Asianet Suvarna News Asianet Suvarna News

ಪತ್ನಿಯಿಂದ ದೌರ್ಜನ್ಯ: ಖ್ಯಾತ ಬಾಣಸಿಗ ಕುನಾಲ್ ಕಪೂರ್‌ಗೆ ಡಿವೋರ್ಸ್ ನೀಡಿದ ಹೈಕೋರ್ಟ್‌

 ಪ್ರಸಿದ ಸೆಲೆಬ್ರಿಟಿ ಬಾಣಸಿಗ ಕುನಾಲ್ ಕಪೂರ್‌ಗೆ ದೆಹಲಿ ಹೈಕೋರ್ಟ್‌ ಡಿವೋರ್ಸ್‌ ಮಂಜೂರು ಮಾಡಿದೆ. ಕುನಾಲ್ ಪತ್ನಿ ಆತನ ಮೇಲೆ ದೌರ್ಜನ್ಯವೆಸಗಿದ್ದು, ಆತನ ಮೇಲೆ ಆಕೆಗೆ ಸಹನೆ ಕರುಣೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. 

Cruelty by wife Delhi High court granted divorce to famous celebrity chef Kunal Kapoor akb
Author
First Published Apr 3, 2024, 8:51 AM IST

ನವದೆಹಲಿ: ಪ್ರಸಿದ ಸೆಲೆಬ್ರಿಟಿ ಬಾಣಸಿಗ ಕುನಾಲ್ ಕಪೂರ್‌ಗೆ ದೆಹಲಿ ಹೈಕೋರ್ಟ್‌ ಡಿವೋರ್ಸ್‌ ಮಂಜೂರು ಮಾಡಿದೆ. ಕುನಾಲ್ ಪತ್ನಿ ಆತನ ಮೇಲೆ ದೌರ್ಜನ್ಯವೆಸಗಿದ್ದು, ಆತನ ಮೇಲೆ ಆಕೆಗೆ ಸಹನೆ ಕರುಣೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಚ್ಛೇದನನ್ನು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕುನಾಲ್ ಕಪೂರ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು  ಪುರಸ್ಕರಿಸಿದ ಹೈಕೋರ್ಟ್, ಸಾರ್ವಜನಿಕವಾಗಿ ಸಂಗಾತಿಯ ವಿರುದ್ಧ ಅಜಾಗರೂಕ, ಮಾನನಷ್ಟ, ಅವಮಾನಕರ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂಬುದು ಕಾನೂನಿನ ನಿಲುವು ಎಂದು ಹೇಳಿದೆ.

ಪ್ರಸ್ತುತ ಪ್ರಕರಣವನ್ನು ಗಮನಿಸಿದಾಗ ಪ್ರತಿವಾದಿ ಪತ್ನಿಗೆ ಮೇಲ್ಮನವಿದಾರ ಗಂಡನ ಕಡೆಗೆ ಗೌರವ ಸಹಾನುಭೂತಿ ಇಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.  ಒಬ್ಬರು ತನ್ನ ಸಂಗಾತಿಯು  ಬಗ್ಗೆ ಅಂತಹ ಸ್ವಭಾವವನ್ನು ಹೊಂದಿದ್ದರೆ, ಅದು ಮದುವೆಯ ಮೂಲತತ್ವಕ್ಕೆ ಕಳಂಕ ತರುತ್ತದೆ ಮತ್ತು ಅವರು ಒಟ್ಟಿಗೆ ವಾಸಿಸುವ ಸಂಕಟವನ್ನು ಸಹಿಸಿಕೊಂಡು ಬದುಕಲು ಏಕೆ ಒತ್ತಾಯಿಸಬೇಕು ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಪೀಠವು ಹೇಳಿದೆ.

ಪಾನಿಪುರಿ ಸ್ಟಾಲ್‌ನಲ್ಲೂ ಇದೆ ಲಕ್ಷಾಂತರ ದುಡಿಮೆ….ಬಾಣಸಿಗರಿಗೆ ಇದು ಬೆಸ್ಟ್ ಬ್ಯುಸಿನೆಸ್!

