ಬಿಹಾರದ ಮುರ್ಷಿದ್ ಅಲಂ ಎಂಬ ಯುವಕ ಕೇವಲ 1 ಲಕ್ಷ ರೂಪಾಯಿ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಜೀಪನ್ನು ನಿರ್ಮಿಸಿದ್ದಾರೆ. ಕೇವಲ 18 ದಿನಗಳಲ್ಲಿ ನಿರ್ಮಿಸಲಾದ ಈ ವಾಹನವು ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ.

ಬಿಹಾರದ ಯುವಕನೋರ್ವ ಕೇವಲ 18 ದಿನಗಳಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಜೀಪೊಂದನ್ನು ನಿರ್ಮಾಣ ಮಾಡಿದ್ದಾರೆ. ಕೇವಲ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಇಲೆಕ್ಟ್ರಿಕ್ ಜೀಪನ್ನು ನಿರ್ಮಾಣ ಮಾಡಲಾಗಿದ್ದು, ಒಮ್ಮೆ ಸಂಪೂರ್ಣವಾಗಿ 5 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಈ ಜೀಪನ್ನು ಸುಮಾರು 100 ಕಿಲೋ ಮೀಟರ್‌ವರೆಗೆ ಓಡಿಸಬಹುದಾಗಿದೆ. ಬಿಹಾರದ ಮುರ್ಷಿದ್ ಅಲಂ ಎಂಬುವವರೇ ಹೀಗೆ ಕೇವಲ 18 ದಿನದಲ್ಲಿ ಇಲೆಕ್ಟ್ರಿಕ್ ಜೀಪ್ ನಿರ್ಮಾಣ ಮಾಡಿದವರು. ಬಿಹಾರದ ಪೂರ್ನಿಯಾದ ಜನ ಈಗ ಇದನ್ನು ದೇಸಿ ಟೆಲ್ಸಾ ಎಂದು ಕರೆಯುತ್ತಿದ್ದಾರೆ. ಅದಕ್ಕಿಂತಲೂ ಇಂಟರೆಸ್ಟಿಂಗ್ ವಿಚಾರ ಎಂದರೆ ಈ ಇಲೆಕ್ಟ್ರಿಕ್ ಜೀಪನ್ನು ಕೇವಲ 1 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಹಾಗೂ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 100 ಕಿಲೋ ಮೀಟರ್ ದೂರವರೆಗೆ ಪ್ರಯಾಣಿಸಬಹುದು ಎಂಬುದು.

