ಅಬ್ಬಬ್ಬಾ ಒಂದು ಊಟಕ್ಕೆ 90 ಲಕ್ಷ ರೂ. ಚಾರ್ಜ್ ಮಾಡಿದ ಬಾಣಸಿಗ! ಅದೇನು ಊಟನೋ ಚಿನ್ನನೋ?!
ಈತ ಪ್ರಸಿದ್ಧ ಬಾಣಸಿಗನೇನೋ ಹೌದು, ಆದರೆ ಹಾಗಂಥ ಹೀಗೆ ಮಾಡ್ಬೋದಾ? ಒಂದು ಊಟಕ್ಕೆ 90 ಲಕ್ಷ ರೂ. ಚಾರ್ಜ್ ಮಾಡಿ, ಅದರ ಬಿಲ್ಲನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ಆದರೆ, ಇದು ಅವರಿಗೆ ಬ್ಯಾಕ್ ಫೈರ್ ಆಗಿದೆ.
ಟರ್ಕಿಶ್ ಬಾಣಸಿಗ ನುಸ್ರೆಟ್ ಗೊಕ್ಸೆ ಸಾಲ್ಟ್ ಬೇ ಎಂದೇ ಪ್ರಸಿದ್ಧ. ಈ ಶೆಫ್ ಹಾಗೂ ಆತನ ದುಬೈನಲ್ಲಿರುವ ರೆಸ್ಟೋರೆಂಟ್ ಎರಡೂ ಫೇಮಸ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಒಂದೇ ಒಂದು ಊಟಕ್ಕೆ ಈತ ವಿಧಿಸಿದ ಚಾರ್ಜ್ ಬರೋಬ್ಬರಿ 90 ಲಕ್ಷ ರೂ.!
ಅಬ್ಬಬ್ಬಾ! ಅಪರೂಪಕ್ಕೆ ಒಂದು ಊಟಕ್ಕೆ 1 ಸಾವಿರ ಖರ್ಚು ಮಾಡಿ ತಿಂದು ಬಂದು, ಆಮೇಲೆ ಇಷ್ಟೊಂದು ಖರ್ಚಾಯಿತಲ್ಲಾ ಎಂದು ಮನೆಯಲ್ಲಿ ಉಪವಾಸ ಮಾಡುವವರು ಸಾಕಷ್ಟು ಮಂದಿಯಿದ್ದಾರೆ. 90 ಲಕ್ಷ ರೂ. ಇದ್ದರೆ ಇಡೀ ಜೀವನವನ್ನೇ ಚಿಂತೆಯಿಲ್ಲದೆ ಕಳೆಯಬಲ್ಲವರೂ ಸಾಕಷ್ಟು ಜನರಿದ್ದಾರೆ. ಅಂಥದರಲ್ಲಿ ಒಂದೇ ಒಂದು ಊಟಕ್ಕೆ 90 ಲಕ್ಷವೆಂದರೆ, ಕೇಳಿದರೇ ಎದೆ ನೋವು ಬಂದೀತು. ಇಷ್ಟಕ್ಕೂ 90 ಲಕ್ಷ ರೂ. ಒಂದು ಊಟಕ್ಕೆ ವಿಧಿಸುವಂಥ ಆಹಾರ ಏನಿರುತ್ತದೆ ಎಂಬ ಪ್ರಶ್ನೆಯೂ ಮೂಡೀತು.
ಸಾಲ್ಟ್ ಬೇ ಅವರು ಕಳೆದ ವಾರ ದುಬೈ ನಸ್ರ್-ಎಟ್ ಸ್ಟೀಕ್‌ಹೌಸ್ ರೆಸ್ಟೋರೆಂಟ್‌ನಲ್ಲಿ ಒಂದೇ ಊಟಕ್ಕಾಗಿ ಒಟ್ಟು $108,500 (ಅಂದಾಜು ರೂ 90,23,028) ವಿಧಿಸಿದ ರಶೀದಿಯನ್ನು ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಸಾಲದೆಂಬಂತೆ, ಈ ಬಿಲ್ ರಶೀದಿ ಜೊತೆಗೆ 'ಹಣ ಬರುತ್ತದೆ, ಹಣ ಹೋಗುತ್ತದೆ' ಎಂದು ಅಸಂಬದ್ಧ ಶೀರ್ಷಿಕೆ ನೀಡಿದ್ದಾರೆ.
