಚ್ಚಾಗಲು ಮತ್ತೊಂದು ಕಾರಣವಿದೆ. ಇಲ್ಲಿ ಬಳಕೆದಾರ ಮತ್ತು ಕಂಟೆಂಟ್ ಕ್ರಿಯೇಟರ್ ನಡುವಿನ ಗಡಿ ಮಸುಕಾಗುತ್ತದೆ. ಹಿಂದೆ ಸೆಲೆಬ್ರಿಟಿಗಳು ಜನರಿಂದ ದೂರ ಇರ್ತಿದ್ರು. ಆಗಾಗ ಅಲ್ಲಿ ಇಲ್ಲಿ ಸಿಗ್ತಿದ್ರು. ಕಾಣಿಸಿಕೊಳ್ತಿದ್ದರು. ಆದ್ರೆಇನ್‌ಫ್ಲುಯೆನ್ಸರ್ಸ್ ನಿಮ್ಮಂತೆ ನಾವು ಸಾಮಾನ್ಯರು ಎಂಬ ಭಾವನೆ ಮೂಡಿಸಿದ್ದಾರೆ. ತಮ್ಮ ದಿನಚರಿ ತೋರಿಸ್ತಾರೆ. ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದು ನಮ್ಮಲ್ಲಿ ಭ್ರಮೆ ಹುಟ್ಟಿಸುತ್ತದೆ. ಅವರು ನಮ್ಮ ಜೊತೆಗೇ ಇದ್ದಾರೆ, ಅವರ ಬಗ್ಗೆ ನಮಗೆ ಎಲ್ಲ ಗೊತ್ತು ಎನ್ನುವ ಭಾವನೆ ಮೂಡಿಸುತ್ತದೆ.

ನಾವು ಮದ್ವೆ ಆಗೋದು ಬೇಡ ಅಂದಿದ್ದೆ! ಮೀಡಿಯಾ ಎದುರು ಕೇರಳ ರಹಸ್ಯ ತೆರೆದಿಟ್ಟ ಕುಂಭಮೇಳ ಮೋನಾಲಿಸಾ ಪತಿ

ಜನರು ಒಂಟಿತನ ಅನುಭವಿಸ್ತಿದ್ದಾಗ ಅವರಲ್ಲಿ ಪ್ಯಾರಾಸೋಶಿಯಲ್‌ ರಿಲೇಶನ್ಶಿಪ್ ಹೆಚ್ಚಾಗೋದು ಹೆಚ್ಚು. ಕ್ರಿಯೇಟರ್ ವಿಡಿಯೋ ನೋಡಿದಾಗ ಅವರನ್ನು ಸ್ನೇಹಿತರಂತೆ ನೋಡಲು ಶುರು ಮಾಡ್ತಾರೆ. ಅವರ ಸಮಸ್ಯೆ, ಪ್ರೀತಿ, ಮಾತು ಇವರ ಜೀವನಕ್ಕೆ ಹೋಲಿಕೆ ಆಗ್ತಿದ್ದರೆ ಮತ್ತಷ್ಟು ಹತ್ತಿರವಾಗ್ತಾರೆ.

ಲಕ್ಷಣ ಹೀಗೆ ಪತ್ತೆ ಮಾಡಿ

ಕ್ರಿಯೇಟರ್ ಜೀವನದಲ್ಲಿ ಕೆಟ್ಟದ್ದಾಗಿದ್ರೆ ನಿಮಗೆ ನೋವಾಗ್ತಿದ್ದರೆ, ಅವರು ವೈಯಕ್ತಿಕವಾಗಿ ನಿಮಗೆ ಗೊತ್ತಿದ್ದಾರೆ ಅಂತ ಅನ್ನಿಸಿದ್ರೆ, ಯಾರಾದರೂ ಅವರನ್ನು ಟೀಕಿಸಿದಾಗ ನೀವು ಕೋಪಗೊಂಡು ಅವರಿಗೆ ಕಮೆಂಟ್‌ ಮಾಡಿದ್ರೆ, ಅವರ ಜೀವನದ ಜೊತೆ ನಿಮ್ಮ ಲೈಫ್‌ ಹೋಲಿಕೆ ಮಾಡ್ತಿದ್ದರೆ ನೀವು ಪ್ಯಾರಾಸೋಶಿಯಲ್‌ ರಿಲೇಶನ್ಶಿಪ್ ಗೆ ಒಳಗಾಗಿದ್ದೀರಿ ಎಂದರ್ಥ. ಇದು ಕೇವಲ ಭಾವನೆ ಮಾತ್ರ ಅಲ್ಲ. ಇದು ಇಂಟರ್ನೆಟ್‌ ನಲ್ಲಿ ಒಂದು ಬ್ಯುಸಿನೆಸ್ ಆಗಿದೆ. ಕ್ರಿಯೇಟರ್ ಜೊತೆ ಭಾವನಾತ್ಮಕ ಸಂಪರ್ಕ ಹೊಂದಿದ್ರೆ ವಿಡಿಯೋಗಳನ್ನು ಹೆಚ್ಚು ಸಮಯ ನೋಡುತ್ತಾರೆ. ಅವರ ಸಲಹೆಗಳನ್ನು ನಂಬುತ್ತಾರೆ. ಇದ್ರಿಂದ ಕ್ರಿಯೇಟರ್ಸ್‌ ಲಾಭ ಪಡೆಯುತ್ತಾರೆ.