ಈ ಜೀಪನ್ನು ನಿರ್ಮಿಸಿದ ಮುರ್ಷಿದ್ ಅಲಂ ಅವರು ತರಬೇತಿ ಪಡೆದ ಇಂಜಿನಿಯರ್ ಅಥವಾ ಸ್ಟಾರ್ಟಪ್ ಫೌಂಡರ್ ಏನು ಅಲ್ಲ, ಅವರು ಸಣ್ಣದೊಂದು ವಾಹನ ರಿಪೇರಿ ಶಾಪೊಂದನ್ನು ನಡೆಸುತ್ತಿದ್ದಾರೆ. ತಮ್ಮ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿರುವುದರ ಜೊತೆಗೆ ಅವರು ಈ ಜೀಪ್‌ನ್ನು ನಿರ್ಮಿಸಿದ್ದಾರೆ. ತಮ್ಮ ಗ್ರಾಮದ ಸಣ್ಣ ಸಣ್ಣ ಕೃಷಿಕರು ಹಾಗೂ ಸಣ್ಣ ಉದ್ಯಮಿಗಳು ತಮ್ಮ ದಿನನಿತ್ಯದ ಕೆಲಸಗಳಿಗೆ ಹಾಗೂ ಕೃಷಿ ಕಾರ್ಯಕ್ಕೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವುದಕ್ಕೆ ತಕ್ಕುದಾದ ವಾಹನಗಳನ್ನು ದುಬಾರಿ ಹಣ ನೀಡಿ ಖರೀದಿಸುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಯನ್ನು ಗಮನಿಸಿ ಅವರು ಈ ಕಡಿಮೆ ವೆಚ್ಚದ ಜೀಪನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಡಿಸೇಲ್ ಹಾಗೂ ಪೆಟ್ರೋಲ್ ವಾಹನಗಳು ದುಬಾರಿ ಹಾಗೂ ಅವುಗಳನ್ನು ನಿರ್ವಹಣೆ ಮಾಡುವುದಕ್ಕೂ ಸಾಕಾಷ್ಟು ಹಣ ಬೇಕಾಗುತ್ತದೆ. ಹಾಗೆಯೇ ವಾಣಿಜ್ಯ ಕೆಲಸಗಳಿಗೆ ಅದರಲ್ಲು ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಇಲೆಕ್ಟ್ರಿಕ್ ವಾಹನಗಳು ತಲುಪುವುದು ಸಾಧ್ಯವಿಲ್ಲ. ಹೀಗಾಗಿ ಈ ಬಗ್ಗೆ ಯೋಚನೆ ಮಾಡಿದ ಅವರು ತಮ್ಮ ಈ ನೆಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಓಡಾಡುವುದಕ್ಕೆ ಸಹಾಯವಾಗುವಂತೆ ಹಾಗೂ ಕೃಷಿ ಕೆಲಸಗಳಿಗೆ ಸಹಕಾರಿ ಆಗಲಿ ಎಂಬ ಉದ್ದೇಶವನ್ನು ಮನಸ್ಸಲ್ಲಿಟ್ಟುಕೊಂಡು ಈ ಇಲೆಕ್ಟ್ರಿಕ್ ಜೀಪನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಬ್ ಇನ್ಸ್‌ಪೆಕ್ಟರ್‌ನಿಂದಲೇ 14 ವರ್ಷದ ಬಾಲಕಿ ಅಪಹರಿಸಿ ಗ್ಯಾಂಗ್‌ರೇಪ್: ಯೂಟ್ಯಬರ್ ಅರೆಸ್ಟ್: ಎಸ್‌ಐ ಪರಾರಿ

ಈ ವಾಹನವು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ನಾಲ್ಕು ಚಕ್ರಗಳು, ಸ್ಪೀಡೋಮೀಟರ್, ಪವರ್ ಸ್ಟೀರಿಂಗ್ ಮತ್ತು ಚಾರ್ಜಿಂಗ್ ಪಾಯಿಂಟ್ ಅನ್ನು ಒಳಗೊಂಡಿದೆ. ಬೆಳೆಗಳು, ರಸಗೊಬ್ಬರಗಳು ಮತ್ತು ಇತರ ಸರಕುಗಳನ್ನು ಸಾಗಿಸಲು ಹೆಚ್ಚುವರಿ ಟ್ರಾಲಿಯನ್ನು ಇದಕ್ಕೆ ಜೋಡಿಸಬಹುದು, ಇದು ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರ ಪೂರ್ಣ ಚಾರ್ಜ್‌ಗೆ ಸುಮಾರು ಐದು ಗಂಟೆಗಳು ಬೇಕಾಗುತ್ತದೆ, ನಂತರ ಜೀಪ್ ಸುಮಾರು 100 ಕಿಲೋಮೀಟರ್ ಓಡಬಹುದು. ಭಾರತದಲ್ಲಿ ವಾಹನಗಳು ನಿಧಾನವಾಗಿ ಡೀಸೆಲ್ ಮತ್ತು ಪೆಟ್ರೋಲ್‌ನಿಂದ ವಿದ್ಯುತ್‌ಗೆ ಬದಲಾಗುತ್ತಿರುವ ಕಾಲಘಟ್ಟದಲ್ಲೇ ಮುರ್ಷಿದ್ ಅವರು ಕಡಿಮೆ ವೆಚ್ಚದಲ್ಲಿ ಈ ಜೀಪನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಶೂಟರ್‌ಗೆ ಲೈಂಗಿಕ ಕಿರುಕುಳ: ರಾಷ್ಟ್ರೀಯ ಕೋಚ್ ಅಂಕುಶ್ ಭಾರದ್ವಾಜ್ ಅಮಾನತು