ಚುಮು ಚುಮು ಚಳಿಯಲ್ಲಿ ಫ್ಯಾಮಿಲಿ ಜೊತೆ ಮನಾಲಿ ಟೂರ್ ಮಾಡ್ತಿದ್ದಾರೆ Mokshitha Pai
ಅದ್ಧೂರಿ ಔತಣ
ನಸ್ರ್-ಎಟ್ ಸ್ಟೀಕ್‌ಹೌಸ್‌ನ ವಿವರವಾದ ಬಿಲ್ ಅದ್ದೂರಿ ಔತಣವನ್ನು ವಿವರಿಸುತ್ತದೆ. ಇದರಲ್ಲಿ ಬೀಫ್ ಕಾರ್ಪಾಸಿಯೊ, ಗೋಲ್ಡನ್ ಸ್ಟೀಕ್, ಫ್ರೆಂಚ್ ಫ್ರೈಸ್, ಗೋಲ್ಡನ್ ಬಕ್ಲಾವಾ, ಹಣ್ಣಿನ ತಟ್ಟೆ ಮತ್ತು ಟರ್ಕಿಶ್ ಕಾಫಿಯಂತಹ ವಿವಿಧ ಭಕ್ಷ್ಯಗಳಿವೆ. ಅತಿರಂಜಿತ ಪಾನೀಯಗಳಲ್ಲಿ ನಾಲ್ಕು ಪೋರ್ನ್ ಸ್ಟಾರ್ ಮಾರ್ಟಿನಿಸ್ ($130), ಚಟೌ ಪೆಟ್ರಸ್ 2009ರ ಎರಡು ಬಾಟಲಿಗಳು ($53,900), ಪೆಟ್ರಸ್ 2011 ರ ಒಂದು ಬಾಟಲ್ ($17,700), ಮತ್ತು ವಿಶೇಷವಾದ ಲೂಯಿಸ್ XIII ಕಾಗ್ನ್ಯಾಕ್ ನೀಟ್‌ನ ಐದು ಡಬಲ್ ಗ್ಲಾಸ್‌ಗಳನ್ನು ($7,500) ಒಳಗೊಂಡಿದೆ.
ಟಿಪ್ಸ್‌ಗಾಗಿ ಭಾರಿ ಮೊತ್ತವನ್ನು ಸೇರಿಸಿ, $24,500 ಪಾವತಿಯೊಂದಿಗೆ ಡೈನರ್ಸ್ ತಮ್ಮ ಅತಿರಂಜಿತ ಅನುಭವವನ್ನು ಮುಕ್ತಾಯಗೊಳಿಸಿದ್ದಾರೆ. ರಶೀದಿಯಲ್ಲಿ ನಮೂದಿಸಲಾದ ಸಂಪೂರ್ಣ ಮೊತ್ತವು ಯುಎಇ ಕರೆನ್ಸಿ AEDಯಲ್ಲಿದೆ.
10 ನಿಮಿಷದಲ್ಲಿ ಈ ಆಮ್ಲೆಟ್ ತಿಂದ್ರೆ…. 50 ಸಾವಿರ ರೂಪಾಯಿ ಬಹುಮಾನ!
ವಿಪರೀತ ಬಿಲ್‌ನ ಚಿತ್ರ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮದಲ್ಲಿ ಉಗ್ರ ಕಾಮೆಂಟ್‌ಗಳು ಹರಿದು ಬಂದಿವೆ. ಅನೇಕ ಬಳಕೆದಾರರು ಸಾಲ್ಟ್ ಬೇ ಮತ್ತು ಅವರ ರೆಸ್ಟೊರೆಂಟ್ ಅನ್ನು ಟೀಕಿಸಿದ್ದಾರೆ.
ಒಬ್ಬ ಬಳಕೆದಾರನು, 'ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿರುವಾಗ ಒಂದು ಊಟಕ್ಕೆ ಕೋಟ್ಯಂತರ ರುಪಾಯಿ ಖರ್ಚು ಮಾಡುವುದು ನಾಚಿಕೆಗೇಡು' ಎಂದು ಹೇಳಿದ್ದಾರೆ.
'ಪ್ರಪಂಚದಾದ್ಯಂತ ಹಸಿವಿನಿಂದ ಬಳಲುತ್ತಿರುವ ಕನಿಷ್ಠ 100,000 ಮಕ್ಕಳಿಗೆ ಊಟ ಸಿಗುತ್ತಿತ್ತು! ಎಷ್ಟು ಮುಜುಗರದ ಸಂಗತಿ ಇದು!' ಮತ್ತೊಬ್ಬರು ಹೇಳಿದ್ದಾರೆ.
'ಶ್ರೀಮಂತರ ಶೋಕಿಗೆ ಮಿತಿಯೇ ಇಲ್ಲವೇ' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.