ಪ್ರಸ್ತುತ ದೂರಾಗಿರುವ ಈ ದಂಪತಿ 2008ರ ಏಪ್ರಿಲ್‌ನಲ್ಲಿ ಮದ್ವೆಯಾಗಿದ್ದರು. ಹಾಗೂ 2012ರಲ್ಲಿ ಇಬ್ಬರಿಗೆ ಮಗ ಜನಿಸಿದ್ದ. ದೂರದರ್ಶನ ಕಾರ್ಯಕ್ರಮ 'ಮಾಸ್ಟರ್ ಚೆಫ್' ನಲ್ಲಿ ಕುನಾಲ್ ಕಪೂರ್ ತೀರ್ಪುಗಾರರಾಗಿ ಖ್ಯಾತಿ ಗಳಿಸಿದ್ದರು. ಅವರ ಮನವಿಯಲ್ಲಿ, ತಮ್ಮ ಹೆಂಡತಿ ತನ್ನ ಹೆತ್ತವರನ್ನು ಎಂದಿಗೂ ಗೌರವಿಸಿಲ್ಲ ಮತ್ತು ತನ್ನನ್ನು ಸದಾ ಅವಮಾನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ ಅವರ ಪತ್ನಿ ತನ್ನ ಪತಿ ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು ಮತ್ತು ತಾನು ಯಾವಾಗಲೂ ತನ್ನ ಪತಿಯೊಂದಿಗೆ ಪ್ರೀತಿಯಿಂದ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದೆ ಮತ್ತು ಆತನ ಕಡೆಗೆ ನಿಷ್ಠಳಾಗಿದ್ದೆ. ಆದರೂ ತನ್ನನ್ನು ಕತ್ತಲೆಯಲ್ಲಿಟ್ಟು ವಿಚ್ಛೇದನ ಪಡೆಯಲು ಸುಳ್ಳು ಕಥೆಗಳನ್ನು ಹೆಣೆದಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.  ಆದರೆ ನ್ಯಾಯಾಲಯವೂ ಪ್ರತಿ ವಿವಾಹದಲ್ಲಿ ಭಿನ್ನಾಭಿಪ್ರಾಯಗಳು ಅನಿವಾರ್ಯ ಭಾಗವಾಗಿದ್ದರೂ, ಅಂತಹ ಘರ್ಷಣೆಗಳು ಸಂಗಾತಿಯ ಬಗ್ಗೆ ಅಗೌರವ ಮತ್ತು ನಿರ್ಲಕ್ಷ್ಯದ ರೂಪವನ್ನು ಪಡೆದಾಗ, ವಿವಾಹವು ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ ಬಾಣಸಿಗನ ಪುತ್ರಿಗೆ ಯುಎಸ್‌ ಸ್ಕಾಲರ್‌ಷಿಪ್‌, ಸಿಜೆಐಯಿಂದ ಸನ್ಮಾನ!

ಮದುವೆಯಾದ ಎರಡು ವರ್ಷಗಳಲ್ಲಿ ಮೇಲ್ಮನವಿದಾರರು ತನ್ನನ್ನು ತಾನು ಪ್ರಸಿದ್ಧ ಬಾಣಸಿಗನಾಗಿ ರೂಪಿಸಿಕೊಂಡಿದ್ದಾರೆ ಎಂದು ಇಲ್ಲಿ ಉಲ್ಲೇಖಿಸುವುದು ಪ್ರಸ್ತುತವಾಗಿದೆ, ಇದು ಅವರ ಕಠಿಣ ಪರಿಶ್ರಮ ಮತ್ತು ದೃಢತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ಕೆಲ  ಸಂಗತಿಗಳನ್ನು ಗಮನಿಸಿದರೆ, ಇವುಗಳು ನ್ಯಾಯಾಲಯದ ದೃಷ್ಟಿಯಲ್ಲಿ ಮೇಲ್ಮನವಿದಾರನಿಗೆ ಅವಮಾನಿಸುವುದಕ್ಕಾಗಿ ಪ್ರತಿವಾದಿಯು ಮಾಡಿದ ಆರೋಪಗಳು ಮತ್ತು ಅಂತಹ ಆಧಾರರಹಿತ ಆರೋಪಗಳು ಒಬ್ಬರ ಖ್ಯಾತಿಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಆದ್ದರಿಂದ ಇದನ್ನು ಕ್ರೌರ್ಯಕ್ಕೆ ಸಮಾನವೆಂದು ಗಮನಿಸುವುದು ವಿವೇಕಯುತವಾಗಿದೆ ಎಂದು ಹೈಕೋರ್ಟ್‌ ಪೀಠವು ಹೇಳಿದೆ.

ಅಬ್ಬಬ್ಬಾ ಒಂದು ಊಟಕ್ಕೆ 90 ಲಕ್ಷ ರೂ. ಚಾರ್ಜ್ ಮಾಡಿದ ಬಾಣಸಿಗ! ಅದೇನು ಊಟನೋ ಚಿನ್ನನೋ?!

Follow Us:
Download App:
  • android
  • ios